GULBARGA VARTHE

GULBARGA VARTHE

Tuesday, 17 April 2018

NEWS DATE: 17--04--2018

ವಿಧಾನಸಭಾ ಚುನಾವಣೆ: ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
*****************************************************
ಕಲಬುರಗಿ,ಏ.17.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2018ರ ಮೇ 12ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ಚುನಾವಣಾ ಅಧಿಸೂಚನೆಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಹೊರಡಿಸಿದ್ದು, ಮೊದಲನೇ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಪ್ರಥಮ ದಿನವಾದ ಇಂದು ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ಇನ್ನುಳಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ವಿವರ: 43-ಗುಲಬರ್ಗಾ ಗ್ರಾಮೀಣ(ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ಗಣಪತರಾವ ಕನಕಪ್ಪ ಅವರು ಎಸ್‍ಯುಸಿಐ-(ಸಿ) ಪಕ್ಷದಿಂದ ನಾಮಪತ್ರ ಸಲ್ಲಿಸಿರುತ್ತಾರೆ.
ಈ ಅಧಿಸೂಚನೆಯನ್ವಯ ಏಪ್ರಿಲ್ 17ರಿಂದ 24ರವರೆಗೆ ಪ್ರತಿದಿನ ಬೆಳಗಿನ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಏಪ್ರಿಲ್ 25ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನ ಏಪ್ರಿಲ್ 27ರ ಮಧ್ಯಾಹ್ನ 3 ಗಂಟೆಯವರೆಗೆ ಇರುತ್ತದೆ. ಚುನಾವಣೆಯ ಮತದಾನವು ಮೇ 12ರ ಬೆಳಗಿನ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ. ಮೇ 15 ರಂದು ಮತ ಎಣಿಕೆ ಜರುಗಲಿದೆ.
ವಸತಿ ಶಾಲೆ ಪ್ರವೇಶ: ಸಫಾಯಿ ಕರ್ಮಚಾರಿ ಮಕ್ಕಳಿಂದ ಅರ್ಜಿ ಆಹ್ವಾನ
**************************************************************
ಕಲಬುರಗಿ,ಏ.17.(ಕ.ವಾ.)-ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಅಡಿಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ ವಸತಿ ಶಾಲೆಗಳಲ್ಲಿ 2018-09ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಸಫಾಯಿ ಕರ್ಮಚಾರಿ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ ಸಫಾಯಿ ಕರ್ಮಚಾರಿ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪೋಷಕರು ಬಯಸುವ ಯಾವುದೇ ವಸತಿ ಶಾಲೆಗಳಿಗೆ ನೇರವಾಗಿ ದಾಖಲಾತಿ ಪಡೆಯಲು ಶೇ. 5ರಷ್ಟು ಸೀಟುಗಳನ್ನು ಕಾಯ್ದಿರಿಸಿ ಅವಕಾಶ ಕಲ್ಪಿಸಲಾಗಿದೆ. ಸಫಾಯಿ ಕರ್ಮಚಾರಿ ಮಕ್ಕಳ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಪುರಸಭೆಯ ಮುಖ್ಯಾಧಿಕಾರಿಗಳು ನೀಡುವ ದೃಢೀಕರಣ ಪತ್ರವನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಾಜರುಪಡಿಸಬೇಕು.
ದಾಖಲಾತಿ ಬಯಸುವ ವಿದ್ಯಾರ್ಥಿಗಳ ಪೋಷಕರು ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾಗಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಏಪ್ರಿಲ್ 30 ರೊಳಗಾಗಿ ಕಲಬುರಗಿ ಜಗತ್‍ನಲ್ಲಿರುವ ಪ.ಜಾ./ ಪ.ಪಂ. ಬಾಲಕಿಯರ ಪ್ರತಿಭಾನ್ವಿತ ವಸತಿ ಶಾಲೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮನ್ವಯಾಧಿಕಾರಿಗಳ ಮೊಬೈಲ್ ಸಂಖ್ಯೆ 9741182727 ಹಾಗೂ ಪ್ರಾಚಾರ್ಯರ ಮೊಬೈಲ್ ಸಂಖ್ಯೆ 9986969088, ಪ್ರಥಮ ದರ್ಜೆ ಸಹಾಯಕ 9945434428ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಚುನಾವಣಾ ಖರ್ಚು ವೆಚ್ಚ ವೀಕ್ಷಕರ ನೇಮಕ
**************************************
ಕಲಬುರಗಿ,ಏ.17.(ಕ.ವಾ.)-ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಚುನಾವಣಾ ಆಯೋಗವು ಚುನಾವಣಾ ಖರ್ಚು ವೆಚ್ಚ ವೀಕ್ಷಕರನ್ನು ನೇಮಿಸಿದೆ. ಯಾವುದೇ ದೂರು ಇದ್ದಲ್ಲಿ ಆಯಾ ಮತಕ್ಷೇತ್ರದ ಚುನಾವಣಾ ಖರ್ಚು ವೆಚ್ಚಗಳ ವೀಕ್ಷಕರಿಗೆ ದೂರವಾಣಿ ಅಥವಾ ವಾಟ್ಸಪ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
34-ಅಫಜಲಪುರ ಮತ್ತು 46-ಆಳಂದ ಮತಕ್ಷೇತ್ರಗಳಿಗೆ ಪ್ರಭಾತ ಕಮಾಲ್ ರಾಮೇಶ್ವರಂ ಮೊಬೈಲ್ ಸಂಖ್ಯೆ 7337796458 ಹಾಗೂ ದೂರವಾಣಿ ಸಂಖ್ಯೆ 08470-282020.
41-ಸೇಡಂ ಮತ್ತು 42-ಚಿಂಚೋಳಿ ಮತಕ್ಷೇತ್ರಗಳಿಗೆ ಅಶೀಶ ಕುಮಾರ ಸಿಂಗ್ ಮೊಬೈಲ್ ಸಂಖ್ಯೆ 9901873688 ಹಾಗೂ ದೂರವಾಣಿ ಸಂಖ್ಯೆ 08441-276075.
44-ಗುಲಬರ್ಗಾ (ದಕ್ಷಿಣ) ಮತ್ತು 45-ಗುಲಬರ್ಗಾ (ಉತ್ತರ) ಮತಕ್ಷೇತ್ರಗಳಿಗೆ ಜೆ.ಎಸ್. ಚೌಧರಿ ಮೊಬೈಲ್ ಸಂಖ್ಯೆ 8762867801 ಮತ್ತು ದೂರವಾಣಿ ಸಂಖ್ಯೆ 08472-254405.
43-ಗುಲಬರ್ಗಾ (ಗ್ರಾಮೀಣ) ಹಾಗೂ 40-ಚಿತ್ತಾಪುರ ಮತಕ್ಷೇತ್ರಗಳಿಗೆ ಪುಶ್ಕರ್ ಕುಮಾರ ಮೊಬೈಲ್ ಸಂಖ್ಯೆ 9108521718 ಮತ್ತು ದೂರವಾಣಿ ಸಂಖ್ಯೆ 08472-226620.
35-ಜೇವರ್ಗಿ ಮತಕ್ಷೇತ್ರಕ್ಕೆ ರೇವತರಾಜ್ ಬಹಲ್ ಮೊಬೈಲ್ ಸಂಖ್ಯೆ 9535911970 ಮತ್ತು ದೂರವಾಣಿ ಸಂಖ್ಯೆ 08442-236028.

No comments:

Post a Comment