GULBARGA VARTHE

GULBARGA VARTHE

Wednesday, 4 April 2018

NEWS DATE: 04-04-2018

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳ ನೇಮಕ
*************************************************************
ಕಲಬುರಗಿ,ಏಪ್ರಿಲ್.04.(ಕ.ವಾ.)-ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಅಂಗವಾಗಿ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ. ವಿದಾನಸಭಾ ಕ್ಷೇತ್ರವಾರು ನೇಮಿಸಲಾದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ-ಚುನಾವಣಾಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ (ಆಡಳಿತ) ಶಂಕರಗೌಡ ಸೋಮನಾಳ (ಮೊಬೈಲ್ ಸಂಖ್ಯೆ 9448336439) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಅಫಜಲಪುರ ತಹಶೀಲ್ದಾರ ಎಂ.ಎಂ. ಮುಲ್ಕಿ ಸಿಪಾಯಿ (ಮೊಬೈಲ್ ಸಂಖ್ಯೆ 8123190499). 35-ಜೇವರ್ಗಿ ವಿಧಾನಸಭಾ ಕ್ಷೇತ್ರ-ಚುನಾವಣಾಧಿಕಾರಿಯಾಗಿ ಕಲಬುರಗಿ ಉಪ ಕಾರ್ಮಿಕ ಆಯುಕ್ತ ಗಿರೀಶ ಪಾಟೀಲ (ಮೊಬೈಲ್ ಸಂಖ್ಯೆ 9480925786) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಜೇವರ್ಗಿ ತಹಶೀಲ್ದಾರ ಆರ್.ಆರ್. ಕುಲಕರ್ಣಿ (ಮೊಬೈಲ್ ಸಂ. 9980894189).40-ಚಿತ್ತಾಪುರ ವಿಧಾನಸಭಾ ಕ್ಷೇತ್ರ(ಎಸ್.ಸಿ.)- ಚುನಾವಣಾಧಿಯಾರಿಯಾಗಿ ಜವಳಿ ಇಲಾಖೆಯ ಉಪನಿರ್ದೇಶಕ ಮಂಜುನಾಥ (ಮೊಬೈಲ್ ಸಂಖ್ಯೆ 9845413323) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಚಿತ್ತಾಪುರ ತಹಶೀಲ್ದಾರ ಶಿವಾನಂದ ಸಾಗರ (ಮೊಬೈಲ್ ಸಂಖ್ಯೆ 9480241088).
41-ಸೇಡಂ ವಿಧಾನಸಭಾ ಕ್ಷೇತ್ರ- ಚುನಾವಣಾಧಿಕಾರಿಯಾಗಿ ಸೇಡಂ ಸಹಾಯಕ ಆಯುಕ್ತೆ ಡಾ. ಬಿ. ಸುಶೀಲಾ (ಮೊಬೈಲ್ ಸಂಖ್ಯೆ 9945493693) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸೇಡಂ ತಹಶೀಲ್ದಾರ ಕೀರ್ತಿ ಚಲಕ (ಮೊಬೈಲ್ ಸಂ. 8861438554). 42-ಚಿಂಚೋಳಿ ವಿಧಾನಸಭಾ ಕ್ಷೇತ್ರ(ಎಸ್.ಸಿ.)-ಚುನಾವಣಾಧಿಯಾರಿಯಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂದಿ(ಮೊಬೈಲ್ ಸಂಖ್ಯೆ 9448999235) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಚಿಂಚೋಳಿ ತಹಶೀಲ್ದಾರ ಪಿ.ಕೆ. ದೇಶಪಾಂಡೆ (ಮೊಬೈಲ್ ಸಂಖ್ಯೆ 7022070203).
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ (ಎಸ್.ಸಿ.)–ಚುನಾವಣಾಧಿಕಾರಿಯಾಗಿ ಕಲಬುರಗಿ ಸಹಾಯುಕ ಆಯುಕ್ತ ಎನ್.ಆರ್. ಉಮೇಶ ಚಂದ್ರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕಲಬುರಗಿ ತಹಶೀಲ್ದಾರ ವೇದವ್ಯಾಸ್ (ಮೊಬೈಲ್ ಸಂಖ್ಯೆ 9113860564). 44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ-ಕಲಬುರಗಿಯ ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಅಜೀಜ್ ದೇಸಾಯಿ (ಮೊಬೈಲ್ ಸಂಖ್ಯೆ 8762835611) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ ( ಮೊಬೈಲ್ ಸಂ. 8749071736). 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ-ಚುನಾವಣಾಧಿಕಾರಿಯಾಗಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ (ಮೊಬೈಲ್ ಸಂಖ್ಯೆ 9886631030) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕೇಂದ್ರ ಸ್ಥಾನಿಕ ಸಹಾಯಕ ರಾಘವೇಂದ್ರ ಉಕ್ಕಿನಾಳ (ಮೊಬೈಲ್ ಸಂಖ್ಯೆ 9886752866). 46-ಆಳಂದ ವಿಧಾನಸಭಾ ಕ್ಷೇತ್ರ- ಭೂದಾಖಲೆಗಳ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕ ಜಿ.ಎಸ್. ಗಡದÀವರ (ಮೊಬೈಲ್ ಸಂಖ್ಯೆ 9342773427) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಆಳಂದ ತಹಶೀಲ್ದಾರ ಫಿರ್ಜಾದೆ (ಮೊಬೈಲ್ ಸಂಖ್ಯೆ 9035522897).
ವಿಧಾನಸಭೆ ಚುನಾವಣೆ: ಜಿಲ್ಲೆಯಲ್ಲಿ 2384 ಮತಗಟ್ಟೆಗಳು
****************************************************
ಕಲಬುರಗಿ,ಏಪ್ರಿಲ್.04.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2018ರ ಮೇ 12ರಂದು ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ಜಿಲ್ಲೆಯಲ್ಲಿ ಉದ್ದೇಶಿತ 117 ಆಕ್ಸಿಲರಿ ಮತಗಟ್ಟೆÉಗಳು ಸೇರಿದಂತೆ ಒಟ್ಟು 2384 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ವಿಧಾನಸಭಾವಾರು ಸ್ಥಾಪಿಸಲಾದ ಮತಗಟ್ಟೆಗಳು ಮತ್ತು ಕಂಸಿನಲ್ಲಿ ಆಕ್ಸಿಲರಿ ಮತಗಟ್ಟೆಗಳ ಸಂಖ್ಯೆಯನ್ನು ತೋರಿಸಿದೆ. ಅಫಜಲಪುರ-249(02), ಜೇವರ್ಗಿ-274(04), ಚಿತ್ತಾಪುರ(ಎಸ್.ಸಿ.)-253(05), ಸೇಡಂ-252(09), ಚಿಂಚೋಳಿ (ಎಸ್.ಸಿ.)-240(01), ಗುಲಬರ್ಗಾ ಗ್ರಾಮೀಣ (ಎಸ್.ಸಿ.)-285(09), ಗುಲಬರ್ಗಾ ದಕ್ಷಿಣ-238(24), ಗುಲಬರ್ಗಾ ಉತ್ತರ-232(48) ಮತ್ತು ಆಳಂದ-244(15).
ಏಪ್ರಿಲ್ 8 ರಂದು ವಿಶೇಷ ಮತದಾರರ ನೋಂದಣಿ ಕಾರ್ಯ
***************************************************
ಕಲಬುರಗಿ,ಏಪ್ರಿಲ್.04.(ಕ.ವಾ.)-ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, 18 ವರ್ಷ ಮೇಲ್ಪಟ್ಟವರು ಮತದಾನದಿಂದ ವಂಚಿರಾಗಬಾರದು ಎಂಬ ಉದ್ದೇಶದಿಂದ ಏಪ್ರಿಲ್ 8ರಂದು ವಿಶೇಷ ಮತದಾರರ ನೋಂದಣಿ ಅಭಿಯಾನವನ್ನು ತಾಲೂಕಿನ ಎಲ್ಲ ಮತಗಟ್ಟೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ತಾಲೂಕಿನ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ತಾಲೂಕಿನ ಎಲ್ಲ ಮತಗಟ್ಟೆ ಅಧಿಕಾರಿಗಳು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಕೇಂದ್ರದಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ನಮೂನೆ-6 ಅರ್ಜಿ ಪಡೆಯುವಂತೆ ಅವರಿಗೆ ನಿರ್ದೇಶನ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಂದು ಮತಗಟ್ಟೆಗೆ ತೆರಳಿ ಅರ್ಜಿ ಸಲ್ಲಿಸಬೇಕು.
ವಿಶೇಷ ಮತದಾರರ ನೋಂದಣಿ ಕಾರ್ಯದ ಹಿನ್ನೆಲೆಯಲ್ಲಿ ಆಯಾ ಹೋಬಳಿಯ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ನಮೂನೆ-6ನ್ನು ಕಲಬುರಗಿ ತಹಶೀಲ್ದಾರ ಕಚೇರಿಯಿಂದ ಪಡೆದು ತಮ್ಮ ವ್ಯಾಪ್ತಿಯ ಮತದಾನ ಕೇಂದ್ರಗಳ ಮತಗಟ್ಟೆ ಅಧಿಕಾರಿಗಳಿಗೆ ನಮೂನೆ ನೀಡುವುದಲ್ಲದೇ ಅಂದು ಮತದಾನ ಕೇಂದ್ರದಲ್ಲಿದ್ದು ವಿಶೇಷ ನೋಂದಣಿ ಕಾರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಸೂಚಿಸಿದ್ದಾರೆ.
ತೋಟಗಾರಿಕೆ ತರಬೇತಿಗಾಗಿ ರೈತ ಮಕ್ಕಳಿಂದ ಅರ್ಜಿ ಆಹ್ವಾನ
*******************************************************
ಕಲಬುರಗಿ,ಏಪ್ರಿಲ್.04.(ಕ.ವಾ.)-ತೋಟಗಾರಿಕೆ ಇಲಾಖೆಯಿಂದ 2018-19ನೇ ಸಾಲಿಗೆ ಕಲಬುರಗಿ ಜಿಲ್ಲೆಯ ರೈತರ ಮಕ್ಕಳಿಗಾಗಿ ಚಂದ್ರಂಪಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸಾದ ಕಲಬುರಗಿ ಜಿಲ್ಲೆಯ ರೈತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ತರಬೇತಿ ಪ್ರವೇಶ ಬಯಸುವ ಅಭ್ಯರ್ಥಿ ತಂದೆ, ತಾಯಿ, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಕುರಿತು ಕಡ್ಡಾಯವಾಗಿ ಪಹಣಿಯನ್ನು ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಯೋಮಿತಿ ಕನಿಷ್ಟ 18 ರಿಂದ 33 ವರ್ಷ ಮತ್ತು ಇತÀರರಿಗೆ ಕನಿಷ್ಟ 18 ರಿಂದ 30 ವರ್ಷ ಹೊಂದಿರಬೇಕು.
ಅರ್ಜಿಗಳನ್ನು ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ)/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಕಲಬುರಗಿ, ಆಯಾ ತಾಲೂಕಿನ ತೋಟಗಾರಿಕೆ ಕಚೇರಿಯಿಂದ ಹಾಗೂ ಇಲಾಖೆಯ www.horticulture.kar.nic.in ವೆಬ್‍ಸೈಟ್‍ದಿಂದ ಏಪ್ರಿಲ್ 12 ರಿಂದ 24 ರವರೆಗೆ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಹಾಗೂ ಅರ್ಜಿ ಶುಲ್ಕದ ಬಾಬತ್ತು ಸಾಮಾನ್ಯ ಅಭ್ಯರ್ಥಿಗಳು ರೂ. 30 ಗಳ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 15 ರೂ.ಗಳ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ /ಡಿಮ್ಯಾಂಡ್ ಡ್ರಾಪ್ಟ್‍ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕಲಬುರಗಿ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಏಪ್ರಿಲ್ 24ರೊಳಗಾಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕಲಬುರಗಿ ಇವರ ಕಚೇರಿಯಲ್ಲಿ ಸಲ್ಲಿಸಬೇಕು.
ಅರ್ಜಿ ಶುಲ್ಕ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : 08472-229479ನ್ನು ಸಂಪರ್ಕಿಸಲು ಕೋರಲಾಗಿದೆ. ಅಭ್ಯರ್ಥಿಗಳು ಏಪ್ರಿಲ್ 26ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಮೂಲ ದಾಖಲಾತಿಗಳೊಂದಿಗೆ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕಲಬುರಗಿ ರವರ ಕಚೇರಿಯಲ್ಲಿ ಸಂದರ್ಶನಕ್ಕಾಗಿ ಹಾಜರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿ
*******************************************************************
ಕಲಬುರಗಿ,ಏಪ್ರಿಲ್.04.(ಕ.ವಾ.)-ಬೇಸಿಗೆ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಲಬುರಗಿ ನಗರದ ವಿವಿಧ ಬಡಾವಣೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಗಳಾದ್ದಲ್ಲಿ ಕಲಬುರಗಿ ನಗರದ ಸುಪರ ಮಾರ್ಕೆಟ್, ಹಳೆ ಎಸ್.ಪಿ. ಕಚೇರಿಯ ಆವರಣದಲ್ಲಿ ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆ 08472-255660ಗೆ ಕರೆ ಮಾಡಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ದೂರು ನೀಡಬಹುದಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment