GULBARGA VARTHE

GULBARGA VARTHE

Tuesday, 10 April 2018

NEWS AND PHOTO DATE: 10--4--2018

ಮತಯಂತ್ರಗಳ ಜೋಡಣೆ ಮತ್ತು ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆಯಲು ಸೂಚನೆ
ಕಲಬುರಗಿ,ಏ.10.(ಕ.ವಾ.)-ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆಗಳಲ್ಲಿ ಮತದಾನಕ್ಕಾಗಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು. 
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಜೋಡಣೆ ತರಬೇತಿಯಲ್ಲಿ ಮಾತನಾಡಿದರು.
ಈ ಹಿಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಯುನಿಟ್ ಜೊತೆಗೆ ಕಂಟ್ರೋಲ್ ಯುನಿಟ್ ನೇರವಾಗಿ ಜೋಡಣೆ ಮಾಡಿ ಮತಯಂತ್ರಗಳನ್ನು ಮತದಾನಕ್ಕೆ ಸಿದ್ಧಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ವಿವಿ ಪ್ಯಾಟ್ ಅಳವಡಿಸಬೇಕಾಗಿದೆ. ಮತಯಂತ್ರಗಳ ಜೋಡಣೆಯನ್ನು ವಿವಿ ಪ್ಯಾಟ್‍ನಿಂದ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್‍ನಿಂದ ವಿವಿ ಪ್ಯಾಟ್ ಹಾಗೂ ವಿವಿ ಪ್ಯಾಟ್ ಸ್ಟೇಟಸ್ ಡಿಸ್‍ಪ್ಲೆ ಯುನಿಟ್‍ನಿಂದ ವಿವಿ ಪ್ಯಾಟ್‍ಗೆ ಜೋಡಣೆ ಮಾಡಿಕೊಳ್ಳಬೇಕು. ಜೋಡಣೆಗಾಗಿ ನಿಖರವಾದ ಕೇಬಲ್‍ಗಳನ್ನು ನೀಡಲಾಗಿದೆ ಎಂದರು. 
ಮಸ್ಟರಿಂಗ್ ದಿನದಂದು ಮಸ್ಟರಿಂಗ್ ಆದ ನಂತರ ಪೊಲಿಂಗ್ ಪಾರ್ಟಿಗಳು ಮತದಾನ ಯಂತ್ರಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವರು. ಇದಕ್ಕೂ ಮುಂದೆ ಪ್ರಿಸೈಡಿಂಗ್ ಅಧಿಕಾರಿಗಳು ಕಡ್ಡಾಯವಾಗಿ ಕಂಟ್ರೋಲ್ ಯುನಿಟ್ ಪ್ರಾರಂಭಿಸಿ ಬ್ಯಾಲೆಟ್ ಪತ್ರದಲ್ಲಿರುವ ಎಲ್ಲ ಅಭ್ಯರ್ಥಿಗಳು ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಕಂಟ್ರೋಲ್ ಯುನಿಟ್‍ನ್ನು ಸ್ವಿಚ್ ಆಫ್ ಮಾಡಿ ಮತಗಟ್ಟೆಗಳಿಗೆ ರವಾನಿಸಬೇಕೆಂದರು.  
ಮತದಾನದಂದು ನೈಜ ಮತದಾನ ನಡೆಯುವ ಮುಂಚೆ ಎಲ್ಲ ಮತಗಟ್ಟೆಗಳಲ್ಲಿ ಪಕ್ಷದ ಏಜೆಂಟರ ಸಮ್ಮುಖದಲ್ಲಿ 50 ಅಣುಕು ಮತದಾನ ಕೈಗೊಳ್ಳಲು ಅವಕಾಶಗಳಿವೆ. ಈ ಪ್ರಕ್ರಿಯೆ ಕೈಗೊಂಡು ವಿವಿ ಪ್ಯಾಟ್‍ನಲ್ಲಿ ಮತದಾನ ಮಾಡಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರ ಕಡ್ಡಾಯವಾಗಿ ಕಂಟ್ರೋಲ್ ಯುನಿಟ್‍ನ್ನು ಕ್ಲೋಸ್-ರಿಜಲ್ಟ್-ಕ್ಲೀಯರ್ ಅನುಕ್ರಮದಲ್ಲಿ ಕಂಟ್ರೋಲ್ ಯುನಿಟ್‍ನಲ್ಲಿ ದಾಖಲಾಗಿರುವ ಮತಗಳನ್ನು ತೆಗೆದು ಹಾಕಿ ಮತದಾನಕ್ಕೆ ಸಿದ್ಧಗೊಳಿಸಬೇಕು. ಅಣುಕು ಮತದಾನದ ಸಮಯದಲ್ಲಿ ಬ್ಯಾಲೆಟ್ ಯುನಿಟ್ಟ ಅಥವಾ ಕಂಟ್ರೋಲ್ ಯುನಿಟ್‍ನಲ್ಲಿ ತೊಂದರೆಗಳು ಕಂಡು ಬಂದಲ್ಲಿ ಎಲ್ಲ ಯಂತ್ರಗಳನ್ನು ಬದಲಿಸಬೇಕೆಂದರು. 
ವಿವಿ ಪ್ಯಾಟ್ ಅತೀ ಸೂಕ್ಷ್ಮ ಸಂವೇದಿ ಯಂತ್ರವಾಗಿದ್ದು, ಮತದಾನದ ಸಮಯದಲ್ಲಿ ಅತೀ ಹೆಚ್ಚು ಶಾಖ ಅಥವಾ ಬೆಳಕು ಇದ್ದಲ್ಲಿ ಇಡಬಾರದು. ವಿವಿ ಪ್ಯಾಟ್ ಯಂತ್ರದ ಬ್ಯಾಟರಿ ಶಕ್ತಿ ಕಡಿಮೆಯಾದಾಗ ಬ್ಯಾಟರಿ ಮಾತ್ರ ಬದಲಿಸಬಹುದು. ಉಳಿದ ತೊಂದರೆಗಳೇನಾದರೂ ಕಂಡು ಬಂದಲ್ಲಿ ವಿವಿ ಪ್ಯಾಟ್ ಯಂತ್ರವನ್ನೇ ಬದಲಿಸಬೇಕು ಎಂದರು. 
ಭಾರತ ಇಲೆಕ್ಟ್ರಿಕಲ್ ಲಿಮಿಲಿಟೆಡ್‍ನ ಇಂಜಿನಿಯರ್ ನರೇಂದ್ರ ಕೌಶಿಕ ಮತದಾನದ ಮತ್ತು ವಿವಿ ಪ್ಯಾಟ್ ಜೋಡಣೆ, ಅವುಗಳ ತೊಂದರೆ ನಿವಾರಣೆ ಕುರಿತು ವಿವರ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಬಿ.ಇ.ಎಲ್. ಇಂಜಿನಿಯರ್ ಶಿವಕುಮಾರ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಮಾಸ್ಟರ್ ತರಬೇತಿದಾರ ಶಶಿಶೇಖರ ರಡ್ಡಿ ಮತ್ತಿತರರು ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಎಲ್ಲ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮತಯಂತ್ರಗಳ ಜೋಡಣೆ ತರಬೇತಿ ನೀಡಲಾಯಿತು. 
ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆ 
ಕಲಬುರಗಿ,ಏ.10.(ಕ.ವಾ.)-ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಅವರ 127ನೇ ಜಯಂತ್ಯೋತ್ಸವವನ್ನು ಏಪ್ರಿಲ್ 14ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ನಗರದ ಜಗತ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ ಪುತ್ಥಳಿ ಹತ್ತಿರ ಆಚರಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಏಪ್ರಿಲ್ 11ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.10.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ.  ಮಹಾವೀರ ನಗರ ಫೀಡರ್, ಜಯನಗರ ಮತ್ತು ಜಿಜಿಹೆಚ್ ಪೀಡರ್, ಆದರ್ಶನಗರ ಫೀಡರಗಳ ಮೇಲೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಏಪ್ರಿಲ್ 11ರಂದು ಬೆಳಿಗ್ಗೆ 9 ರಿಂದ  ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ. ಮಹಾವೀರ ನಗರ ಫೀಡರ್: ಮಹಾವೀರನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶ ನಗರ. ಕೆ.ಇ.ಬಿ. ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂಡಿ ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ ಲೆನ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಜಯನಗರ ಮತ್ತು ಜಿಜಿಹೆಚ್ ಫೀಡರ್: ಆರಿಹಂತ್‍ನಗರ, ಜಯನಗರ, ಓಕಳಿಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರಕಾರಿ ಸೂರ್ಯನಗರ, ತಿಲಕನಗರ್. ತೇಲಕರ ಲೇಔಟ್, ಪೂಜಾ ಕಾಲೋನಿ, ಜಿ.ಡಿ.ಎ.ಲೇಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯ ನಗರ, ಕೆ.ಜಿ.ಬಿ. ಬ್ಯಾಂಕ್,ಪ್ರಶಾಂತನಗರ(ಎ) ಮತ್ತು  ಡೆಂಟಲ್ ಕಾಲೇಜ್, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.  
11 ಕೆ.ವಿ. ಆದರ್ಶ ನಗರ ಫೀಡರ್: ಶಿವಾಜಿ ನಗರ, ಅಬುಬಕರ್ ಕಾಲೋನಿ, ಕೆ.ಹೆಚ್.ಬಿ. ಕಾಲೋನಿ, ಒಕ್ಕಲ್ಗೇರಾ, ಬಿಲಾಲಾಬಾದ, ಕೆ.ಬಿ.ಎನ್. ಇಂಜಿನಿಯರಿಂಗ್ ಕಾಲೇಜ, ಇಸ್ಲಾಮಾಬಾದ, ಕೆ.ಸಿ.ಟಿ. ಪಾಲಿಟೆಕ್ನಿಕ್, ಖಮರ್ ಕಾಲೋನಿ ಮತ್ತು ಎಸ್.ಬಿ.ಹೆಚ್. ಕಾಲೋನಿ, ಖಾಜಾ ಕಾಲೋನಿ, ಇ.ಬಿ ರಾಜ, ಮದಿನಾ ಕಾಲೋನಿ, ಶಾಲಿಮಾರ ಫಂಕ್ಷನ್ ಹಾಲ್ ಪ್ರದೇಶ, ಧನಗರ ಗಲ್ಲಿ ನೂರಬಾಗ್, ಸೈಯ್ಯದ್ ಗಲ್ಲಿ, ಖಾಜಾ ಬಂದೇ ನವಾಜ ದರ್ಗಾ ಹಾಗೂ ಸುತ್ತ ಮುತ್ತಲಿನ ಏರಿಯಾ, ಐಯರವಾಡಿ ಹಳೇ ಮತ್ತು ಹೊಸ ಖಾಲಿ ಗುಮಜ್ ಪ್ರದೇಶ, ಖಾಲಾ ಗೊಡಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಏಪ್ರಿಲ್ 11ರಂದು ನಗರ ರಾಜ್ಯ ಭಾಷಾ ಅನುಷ್ಠಾನ ಸಮಿತಿ ಸಭೆ
ಕಲಬುರಗಿ,ಏ.10.(ಕ.ವಾ.)-ನಗರ ರಾಜ್ಯ ಭಾಷಾ ಅನುಷ್ಠಾನ ಸಮಿತಿ ಸಭೆಯು ಏಪ್ರಿಲ್ 11ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿಯ ಜನರಲ್ ಮ್ಯಾನೇಜರ್ ಟೆಲಿಕಾಂ ಡಿಸ್ಟ್ರಿಕ್ಟ್ ಕಚೇರಿಯಲ್ಲಿ ಸಮಿತಿ ಅಧ್ಯಕ್ಷರು ಹಾಗೂ ಟೆಲಿಕಾಂ ಡಿಸ್ಟ್ರಿಕ್ಟ್ ಜನರಲ್ ಮ್ಯಾನೇಜರ್ ಶ್ರೀನಿವಾಸರಾವ್ ಅಧ್ಯಕ್ಷತೆಯಲ್ಲಿ ಜರುಗಲಿದೆ. 
ಬೆಂಗಳೂರು (ದಕ್ಷಿಣ) ಕ್ಷೇತ್ರಿಯ ಕಾರ್ಯಾಲಯದ ಪ್ರಾದೇಶಿಕ ಅನುಷ್ಠಾನ ಕಚೇರಿಯ ಉಪನಿರ್ದೇಶಕ ಟೇಕಚಂದ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 
ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಬ್ಯಾಂಕ್, ಕಾರ್ಪೋರೇಶನ್, ಕೇಂದ್ರ ಸರ್ಕಾರದ ಸ್ವಾಮ್ಯದ ಇಲಾಖೆಗಳ ಅಧಿಕಾರಿಗಳು ಅಂದು ಈ ಸಭೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ನಗರ ರಾಜ್ಯ ಭಾಷಾ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಹೆಚ್.ಸಿ. ರಾಠೋಡ ಇವರ ಮೊಬೈಲ್ ಸಂಖ್ಯೆ 9449799766ನ್ನು ಸಂಪರ್ಕಿಸಲು ಕೋರಲಾಗಿದೆ. 


No comments:

Post a Comment