GULBARGA VARTHE

GULBARGA VARTHE

Thursday, 5 April 2018

NEWS AND PHOTO DATE: 05--04--2018

ಹೆಚ್ಚುವರಿ ಜಿಲ್ಲಾಧಿಕಾರಿಗಳಿಂದ ಡಾ. ಬಾಬು ಜಗಜೀವನರಾಂ ರವರ ಜಯಂತ್ಯೋತ್ಸವಕ್ಕೆ ಚಾಲನೆ
ಕಲಬುರಗಿ,ಏ.05.(ಕ.ವಾ.)-ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮಾಲಾರ್ಪಣೆ ಮಾಡುವ ಮೂಲಕ ಡಾ. ಬಾಬು ಜಗಜೀವನರಾಂ ಅವರ 111ನೇ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಟೌನ್‍ಹಾಲ್ ಆವರಣದಲ್ಲಿರುವ ಡಾ. ಬಾಬು ಜಗಜೀವನರಾಂ ಪುತ್ಥಳಿ ಹತ್ತಿರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೋಡ್ಲಾದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಜಶೇಖರ ಮಾಂಗ ಉಪನ್ಯಾಸ ನೀಡಿ, ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಬಾಬು ಜಗಜೀವನರಾಂ ಅವರು ಯಾವುದೇ ಸೀಮಿತ ಜಾತಿ ಜನಾಂಗಕ್ಕೆ ದುಡಿಯದೇ ಮನುಷ್ಯತ್ವಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.
ಡಾ. ಬಾಬು ಜಗಜೀವನರಾಂ ಅವರು ಕೇಂದ್ರ ಸರ್ಕಾರದಲ್ಲಿ ರಕ್ಷಣೆ, ನೀರಾವರಿ, ವಿಮಾನಯಾನ, ರೇಲ್ವೆ, ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿ ದೇಶಕ್ಕೆ ಅತೀ ದೊಡ್ಡ ಕೊಡುಗೆ ನೀಡಿದ್ದಾರೆ. ದೇಶವು ಹಸಿವಿನಿಂದ ಬಳಲುತ್ತಿರುವಾಗ ಕೃಷಿಯಲ್ಲಿ ವೈಜ್ಞಾನಿಕತೆಯನ್ನು ತಂದು ಉತ್ಪಾದನೆ ಹೆಚ್ಚಿಸಿ ಹಸಿರು ಕ್ರಾಂತಿ ಮೂಡಿಸಿದರು. ಇದರೊಂದಿಗೆ ಬೇರೆ ಬೇರೆ ರಾಜ್ಯಗಳ ನೀರಿನ ಸಮಸ್ಯೆಗಳನ್ನು ಸಹ ಬಗೆಹರಿಸಿದರು. ಜಗಜೀವನರಾಂ ಅವರು ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದರು. ಅವರು ಸ್ವಾತಂತ್ರ್ಯ ಸಂಗ್ರಾಮದ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ ಯುಸುಫ್, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಂದೇ ನವಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಡಿವೈಎಸ್‍ಪಿ ಪಿ.ಕೆ. ಚೌದರಿ, ಮುಖಂಡರಾದ ನಾಗರಾಜ ಗುಂಡಗುರ್ತಿ, ಚಂದ್ರಿಕಾ ಪರಮೇಶ್ವರ, ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಬಸಯ್ಯ ಗುತ್ತೇದಾರ ಮತ್ತು ತಂಡದವರು ಜಗದರಾಮ ನೀನು, ಯುಗದ ರಾಮ ನೀನು ಹಾಗೂ ಜಗವನು ಬೆಳಗಿದ ಜಗದೋದ್ಧಾರ ಜಗಜೀವನರಾಮರೆಂಬ ಚೇತನ ಎಂಬ ಹಾಡುಗಳನ್ನು ಪ್ರಸ್ತುಪಡಿಸಿದರು.
ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ 2097936 ಮತದಾರರರು
ಕಲಬುರಗಿ,ಏಪ್ರಿಲ್.05.(ಕ.ವಾ.)- ಫೆಬ್ರವರಿ 28ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 2097936 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ 1062823 ಪುರುಷರು ಮತ್ತು 1035113 ಮಹಿಳಾ ಮತದಾರರು ಸೇರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ: 112215 ಪುರುಷ, 106504 ಮಹಿಳೆ ಸೇರಿದಂತೆ ಒಟ್ಟು 218719 ಮತದಾರರಿದ್ದಾರೆ.35-ಜೇವರ್ಗಿ ವಿಧಾನಸಭಾ ಕ್ಷೇತ್ರ: 116404 ಪುರುಷ, 115443 ಮಹಿಳೆ ಸೇರಿದಂತೆ ಒಟ್ಟು 231847 ಮತದಾರರಿದ್ದಾರೆ. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ (ಎಸ್.ಸಿ.): 114714 ಪುರುಷ, 113904 ಮಹಿಳೆ ಸೇರಿದಂತೆ ಒಟ್ಟು 228618 ಮತದಾರರಿದ್ದಾರೆ. 41-ಸೇಡಂ ವಿಧಾನಸಭಾ ಕ್ಷೇತ್ರ: 105496 ಪುರುಷ, 107767 ಮಹಿಳೆ ಸೇರಿದಂತೆ ಒಟ್ಟು 213263 ಮತದಾರರಿದ್ದಾರೆ.
42-ಚಿಂಚೋಳಿ ವಿಧಾನಸಭಾ ಕ್ಷೇತ್ರ(ಎಸ್.ಸಿ.): 97243 ಪುರುಷ, 93733 ಮಹಿಳೆ ಸೇರಿದಂತೆ ಒಟ್ಟು 190976 ಮತದಾರರಿದ್ದಾರೆ. 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ (ಎಸ್.ಸಿ.): 127856 ಪುರುಷ, 121102 ಮಹಿಳೆ ಸೇರಿದಂತೆ ಒಟ್ಟು 248958 ಮತದಾರರಿದ್ದಾರೆ.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ: 129108 ಪುರುಷ, 129850 ಮಹಿಳೆ ಸೇರಿದಂತೆ ಒಟ್ಟು 258958 ಮತದಾರರಿದ್ದಾರೆ. 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ: 140459 ಪುರುಷ, 136500 ಮಹಿಳೆ ಸೇರಿದಂತೆ ಒಟ್ಟು 276959 ಮತದಾರರಿದ್ದಾರೆ. 46-ಆಳಂದ ವಿಧಾನಸಭಾ ಕ್ಷೇತ್ರ: 119328 ಪುರುಷ, 110310 ಮಹಿಳೆ ಸೇರಿದಂತೆ ಒಟ್ಟು 229638 ಮತದಾರರಿದ್ದಾರೆ.
18 ವರ್ಷ ಮೇಲ್ಪಟ್ಟವರು ಯಾರಾದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಏಪ್ರಿಲ್ 8ರಂದು ಆಯಾ ಮತಗಟ್ಟೆಗಳಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಅರ್ಹ ಯುವ ಮತದಾರರು ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ನಮೂನೆ ಹಾಗೂ ಅಗತ್ಯ ದಾಖೆಗಳನ್ನು ಅಂದು ಬೂತ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.
ಆಸ್ತಿ ತೆರಿಗೆ, ನೀರಿನ ಶುಲ್ಕ:ಏಪ್ರಿಲ್ 2 ರಿಂದ ನಗದು ರಹಿತ ಪಾವತಿ ವ್ಯವಸ್ಥೆ ಜಾರಿ
ಕಲಬುರಗಿ,ಏಪ್ರಿಲ್.05.(ಕ.ವಾ.)-ಜೇವರ್ಗಿ ಪುರಸಭೆಗೆ ಪಾವತಿಸಬಹುದಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಮಳಿಗೆ ಬಾಡಿಗೆ, ಮುಟೇಶನ್ ಶುಲ್ಕ, ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆ ಇನ್ನಿತರ ಶುಲ್ಕವನ್ನು ಏಪ್ರಿಲ್ 2 ರಿಂದ ನಗದು ರಹಿತ ಆನ್‍ಲೈನ್ ಬ್ಯಾಂಕಿಂಗ್ ಮತ್ತು ಚಲನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಪುರಸಭೆ ಈ ಕ್ರಮ ಕೈಗೊಂಡಿದ್ದು, ಪುರಸಭೆ ಸ್ವೀಕೃತಿ ತಂತ್ರಾಂಶವನ್ನು ಖಜಾನೆ-2 ತಂತ್ರಾಂಶದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕೆ.ಎಂ.ಎಫ್-14 ಕೈಬರಹ ರಸೀದಿ ಪುಸ್ತಕಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಜೇವರ್ಗಿ ಪುರಸಭೆಯ www.jewargitown.mrc.gov.in ವೆಬ್‍ಸೈಟ್‍ನ ಮುಖಪುಟದಲ್ಲಿ ಸ್ವೀಕೃತ ತಂತ್ರಾಂಶದಲ್ಲಿ ಲಭ್ಯವಿರುವ ಲಿಂಕ್ ಉಪಯೋಗಿಸಿ ಸಾರ್ವಜನಿಕರು ಖುದ್ದಾಗಿ ಸೇವಾ ಶುಲ್ಕಗಳನ್ನು ಇ-ಪಾವತಿ/ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಇದಲ್ಲದೆ ಚಲನ್ ಜನರೇಟ್ ಮಾಡಿ ಎಸ್.ಬಿ.ಐ., ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಯಾವುದೇ ಶಾಖೆಯಲ್ಲಿ ಪಾವತಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜೇವರ್ಗಿ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.No comments:

Post a Comment