GULBARGA VARTHE

GULBARGA VARTHE

Saturday, 28 April 2018

News and photo 28-4-2018

ಮತದಾನಕ್ಕೆ ಕೌಂಟ್ ಡೌನ್-14
*******************************
ಸಾರಿಗೆ ಬಸ್ ಮತ್ತು ಅಟೋಗಳ ಮೇಲೆ ಮತದಾನದ ಪೋಸ್ಟರ್ ಅಳವಡಿಕೆ
*****************************************************************
ಕಲಬುರಗಿ,ಏ.28.(ಕ.ವಾ.)-ಕಲಬುರಗಿ ಜಿಲ್ಲಾ ಸ್ವೀಪ ಸಮಿತಿಯಿಂದ ಶನಿವಾರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಹಾಗೂ ನಗರದ ಅಟೋಗಳ ಮೇಲೆ ಮತದಾನದ ವಿವರದ ಪೋಸ್ಟರ್ ಅಳವಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಪೋಸ್ಟರ್ ಅಳವಡಿಕೆಗೆ ಚಾಲನೆ ನೀಡಿದರು.
ಕಲಬುರಗಿ ನಗರ ಕೇಂದ್ರ ಬಸ್ ನಿಲ್ದಾಣದ ಮೂಲಕ ದಿನಂಪ್ರತಿ 1400 ಬಸ್ಸುಗಳು ಸಂಚರಿಸುತ್ತವೆ. ಪ್ರಯಾಣಿಕರ ಗಮನ ಸೆಳೆಯುವುದಕ್ಕೆ ಎಲ್ಲ ಬಸ್ಸುಗಳ ಹಿಂಬದಿಯಲ್ಲಿ ಹಾಗೂ ಬಸ್ಸಿನ ಪ್ರವೇಶ ದ್ವಾರದಲ್ಲಿ ಪೋಸ್ಟರ್‍ಗಳನ್ನು ಅಂಟಿಸಲು ತಿಳಿಸಲಾಯಿತು. ಇದಕ್ಕಾಗಿ ಸುಮಾರು 2500 ಪೋಸ್ಟರ್‍ಗಳನ್ನು ಸಾರಿಗೆ ಸಂಸ್ಥೆಗೆ ಒಪ್ಪಿಸಲಾಯಿತು.
ನಗರದಲ್ಲಿ ಸುಮಾರು 4500 ಅಟೋ ರಿಕ್ಷಾಗಳಿವೆ. ಅಟೋ ರಿಕ್ಷಾಗಳು ಪ್ರಯಾಣಿಕರನ್ನು ಹೊತ್ತುಕೊಂಡು ನಗರದ ಎಲ್ಲ ಓಣಿಗಳಿಗೂ ಪ್ರಯಾಣಿಸುತ್ತವೆ. ವಿಶೇಷವಾಗಿ ಕಲಬುರಗಿ ನಗರದ ಎಕ್ಷಟೆನ್ಷನ್ ಪ್ರದೇಶದಲ್ಲಿ ಹಾಗೂ ಸಣ್ಣ ಸಣ್ಣ ಗಲ್ಲಿಗಳಲ್ಲಿ ವಾಸಿಸುವ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅಟೋಗಳ ಮೇಲೆ ಪೋಸ್ಟರ್‍ಗಳನ್ನು ಅಂಟಿಸುವ ಮೂಲಕ ಮತದಾನದ ಜಾಗೃತಿ ಮೂಡಿಲಾಗುತ್ತಿದೆ.
ಬೂತ್ ಮಟ್ಟದಲ್ಲಿ ಮತದಾನದ ಸಂದೇಶ ನೀಡಲು ಪ್ರತಿ ಬೂತನಲ್ಲಿ ಮತದಾನದ ಜಾಗೃತಿ ಮೂಡಿಸುವ 5 ಪೋಸ್ಟರಗಳನ್ನು ಈಗಾಗಲೇ ಅಂಟಿಸಲಾಗಿದೆ. ಈ ಸ್ಥಳಕ್ಕೆ ಆಗಮಿಸುವ ಮತದಾರರ ಸಹಿ ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಜಾರಿಯಲ್ಲಿದೆ.
ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 14 ದಿನಗಳು ಬಾಕಿ ಇದ್ದು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ದಿನ ಮೇ 12ರವರೆಗೆ ಕೌಂಟ್ ಡೌನ್ ಪ್ರಾರಂಭಿಸಿ ಪ್ರತಿದಿನ ಒಂದೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಏಪ್ರಿಲ್ 30ರಂದು ಮತದಾನ ಜಾಗೃತಿ ಅಭಿಯಾನ
********************************************
ಕಲಬುರಗಿ,ಏ.28.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಸಹರಾ ಸೇವಾ ಸಂಸ್ಥೆ ಹಾಗೂ ಡಾನ್ ಬಾಸ್ಕೋ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಸೋಮವಾರ ಏಪ್ರಿಲ್ 30ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ನಗರದ ಎಂ.ಎಸ್.ಕೆ. ಮಿಲ್ ಹತ್ತಿರದ ಕಣ್ಣಿ ಮಾರುಕಟ್ಟೆಯಲ್ಲಿ ಏರ್ಪಡಿಸಲಾಗಿದೆ.
ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ವಿ. ಮಲ್ಲಾಪುರೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ, ಸಹರಾ ಸೇವಾ ಸಂಸ್ಥೆ ಅಧ್ಯಕ್ಷ ಮಸ್ತಾನ್ ಬಿರಾದಾರ್ ಹಾಗೂ ಡಾನ್ ಬಾಸ್ಕೋ ಸಂಸ್ಥೆ ಸಜ್ಜಿತ್ ಫಾದರ್ ಉಪಸ್ಥಿತರಿರುವರು.
ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ
****************************************
ಕಲಬುರಗಿ,ಏ.28.(ಕ.ವಾ.)-ಬುದ್ಧ ಪೂರ್ಣಿಮಾ 2018ರ ಏಪ್ರಿಲ್ 30ರಂದು ಆಚರಿಸುತ್ತಿರುವ ಪ್ರಯುಕ್ತ ಸದರಿ ದಿನದಂದು ಕಲಬುರಗಿ ನಗರದಲ್ಲಿರುವ ಎಲ್ಲ ಕಸಾಯಿಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಈ ಆದೇಶ ಉಲ್ಲಂಘಿಸಿದ್ದÀಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಘುನಂದನಮೂರ್ತಿ ತಿಳಿಸಿದ್ದಾರೆ.
ಏಪ್ರಿಲ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಏ.28.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ. ಗೊಬ್ಬೂರ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ ಏಪ್ರಿಲ್ 30ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಗೊಬ್ಬೂರ ವಿತರಣಾ ಕೇಂದ್ರ: ಎಫ್-1 ಗೊಬ್ಬೂರ ಬಿ ಐಪಿ, ಎಫ್-2 ಗೊಬ್ಬೂರ ಎನ್.ಜೆ.ವಾಯ್. ಎಫ್-3 ಬೀದನೂರ ಮತ್ತು ಎಫ್-4 ಹಾವನೂರ ಮತ್ತು ಎಫ್. 5 ಎಸ್.ಆರ್.ಕೆ.

No comments:

Post a Comment