GULBARGA VARTHE

GULBARGA VARTHE

Tuesday, 20 March 2018

NEWS AND PHOTO DATE: 20---3--2018

ಮಾರ್ಚ್ 22ಮತ್ತು 23ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
******************************************************
ಕಲಬುರಗಿ,ಮಾ.20.(ಕ.ವಾ.)-ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ 600 ಎಂ.ಎಂ. ವ್ಯಾಸದ ಪಿ.ಎಸ್.ಸಿ. ಕೊಳವೆ ಮಾರ್ಗವು ತಾವರಗೇರಾ ಕ್ರಾಸ್ ಮತ್ತು ಪೆಟ್ರೋಲ್ ಪಂಪ್ ಎದುರುಗಡೆ (ಬೇಲೂರ ರಸ್ತೆ) ಯಲ್ಲಿ ಸೋರಿಕೆ ಕಂಡು ಬಂದಿದೆ. ಈ ಕೊಳವೆ ಮಾರ್ಗದ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಕೆಳಕಂಡ ಮೇಲ್ಮಟ್ಟದ/ಕೆಳಮಟ್ಟದ ಜಲಸಂಗ್ರಾಹಗಾರದಿಂದ ಕಲಬುರಗಿ ನಗರಕ್ಕೆ ಮಾರ್ಚ್ 22 ಮತ್ತು 22ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ
ಹಳೆ ಜಲಶುದ್ಧೀಕರಣ ಕೇಂದ್ರ, ಹೆಚ್.ಎಸ್.ಆರ್. ಮೇಲ್ಮಟ್ಟದ/ ಕೆಳಮಟ್ಟದ, ಮೋಮಿನಪುರ, ಸುಪರ್ ಮಾರ್ಕೆಟ್, ಡಿಸಿ ಟ್ಯಾಂಕ್, ಪೊಲೀಸ್ ಕಾಲೋನಿ ಹಾಗೂ ಐವಾನ್-ಇ-ಶಾಹಿ ಟ್ಯಾಂಕಿನ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ
*******************************
ಕಲಬುರಗಿ,ಮಾ.20.(ಕ.ವಾ.)-ಹೆಣ್ಣು ಮಕ್ಕಳು ಅಬಲೆಯರಲ್ಲ, ಸಬಲೆಯರು. ಯುವತಿಯರಲ್ಲಿ ಆತ್ಮವಿಶ್ವಾಸ ಒಂದಿದ್ದರೆ ಏನು ಬೇಕಾದರೆ ಸಾಧನೆ ಮಾಡಬಹುದು ಎಂದು ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಮೀರಾ ಪಂಡಿತ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತ ಆಡಳಿತ ಸಂಸ್ಥೆ ಹಾಗೂ ಪಿಲ್ಲೂ ಹೋಮಿ ಇರಾನಿ ಮಹಿಳಾ ಮಹಾವಿದ್ಯಾಲಯ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಕಲಬುರಗಿಯ ಭಾರತೀಯ ಆಡಳಿತ ಸಂಸ್ಥೆಯ ಅಧ್ಯಕ್ಷ ಮಾರುತಿ ಪವಾರ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಹೆಚ್ಚು ಸಬಲರಾಗಿದ್ದು, ಅವರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಪ್ರಜ್ಞಾ, ಕಾನೂನು, ಸಲಹಾ ಸಂಸ್ಥೆಯ ಮೀನಾಕ್ಷಿ ಬಾಳಿ, ಸಾಹಿತಿ ರೇಣುಕಾ ಹೇಳವರ ಅವರು ಮಾಡಿದ ಸಾಧನೆಗೆ ಸನ್ಮಾನಿಸಲಾಯಿತು. ಕಲಬುರಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ಅಪ್ಪಾರಾವ ಅಕ್ಕೋಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ, ಸದಸ್ಯ ವಿ.ಎನ್.ಚಿತ್ತಾರಿ ಸೇರಿದಂತೆ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿಲ್ಲೂ ಹೋಮಿ ಇರಾನಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಪಾಟೀಲ ಸ್ವಾಗತಿಸಿದರು. ಸೀತಾಬಾಯಿ ಕಾರ್ಯಕ್ರಮ ನಿರ್ವಹಿಸಿದರು.


No comments:

Post a Comment