GULBARGA VARTHE

GULBARGA VARTHE

Monday, 5 March 2018

News and photo Date: 05-3-2018

ಕಾಗಿಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಜಿಲ್ಲಾ ಸಚಿವರಿಂದ ಅಡಿಗಲ್ಲು
******************************************************************* ಕಲಬುರಗಿ, ಮಾರ್ಚ್ 05(ಕ.ವಾ.)- ವಾಗ್ಧರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ-10ರಲ್ಲಿ ಬರುವ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಸಮೀಪದಲ್ಲಿರುವ ಕಾಗಿಣಾ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣ ಮಾಡುವ ಕಾಮಗಾರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸೋಮವಾರ ರಾಷ್ಟ್ರಕೂಟ ಉತ್ಸವದ ಕಾರ್ಯಕ್ರಮದಲ್ಲಿ ಅಡಿಗಲ್ಲು ಹಾಕಿದರು. ಬಹುದಿನದ ಬೇಡಿಕೆ ಇದಾಗಿದ್ದು, ಸುಮಾರು 25 ಕೋಟಿ ರೂ.ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಲಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಮಹಾಂತಪ್ಪಾ ಸಂಗಾವಿ, ತಾಲೂಕು ಪಂಚಾಯತಿ ಅಧ್ಯಕ್ಷೆ ಸುರೇಖಾ ಪುರಾಣಿಕ, ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ನಂದೂರ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಡಾ.ಹೆಚ್.ಟಿ.ಪೋತೆ, ಮುಖಂಡ ತಿಪ್ಪಣಪ್ಪ ಕಮಕನೂರ, ಲೋಕೋಪಯೋಗಿ ಇಲಾಖೆ ಮತ್ತು ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಕೋಮು ವೈಷಮ್ಯತೆಯಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ
************************************************
-ಕಾವ್ಯಂ ಶ್ರೀನಿವಾಸ ಮೂರ್ತಿ
*************************
ಕಲಬುರಗಿ, ಮಾರ್ಚ್ 05(ಕ.ವಾ.)- ದೇಶದಲ್ಲಿ ಇಂದು ಕೋಮು ಸೌಹಾರ್ದತೆ ಕದಡುವ ಶಕ್ತಿಗಳು ಹೆಚ್ಚುತ್ತಿದ್ದು, ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾವ್ಯಂ ಶ್ರೀನಿವಾಸ ಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆಯುತ್ತಿರುವ ರಾಟ್ಟ್ರಕೂಟ ಉತ್ಸವದ ಎರಡನೇ ದಿನದ ಮೊದಲನೇ ವಿಚಾರಗೋಷ್ಠಿಯಲ್ಲಿ “ರಾಷ್ಟ್ರಕೂಟ ಕಾಲದ ಸೌಹಾರ್ದ ಪರಂಪರೆ” ಎಂಬ ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರಕೂಟ ಕಾಲದಲ್ಲಿ ಶಿವ, ವಿಷ್ಣು, ಬೌದ್ಧ, ಜಿನ ಮುಂತಾದ ಪಂಥಗಳು ಇದ್ದವು. ಅವುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಸೌಹಾರ್ದತೆ ಇತ್ತು ಎಂದು ಅವರು ಹೇಳಿದರು.
ಜಾತ್ಯತೀತತೆ ಹಾಗೂ ಎಲ್ಲಾ ಧರ್ಮಗಳನ್ನು ಭಾರತ ಒಪ್ಪಿಕೊಂಡಿದ್ದರೂ, ಮತೀಯ ಮತ್ತು ಸಾಮಾಜಿಕ ಸೌಹಾರ್ದತೆಗೆ ಭಂಗ ಬಂದಿದೆ ಎಂದು ಅವರು ಹೇಳಿದರು.
ಕವಿ ಶ್ರೀವಿಜಯ “ಕವಿರಾಜ ಮಾರ್ಗ” ಗ್ರಂಥ ರಚನೆಗೆ ರಾಜ ಅಮೋಘವರ್ಷ ನೃಪತುಂಗ ಕೂಡ ಸಹಕಾರ ನೀಡಿದರು. ನೃಪತುಂಗ ವೈಷ್ಣವ ಮತಸ್ಥ, ಶ್ರೀ ವಿಜಯ ಜೈನ ಮತಸ್ಥರಾದರೂ ಆಗ ಸೌಹಾರ್ದತೆ ಇದ್ದುದ್ದರಿಂದ ಇಬ್ಬರು ಸೇರಿ ಗ್ರಂಥ ರಚಿಸಿದರಿಂದಲೆ ಇದಕ್ಕೆ “ಕವಿರಾಜ ಮಾರ್ಗ” ಹೆಸರು ಬಂದಿದೆ ಎಂದರÀು.
ಈ ಸಂದರ್ಭದಲ್ಲಿ ಆಶಯ ಭಾಷಣ ಮಾಡಿದ ಸಾಹಿತಿ ಮುಡಬಿ ಗುಂಡೇರಾವ್ ಅವರು, ಮಳಖೇಡದಲ್ಲಿರುವ ಕೋಟೆಯ ಬಗ್ಗೆ ಸಂಶೋಧನೆ ನಡೆಯಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಹಂಪಿ ಉತ್ಸವ ಮಾದರಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ಮನವಿ ಮಾಡಿದರು.
ಸೇಡಂ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಶ್ರೀ ಶಶಿಶೇಖರ್ ರೆಡ್ಡಿ ಅವರು ಸ್ವಾಗತಿಸಿದರು. ಬಿ. ಹೆಚ್. ನಿರಗುಡಿ ಅವರು ನಿರೂಪಿಸಿದರು.

ಸರ್ವರೂ ಸಮನಾಗಿ ಬಾಳಬೇಕೆಂಬುದು ವಚನಕಾರರ ಸದಾಶಯ
********************************************************
- ಡಾ.ಮೀನಾಕ್ಷಿ ಬಾಳಿ
*******************
ಕಲಬುರಗಿ, ಮಾರ್ಚ್ 05(ಕ.ವಾ.) - ಸರ್ವರೂ ಸಮಾನರಾಗಿ ಸ್ವಾಭಿಮಾನದಿಂದ ಬಾಳಬೇಕೆಂಬುದು ವಚನಕಾರರ ಸದಾಶಯವಾಗಿತ್ತು, ಈ ನಿಟ್ಟಿನಲ್ಲಿ ಶರಣರು ಸಾಹಿತ್ಯ ರಚಿಸಿದರು ಎಂದು ಕಲಬುರಗಿ ವ್ಹಿ.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದ ರಾಟ್ಟ್ರಕೂಟ ಉತ್ಸವದ ಎರಡನೇ ದಿನದ 2ನೇ ವಿಚಾರಗೋಷ್ಠಿಯಲ್ಲಿ “ ವಚನ ಸಾಹಿತ್ಯ ” ಕುರಿತು ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು.
ದೇವರು-ಧರ್ಮದ ಹೆಸರಿನಲ್ಲಿ ಕೆಳವರ್ಗದವರನ್ನು ತುಳಿಯುತ್ತಿರುವುದನ್ನು ಬಸವಾದಿ ಶರಣರು ವಿರೋಧಿಸಿ ಕಾಯಕ ಜೀವಿ ಜನರಲ್ಲಿ ವೈಚಾರಿಕಾ ಪ್ರಜ್ಞೆ ಮೂಡಿಸಿದರು ಎಂದು ಅವರು ಹೇಳಿದರು.
12ನೇ ಶತಮಾನದ ವಚನಕಾರರ ತತ್ವ-ಸಿದ್ಧಾಂತಗಳನ್ನು 20ನೇ ಶತಮಾನದಲ್ಲಿ ಜಾತ್ಯತೀತ ಸಂವಿಧಾನ ಮೂಲಕ ಜಾರಿಗೆ ತಂದ ಕೀರ್ತಿ ಬಾಬಾ ಸಾಹೇಬ ಅಂಬೇಡ್ಕರ್‍ಗೆ ಸಲ್ಲುತ್ತದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪುರೋಹಿತಶಾಹಿ ವರ್ಗ ಪೂಜೆ ಮಾಡುವುದನ್ನೇ ಬಂಡವಾಳ ಮಾಡಿಕೊಂಡು ಅದನ್ನೇ ಬದುಕು ಮಾಡಿಕೊಂಡಿತ್ತು. ಇದನ್ನು ಕೆಳವರ್ಗದ ಜನ ಕೂಡ ನಂಬಿದ್ದರು. ಆದರೆ, ಶರಣರು ತಾತ್ವಿಕ ಸಂಕೇತವಾಗಿ ಎಲ್ಲರೂ ಒಪ್ಪಿಕೊಳ್ಳುವಂತಹ ಲಿಂಗವನ್ನು ನೀಡಿ, ಕಾಯಕವೇ ದೇವರು ಎಂಬ ಸಂದೇಶ ಸಾರಿದರು ಎಂದು ಮೀನಾಕ್ಷಿ ಬಾಳಿ ತಿಳಿಸಿದರು.
ಹಿರಿಯ ಲೇಖಕ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ದಾಸಸಾಹಿತ್ಯ ಕುರಿತು ವಿಷಯ ಮಂಡನೆ ಮಾಡಿ, ಕೆಲವರು ದೇವರ ಪೂಜೆಯನ್ನೇ ಕಾಯಕ ಎಂದು ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ, ದಾಸರೂ ಯಾವತ್ತೂ ಮೌಡ್ಯಕ್ಕೆ ಅಂಟಿಕೊಳ್ಳಲಿಲ್ಲ ಎಂದು ಅವರು ಹೇಳಿದರು.
ಎಲ್ಲಾ ಒಳ್ಳೆಯ ಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ದಾಸ ಸಾಹಿತ್ಯದ ಮೂಲ ಆಶಯವಾಗಿತ್ತು ಎಂದು ಅವರು ವಿವರಿಸಿದರು.
ರಾಜ್ಯದ 300 ದಾಸ ಸಾಹಿತಿಗಳ ಪೈಕಿ ಹೈದ್ರಾಬಾದ್ ಕರ್ನಾಟಕದಲ್ಲಿ 120 ಮಂದಿ ದಾಸ ಸಾಹಿತಿಗಳಿದ್ದಾರೆ. ಈ ಮೂಲಕ ದಾಸ ಸಾಹಿತ್ಯಕ್ಕೆ ಈ ಭಾಗ, ಅನನ್ಯ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.
ಕಮಲಾಪುರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಅಮೃತಾ ಕಟಕೆ ಅವರು ತತ್ವಪದ ಸಾಹಿತ್ಯ ಕುರಿತು ವಿಷಯ ಮಂಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ವಿ. ಜಿ. ಪೂಜಾರ್ ಅವರು ಆಶಯ ನುಡಿ ನುಡಿದರು. ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿವಿಯ ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಕುಮಾರ್ ಪಾಟೀಲ್ ಅವರು ನಿರೂಪಿಸಿದರು.

ದೇಶದ ಒಕ್ಕೂಟ ವ್ಯವಸ್ಥೆಗೆ ರಾಷ್ಟ್ರಕೂಟರು ನಾಂದಿ
********************************************
-ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ
*****************************
ಕಲಬುರಗಿ, ಮಾರ್ಚ್ 05(ಕ.ವಾ.)-ದೇಶದ ಒಕ್ಕೂಟ ವ್ಯವಸ್ಥೆಗೆ ನಾಂದಿ ಹಾಡಿದವರು ಮಾನ್ಯಖೇಟದ ರಾಷ್ಟ್ರಕೂಟರು ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಕೊಂಡಾಡಿದ್ದಾರೆ.
ಅವರು ಸೋಮವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಳಖೇಡದಲ್ಲಿ ನಡೆದ ರಾಷ್ಟರಕೂಟ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದರು.
ಕನ್ಯಾಕುಮಾರಿಯಿಂದ ಹಿಮಾಚಲವರೆಗೂ ಆಳಿದ ದೇಶದ ಯಾವುದಾದರು ಸಂಸ್ಥಾನವಿದ್ದರೆ ಅದು ರಾಷ್ಟ್ರಕೂಟರ ಸಂಸ್ಥಾನ ಎಂದು ಹಾಡಿ ಹೊಗಳಿದರು.
ನಾಡಿನ ಸಾಹಿತ್ಯ, ಕಲೆ, ಸಂಸ್ಕøತಿಗೆ ರಾಷ್ಟ್ರಕೂಟರು ನೀಡಿದ ಕೊಡುಗೆ ಅಪಾರವಾಗಿದ್ದು, ಗಂಗಾ, ಕದಂಬ ಮುಂತಾದವರಿಗಿಂತಲೂ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಕೂಟ ಉತ್ಸವ ಕನ್ನಡಿಗರ ಮೊದಲ ಉತ್ಸವ. ಇನ್ನಷ್ಟು ಅದ್ಧೂರಿಯಾಗಿ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ, ಹಿಂದುಳಿದ ಈ ಭಾಗದ ಲೇಖಕರು ಹಾಗೂ ಸ್ಥಳೀಯ ಕಲಾವಿದರಿಗೆ ಅಕಾಡೆಮಿಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಈ ಭಾಗದ ಬಹುದಿನಗಳ ಕನಸಿನ ರಾಷ್ಟ್ರಕೂಟ ಉತ್ಸವ ಇಂದು ಅದ್ದೂರಿಯಾಗಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಇದೇ ರೀತಿ ಬಹಮನಿ, ಖ್ವಾಜಾ ಬಂದೇ ನವಾಜ್ ಉತ್ಸವ ಸಹ ನಡೆಸಬೇಕು ಎಂದು ಹೇಳಿದರು.
ರಾಷ್ಟ್ರಕೂಟರು, ಬದಾಮಿಯ ಚಾಲುಕ್ಯರು ಮುಂತಾದವರ ಶಿಲಾ-ಶಾಸನಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕೆಂದು ಅವರು ಸಲಹೆ ನೀಡಿದರು.
ರಾಷ್ಟ್ರಕೂಟರು ನಿರ್ಮಿಸಿದ ಪ್ರಸ್ತುತ ಮಹಾರಾಷ್ಟ್ರದ ಎಲ್ಲೋರದ ಕೈಲಾಸನಾಥ ದೇಗುಲ ಶಿಲ್ಪ ಕಲೆಗೆ ಬಹಳ ಪ್ರಸಿದ್ಧಿಯಾಗಿದ್ದು, ಇದನ್ನು ಕೆತ್ತಿದವರು ಕರುನಾಡಿನ ಶಿಲ್ಪಿಗಳು ಎಂದು ಉಲ್ಲೇಖಿಸಿ ಗುಣಗಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ,ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಮಳಖೇಡದಲ್ಲಿ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ ಸ್ಥಾಪಿಸುವ ಮೂಲಕ ರಾಷ್ಟ್ರಕೂಟರ ಬಗೆಗಿನ ಗ್ರಂಥ ಮತ್ತು ಶಿಲಾಶಾಸನಗಳನ್ನು ಸಂರಕ್ಷಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮಕ್ಕಳ ಇತಿಹಾಸ ಪ್ರಜ್ಞೆ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರಕೂಟ ಉತ್ಸವದಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದ ಅವರು, ನಮಗೆ ಇತಿಹಾಸ ಗೊತ್ತಿದ್ದರೆ, ಇತಿಹಾಸ ಸೃಷ್ಟಿಸಬಹುದು ಎಂದು ಅವರು ಹೇಳಿದರು.
ಮಳಖೇಡನ ಉತ್ತರಾದಿ ಮಠದ ವ್ಯವಸ್ಥಾಪಕ ಪಂ.ವೆಂಕಣ್ಣಚಾರ್ಯರ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾಡಾ ಅಧ್ಯಕ್ಷ ಮಹಾಂತಪ್ಪಾ ಸಂಗಾವಿ, ತಾಲೂಕ ಪಂಚಾಯತ ಅಧ್ಯಕ್ಷೆ ಸುರೇಖಾ ಪುರಾಣಿಕ, ಮಳಖೇಡ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ನಂದೂರ, ಡಾ.ಹೆಚ್.ಟಿ.ಪೋತೆ, ಶಂಕ್ರಯ್ಯ ಘಂಟಿ, ಹಿರೆಣ್ಣೆಪ್ಪ ದೇಶಮುಖ, ಕಲ್ಯಾಣಪ್ಪ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು. ಉತ್ಸವದ ಸಂಘಟನಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಸ್ವಾಗತಿಸಿದರು. ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ ಅವರು ನಿರೂಪಿಸಿದರು.

ಮಾರ್ಚ್ 8ರಂದು ಕಲಬುರಗಿಯಲ್ಲಿ ರೇರಾ ಕಾರ್ಯಾಗಾರ
*************************************************
ಕಲಬುರಗಿ.ಮಾ.05(ಕ.ವಾ):-ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೊಂದಣಿಯಾಗದ ಯೋಜನೆಗಳ ಕುರಿತು ಇದೇ ಮಾರ್ಚ್ 8ರಂದು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ (ಖeಚಿಟ ಇsಣಚಿಣe ಖeguಟಚಿಣoಡಿಥಿ ಂuಣhoಡಿiಣಥಿ) ರೇರಾ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸುವರು. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ ಅಜಗರ್ ಚುಲ್‍ಬುಲ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ್‍ಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಕಲಬುರಗಿ ಕ್ರೆಡಾಯ ಅಧ್ಯಕ್ಷ ಸಂಜೋಗ್ ರಥಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ರೇರಾ ಅಧ್ಯಕ್ಷ ಕಪೀಲ್ ಮೋಹನ್ ಹಾಗೂ ಕಾರ್ಯದರ್ಶಿ ಪಿ. ಸುನೀಲಕುಮಾರ ಅವರು ರೇರಾ ಕಾಯ್ದೆ ಕುರಿತು ಮಾತನಾಡುವರು. ಈ ಸಂದರ್ಭದಲ್ಲಿ ರೇರಾ ಅಡ್ಜುಡಿಕೇಟಿಂಗ್ ಆಫೀಸರ್ ಕೆ. ಪಾಲಾಕ್ಷ ಖರೀದಿದಾರರ ಕುರಿತು, ಅಧೀನ ಕಾರ್ಯದರ್ಶಿ ಕೆ.ಟಿ.ಶಾಂತಲಾ ನೋಂದಣಿ ಪ್ರಕ್ರಿಯೆ ಕುರಿತು, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಜಿ. ಸತ್ಯನಾರಾಯಣ ಅಭಿವೃದ್ಧಿಗಾರರ ಕುರಿತು, ರೇರಾ ಸಿಸ್ಟಂ ಎನಾಲಿಸ್ಟ್ ಜಾನ್ ಬೆನಡಿಕ್ಟ್ ಕಂಪ್ಯೂಟರ್ ರಿಲೆಡೆಡ್ ವಿಷಯಗಳ ಕುರಿತು ಮಾತನಾಡುವರು.

ಕಲಬುರಗಿ, ಬೀದರ, ಯಾದಗಿರಿ, ರಾಯಚೂರ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ ನಕ್ಷೆ ಮಂಜೂರಾತಿ ನೀಡುವ ಕಚೇರಿಯ ಎಲ್ಲ ಅಧಿಕಾರಿಗಳಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಪಾಲ್ಗೊಂಡಿದವರಿಗೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಅರಿವು, ಜಾಗೃತಿಯನ್ನು ಮೂಡಿಸಲು ಮಾರ್ಚ್ 6 ರಿಂದ 8ರವರೆಗೆ ಪ್ರಾಧಿಕಾರದಿಂದ ಕಲಬುರಗಿ ನಗರದಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಜಿ. ಸತ್ಯನಾರಾಯಣ (ಮೊಬೈಲ್ ಸಂಖ್ಯೆ 9535443333) ಅವರು ಮಾರ್ಚ್ 6ರಿಂದ 8ರವರೆಗೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಬಹುದಾಗಿದೆ. ರೇರಾ ಕುರಿತು ಎಲ್ಲ ಮಾಹಿತಿಗಳು, ಕಾಯ್ದೆ, ನಿಯಮಗಳು ಮತ್ತು ಇತರೆ ಮಾಹಿತಿಯು ರೇರಾ ಪೋರ್ಟಲ್‍ನಲ್ಲಿ ಲಭ್ಯವಿದ್ದು, ಈ ವಿವರಗಳನ್ನು ಪಡೆದು ತಕ್ಷಣ ರೇರಾ ನೋಂದಣಿ ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 6ರಂದು ಪ್ರಧಾನ ಅಂಚೆ ಕಚೇರಿಯಲ್ಲಿ
****************************************
ಸಿ.ಎಸ್.ಐ. ನೂತನ ತಂತ್ರಾಂಶ ಉದ್ಘಾಟನೆ
**************************************
ಕಲಬುರಗಿ.ಮಾ.05(ಕ.ವಾ):-ಕಲಬುರಗಿ ವಿಭಾಗದ ಎಲ್ಲ ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರಿಗೆ/ಗ್ರಾಹಕರಿಗೆ ಉತೃಷ್ಠ ಸೇವೆ ನೀಡಲು ಅನುಕೂಲವಾಗುವಂತೆ ಕಲಬುರಗಿ ಕೋಟೆ ಹತ್ತಿರದ ಪ್ರಧಾನ ಅಂಚೆ ಕಚೇರಿಯಲ್ಲಿ ಮಾರ್ಚ್ 6ರಂದು ಬೆಳಿಗ್ಗೆ 9 ಗಂಟೆಗೆ ಧಾರವಾಡದ ಎನ್.ಕೆ. ರಿಜಿಯನ್ ಪೋಸ್ಟ ಮಾಸ್ಟರ್ ಜನರಲ್ ವೀಣಾ ಅರ್ ಶ್ರೀನಿವಾಸ ಅವರು ಸಿ.ಎಸ್.ಐ. ನೂತನ ತಂತ್ರಾಂಶವನ್ನು ಉದ್ಘಾಟಿಸಲಿದ್ದಾರೆ ಎಂದು ಕಲಬುರಗಿ ಅಂಚೆ ಇಲಾಖೆಯ ವರಿಷ್ಠ ಅಧೀಕ್ಷಕ ಎಸ್.ಎಸ್.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಾರ್ಮಿಕ ತರಬೇತಿ ಕೇಂದ್ರ/ಶಾಲೆ ಪ್ರಾರಂಭಿಸಲು ಅರ್ಜಿ ಆಹ್ವಾನ
************************************************************
ಕಲಬುರಗಿ,ಮಾ.05.(ಕ.ವಾ.)-ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಅಡಿಯಲ್ಲಿ ಕೇಂದ್ರ ಸರ್ಕಾರದ ಬಾಲಕಾರ್ಮಿಕ ಯೋಜನೆಯನ್ನು ಅನುಷ್ಠಾನಗೊಳಿಸಲು ಕಲಬುರಗಿ ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕ ತರಬೇತಿ ಕೇಂದ್ರ/ ಶಾಲೆಗಳನ್ನು ಪ್ರಾರಂಭಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಬಾಲಕಾರ್ಮಿಕ ಯೋಜನಾ ಸಂಘ ಅಧ್ಯಕ್ಷರು ತಿಳಿಸಿದ್ದಾರೆ.
ಆಸಕ್ತಿ ಹೊಂದಿದ ಸಂಘ ಸಂಸ್ಥೆಯವರು ಯೋಜನಾ ನಿರ್ದೇಶಕರ ಕಾರ್ಯಾಲಯ, ಕೋಣೆ ಸಂಖ್ಯೆ 28, ಮೂರನೇ ಮಹಡಿ, ವಿಕಾಸ ಭವನ ಕಲಬುರಗಿ ಕಚೇರಿಯನ್ನು ಸಂಪರ್ಕಿಸಿ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಇವರ ಹೆಸರಿನಲ್ಲಿ 100 ರೂ.ಗಳ ಡಿ.ಡಿ. ಸಲ್ಲಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಸಂಬಂಧಿಸಿದ ನೋಂದಣಿ ಪ್ರತಿ, ನವೀಕರಣ ಪ್ರತಿ, ಬೈಲಾ ಪ್ರತಿ, ಬಾಲ ಬ್ಯಾಯ ಕಾಯ್ದೆ 2016ರ ಅಡಿಯಲ್ಲಿ ನೋಂದಣಿಯಾದ ಪ್ರತಿ ಹಾಗೂ ಇತರೆ ಮಕ್ಕಳ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಕುರಿತು ದಾಖಲೆಗಳೊಂದಿಗೆ ಮಾರ್ಚ್ 12ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472-256295ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಜನವರಿ 6ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
*************************************************
ಕಲಬುರಗಿ,ಮಾ.05.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋ ಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಮಾರ್ಚ್ 6: ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹುಡೇದ.
ಮಾರ್ಚ್ 9ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಜಿಲ್ಲಾ ಆಸ್ಪತ್ರೆಯ/ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಮನೋವೃದ್ಯರು.ಮಾರ್ಚ್ 13ರಂದು ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ|| ವಿಜಯೇಂದ್ರ. ಮಾರ್ಚ್ 16ರಂದು ಜೇವರ್ಗಿ ತಾಲೂಕು ಆಸ್ಪತ್ರೆ-ಕೆ.ಬಿ.ಎನ್. ಆಸ್ಪತ್ರೆಯ ಮನೋವೃದ್ಯ ಡಾ|| ಅಮೋಲ್ ಪತಂಗೆ. ಮಾರ್ಚ್ 20ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಡಾ|| ರಾಹುಲ ಮಂದಕನಳ್ಳಿ. ಮಾರ್ಚ್ 27ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಡಾ. ಅಜಯ ಧಗೆ ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಹಳ ಮಂಕಾಗಿರುವ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆÉಯಿಂದ ತೊಂದರೆ, ಯಾರ ಜೊತೆಗೂ ಸೇರದಿರುವ, ಬೇರೆಯವರಿಗೆ ಕಾಣಿಸದ ದೃಶ್ಯ ತಮಗೆ ಕಾಣಿಸುತ್ತದೆ ಹಾಗೂ ಕೇಳಿಸದ ಧ್ವನಿ ತನಗೆ ಕೇಳಿಸುತ್ತದೆ ಎನ್ನುವ, ಎಲ್ಲರ ಬಗ್ಗೆ ಸಂಶಯ ಪಡುವ, ಆತ್ಮಹತ್ಯೆ ಬಗ್ಗೆ ಆಲೋಚಿಸುವ, ಮೂರ್ಛೆರೋಗ, ಬುದ್ಧಿಮಾಂದ್ಯರು ಮುಂತಾದ ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಕರ್ತವ್ಯ ಲೋಪ: ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ
******************************************************
ಹಾಗೂ ಮೇಲ್ವಿಚಾರಕಿ ಅಮಾನತ್ತು
******************************
ಕಲಬುರಗಿ,ಮಾ.05.(ಕ.ವಾ.)-ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯವಹಿಸಿದ್ದಕ್ಕಾಗಿ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚಿಂಚೋಳಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಪ್ರಭಾರ ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮಸೇನ ಚವ್ಹಾಣ ಹಾಗೂ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ಸರೋಜಾ ಎನ್. ರೆಡ್ಡಿ ಅವರನ್ನು ಅಮಾನತ್ತುಗೊಳಿಸಿದ್ದಾರೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಫಜಲಪುರ: ಅಂಧಮಕ್ಕಳ ಶಾಲೆಗೆ ಮ್ಯಾಟ್ ಖರೀದಿ: ದರಪಟ್ಟಿ ಆಹ್ವಾನ
***************************************************************
ಕಲಬುರಗಿ,ಮಾ.05.(ಕ.ವಾ.)-ಅಫಜಲಪುರ ಪುರಸಭೆಯ 2017-18ನೇ ಸಾಲಿನ ಎಸ್.ಎಫ್.ಸಿ. ಶೇ. 3ರ ಅನುದಾನದಲ್ಲಿ ಅಫಜಲಪುರ ವಿ.ಕೆ.ಜಿ. ಅಂಧಮಕ್ಕಳ ಶಾಲೆಗೆ ಮ್ಯಾಟ್‍ಗಳನ್ನು ಸರಬರಾಜು ಮಾಡಲು ಆರ್ಹ ಸರಬರಾಜುದಾರರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಅಫಜಲಪುರ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಸರಬರಾಜುದಾರರು ದರಪಟ್ಟಿಗಳನ್ನು ಮಾರ್ಚ್ 12ರೊಳಗಾಗಿ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು. ಟೆಂಡರ್ ಅರ್ಜಿ ನಮೂನೆ, ಇ.ಎಂ.ಡಿ. ಮೊತ್ತ, ಅರ್ಜಿ ಶುಲ್ಕ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

ಚಿತ್ತಾಪುರ: ತಕ್ಷಣ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮ
***************************************************
ಕಲಬುರಗಿ,ಮಾ.05.(ಕ.ವಾ.)- ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆÀಯದೇ ಇರುವ ಅರ್ಜಿದಾರರು ತಕ್ಷಣ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮದಡಿ ಚಿತ್ತಾಪುರ ತಾಲೂಕಿನ ಪಡಿತರ ಚೀಟಿದಾರರಿಗೆ ಪಡಿತರ ಚೀಟಿ ವಿತರಿಸಲಾಗುತ್ತಿದೆ ಎಂದು ಚಿತ್ತಾಪುರ ತಹಶೀಲ್ದಾರರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿದಾರರು ಪಡಿತರ ಚೀಟಿ ಪಡೆಯಲು ಕಡ್ಡಾಯವಾಗಿ ಅರ್ಜಿ ಸ್ವೀಕೃತಿ ಪತ್ರ, ಅರ್ಜಿದಾರರ ಯಾರಾದರೂ ಒಬ್ಬ ಹಿರಿಯ ಸದಸ್ಯರ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಧಾರ ಕಾರ್ಡ ಪ್ರತಿಯೊಂದಿಗೆ ಅರ್ಜಿಯಲ್ಲಿರುವ ಒಬ್ಬ ಸದಸ್ಯರು ಖುದ್ದಾಗಿ ಚಿತ್ತಾಪುರ ತಹಸೀಲ್ದಾರರ ಕಚೇರಿಗೆ ಭೇಟಿ ನೀಡಿದ್ದಲ್ಲಿ ಸ್ಥಳದಲ್ಲಿಯೇ ತಕ್ಷಣ ಪಡಿತರ ಚೀಟಿ ಪ್ರತಿಯನ್ನು ಮುದ್ರಿಸಿ ನೀಡಲಾಗುವುದು. ನಂತರ ಮೂಲ ಪಡಿತರ ಚೀಟಿಯನ್ನು ಅಂಚೆ ಮೂಲಕ ಅರ್ಜಿದಾರರ ವಿಳಾಸಕ್ಕೆ ಬರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ವಿವಿಧ ಮಾರ್ಗಗಳಲ್ಲಿ ನಾನ್ ಎಸಿ ಸ್ಲಿಪರ್ ಸಾರಿಗೆ ಕಾರ್ಯಾಚರಣೆ
******************************************************************
ಕಲಬುರಗಿ ಮಾ.05(ಕ.ವಾ):-ಸಾರ್ವಜನಿಕ /ಪ್ರಯಾಣಿಕರ ಬೇಡಿಕೆಯ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ ಘಟಕ-1ರಿಂದ ಕಲಬುರಗಿ-ಹೈದ್ರಾಬಾದ್-ಕಲಬುರಗಿ ಹಾಗೂ ಕಲಬುರಗಿ-ಶಿರಡಿ-ಕಲಬುರಗಿ ಮಾರ್ಗಗಳಲ್ಲಿ ನಾನ್ ಎಸಿ ಸ್ಲೀಪರ್ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ. ಅದೇ ರೀತಿ ಕಲಬುರಗಿ-ಮಂಗಳೂರ-ಕಲಬುರಗಿ ಮಾರ್ಗದಲ್ಲಿ ಈಗಾಗಲೇ ಸಾರಿಗೆ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ವಿಭಾಗ-1, ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಸಿ.ಬಸವರಾಜಪ್ಪ ಕೋರಿದ್ದಾರೆ.

ಜೇವರ್ಗಿ: ನೋಂದಾಯಿತ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ
*******************************************************************
ಕಲಬುರಗಿ ಮಾ.05(ಕ.ವಾ):-ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯಿಂದ 2017-18 ಸಾಲಿನಲ್ಲಿ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ, ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ರಡಿ ವಿಚಾರಗೋಷ್ಠಿ ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಅರ್ಹ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜೇವರ್ಗಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರೇತರ ಸಂಘ-ಸಂಸ್ಥೆಗಳು ಕೆಲ್ಲೂರ, ಮಂದರವಾಡ, ದೇಸಣಗಿ, ರಾಜನಾಳ, ಹಾಲಗಡ್ಲಾ, ಜೇರಟಗಿ, ಚೆನ್ನೂರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು. ಸರ್ಕಾರೇತರ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಟ್ಟಿರಬೇಕು. ನವೀಕರಣಗೊಂಡಿರಬೇಕಲ್ಲದೇ 3 ವರ್ಷಗಳ ಅಡಿಟ್ ಆಗಿರಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಮಾರ್ಚ್ 8ರೊಳಗಾಗಿ ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08442-236661ನ್ನು ಸಂಪರ್ಕಿಸಲು ಕೋರಲಾಗಿದೆ.

ರಾಜ್ಯ ಮಾಹಿತಿ ಆಯುಕ್ತರಿಂದ ಆರ್.ಟಿ.ಐ. ಅಪೀಲು ಪ್ರಕರಣಗಳ ವಿಚಾರಣೆ
*****************************************************************


ಕಲಬುರಗಿ.ಮಾ.05(ಕ.ವಾ):-ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಮಾರ್ಚ್ 6 ಹಾಗೂ 7ರಂದು ಬೆಳಿಗ್ಗೆ 11 ಗಂಟೆಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅರ್ಜಿಗಳ ಅಪೀಲು ಪ್ರಕರಣಗಳ ವಿಚಾರಣೆಯನ್ನು ಕೈಗೊಳ್ಳುವರು ಎಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment