GULBARGA VARTHE

GULBARGA VARTHE

Thursday, 8 February 2018

News and Photo Date: 08--02--2018

ಫೆ. 13ರಂದು ದಲಿತ ವಚನಕಾರರ ಜಯಂತ್ಯೋತ್ಸವ
***********************************************
ಕಲಬುರಗಿ,ಫೆ.08.(ಕ.ವಾ.)-ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತ್ಯೋತ್ಸವÀವನ್ನು ಕಲಬುರಗಿ ಜಿಲ್ಲೆಯಾದ್ಯಂತ 2018ರ ಫೆಬ್ರವರಿ 13ರಂದು ಸಂಭ್ರಮ ಸಡಗರದಿಂದ ಆಚರಿಸಲು ಕಲಬುರಗಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಸಭೆಯು ಸರ್ವಾನುಮತದ ನಿರ್ಣಯ ಕೈಗೊಂಡಿತು.
ಫೆಬ್ರವರಿ 13ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಐದೂ ದಲಿತ ವಚನಕಾರರ ಭಾವಚಿತ್ರದ ಮೆರವಣಿಗೆಯಯನ್ನು ಡೊಳ್ಳು, ಹಲಗೆ ವಾದನ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತು.
ನಂತರ ಬೆಳಿಗ್ಗೆ 11.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಯಂತ್ಯೋತ್ಸವ ಸಮಾರಂಭ ಜರುಗುವುದು. ಸಮಾರಂಭದಲ್ಲಿ ಜಿಲ್ಲಾ ಸಚಿವರು, ಶಾಸಕರು ಮತ್ತು ವಿಶೇಷ ಉಪನ್ಯಾಸಕರು ಪಾಲ್ಗೊಳ್ಳುವರಲ್ಲದೆ ಕಲಾವಿದರಿಂದ ವಚನಕಾರರ ಗಾಯನ ಕಾರ್ಯಕ್ರಮ ನಡೆಯಲಿದೆ. ಮಹಾನಗರ ಪಾಲಿಕೆಯಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದ ಸುತ್ತಮುತ್ತ ಸ್ವಚ್ಛತೆ, ದೀಪಾಲಂಕಾರ ಮತ್ತಿತರ ವ್ಯವಸ್ಥೆ ಮಾಡಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಯಂತಿಯ ಅಂಗವಾಗಿ ನಡೆಸಲಾಗುವ ಮೆರವಣಿಗೆಯ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರಿನ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ತಿಳಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಜಯಂತ್ಯೋತ್ಸವ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ವಿವರಿಸಿದರು. ಸಮಾಜದ ಪ್ರಮುಖ ಗಣ್ಯರಾದ ಶಂಕರ ಕೋಡ್ಲಾ, ಕಾಶಿರಾಯ ನಂದೂರಕರ, ಸಾಯಬಣ್ಣ ಎಂ. ಹೊಳಕರ, ರಮೇಶ ಆರ್. ಹೊಸಮನಿ, ಹಣಮಂತ ಭಾವಿಮನಿ, ಸಿದ್ದಲಿಂಗ ಕಲ್ಲೂರಕರ ಮತ್ತಿತರರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರವಾಸಿ ಟ್ಯಾಕ್ಸಿ ಫಲಾನುಭಿಗಳೆಲ್ಲರಿಗೂ ಸಾಲ ದೊರಕಿಸಲು ಸೂಚನೆ
**********************************************************
ಕಲಬುರಗಿ,ಫೆ.08.(ಕ.ವಾ.)-ಪ್ರವಾಸೋದ್ಯಮ ಇಲಾಖೆಯಿಂದ 2015-16 ಹಾಗೂ 2016-17ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆಗಾಗಿ ಆಯ್ಕೆಯಾದ 113 ಫಲಾನುಭವಿಗಳಿಗೆ ಬ್ಯಾಂಕ್ ಸಾಲ ದೊರೆತು ಪ್ರವಾಸಿ ಟ್ಯಾಕ್ಸಿ ಖರೀದಿಸುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರವಾಸೋದ್ಯಮ ಅಧಿಕಾರಿಗಳು ಪ್ರವಾಸಿ ಟ್ಯಾಕ್ಸಿಗಾಗಿ ಸಾಲ ನೀಡಲು ಸಲ್ಲಿಸಿರುವ ಬ್ಯಾಂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಎಲ್ಲ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿಸಿ ಯೋಜನೆಗೆ ಲಭ್ಯವಿರುವ ಸಹಾಯಧನದ ಮೊತ್ತವನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ 2014-15ರಿಂದ 2016-17ರವರೆಗಿನ 11 ಕಾಮಗಾರಿಗಳು ನಿವೇಶನ ಲಭ್ಯವಿಲ್ಲದ ಕಾರಣ ಪ್ರಾರಂಭವಾಗಿಲ್ಲ. ಭಾರತೀಯ ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಾಮಗಾರಿ ಮಂಜೂರಾಗಿರುವ ದೇವಸ್ಥಾನಗಳ ಪ್ರಮುಖರಿಗೆ ಹಾಗೂ ತಹಶೀಲ್ದಾರರಿಗೆ ಪತ್ರ ಬರೆದು 15 ದಿನದೊಳಗಾಗಿ ನಿವೇಶನ ಒದಗಿಸಲು ಕೋರಬೇಕು. ಎಲ್ಲಿಯೂ ನಿವೇಶನ ದೊರೆಯದಿದ್ದಲ್ಲಿ ಕಾಮಗಾರಿಗಳನ್ನು ಬೇರಡೆ ಸ್ಥಳಾಂತರಿಸಬೇಕು. ಈಗಾಗಲೇ ಅನುದಾನ ಬಳಸಿಕೊಂಡು ಕಾಮಗಾರಿ ಕೈಗೊಂಡಿರುವ ಸಂಸ್ಥೆಗಳು ಅನುದಾನ ಬಳಕೆ ಪ್ರಮಾಣಪತ್ರವನ್ನು ನೀಡಬೇಕೆಂದು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸಿ ತಾಣಗಳಲ್ಲಿ ಹೊಟೇಲ್ ಮತ್ತು ಲಾಡ್ಜಿಂಗ್ ನಿರ್ಮಿಸುತ್ತಿರುವವರಿಗೆ ಗರಿಷ್ಠ 3 ಕೋಟಿ ರೂ.ಗಳವರೆಗಿನ ಬಂಡವಾಳಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಶೇ. 40ರಷ್ಟು ಸಹಾಯಧನ ನೀಡಲಾಗುತ್ತಿದೆ. ಮಹಿಳೆಯರು ಇಂತಹ ಉದ್ಯಮದಲ್ಲಿದ್ದರೆ ಅವರಿಗೆ ಶೇ. 45ರಷ್ಟು ಸಹಾಯಧನ ನೀಡಲಾಗುತ್ತಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 6 ಹೊಟೇಲ್ ಉದ್ಯಮಕ್ಕೆ ಪರವಾನಿಗೆ ನೀಡಲಾಗಿದ್ದು, ಇನ್ನೂ 4 ಅರ್ಜಿಗಳು ಬಾಕಿ ಇವೆ. ಇವುಗಳನ್ನು ಪರಿಶೀಲಿಸಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫೀಕ ಲಾಡಜೀ, ಪ್ರವಾಸಿ ಅಧಿಕಾರಿ ಪ್ರಭುಲಿಂಗ ಎಸ್. ತಳಕೇರಿ, ಜಿಲ್ಲಾ ಸಮಾಲೋಚಕ ಸಂದೀಪಸಿಂಗ ಠಾಕೂರ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಜಯಂತಿ ಸಂಭ್ರಮದಿಂದಾಚರಿಸಲು ತೀರ್ಮಾನ
**************************************************************************
ಕಲಬುರಗಿ,ಫೆ.08.(ಕ.ವಾ.)-ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 2018ರ ಫೆಬ್ರವರಿ 19ರಂದು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಚುನಾವಣಾ ತಹಸೀಲ್ದಾರ ದಯಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಸಮಾರಂಭವನ್ನು ಮಧ್ಯಾಹ್ನ 12.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲು ಹಾಗೂ ಸಮಾರಂಭದ ಅಂಗವಾಗಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡುವವರ ಹೆಸರು ಸೂಚಿಸುವಂತೆ ತಿಳಿಸಿದರು.
ಜಯಂತಿ ಆಚರಣೆ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಿಗ್ಗೆ 10.30 ಗಂಟೆಗೆ ನೆಹರು ಗಂಜಿನ ನಗರೇಶ್ವರ ಬಾಲವಿಕಾಸ ಮಂದಿರದಿಂದ ಸೂಪರಮಾರ್ಕೆಟ್, ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಕರ್ನಾಟಕ ಕ್ಷತ್ರೀಯ ಮರಾಠಾ ಸಮಾಜದಿಂದ ಆಯೋಜಿಸಲು ಸಹ ಸಭೆ ನಿರ್ಣಯ ಕೈಗೊಂಡಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಡೊಳ್ಳು, ಹಲಗೆ ವಾದನ ಮತ್ತು ಕರಡಿ ಮಜಲು ಕಲಾ ತಂಡಗಳ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ತಹಸೀಲ್ದಾರರು ಸೂಚಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಂ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾ ಅಧ್ಯಕ್ಷ ಆರ್.ವಿ. ಜಗದಾಳೆ, ಗೌರವಾಧ್ಯಕ್ಷ ಡಾ|| ದಿನಕರ ಮೋರೆ ಮತ್ತಿತರ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.

ಫೆಬ್ರವರಿ 20ರಂದು ಸರ್ವಜ್ಞ ಜಯಂತಿ ಸಡಗರದಿಂದ ಆಚರಿಸಲು ನಿರ್ಧಾರ
****************************************************************
ಕಲಬುರಗಿ,ಫೆ.08.(ಕ.ವಾ.)-ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು 2018ರ ಫೆಬ್ರವರಿ 20ರಂದು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಚುನಾವಣಾ ತಹಸೀಲ್ದಾರ ದಯಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತಿಯ ಸಮಾರಂಭವನ್ನು ಮಧ್ಯಾಹ್ನ 12.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲು ಸಭೆ ನಿರ್ಣಯ ಕೈಗೊಂಡಿತು.
ಸಮಾರಂಭದ ಅಂಗವಾಗಿ ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲು ಹಾಗೂ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕವಿ ಸರ್ವಜ್ಞರ ಜಯಂತಿ ಆಚರಣೆ ಮಾಡಿ ಪ್ರಮುಖ ಸಮಾರಂಭದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಳ್ಳುವಂತೆ ಸೂಚಿಸಲು ಸಭೆ ನಿರ್ಧರಿಸಿತು. ಜಯಂತಿ ಆಚರಣೆ ಅಂಗವಾಗಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಿಗ್ಗೆ 10.30 ಗಂಟೆಯಿಂದ ಸೂಪರಮಾರ್ಕೆಟ್ ಜನತಾ ಬಜಾರದಿಂದ ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಆಯೋಜಿಸಲು ಸಹ ಸಭೆ ನಿರ್ಣಯ ಕೈಗೊಂಡಿತು. ಸರ್ವಜ್ಞನು ಮಹಾನ್ ಸಾಹಿತಿಯಾಗಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್‍ನವರು ಸಹ ಜಯಂತಿ ಆಚರಿಸಬೇಕೆಂದು ಗಣ್ಯರು ಮನವಿ ಮಾಡಿದರು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಸೂಚಿಸಿದರು.
ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಲಕ್ಷ್ಮಣ ಕುಂಬಾರ, ಜಿಲ್ಲಾ ಕುಂಬಾರ ಸಂಘದ ಪ್ರತಿನಿಧಿ ರೇಖಾ ನಂದಕುಮಾರ ಕುಂಬಾರ, ಭೀಮಾಶಂಕರ ಕುಂಬಾರ, ಹರೀಶ ಕುಂಬಾರ, ರಾಣೋಜಿರಾವ, ಸಕ್ರಪ್ಪ ಮತ್ತು ಮುಂತಾದ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.

ಜೀವ ಉಳಿಸುವ ಸಂಜೀವಿನಿಯಾಗಿ-ನ್ಯಾ.ಎಸ್.ಆರ್.ಮಾಣಿಕ್ಯ
****************************************************
ಕಲಬುರಗಿ,ಫೆ.08.(ಕ.ವಾ)-ಅಫಘಾತಕ್ಕೆ ತುತ್ತಾಗುವ ಗಾಯಾಳುಗಳಿಗೆ ಕ್ಷಣದಲ್ಲಿಯೆ ಪ್ರಥಮ ಚಿಕಿತ್ಸೆ ಹಾಗೂ ಅಗತು ಉಪಚಾರ ಮಾಡಿ ಜೀವ ಉಳಿಸುವ ಸಂಜೀವಿನಿಯಾಗಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ವಾಹನ ಚಾಲಕರಿಗೆ ಕರೆ ನೀಡಿದರು.
ಅವರು ಗುರುವಾರ ಇಲ್ಲಿನ ಎಂ.ಎಸ್.ಕೆ.ಮಿಲ್ ರಸ್ತೆಯ ಕಾರ್ಮಿಕ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಅಪಘಾತ ಜೀವ ರಕ್ಷಕ ಯೋಜನೆಯಡಿ ಆರ್.ಟಿ.ಓ. ಕಚೇರಿಯಿಂದ ಬ್ಯಾಡ್ಜ್ ಪಡೆದ ಖಾಸಗಿ ವಾಹನ ಚಾಲಕರಿಗೆ ಆಯೋಜಿಸಿದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅಪಘಾತದಲ್ಲಿ ಸಾವು-ಮರಣದೊಂದಿಗೆ ಹೋರಾಡುವವರಿಗೆ ಸಹಾಯದ ಹಸ್ತ ಚಾಚುವ ಬದಲು ಸಾಮಾಜಿಕ ಜಾಲತಾಣದಲ್ಲಿ ಅದರ ಛಾಯಚಿತ್ರ, ವಿಡಿಯೋ ಅಪಲೋಡ್ ಮಾಡುವ ಕೆಟ್ಟ ಪ್ರವೃತ್ತಿ ಬೆಳೆಯುತ್ತಿರುವುದು ಮನುಷ್ಯತ್ವವಲ್ಲ. ಅಪಘಾತದಲ್ಲಿ ತುತ್ತಾದವರಿಗೆ ಸಹಾಯ ನೀಡಲು ಬಂದವರಿಗೆ ಯಾವುದೇ ರೀತಿಯ ಕಿರುಕುಳವನ್ನು ಪೊಲೀಸರು ಮತ್ತು ವೈದ್ಯರು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ನೆರವಿಗೆ ಬರುವವರಿಗೆ ಅಭಯ ಹಸ್ತ ಇದ್ದಂತೆ. ಪ್ರತಿಯೊಬ್ಬರ ಜೀವ ಅಮೂಲ್ಯವಾದುದ್ದು, ಜೀವ ಉಳಿಸುವಂತಹ ಕಾರ್ಯ ಮಾಡಬೇಕಾಗಿರುವುದು ಮನುಷ್ಯರಾದ ನಮ್ಮೆಲ್ಲರ ಕರ್ತವ್ಯ ಎಂದರು.
ರೆಡ್ ಕ್ರಾಸ್ ಸಂಸ್ಥೆ ಚೇರಮನ್ ಅಪ್ಪಾರಾವ ಅಕ್ಕೋಣಿ ಮಾತನಾಡಿ, ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವು ನೀಡಿ ಅವರ ಜೀವ ಉಳಿಸಲು ಸಹಾಯವಾದಲ್ಲಿ, ಅವರ ಪಾಲಿಗೆ ನೆರವಿಗೆ ಬಂದವರೆ ದೇವರಾಗುತ್ತಾರೆ. ಇಂದು ಇಲ್ಲಿ ವಾಹನ ಚಾಲಕರಿಗೆ ಏರ್ಪಡಿಸಿದ ತರಬೇತಿಯಲ್ಲಿ ವಾಹನ ಚಾಲಕರು ಪರಿಪೂರ್ಣ ತರಬೇತಿ ಪಡೆದಲ್ಲಿ ಅಗತ್ಯ ಸಮಯದಲ್ಲಿ ಜೀವ ಉಳಿಸುವಂತಹ ಮಹಾನ್ ಕಾರ್ಯ ನಿಮ್ಮಿಂದ ಆಗಲಿದೆ ಎಂದರು.
ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ ಅಪಘಾತದ ನಂತರ ಮೊದಲಿನ ಒಂದು ಗಂಟೆ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ನೀಡುವುದು ತುಂಬಾನೆ ಮುಖ್ಯವಾಗಿದ್ದು, ಇಂತಹ ಸಮಯದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಪಡೆದ ವಾಹನ ಚಾಲಕರು ಅಪಘಾತದಲ್ಲಿ ತುತ್ತಾದವರಿಗೆ ಅಗತ್ಯ ಉಪಚಾರ ಮಾಡುವ ಮೂಲಕ ಒಂದು ಗಂಟೆಯ ವೈದ್ಯರಾಗಿ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿ ಸಂಗಾವಿ ಮಾತನಾಡಿ ಶಿಕ್ಷಣ ಶಕ್ತಿಯಾದರೆ, ಮಾಹಿತಿ ಮಹಾಶಕ್ತಿ. ಆದರಿಂದ ವಾಹನ ಚಾಲಕರು ಮೋಟಾರು ಕಾಯ್ದೆ, ವಾಹನ ವಿಮಾ, ಅಪಘಾತ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚರಿಕೆ ಬಗ್ಗೆ ಅರಿವು ಹೊಂದಿದ್ದಲ್ಲಿ ಸೂಕ್ತ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಅಪಘಾತ ಜೀವ ರಕ್ಷಕ ಯೋಜನೆಯಡಿ ಆರ್.ಟಿ.ಓ. ಕಚೇರಿಯಿಂದ ಬ್ಯಾಡ್ಜ ಪಡೆದ ಖಾಸಗಿ ವಾಹನ ಚಾಲಕರಿಗೆ ಒಂದು ದಿನದ ತರಬೇತಿ, ಜೀವ ರಕ್ಷಕ ಕಿಟ್ ನೀಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ನೆರವಿಗೆ ಬಂದಾಗ ಈ ಪ್ರಮಣ ಪತ್ರ ಪಡೆದವರನ್ನು ಯಾವುದೆ ಸಾಕ್ಷ್ಯಧಾರಗಳಿಗೆ ಬಳಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪ ಕಾರ್ಮಿಕ ಆಯುಕ್ತ ಎಂ.ಎಸ್.ಚಿದಾನಂದ, ಸಾಮಾಜಿಕ ಹೋರಾಟಗಾರ ಶಿವಕುಮಾರ ರೇಷ್ಮಿ, ಗೀತಾ ಕುಲಕರ್ಣಿ ಸೇರಿದಂತೆ ಇನ್ನಿತರ ಹಾಜರಿದ್ದರು. ಡಾ|| ಮಲ್ಲಾರಾವ ಮಲ್ಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದರು. ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ವಂದಿಸಿದರು.

ಸಂತ ಶ್ರೀ ಸೇವಾಲಾಲ ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಣಯ
**************************************************************************
ಕಲಬುರಗಿ,ಫೆ.08.(ಕ.ವಾ.)-ಲಂಬಾಣಿ ಸಮಾಜದ ದಾರ್ಶನಿಕ ಮತ್ತು ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ ಜಯಂತಿಯನ್ನು ಫೆಬ್ರವರಿ 15ರಂದು ಗುರುವಾರ ಕಲಬುರಗಿ ನಗರದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಜಯಂತಿ ಆಚರಣೆಯ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ರಂಗಮಂದಿರವರೆಗೆ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಆಯೋಜಿಸಲು ಹಾಗೂ ಮುಖ್ಯ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲು ಹಾಗೂ ಸಂತ ಶ್ರೀ ಸೇವಾಲಾಲ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಸದರಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳನ್ನು, ಬೇಡಸೂರಿನ ಪರಮೇಶ್ವರ ಮಹಾರಾಜ, ಮುಗಳ ನಾಗಾಂವ ಜೇಮಸಿಂಗ್ ಮಹಾರಾಜ್ ಹಾಗೂ ಗಬ್ಬೂರವಾಡಿಯ ಬಳಿರಾಮ ಮಹಾರಾಜ ಅವರನ್ನು ಕಾರ್ಯಕ್ರಮದ ಸಾನಿಧ್ಯ ವಹಿಸಲು ಆಹ್ವಾನಿಸುವಂತೆ ಸಭೆಯು ತೀರ್ಮಾನಿಸಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಆಕರ್ಷಕ ಕಲಾ ತಂಡಗಳ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಂತ ಶ್ರೀ ಸೇವಾಲಾಲ ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ, ಆರ್.ಜಿ. ಜಾಧವ, ರವಿ ರಾಠೋಡ, ವಿಠ್ಠಲ ಆರ್. ಚವ್ಹಾಣ, ವಿನೋದ, ಡಿ.ಬಿ.ನಾಯಕ ಮತ್ತಿತರ ಗಣ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿದ್ದರು.

ಮಹಾಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ
**********************************************
ಕಲಬುರಗಿ,ಫೆ.08.(ಕ.ವಾ.)-ಮಹಾಶಿವರಾತ್ರಿಯನ್ನು ಫೆಬ್ರವರಿ 13ರಂದು ಆಚರಿಸುತ್ತಿರುವ ಪ್ರಯುಕ್ತ ಸದರಿ ದಿನದÀÀಂದು ಕಲಬುರಗಿ ನಗರದಲ್ಲಿರುವ ಎಲ್ಲ ಕಸಾಯಿ ಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಮತದಾರರ ಪಟ್ಟಿ ವೀಕ್ಷಕರ ಪ್ರವಾಸ
*******************************
ಕಲಬುರಗಿ,ಫೆ.8.(ಕ.ವಾ.)-ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಚುನಾವಣಾ ಮತದಾರರ ಪಟ್ಟಿ ವೀಕ್ಷಕ ಮೊಹಮ್ಮದ್ ಮೊಹಸಿನ್ ಅವರು ಸೋಲಾಪುರ-ಯಶವಂತಪುರ ರೈಲಿನ ಮೂಲಕ ಫೆಬ್ರವರಿ 9 ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷದ ಮುಖಂಡರುಗಳೊಂದಿಗೆ ಮತದಾರರ ಪಟ್ಟಿ ಬಗ್ಗೆ ಸಲಹೆ-ಸೂಚನೆ ಮತ್ತು ಅಹವಾಲು ಸ್ವೀಕರಿಸುವರು. ಬೆಳಿಗ್ಗೆ 11.30 ಗಂಟೆಗೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 3 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರಿಗೆ ಪ್ರಯಾಣಿಸುವರು.

ವಿಧಾನ ಸಭಾ ಸಾರ್ವತ್ರಿಕ ಚುನಾವಣೆ:
*********************************
ದೂರು ಸ್ವೀಕರಿಸಲು ಮೇಲ್ವಿಚಾರಣಾ ಸಮಿತಿ ರಚನೆ-ಸಿಬ್ಬಂದಿಗಳ ನೇಮಕ
***************************************************************
ಕಲಬುರಗಿ,ಫೆ.08.(ಕ.ವಾ.)-ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಪ್ರಯುಕ್ತ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ದೂರು ಸ್ವೀಕರಿಸಲು ದೂರು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸುವ ಸ್ಥಳ, ನೇಮಕಗೊಂಡ ಸಿಬ್ಬಂದಿ ಹೆಸರು ಹಾಗೂ ದೂರವಾಣಿ ಸಂಖ್ಯೆ ವಿವರ ಇಂತಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಲಬುರಗಿ-ಶಿರಸ್ತೇದಾರ ಸಂಜೀವ ಕುಮಾರ ದೂರವಾಣಿ ಸಂಖ್ಯೆ 08472-278606. ಕಲಬುರಗಿ ಮಹಾನಗರ ಪಾಲಿಕೆ-ಶಿರಸ್ತೇದಾರ ಅನಂತ ಕುಲಕರ್ಣಿ-ದೂರವಾಣಿ ಸಂಖ್ಯೆ 08472-277739. ಕಲಬುರಗಿ ತಹಶೀಲ್ದಾರ ಕಾರ್ಯಾಲಯ ಶಿರಸ್ತೇದಾರ ಪಂಪಯ್ಯಾ-ದೂರವಾಣಿ ಸಂಖ್ಯೆ 08472-230116. ಆಳಂದ ತಹಶೀಲ್ದಾರ ಕಾರ್ಯಾಲಯ-ಶಿರಸ್ತೇದಾರ ಶ್ರೀನಿವಾಸ ದೂರವಾಣಿ ಸಂಖ್ಯೆ 08477-202428.
ಅಫಜಲಪೂರ ತಹಶೀಲ್ದಾರ ಕಾರ್ಯಾಲಯ-ಶಿರಸ್ತೇದಾರ ಮಂಜುನಾಥ ದೂರವಾಣಿ ಸಂಖ್ಯೆ 08470-282020. ಜೇವರ್ಗಿ ತಹಶೀಲ್ದಾರ ಕಾರ್ಯಾಲಯ-ಶಿರಸ್ತೆದಾರ ಇಸ್ತೇಖಾರ ಹುಸೇನ್ ದೂರವಾಣಿ ಸಂಖ್ಯೆ 08442-236024. ಸೇಡಂ ತಹಶೀಲ್ದಾರ ಕಾರ್ಯಾಲಯ ಶಿರಸ್ತೇದಾರ-ರಾಜಕುಮಾರ ಶೆಟ್ಟಿ ದೂರವಾಣಿ ಸಂಖ್ಯೆ 08441-276184, ಚಿತ್ತಾಪೂರ ತಹಶೀಲ್ದಾರ ಕಾರ್ಯಾಲಯ-ಶಿರಸ್ತೇದಾರ ನರಸಿಂಹ ಕುಲಕರ್ಣಿ ದೂರವಾಣಿ ಸಂಖ್ಯೆ 08474-236147 ಹಾಗೂ ಚಿಂಚೋಳಿ ತಹಶೀಲ್ದಾರ ಕಾರ್ಯಾಲಯ ಶಿರಸ್ತೇದಾರ ಖಾಲಿಕ ಅಹ್ಮದ್ ದೂರವಾಣಿ ಸಂಖ್ಯೆ 08475-273031.
ಸ್ವೀಕೃತವಾದ ದೂರುಗಳನ್ನು (ರೆಜಿಸ್ಟರನಲ್ಲಿ) ದೂರ ಸ್ವೀಕೃತವಾದ ದಿನಾಂಕ, ದೂರವಾರರ ಹೆಸರು, ವಿಷಯ, ಕೈಗೊಂಡ ಕ್ರಮಗಳ ವಿವರವನ್ನು ನಮೂನೆಯಲ್ಲಿ ನಮೂದಿಸಿ ಸಂಬಂಧಪಟ್ಟ ಅಧಿಕಾರಿಯ ಗಮನಕ್ಕೆ ತಂದು ನಿಯಮನುಸಾರ ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರ ನೇಮಕಾತಿಗೆ ಟೆಂಡರ್ ಆಹ್ವಾನ
*******************************************************************
ಕಲಬುರಗಿ,ಫೆ.08.(ಕ.ವಾ.)-ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜಿನ ಹಿಂಭಾಗದ ಕಾರ್ಮಿಕ ಭವನದಲ್ಲಿರುವ ಉಪಕಾರ್ಮಿಕರ ಆಯುಕ್ತರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಓರ್ವ ವಾಹನ ಚಾಲಕರನ್ನು ಭರ್ತಿ ಮಾಡಲು ನೋಂದಾಯಿತ ಸಂಸ್ಥೆಗಳಿಂದ (ದ್ವಿ ಲಕೋಟೆ ಪದ್ದತಿಯಲ್ಲಿ) ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಂಡರ್ ನಮೂನೆ ಹಾಗೂ ನಿಬಂಧನೆಗಳನ್ನೊಳಗೊಂಡ ಟೆಂಡರ್ ಪುಸ್ತಕವನ್ನು ಫೆಬ್ರವರಿ 12ರಿಂದ ನಿಗದಿತ ಶುಲ್ಕ ಪಾವತಿಸಿ ಪಡೆಯಬೇಕು. ಭರ್ತಿ ಮಾಡಿದ ಟೆಂಡರ್ ನಮೂನೆಯನ್ನು ಫೆಬ್ರವರಿ 21 ರ ಸಂಜೆ 5 ಗಂಟೆಯೊಳಗಾಗಿ ಕಚೇರಿಯಲ್ಲಿ ಸಲ್ಲಿಸಬೇಕು. ಸ್ವೀಕರಿಸಿದ ಟೆಂಡರ್‍ಗಳನ್ನು ಫೆಬ್ರವರಿ 23ರಂದು ಸಂಜೆ 4 ಗಂಟೆಗೆ ತೆರೆಯಲಾಗುವುದು. ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಮತದಾನ ಜಾಗೃತಿಗೆ ಸ್ವೀಪ್ ಸಮಿತಿಯಿಂದ ಕಬ್ಬಡ್ಡಿ-ಕುಂಟಲಪಿ ಸ್ಪರ್ಧೆ ಆಯೋಜನೆ
************************************************************************
ಕಲಬುರಗಿ,ಫೆ.08.(ಕ.ವಾ.)-ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು 18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಕಬ್ಬಡ್ಡಿ ಹಾಗೂ ಮಹಿಳೆಯರಿಗೆ ಕುಂಟಲಪಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸ್ಪರ್ಧೆಗಳನ್ನು ಗ್ರಾಮ, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. 2018ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, 18ವರ್ಷ ಮೇಲ್ಪಟ್ಟ 18 ಯುವ ಮತದಾರರ ತಂಡಗಳನ್ನು ರಚಿಸಿ 18-18 ಸ್ಪರ್ಧೆಗಳನ್ನು ನಡೆಸಲಾಗುವುದು. ಈ ವರ್ಷ ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಮತದಾನಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿರುವ ಕಾರಣ ವಿಕಲಚೇತನರನ್ನು ಸ್ಪರ್ಧೆಗಳ ನಿರ್ಣಾಯಕರು ಹಾಗೂ ಸ್ಕೋರರ್‍ಗಳನ್ನಾಗಿ ನಿಯೋಜಿಸಲಾಗುತ್ತಿದೆ.
ಪ್ರತಿ ತಂಡದಲ್ಲಿ 18 ವರ್ಷದ ನವ ಮತದಾರರು 03 ಜನ, ಈ ಪೈಕಿ ಒಬ್ಬರನ್ನು ತಂಡದ ಮುಖ್ಯಸ್ಥರನ್ನಾಗಿಸಲಾಗುವುದು. 40 ವರ್ಷ ದಾಟಿದ ಮತದಾರರು 03 ಜನ ಹಾಗೂ ಉಳಿದ 12 ಜನರನ್ನು ಆಯ್ಕೆ ಮಾಡಲಾಗುವುದು. ತಂಡದ ನೋಂದಣಿಯನ್ನು ಸಂಬಂಧಿಸಿದ ಗ್ರಾಮದ ಶಾಲೆಯ ಮುಖ್ಯ ಗುರುಗಳು ಅಥವಾ ದೈಹಿಕ ಶಿಕ್ಷಕರು ಮಾಡಿಕೊಂಡು ಆಯಾ ಕ್ಲಸ್ಟರಿನ ಸಿ.ಆರ್.ಪಿ. ಗಳನ್ನು ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮ ಮಟ್ಟದ ಪಂದ್ಯಾವಳಿಗಳು ಫೆಬ್ರವರಿ 10ರಿಂದ 15ರವರೆಗೆ, ಗ್ರಾಮ ಪಂಚಾಯಿತಿ ಮಟ್ಟದ ಪಂದ್ಯಾವಳಿಗಳು ಫೆಬ್ರವರಿ 16ರಿಂದ 20ರವರೆಗೆ ಹಾಗೂ ತಾಲೂಕು ಮಟ್ಟದ ಪಂದ್ಯಾವಳಿಗಳು ಫೆಬ್ರವರಿ 21ರಂದು ಮತ್ತು ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ಫೆಬ್ರವರಿ 27ರಂದು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಳ್ಳಿ ಸೊಗಡಿನ ಪ್ರಚಲಿತ ಆಟಗಳನ್ನು ಆಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನವಾಗಿ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿಯಿಂದ ರೂಪಿಸಲಾಗಿದೆ.

ಕಲಬುರಗಿ ವಸ್ತ್ರ ಉತ್ಸವ-ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ
***************************************************
ಕಲಬುರಗಿ,ಫೆ.08.(ಕ.ವಾ)-ಕಲಬುರಗಿಯ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಶ್ರೀ ಬಾಪುಗೌಡ ದರ್ಶನಾಪುರ ರಂಗಮಂದಿರದ ಕನ್ನಡ ಭವನದಲ್ಲಿ ಆಯೋಜಿಸಿರುವ ಕಲಬುರಗಿ ವಸ್ತ್ರ ಉತ್ಸವ-ವಿಶೇಷ ಕೈಮಗ್ಗ ಹಾಗೂ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಗುರುವಾರ ಚಾಲನೆ ನೀಡಿದರು.
ಕಲಬುರಗಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಮಹಾಶಿವರಾತ್ರಿ ಹಬ್ಬ, ಹೋಳಿ ಹಬ್ಬ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಫೆಬ್ರವರಿ 8ರಿಂದ 22ರವರೆಗೆ ವನ್ನು ಏರ್ಪಡಿಸಲಾಗಿದೆ. 15 ದಿನಗಳ ಕಾಲ ನಡೆಯುವ ವಿಶೇಷ ಕೈಮಗ್ಗ ಮೇಳದಲ್ಲಿ ಒಟ್ಟು 40 ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ರಾಜ್ಯ, ಹೊರ ರಾಜ್ಯಗಳ, ಬೇರೆ ಬೇರೆ ಜಿಲ್ಲೆಯ ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ, ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳ, ಮನಮೋಹಕ ಕೈಮಗ್ಗ ಉತ್ಪನ್ನಗಳು ಬಗೆ ಬಗೆಯ ಹೊಸ ವಿನ್ಯಾಸಗಳ ಆಕರ್ಷಕ ವರ್ಣಸಂಗಮ, ನಯನ ಮನೋಹರ ಲಾವಣ್ಯತೆ, ಕರ್ನಾಟಕ ಪರಂಪರಾಗತ ಕಲೆಯ ರಮಣೀಯ ವೈವಿದ್ಯತೆಯ ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಉತ್ತರ ಕರ್ನಾಟಕ ಇಲಕಲ್ ಸೀರೆಗಳು, ಬೆಂಗಳೂರಿನ ನವೀನ ಮಾದರಿಯ ಸೀರೆಗಳು, ಡ್ರೆಸ್ ಮಟಿರಿಯಲ್, ಉಣ್ಣೆ ಕಂಬಳಿ, ಪೂಜಾ ಕಂಬಳಿ, ಉಲನ್ ಶಾಲ್ ಮತ್ತು ಅಪ್ಪಟ ಕೈಮಗ್ಗ ಬಟ್ಟೆಗಳ, ಹತ್ತಿ ರೇಷ್ಮೆ, ಉಣ್ಣೆ ಕೈಮಗ್ಗ ಉತ್ಪನ್ನಗಳಾದ ಪರದೆಗಳು, ಬೆಡಶೀಟ್, ಶರ್ಟಿಂಗ್, ಲುಂಗಿಗಳು ಕರವಸ್ತ್ರಗಳು, ಟವಲ್, ಕಾಟನ್ ಸೀರೆಗಳು ರಿಯಾಯಿತಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯ ಆಳಂದ ತಾಲೂಕಿನ ಹಾಗೂ ಯಾದಗಿರಿ ಜಿಲ್ಲೆಯ ನೇಕಾರರು ಕೈಮಗ್ಗಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ಕೈಮಗ್ಗದ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರಿಗೆ ಉತ್ತೇಜನ ನೀಡಬೇಕು. ಹಬ್ಬದ ಸಮಯದಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ ಮಾತನಾಡಿ, ಇಂದಿನ ಯುಗದಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆದರೂ ಕೈಮಗ್ಗದಿಂದ ತಯಾರಿಸಿದ ಉತ್ಪನ್ನಗಳು ಆಕರ್ಷಕವಾಗಿರುತ್ತವೆ. ಜಿಲ್ಲೆಯ ನೇಕಾರರು ಕೈಮಗ್ಗದಿಂದ ತಯಾರಿಸಿದ ಬೆಡ್‍ಶಿಟ್ ಮತ್ತು ಟ್ಯಾವೆಲ್‍ಗಳನ್ನು ಜಿಲ್ಲೆಯಲ್ಲಿರುವ ವಸತಿ ನಿಲಯಗಳು ಮತ್ತು ಶಾಲೆಗಳಿಗೆ ಖರೀದಿಸಿ ಸರಬರಾಜು ಮಾಡಲು ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಬಿ. ಸುಶೀಲಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಅಪರ ನಿರ್ದೇಶಕ ವಿಜಯಕುಮಾರ ಬಿ. ನಿರಾಳೆ, ಬಳ್ಳಾರಿ ಉತ್ತರ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ. ಶ್ರೀಧರ ನಾಯಕ, ನೇಕಾರ ಸೇವಾ ಕೇಂದ್ರದ ಉಪನಿರ್ದೇಶಕ ಜವಾಹರಲಾಲ ಕುನ್ಸೋತ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎ., ಜವಳಿ ಪ್ರವರ್ಧನಾಧಿಕಾರಿ ಸಂತೋಷ ಚಾರಖಾನಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರವಾಸೋದ್ಯಮ ಸಚಿವರ ಪರಿಷ್ಕøತ ಪ್ರವಾಸ
******************************************
ಕಲಬುರಗಿ,ಫೆ.08.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನಿಂದ ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 10ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಫೆಬ್ರವರಿ 10ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಶಹಾಪುರಕ್ಕೆ ಪ್ರಯಾಣಿಸಿ, ಬೆಳಿಗ್ಗೆ 10.30 ಗಂಟೆಗ ಶಹಾಪುರದಲ್ಲಿ, ಮಧ್ಯಾಹ್ನ 2 ಗಂಟೆಗೆ ಚಿತ್ತಾಪುರದಲ್ಲಿ ಹಾಗೂ ಸಂಜೆ 5 ಗಂಟೆಗೆ ಕಲಬುರಗಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು.
ಫೆಬ್ರವರಿ 11ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಚಿತ್ತಾಪುರಕ್ಕೆ ಪ್ರಯಾಣಿಸಿ, ಬೆಳಿಗ್ಗೆ 10 ಗಂಟೆಗೆ ಚಿತ್ತಾಪುರದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಫೆಬ್ರವರಿ 12ರಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಕಲಬುರಗಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಫೆಬ್ರವರಿ 13ರಂದು ಕಲಬುರಗಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಲಬುರಗಿ-ಮಂಗಳೂರ ಮಾರ್ಗದಲ್ಲಿ ಹೊಸ ಬಸ್ ಕಾರ್ಯಾಚರಣೆ
*********************************************************
ಕಲಬುರಗಿ,ಫೆ.8.(ಕ.ವಾ.)-ಸಾರ್ವಜನಿಕರ, ಪ್ರಯಾಣಿಕರ ಬೇಡಿಕೆಯಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗದ ಘಟಕ-1ರಿಂದ ಕಲಬುರಗಿ-ಮಂಗಳೂರು-ಕಲಬುರಗಿ ಮಾರ್ಗದಲ್ಲಿ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಸಿ. ಬಸವರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಸ್ ವ್ಹಾಯಾ ವಿಜಯಪುರ, ಹುಬ್ಬಳ್ಳಿ, ಕುಂದಾಪುರ ಹಾಗೂ ಉಡುಪಿ ಮಾರ್ಗವಾಗಿ ಸಂಚರಿಸಲಿದೆ. ಪ್ರೋತ್ಸಾಹದಾಯಕ ಪ್ರಯಾಣ ದರ 900 ರೂ.ಗಳನ್ನು ನಿಗದಿಪಡಿಸಲಾಗಿದೆ. ಕಲಬುರಗಿ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್ಸು ಕಲಬುರಗಿಯಿಂದ ಮಧ್ಯಾಹ್ನ 2.45 ಗಂಟೆಗೆ ಹೊರಡಿ ಬೆಳಿಗ್ಗೆ 5.15 ಗಂಟೆಗೆ ಮಂಗಳೂರಿಗೆ ತಲುಪಿಲಿದೆ. ಅದೇ ರೀತಿ ಮಂಗಳೂರು-ಕಲಬುರಗಿ ಮಾರ್ಗದಲ್ಲಿ ಸಂಚರಿಸುವ ಬಸ್ಸು ಮಂಗಳೂರದಿಂದ ಮಧ್ಯಾಹ್ನ 3.45 ಗಂಟೆಗೆ ಹೊರಡಿ ಬೆಳಿಗ್ಗೆ 6.15 ಗಂಟೆಗೆ ಕಲಬುರಗಿಗೆ ತಲುಪಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿಯ ಕೆ.ಜಿ.ಟಿ.ಟಿ.ಐ. ನಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ
****************************************************************
ಕಲಬುರಗಿ,ಫೆ.08.(ಕ.ವಾ.)-ಕರ್ನಾಟಕ ಜರ್ಮನ ತಾಂತ್ರಿಕ ತರಬೇತಿ ಸಂಸ್ಥೆ ಕಲಬುರಗಿಯಲ್ಲಿ ಕೆಳಕಂಡ ವಿವಿಧ ಕೋರ್ಸ್‍ಗಳಲ್ಲಿ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿಯ ಕೆ.ಜಿ.ಟಿ.ಟಿ.ಐ. ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್‍ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿಸಿಎನ್‍ಎ) ಹಾಗೂ ಸಿಸ್ಕೊ ಐಟಿ ಎಸೆನ್‍ಶಿಯೆಲ್ (ಸಿಸ್ಕೊ ಐಟಿಇ). ವೆಲ್ಡಿಂಗ್ ವಿಭಾಗದಲ್ಲಿ ಶೀಲ್ಡ್ ಮೆಟಲ್ ಎಆರ್‍ಸಿ ವೆಲ್ಡಿಂಗ್ (ಎಸ್‍ಎಂಎಡಬ್ಲ್ಯೂ)-ಬೇಸಿಕ ಆಂಡ್ ಅಡ್ವಾನ್ಸ್. ಮ್ಯಾನ್ಯುಫ್ಯಾಕ್ಚರಿಂಗ್ ವಿಭಾಗದಲ್ಲಿ ಸಿಎನ್‍ಸಿ ಮಶಿನಿಸ್ಟ್ ಹಾಗೂ ಸಿಎನ್‍ಸಿ ಪ್ರೋಗ್ರಾಮಿಂಗ್ ಆಂಡ್ ಆಪರೇಶನ್ ಟರ್ನಿಂಗ್ ಮತ್ತು ಮಿಲ್ಲಿಂಗ್. ಎಲೆಕ್ಟ್ರಿಕಲ್ ವಿಭಾಗದಲ್ಲಿ ಮೋಟಾರ ಆಂಡ್ ಪಂಪ್ ಮೆಂಟೆನೆನ್ಸ್ ಮತ್ತು ಆಟೋ ಕ್ಯಾಡ್ 2013 ಎಲೆಕ್ಟ್ರಿಶಿಯನ್ ತರಬೇತಿಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ, ಸಿ.ಓ.ಇ., ಸರ್ಕಾರಿ ಐಟಿಐ ಕ್ಯಾಂಪಸ್, ಎಂ.ಎಸ್.ಕೆ. ಮಿಲ್ ರಸೆ, ಕಲಬುರಗಿ-585101 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-252111 ಹಾಗೂ ಮೊಬೈಲ್ ಸಂಖ್ಯೆ 9480842786ನ್ನು ಸಂಪರ್ಕಿಸಲು ಕೋರಲಾಗಿದೆ.
No comments:

Post a Comment