GULBARGA VARTHE

GULBARGA VARTHE

Wednesday, 24 January 2018

NEWS AND PHOTO DATE: 24--01--2018

ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಪ್ರವಾಸ
***********************************
ಕಲಬುರಗಿ,ಜ.24.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಕೆ.ಕೆ. ಎಕ್ಸ್‍ಪ್ರೆಸ್ ರೈಲಿನ ಮೂಲಕ ಜನವರಿ 25ರಂದು ಬೆಳಿಗ್ಗೆ 5.30 ಗಂಟೆಗೆ ಕಲಬುರಗಿಗೆ ಆಗಮಿಸುಸುವರು.
ಅಂದು ಮಧ್ಯಾಹ್ನ 12 ಗಂಟೆಗೆ ಕಲಬರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಮಧ್ಯಾಹ್ನ 2 ಗಂಟೆಗೆ ಯಾದಗಿರಿ ಜಿಲ್ಲೆಯ ಯಲ್ಲೇರಿ ಗಡಿ ಗ್ರಾಮಕ್ಕೆ ಭೇಟಿ ನೀಡಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಜನವರಿ 26ರಂದು ಬೆಳಿಗ್ಗೆ 7 ಗಂಟೆಗೆಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಬೆಳಿಗ್ಗೆ 9 ಗಂಟೆಗೆ ಯಾದಗಿರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮರಳಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ದೂರಿ ಆಚರಣೆಗೆ ನಿರ್ಧಾರ
********************************************************************
ಕಲಬುರಗಿ,ಜ.24.(ಕ.ವಾ.)-ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರದಿಂದ ಆಚರಣೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು 2018ರ ಫೆಬ್ರವರಿ 1 ರಂದು ಅದ್ಧೂರಿಯಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರÀ ಜರುಗಿದ ಸಭೆಯು ನಿರ್ಧರಿಸಿತು.
ಅಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶ್ರೀ ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಜಿಲ್ಲಾ ಮಟ್ಟದ ಜಯಂತಿಯ ಉದ್ಘಾಟನಾ ಕಾರ್ಯಕ್ರಮವನ್ನು ಆಚರಿಸಲಾಗುವುದು. ಶಿಷ್ಠಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಸಮಾರಂಭದಲ್ಲಿ ಶರಣರರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗುವುದು. ಇದಕ್ಕು ಮುನ್ನ ಹುಮನಾಬಾದ ರಿಂಗ್ ರಸ್ತೆಯ ಮಡಿವಾಳ ಮಾಚಿದೇವರ ವೃತ್ತದಿಂದ ಮಡಿವಾಳ ಮಾಚಿದೇವರ ಭಾವಚಿತ್ರವೊಳಗೊಂಡ ಭವ್ಯ ಮೆರವಣಿಗೆ ಬೆಳಿಗ್ಗೆ 9 ಗಂಟೆಗೆ ಕಲಾ ತಂಡಗಳೊಂದಿಗೆ ಆರಂಭಗೊಂಡು ಸೂಪರ್ ಮಾರ್ಕೆಟ್, ಜಗತ್ ವೃತ್ತ ಮಾರ್ಗವಾಗಿ ಡಾ.ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಆಗಮಿಸಲಿದೆ.
ಅಲ್ಲದೆ ಅಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲು ಸುತ್ತೋಲೆ ಹೊರಡಿಸುವಂತೆ ಅವರು ಸೂಚಿಸಿದರು.
ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗುವ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಾರ್ಯಕ್ರಮ ಸ್ಥಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಭೀಮಾಶಂಕರ ತೆಗ್ಗೆಳ್ಳಿ ಸೂಚಿಸಿದರು. ಸಭೆಯಲ್ಲಿ ಭಾಗವಹಿಸಿದ ಸಮಾಜದ ಮುಖಂಡರು ಜಯಂತಿಯ ಯಶಸ್ವಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಲಬುರಗಿ ಜಿಲ್ಲಾ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಶಿವಪುತ್ರ ಎಸ್.ಮಲ್ಲಾಬಾದಕರ್, ಕಾರ್ಯದರ್ಶಿ ಶಿವಕುಮಾರ ಎಂ.ಮಡಿವಾಳ, ಧರ್ಮಣ್ಣ ಎಸ್.ಮಡಿವಾಳ, ಶಾಂತಪ್ಪ ಮೇಳಕುಂದಿ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣ
***********************************************
ಕಲಬುರಗಿ,ಜ.24.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 2018ರ ಜನವರಿ 26ರಂದು ಬೆಳಗಿನ 9 ಗಂಟೆಗೆ ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವರು.
ಈ ಸಮಾರಂಭಕ್ಕೆ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಕಲಬುರಗಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು.
ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಮಹಾನಗರಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಎಸ್.ಮುರುಗನ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
ಗಣರಾಜ್ಯೋತ್ಸವ ದಿನಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮಗಳು ನಗರದ ಮುಖ್ಯ ರಸ್ತೆಯ ಸಾರ್ವಜನಿಕ ಉದ್ಯಾನವನ ಬಳಿಯಿರುವ ಡಾ. ಎಸ್.ಎಂ. ಪಂಡಿತ ಜಿಲ್ಲಾ ರಂಗಮಂದಿರದಲ್ಲಿ ಸಂಜೆ 5 ರಿಂದ 7 ಗಂಟೆಯವರೆಗೆ ನಡೆಯಲಿವೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಡುವರು.
ಚುನಾವಣಾ ಜ್ಞಾನ ನೀಡುವುದೇ “ಸ್ವೀಪ್” ಕಾರ್ಯಕ್ರಮದ ಉದ್ದೇಶ
ಕಲಬುರಗಿ,ಜ.24.(ಕ.ವಾ.)-ಚುನಾವಣೆಯಲ್ಲಿ ಮತದಾರರು ಭಾಗವಹಿಸಲು ವಿವಿಧ ಸಮೂಹ ಮಾಧ್ಯಮಗಳಿಂದ ಶಿಸ್ತುಬದ್ಧ ಶಿಕ್ಷಣ ನೀಡುವುದರೊಂದಿಗೆ ಅವರಲ್ಲಿ ರಾಜಕೀಯ ಆಸಕ್ತಿ, ಜಾಗೃತಿ ಮೂಡಿಸಿ ಪಾಲ್ಗೊಳ್ಳುವಿಕೆಯನ್ನು ಪ್ರೇರೇಪಿಸುವುದೇ ಸ್ವೀಪ್ ಕಾರ್ಯಕ್ರಮದ ಕಾರ್ಯಚಟುವಟಿಕೆಗಳು.
ರಾಜ್ಯದ ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಹಿನ್ನಲೆ ಆಧಾರಿತ ಕಳೆದ ಚುನಾವಣೆಗಳ ಮಾಹಿತಿ ಆಧಾರದ ಮೇಲೆ ಚುನಾವಣಾ ಪೂರ್ವ ಮತ್ತು ಮತದಾನ ದಿನದ ಕುರಿತು ಬಹುಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮತದಾರರಿಗೆ ಚುನಾವಣಾ ಜ್ಞಾನ ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಮತದಾರರ ನೊಂದಣಿ ಸೇರಿದಂತೆ ನೈತಿಕ, ಮಾಹಿತಿಯುಕ್ತ ಮತ್ತು ಗುಣಾತ್ಮಕವಾಗಿ ಮತದಾರರ ಸಂಖ್ಯೆ ಹೆಚ್ಚಿಸಿ ನಿರಂತರವಾಗಿ ಪ್ರಜಾಪ್ರಭುತ್ವ ಮತ್ತು ಚುನಾವಣಾ ಶಿಕ್ಷಣ ನೀಡುವುದು ಇದರ ಮೂಲ ಉದ್ದೇಶವಾಗಿದ್ದು, ಶಿಸ್ತುಬದ್ಧ, ವೈಜ್ಞಾನಿಕ, ರಚನಾತ್ಮಕ ಸೇವಾ ಮನೋಭಾವನೆ/ತ್ಯಾಗ ಮನೋಭಾವನೆ ಒಳಗೊಂಡಂತೆ ನಾಯಕತ್ವ ಬೆಳೆಸಲು ವಿವಿಧ ವಿಧಾನಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಮತದಾರರಿಗೆ ಮಾಹಿತಿ ತಿಳಿಸಿಕೊಡುವುದು. ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಯೊಬ್ಬರನ್ನು ಸಂಪರ್ಕಿಸಿ ಮತಗಟ್ಟೆ ಮಟ್ಟದಿಂದ ಉನ್ನತ ಮಟ್ಟದವರೆಗೆ ಚುನಾವಣಾ ಶಿಕ್ಷಣದ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತದೆ.
ಮಾದರಿ ಮತದಾನ ಕೇಂದ್ರಗಳ ಸ್ಥಾಪನೆ, ಮತದಾರರ ಸಹಾಯ ಕೇಂದ್ರಗಳು, ಆನ್‍ಲೈನ್ ನೊಂದಣಿ ಕೇಂದ್ರಗಳು, ವೈವಿಧ್ಯಮಯ ವೆಬ್‍ಸೈಟ್‍ಗಳು, ವಿಶೇಷ ಕ್ಯಾಂಪ್ ಹಮ್ಮಿಕೊಳ್ಳುವುದು,
ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ, ಯುವ ಸಮುದಾಯಗಳಲ್ಲಿ ಪ್ರತಿಜ್ಞೆ ಮಾಡಿಸುವುದರ ಮೂಲಕ ರಾಷ್ಟ್ರೀಯ ಪ್ರಜ್ಞೆ ಮೂಡಿಸಿ ಮತದಾರರಿಗೆ ರಾಷ್ಟ್ರೀಯ ಪ್ರಜ್ನೆ, ಚುನಾವಣೆಗಳ ಬಗ್ಗೆ ಸ್ಪೂರ್ತಿ-ಅಭಿಪ್ರೇರಣೆ ಮೂಡಿಸಲಾಗುತ್ತದೆ.
ಸಾಂದರ್ಭಿಕ ವಿಶ್ಲೇಷಣೆ ನಡೆಸುವುದು, ಯೋಜನೆ ಮತ್ತು ತಂತ್ರಗಾರಿಕೆ, ಸಹಭಾಗಿತ್ವ, ಅನುಷ್ಠಾನ, ಮೌಲ್ಯಮಾಪನ ಹೀಗೆ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕಾಲಕಾಲಕ್ಕೆ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತದೆ.
ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ
************************************************************
ಕಲಬುರಗಿ,ಜ.24.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯು ಸಾರ್ವಜನಿಕರು ಕೋರುವ ಮಾಹಿತಿ ಒದಗಿಸಲು ಮಾಹಿತಿ ಅಧಿನಿಯಮ-2005ರ (ಸೆಂಟ್ರಲ್ ಕಾಯ್ದೆ 22, 2005) ಕಲಂ 5(1), 5(2) ಹಾಗೂ 19(1)ರ ಅಡಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ವಲಯ ಕಚೇರಿಗಳ ವ್ಯಾಪ್ತಿಯ ಮಾಹಿತಿ ಕೋರುವ ವ್ಯಕ್ತಿಗಳಿಂದ ಅರ್ಜಿ ಅಥವಾ ಮೇಲ್ಮನವಿ ಸ್ವೀಕರಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಗಳೆಂದು ನೇಮಕಗೊಂಡ ಕೆಲವೊಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪದೋನ್ನತಿ ಹಾಗೂ ವರ್ಗಾವಣೆಯಾಗಿರುವುದರಿಂದ ಅಧಿಸೂಚನೆಯನ್ನು ಮಾರ್ಪಾಡು ಮಾಡಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ್ ಮೂರ್ತಿ ಅವರು ಪರಿಷ್ಕøತ ಅಧಿಸೂಚನೆ ಹೊರಡಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ ಮೂರ್ತಿ ಅವರು ಕಲಂ 19(1)ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಯಾಗಿರುತ್ತಾರೆ. ಸಂಬಂಧಪಟ್ಟ ಶಾಖೆಗಳ ವಿವರ ಹಾಗೂ ಕಲಂ 5(1)ರ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಕಲಂ 5(2)ರ ಅಡಿಯಲ್ಲಿ ಸಾರ್ವಜನಿಕ ಸಹಾಯಕ ಮಾಹಿತಿ ಅಧಿಕಾರಿ ಹೆಸರು ವಿವರ ಇಂತಿದೆ.
ತಾಂತ್ರಿಕ/ಡಿ.ಬಿ.ಶಾಖೆ-ಆರ್.ಪಿ. ಜಾಧವ ಕಾರ್ಯಪಾಲಕ ಇಂಜಿನಿಯರ್, ನಿಕಿತಾ ಸಹಾಯಕ ಇಂಜಿನಿಯರ. ಲೆಕ್ಕ ಶಾಖೆ ಮತ್ತು ಲೆಕ್ಕ ಪರಿಶೋಧನಾಧಿಕಾರಿಗಳ ಶಾಖೆ-ವೆಂಕಟೇಶ ಪ್ರಭಾರಿ ಮುಖ್ಯ ಲೆಕ್ಕಾಧಿಕಾರಿ, ಸಂಗೀತಾ ಪ್ರ.ದ.ಸ. ವಾಹನ ಶಾಖೆ-ಸುಶ್ಮಾ ಸಾಗರ, ರವಿಕಾಂತ ಜಾಧವ ಎ.ಎ.ಕಿ. ಹಂಚಿಕೆ ಶಾಖೆ-ವಿದ್ಯಾ ಟಿ.ಪಿ.ಎಂ., ಅನುರಾಧ ಎ.ದ.ಸ. ಪರಿಷತ್ ಶಾಖೆಗೆ ಸಂಬಂಧಪಟ್ಟ ಎಲ್ಲ ಮಾಹಿತಿ-ಎಂ.ಎ. ಮಜೀದ್ ಪ್ರಭಾರಿ ಪರಿಷತ್ ಕಾರ್ಯದರ್ಶಿ, ಮಹ್ಮದ್ ಹಕೀಮ್ ಎ.ದ.ಸ. ನಲ್ಮ್ (ಉತ್ತರ ಮತ್ತು ಶೇ. 7.25 ಮತ್ತು ಶೇ. 3ರ ಶಾಖೆ ಹಾಗೂ ಆಶ್ರಯ ಶಾಖೆ-ವಿಜಯಲಕ್ಷ್ಮೀ ಆರ್. ಪಟ್ಟೆದಾರ್ ಸಿ.ಎ.ಓ., ನಾಗಮ್ಮ ಬೆನಕನಳ್ಳಿ ಸಿ.ಓ., ರಮೇಶ ಬಿ.ಸಿ. (ಆ.ಶಾ.).
ಸಿಬ್ಬಂದಿ ಶಾಖೆ-ಅವಧೂತ ದೇಶಪಾಂಡೆ ಕ.ವ್ಯ., ಇಂದಿರಾ ಪ್ರ.ದ.ಸ. ಚುನಾವಣಾ ಶಾಖೆ-ಅನಂತರಾವ ಕುಲಕರ್ಣಿ ಶಿರಸ್ತೇದಾರರು, ಮಹೇಶ ದೇಶಪಾಂಡೆ ಆರ್.ಐ.
ಎಸ್.ಜೆ.ಎಸ್.ಆರ್.ವಾಯ್.(ದಕ್ಷಿಣ ಶಾಖೆ) ಮತ್ತು ಶೇ. 24.10 ನಲ್ಮ್ ದಕ್ಷಿಣ-ರೇಣುಕಾ ಸಿ.ಎ.ಒ., ಶಾಂತಪ್ಪ ಹಾದಿಮನಿ ಸಿ.ಓ. ವಲಯ ಕಚೇರಿ 1ಕ್ಕೆ ಸಂಬಂಧಪಟ್ಟ ಮಾಹಿತಿಗಳ ಶಾಖೆ- ಎಸ್.ಕೆ. ಮೈನೋದ್ದೀನ್ ವಲಯ ಆಯುಕ್ತರು ವಲಯ ಕಚೇರಿ-1, ಬಸವರಾಜ ವಗ್ಗೆ ಕಚೇರಿ ವ್ಯವಸ್ಥಾಪಕರು. ವಲಯ ಕಚೇರಿ 2ಕ್ಕೆ ಸಂಬಂಧಪಟ್ಟ ಮಾಹಿತಿಗಳ ಶಾಖೆ- ಎಂ.ಎ. ಮಜೀದ ವಲಯ ಆಯುಕ್ತರು ವಲಯ ಕಚೇರಿ-2, ಶಾಂತಲಾ ಕಚೇರಿ ವ್ಯವಸ್ಥಾಪಕರು. ವಲಯ ಕಚೇರಿ 3ಕ್ಕೆ ಸಂಬಂಧಪಟ್ಟ ಮಾಹಿತಿಗಳ ಶಾಖೆ- ರಂಗಯ್ಯ ಬಡಿಗೇರ ವಲಯ ಆಯುಕ್ತರು ವಲಯ ಇ.ಇ. ಕಚೇರಿ-3, ಬಂಡೆಪ್ಪ ಹುಲಿಮನಿ ಕಚೇರಿ ವ್ಯವಸ್ಥಾಪಕರು. ಪರಿಸರ ಶಾಖೆ-ಮುಜಾಮುಲುದ್ದೀನ್ ಪರಿಸರ ಅಭಿಯಂತರರು, ಗುರುನಾಥ ಕ.ವ್ಯ. ಆರೋಗ್ಯ ಶಾಖೆ- ಶ್ರೀಶೈಲ ಎ.ಡಿ. ಆರೋಗ್ಯಾಧಿಕಾರಿ, ಗುರುನಾಥ ಕ.ವ್ಯ. ವಿದ್ಯುತ್ ಶಾಖೆ- ರಿಯಾಜ್ ಅಹ್ಮದ್, ಜಗದೇವಿ ಪ್ರ.ದ.ಸ. ವಲಯ ಕಚೇರಿ-1ರ ಕಂದಾಯ ಶಾಖೆ- ರಹೇಮಾನ ಕಂದಾಯ ಅಧಿಕಾರಿಗಳು, ಬಸವರಾಜ ಬಗ್ಗೆ ಕಚೇರಿ ವ್ಯವಸ್ಥಾಪಕರು.
ವಲಯ ಕಚೇರಿ 2ರ ಕಂದಾಯ ಶಾಖೆ- ಅಕ್ರಮ ಅಹ್ಮದ್ ಕಂದಾಯ ಅಧಿಕಾರಿಗಳು, ಶಾಂತಲಾ ಕಚೇರಿ ವ್ಯವಸ್ಥಾಪಕರು. ವಲಯ ಕಚೇರಿ 3ರ ಕಂದಾಯ ಶಾಖೆ- ಪಿರಪ್ಪ ಪೂಜಾರಿ ಕಂದಾಯ ಅಧಿಕಾರಿಗಳು, ಬಂಡೆಪ್ಪ ಹುಲಮನಿ ಕಚೇರಿ ವ್ಯವಸ್ಥಾಪಕರು. ಕಂಪ್ಯೂಟರ್ ಶಾಖೆ-ನೀಲಕಂಠರಾಯ ಓ.ಎ., ಮಲ್ಲಿಕಾರ್ಜುನ ಕ.ವ. ನಿರ್ಮಲ ನಗರ ಯೋಜನೆ ಜಿ.ಐಎಸ್. ಶಾಖೆ-ಆರ್.ಪಿ. ಜಾಧವ್ ಇ.ಇ. ಕಲಬುರಗಿ ಮಹಾನಗರ ಪಾಲಿಕೆ, ಧೀರೇನ್ ಗಾಡ್ ಸೀನಿಯರ್ ಪ್ರೋಗ್ರಾಮರ್. ಅಭಿಲೇಖಾಲಯ ಕೇಂದ್ರ ಕಚೇರಿ- ಸೌಭಾಗ್ಯಮ್ಮಾ ಕ.ವ್ಯ., ನಾಗೇಂದ್ರ ಎ.ದ.ಸ. ಖರೀದಿ ಮತ್ತು ಉಗ್ರಾಣ ಶಾಖೆ-ನೀಲಕಂಠರಾಯ ಓ.ಎ., ಶಿವಶರಣ ಎಸ್.ಡಿ.ಎ.
ಸಂಬಂಧಪಟ್ಟ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಂದ ಅರ್ಜಿದಾರರಿಗೆ ಮಾಹಿತಿ ಒದಗಿಸುವಲ್ಲಿ ಏನಾದರೂ ದೂರುಗಳು/ ಮೇಲ್ಮನವಿ ಸಲ್ಲಿಸಿದಲ್ಲಿ ಮಾಹಿತಿ ಹಕ್ಕು ಅಧಿನಿಯಮದ ಕಲಂ 19(1)ರ ಅಡಿ ಮೇಲ್ಮನವಿ ಪ್ರಾಧಿಕಾರವಾದ ಕಲಬುರಗಿ ಜಗತ್ ಸರ್ಕಲ್‍ದÀಲ್ಲಿರುವ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು ಮಾತ್ರ ನೇರವಾಗಿ ಸಂಬಂಧಪಟ್ಟ ಶಾಖೆಗಳ ಸಾರ್ವಜನಿಕ ಮಾಹಿತಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಕೋರಿದ್ದಾರೆ.
ವಾಹನದ ಬಿಡಿಭಾಗ ಖರೀದಿಗೆ ದರಪಟ್ಟಿ ಆಹ್ವಾನ
******************************************
ಕಲಬುರಗಿ,ಜ.24.(ಕ.ವಾ.)-ಕಲಬುರಗಿ ಹೈಕೋರ್ಟ್ ಪೀಠದ ಕಚೇರಿಯ ಕೋರ್ಲಾ, ಇನ್ನೋವಾ, ಅಂಬಾಸಿಡರ್ ಮತ್ತು ಹೊಂಡಾ ಎಕ್ಟಿವಾ ವಾಹನಗಳಿಗೆ ಉಪಯೋಗ ಮಾಡಿದ ವಿವಿಧ ಬಿಡಿಭಾಗಗಳಾದ ಟೈರ್, ಟ್ಯೂಬ್, ಬ್ಯಾಟರಿಗಳನ್ನು ಖರೀದಿಸಲು ಅರ್ಹರಿಂದ ದರಪಟ್ಟಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಚ್ಛೆಯುಳ್ಳವರು ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಕಲಬುರಗಿ ಪೀಠ ಇವರ ಹೆಸರಿನಲ್ಲಿ ಪಡೆದ 100 ರೂ.ಗಳ ಇ.ಎಂ.ಡಿ. ಮೊತ್ತದ ಡಿ.ಡಿ.ಯೊಂದಿಗೆ ದರಪಟ್ಟಿಯನ್ನು ಕಲಬುರಗಿ ಪೀಠದ ಕಾರ್ಯಾಲಯಕ್ಕೆ 2018ರ ಫೆಬ್ರುವರಿ 8ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು. ದರಪಟ್ಟಿಯ ಲಕೋಟೆ ಮೇಲೆ “ಕೊಟೇಶನ್ ಫಾರ್ ಪರಚೇಸಿಂಗ್ ಆಫ್ ಯೂಸ್ಡ್ ಸ್ಪೇರ್ ಪಾಟ್ಸ್” ಎಂದು ನಮೂದಿಸಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು ಫೆಬ್ರವರಿ 12ರಂದು ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುವುದು. ಷರತ್ತು, ನಿಬಂಧನೆ, ದರಪಟ್ಟಿ ತೆರೆಯುವ ದಿನಾಂಕ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹೈಕೋರ್ಟ ಪೀಠದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.
ಜನವರಿ 25ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಜ.24.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದ 11ಕೆ.ವಿ. ವಿಠ್ಠಲನಗರ ಫೀಡರ್ ವ್ಯಾಪ್ತಿಯಲ್ಲಿ ಪರಿವರ್ತಕ ಸ್ಥಳಾಂತರಿಸುವ ಕಾರ್ಯಕೈಗೊಳ್ಳುವ ಪ್ರಯುಕ್ತ ಜನವರಿ 25ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ ವಿಠ್ಠಲನಗರ ಫೀಡರ್: ದೇವತಾ ಆಸ್ಪತ್ರೆ, ದೇವತಾ ಆಸ್ಪತ್ರೆ ಹಿಂದುಗಡೆ, ಪರಿಮಳಾ ಟಿ.ಸಿ. ವಿವೇಕಾಂದ ನಗರ, ವಿದ್ಯಾನಗರ, ಖೂಬಾ ಪ್ಲಾಟ್ ಏರಿಯಾ, ಗಣೇಶ ಟೆಂಪಲ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆಬ್ರವರಿ 21ಕ್ಕೆ ಮುಂದೂಡಿಕೆ
ಕಲಬುರಗಿ,ಜ.24.(ಕ.ವಾ.)-ವಿವಿಧ ಸಂಘಟನೆಗಳು ಜನೆವರಿ 25 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ಕಲಬುರಗಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ಪೆಬ್ರವರಿ 21ಕ್ಕೆ ಮುಂದೂಡಲಾಗಿದೆ ಎಂದು ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಡಿ ಕಲಬುರಗಿ ತಿಳಿಸಿದಾರೆ.
ಫರೀನ್ ಫಾತಿಮಾಗೆ ಪಿಹೆಚ್.ಡಿ ಪದವಿ
**********************************
ಕಲಬುರಗಿ,ಜ.24.(ಕ.ವಾ.)-ಲೈಬ್ರೈರಿ ಆ್ಯಂಡ್ ಇನ್‍ಫಾರ್ಮೇಶನ್ ಸೈನ್ಸ್ ವಿಷಯದಲ್ಲಿ “ಯೂಸರ್ಸ್ ಅಟಿಟ್ಯೂಡ್ ಟುವಾಡ್ರ್ಸ್ ಫೆಸಿಲಿಟಿಸ್ ಸರ್ವೀಸಸ್ ಆ್ಯಂಡ್ ರಿಸೋರ್ಸಸ್ ಆಫ್ ನ್ಯೂಲಿ ಎಸ್ಟಾಬಿಲಿಶ್ಡ್ ಯೂನಿವರ್ಸಿಟಿ ಲೈಬ್ರರೀಸ್ ಆಫ್ ಕರ್ನಾಟಕ ಸ್ಟೇಟ್” ಪ್ರಬಂಧ ಮಂಡಿಸಿದಕ್ಕಾಗಿ ಫರೀನ್ ಫಾತಿಮಾ ಅಬ್ದುಲ್ ರೌಫ್‍ಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ಪ್ರಕಟಿಸಿದೆ.
ವಿಶ್ವವಿದ್ಯಾಲಯದ ಲೈಬ್ರೈರಿ ಆ್ಯಂಡ್ ಇನ್‍ಫಾರ್ಮೇಶನ್ ಸೈನ್ಸ್ ಪ್ರೊ. ಪಿ.ಜಿ.ತದಾಸಾದ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದರು.
ಹೈಕೋರ್ಟ್ ಪೀಠದಲ್ಲಿ ಧ್ವಜಾರೋಹಣ ಕಾರ್ಯಕ್ರಮ
ಕಲಬುರಗಿ,ಜ.24.(ಕ.ವಾ.)-ಕಲಬುರಗಿ ಹೊರವಲಯದ ಹೈಕೋರ್ಟ ಪೀಠದಲ್ಲಿ ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು 2018ರ ಜನವರಿ 26ರಂದು ಬೆಳಗಿನ 9.30 ಗಂಟೆಗೆ ಜರುಗಲಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ತಿಳಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠದ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಧ್ವಜಾರೋಹಣ ನೆರವೇರಿಸುವರು. ಈ ಪೀಠದ ಇತರ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಕಲಬುರಗಿ ವಕೀಲರ ಸಂಘದ ಸದಸ್ಯರು, ಸರ್ಕಾರಿ ನ್ಯಾಯವಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
********************************************
ಕಲಬುರಗಿ,ಜ.24.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಕರ್ನಾಟಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಜನವರಿ 25ರಂದು ಬೆಳಿಗ್ಗೆ 5.39 ಗಂಟೆಗೆ ಕಲಬುರಗಿಗೆ ಆಗಮಿಸುವರು. ಅಂದು ಸಚಿವರು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಸೇಡಂ ತಾಲೂಕಿನ ದೇವನೂರು ಗ್ರಾಮದ ದೊಡ್ಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುವ ಬ್ರಿಡ್ಜ್ ಕಂ ಬ್ಯಾರೇಜ್ ಅಡಿಗಲ್ಲು ಸಮಾರಂಭದಲ್ಲಿ ಹಾಗೂ ಸಂಜೆ 4.30 ಗಂಟೆಗೆ ಸೇಡಂ ತಾಲೂಕಿನ ಮೇದಕ ಗ್ರಾಮದ ನರಸಪ್ಪ ನಾಲಕ್ಕೆ ಅಡ್ಡಲಾಗಿ ನಿರ್ಮಿಸಲಾಗುವ ಬ್ರೀಡ್ಜ್ ಕಂ ಬ್ಯಾರೇಜ್ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಚಿವರು ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜನವರಿ 27ರಂದು ಬೆಳಿಗ್ಗೆ 11 ಗಂಟೆಗೆ ಆಳಂದದಲ್ಲಿ ಲಿಂಗಾಯತ ಭವನ ಶಂಕುಸ್ಥಾಪನೆ ಹಾಗೂ ಜಗಜ್ಯೋತಿ ಅಣ್ಣ ಬಸವಣ್ಣನವರ ಅಶ್ವರೂಢ ಮೂರ್ತಿಯ ಅನಾವರಣ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಚಿತ್ತಾಪುರ ಅಮರಾವತಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿರುವ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಚಿವರು ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜನವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಹಲಕೂಡ ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಗೂ ಮಧ್ಯಾಹ್ನ 12.30 ಗಂಟೆಗೆ ಜಟ್ಟೂರು ಬ್ರಿಡ್ಜ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಚಿವರು ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜನವರಿ 28 ರಿಂದ ಮೊದಲನೇ ಸುತ್ತಿನÀ ಪಲ್ಸ್ ಪೊಲೀಯೋ ಲಸಿಕೆ ಕಾರ್ಯಕ್ರಮ
***********************************************************************
ಕಲಬುರಗಿ,ಜ.24.(ಕ.ವಾ.)-ರಾಷ್ಟ್ರೀಯ ಪಲ್ಸ್ ಪೊಲೀಯೋ 2018ರ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವು ಜನವರಿ 28ರಂದು ಲಸಿಕಾ ಕೇಂದ್ರಗಳಲ್ಲಿ ಮತ್ತು ಜನವರಿ 29 ರಿಂದ 30ರವರೆಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ ಎಂದು ಕಲಬುರಗಿ ತಹಶೀಲ್ದಾರರು ಹಾಗೂ ತಾಲೂಕು ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷ ಅಶೋಕ ಹಿರೋಳೆ ತಿಳಿಸಿದರು.
ಅವರು ಬುಧವಾರ ಜರುಗಿದ ತಾಲೂಕು ಮಟ್ಟದ ಟಾಸ್ಕ್‍ಫೋರ್ಸ ಸಮಿತಿಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ 173 ಬೂತಗಳನ್ನು, 12 ಟ್ರಾಂಜಿಸ್ಟ್ ತಂಡ ಮತ್ತು 3 ಮೊಬೈಲ್ ತಂಡಗಳನ್ನು ರಚಿಸಲಾಗಿದ್ದು, 40 ಮೇಲ್ವಿಚಾರಕರ ನಿಗಾದಲ್ಲಿ 374 ಲಸಿಕಾ ತಂಡದ ಸದಸ್ಯರು ಪಲ್ಸ್ ಪೊಲೀಯೋ ಲಸಿಕೆ ಕಾರ್ಯಕ್ರಮಕ್ಕಾಗಿ ಕಾರ್ಯನಿರ್ವಹಿಸಲಿದ್ದಾರೆ. ತಾಲೂಕಿನ ಒಟ್ಟು 5 ವರ್ಷದೊಳಗಿನ 32,124 ಮಕ್ಕಳಿಗೆ ತಪ್ಪದೇ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.
ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಇವರು ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿಗೆ ಮೇಲ್ವಿಚಾರಣೆ ವಹಿಸಲಿದ್ದಾರೆ. ಜನವರಿ 27 ರಿಂದ 31ರವರೆಗೆ ಆಯಾ ಗ್ರಾಮದಲ್ಲಿನ ಶಿಕ್ಷಕರು ಮಕ್ಕಳ ಜಾಥಾ, ಪ್ರಭಾತ ಫೇರಿ ಮಾಡುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ತಾಲೂಕಿನ 416 ಅಂಗನವಾಡಿ ಕೇಂದ್ರಗಳನ್ನು ಈ ಅವಧಿಯಲ್ಲಿ ಕರ್ತವ್ಯ ದಿನವೆಂದು ಪರಿಗಣಿಸಿ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತರುವಲ್ಲಿ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು. ಕಾರ್ಯಕ್ರಮದ ಯಶಸ್ವಿಗೆ ಆಯಾ ಅಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಯನ್ನು ಯಾವುದೇ ಲೋಪದೋಷವಿಲ್ಲದೇ ನಿರ್ವಹಣೆ ಮಾಡತಕ್ಕದ್ದು ಎಂದು ಅವರು ತಿಳಿಸಿದರು.
ತಾಲೂಕಿನ 45 ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ಆರಂಭದ ಎರಡು ದಿನಗಳ ಮುಂಚಿತವಾಗಿ ಎಲ್ಲ ಗ್ರಾಮಗಳಲ್ಲಿ ಡೊಂಗರು ಹೊರಡಿಸಿ ಪ್ರಚುರಪಡಿಸುವುದಲ್ಲದೇ ಆರಂಭ ದಿನದಂದು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ|| ರಾಜಕುಮಾರ ಎ. ಕುಲಕರ್ಣಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜನವರಿ 25ರಂದು ಜನಸ್ಪಂದನ ನೇರ ಫೋನ್-ಇನ್ ಕಾರ್ಯಕ್ರಮ
**********************************************************
ಕಲಬುರಗಿ,ಜ.24.(ಕ.ವಾ.)-ಗುಲಬರ್ಗಾ ದೂರದರ್ಶನ ಕೇಂದ್ರವು ಜನವರಿ 25ರಂದು ಸಂಜೆ 6 ರಿಂದ 6-30 ಗಂಟೆಯವರೆಗೆ ಜನಸ್ಪಂದನÀ ನೇರ ಫೋನ್–ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ. “ತೊಗರಿ ಖರೀದಿ ಕೇಂದ್ರಗಳ ಹಾಗೂ ತೊಗರಿ ಅಭಿವೃದ್ಧಿ ಮಂಡಳಿಯ ಮಾಹಿತಿ” ಇದು ಜನಸ್ಪಂದನ ಕಾರ್ಯಕ್ರಮದ ವಿಷಯ ಇರುತ್ತದೆ.
ಕಲಬುರಗಿ ತೊಗರಿ ಮಂಡಳಿ ಮುಖ್ಯಸ್ಥ ಡಾ. ಬಾಲರಾಜ ರಂಗರಾವ ಹಾಗೂ ಕಲಬುರಗಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಾಗರಾಜ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರ್ಮಾಪಕ ಪ್ರಕಾಶ ಕೆ. ಮುಜುಮದಾರ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ರೈತರು ಹಾಗೂ ಸಾರ್ವಜನಿಕರು ದೂರವಾಣಿ ಸಂಖ್ಯೆ 08472-220491, 220492ಗಳನ್ನು ಸಂಪರ್ಕಿಸಿ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು.
ಜನವರಿ 29ರಿಂದ ತೋಟಗಾರಿಕಾ ಫಲಪುಷ್ಪ ಪ್ರದರ್ಶನ
*************************************************
ಕಲಬುರಗಿ,ಜ.24.(ಕ.ವಾ.)-ಕಲಬುರಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಿಂದ 2017-18ನೇ ಸಾಲಿಗೆ ಜನವರಿ 29ರಿಂದ 31ರವರೆಗೆ ಕಲಬುರಗಿಯ ಶ್ರೀ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ತೋಟಗಾರಿಕೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಗಳಾದ ವಿವಿಧ ಬಗೆಯ ಅಲಂಕಾರಿಕ ಕುಂಡಗಳ ಜೋಡಣೆ, ಹೂವಿನಲ್ಲಿ ಕೆತ್ತಿದ ಸ್ತಬ್ದ ಚಿತ್ರಗಳು, ಇಕೆಬಾನಾ ಅಲಂಕಾರಿಕ ಹೂವುಗಳ ಜೋಡಣೆ-ಕಲಾ ಕೃತಿಗಳು ಮತ್ತು ತರಕಾರಿ ಕೆತ್ತನೆ, ಅಲಂಕಾರಿಕ ಡ್ರೈಫ್ಲಾವರ್ ಜೋಡಣೆ ಇತ್ಯಾದಿಗಳನ್ನು ಪ್ರದರ್ಶಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಈ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment