GULBARGA VARTHE

GULBARGA VARTHE

Saturday, 20 January 2018

NEWS AND PHOTO DATE: 20-1-2018

ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ
****************************************************
-ಆರ್.ವೆಂಕಟೇಶಕುಮಾರ
***********************
ಕಲಬುರಗಿ,ಜ.20.(ಕ.ವಾ)- ಮುಂಬರುವ ವಿಧಾನಸಭೆ ಸಾರ್ವತ್ರಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾರನ ಮತ ಪ್ರಮಾಣೀಕರಿಸುವ ದಾಖಲೆ ವ್ಯವಸ್ಥೆ (ಗಿಗಿPಂಖಿ) ಬಳಕೆ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೆಶಕುಮಾರ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಬರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕೆ ಚುನಾವಣೆಯ ಕುರಿತು ಪೂರ್ವಭಾವಿಯಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿವಿಪ್ಯಾಟ್ ಬಳಕೆಯಿಂದ ಮತದಾರನು ಯಾವ ಅಭ್ಯರ್ಥಿಗೆ ಮತ ನೀಡಿದ್ದಾನೆ ಎಂಬುದು ಮತದಾನದ ಸಮಯದಲ್ಲಿಯೆ ಮತದಾರನಿಗೆ ತಿಳಿಸುವ ಸಾಧನ ಇದಾಗಿದ್ದು, ಇದರಿಂದ ವಿವಿಧ ಗೊಂದಲಗಳಿಗೆ ತೆರೆ ಎಳೆಯಬಹುದಾಗಿದೆ ಎಂದರು.
ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಬಾರಿ 2158 ಮತದಾನ ಕೇಂದ್ರಗಳಿದ್ದು, ಈ ಬಾರಿ 2267ಕ್ಕೆ ಹೆಚ್ಚಳವಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ನಗರ ಪ್ರದೇಶದಲ್ಲಿ ಪ್ರತಿ ಮತದಾನ ಕೇಂದ್ರದಲ್ಲಿ 1400 ಮತ್ತು ಗ್ರಾಮೀಣ ಪ್ರದೇಶದಲ್ಲಿ 1200 ಗರಿಷ್ಠ ಸಂಖ್ಯೆ ಮತದಾರರಿವಂತೆ ನೋಡಿಕೊಳ್ಳಲಾಗಿದ್ದು, ಯಾವುದೇ ಕಾರಣಕ್ಕು ಈ ಸಂಖ್ಯೆ ಹೆಚ್ಚಳವಾಗುವುದಿಲ್ಲ ಎಂದು ಸ್ಪಷ್ಠಪಡಿಸಿದರು.
ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬೂತ್ ಮಟ್ಟದಲ್ಲಿ ನಡೆಯುತ್ತಿದೆ. ಜನವರಿ 22ರೊಳಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತು ತಿದ್ದುಪಡಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಫೆಬ್ರವರಿ 28ರಂದು ಪ್ರಕಟಿಸಲಾಗುವುದು. ಅಲ್ಲದೆ ಬೂತ್ ಮಟ್ಟದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಪ್ರತಿವಾರ ಆಯಾ ತಹಶೀಲ್ದಾರರು ಬಿ.ಎಲ್.ಒಗಳ ಸಭೆ ನಡೆಸಲು ನಿರ್ದೇಶನ ನೀಡಲಾಗಿದೆ. ರಾಜಕೀಯ ಪಕ್ಷಗಳು ಬೂತ್ ಮಟ್ಟದ ಎಜೆಂಟರ ಪಟ್ಟಿಯನ್ನು ಕೂಡಲೆ ಸಲ್ಲಿಸುವಂತೆ ತಿಳಿಸಿದರು.
ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.70ರಷ್ಟು ಪ್ರಮಾಣದ ಮತದಾನವಾಗಿದ್ದು, ಈ ಬಾರಿ ಇದನ್ನು ಇನ್ನಷ್ಟು ಹೆಚ್ಚಿಸಲು ಸ್ವೀಪ್ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಕಾಲೇಜುಗಳಲ್ಲಿ 2018ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಜವಾಬ್ದಾರಿ ನೀಡಲಾಗಿದೆ. ಯುವ ಹಾಗೂ ಭಾವಿ ಮತದಾರರನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮತದಾನ ಮಾಡುವುದಕ್ಕಾಗಿ ಹುರಿದುಂಬಿಸಲು ಮತದಾರರ ಸಾಕ್ಷರತಾ ಕ್ಲಬ್ (ಇಎಲ್‍ಸಿ) ಸಹ ಸ್ಥಾಪಿಸಲಾಗಿದಲ್ಲದೆ ಮತದಾರ ಪಟ್ಟಿಯನ್ನು ಪರಿಷ್ಕರಣೆಯ ಮೇಲುಸ್ತುವಾರಿಗೆ ಸೆಕ್ಟರ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಮತದಾನ ಕೇಂದ್ರಕ್ಕೆ ಬರುವ ಮತದಾರರಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು. ವಿಕಲಚೇತನರಿಗೆ ಅನೂಕೂಲವಾಗುವಂತೆ ರ್ಯಾಂಪ್ ಮತ್ತು ಹಿರಿಯ ನಾಗರೀಕರ ನೆರವಿಗೆ ಸಹಾಯಕ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗುವುದು. ಇನ್ನೂ ಮತದಾನ ಪೂರ್ವದಲ್ಲಿಯೆ ಮತದಾನ ಕೇಂದ್ರದಲ್ಲಿನ ಮೂಲಸೌಲಭ್ಯವನ್ನು ಖುದ್ದಾಗಿ ಪರಿಶೀಲಿಸುವಂತೆ ಆಯಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ, ಸಹಾಯಕ ಆಯುಕ್ತರಾದ ಡಾ|| ಬಿ.ಸುಶೀಲಾ, ರಾಚಪ್ಪ, ಪ್ರೊಬೇಷನರ್ಸ್ ಸಹಾಯಕ ಆಯುಕ್ತ ರಮೇಶ ಕೋಲಾರ, ಕಲಬುರಗಿ ತಹಶೀಲ್ದಾರ ಅಶೋಕ ಹಿರೋಳಿ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ದಯಾನಂದ ಪಾಟೀಲ, ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಕಾಲ ಸೇವೆ: ವಾರದಲ್ಲಿ ಮಾಹಿತಿನ್ನೊಳಗೊಂಡ ಫಲಕ ಹಾಕಲು ಸೂಚನೆ
***************************************************************
ಕಲಬುರಗಿ,ಜ.20.(ಕ.ವಾ)- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಇದೂವರೆಗೆ ಫಲಕ ಹಾಕದ ಕಚೇರಿಗಳು ಒಂದು ವಾರದಲ್ಲಿ ಕಚೇರಿ ಪ್ರವೇಶ ದ್ವಾರದಲ್ಲಿ ಸೇವೆಯ ಮಾಹಿತಿನ್ನೊಳಗೊಂಡ ಫಲಕ ಹಾಕುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಮಿಷನ್ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ಕಚೇರಿಯಲ್ಲಿ ನೀಡಲಾಗುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ನೀಡುವ ಫಲಕ ಮತ್ತು ಅರ್ಜಿಗಳನ್ನು ಸ್ವೀಕರಿಸಲು ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು. ಸಕಾಲ ಯೋಜನೆಯಡಿ ನಿಗದಿಪಡಿಸಿರುವ ಸೇವೆಗಳನ್ನು ಯಾವುದೇ ಕಾರಣಕ್ಕು ಅರ್ಜಿ ಮತ್ತು ದಾಖಲಾತಿಗಳನ್ನು ಕೈಯಾರೆ ನೇರವಾಗಿ ಸ್ವೀಕರಿಸಬಾರದು. ಸಕಾಲ ಸೇವೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕೆಂದು ತಿಳಿಸಿದ ಅವರು ತಪ್ಪಿದಲ್ಲಿ ಪ್ರತಿ ದಿನಕ್ಕೆ 20 ರೂ.ಗಳಂತೆ ದಂಡ ವಿಧಿಸಲಾಗುವುದು ಎಂದರು. ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅನಧೀಕೃತ ವಹಿವಾಟು ನಡೆಸುತ್ತಿರುವ 8 ಹೊಟೇಲ್‍ಗಳ ವಿರುದ್ಧ ಕಾನೂನು ಕ್ರಮ
**********************************************************************
ಕಲಬುರಗಿ,ಜ.20.(ಕ.ವಾ.)-ಆಳಂದ ಪಟ್ಟಣದ ವಾರ್ಡ ನಂ. 1 ರಲ್ಲಿನ ತಹಶೀಲ್ದಾರ ಕಚೇರಿಯ ಬಲಭಾಗದಲ್ಲಿನ ಎಂಟು ಹೊಟೇಲ್‍ಗಳು ಹಾಗೂ ಖಾನಾವಳಿಗಳು ಪುರಸಭೆಯ ಪರವಾನಿಗೆ ಪಡೆಯದೇ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಿನ್ನೆ (ಜನವರಿ 19ರಂದು) ಜಿಲ್ಲಾಧಿಕಾರಿಕಾರಿ ಆರ್. ವೆಂಕಟೇಶಕುಮಾರ ಹಾಗೂ ಆಳಂದ ತಹಶೀಲ್ದಾರರು ಹಾಗೂ ಮುಖ್ಯಾಧಿಕಾರಿಗಳು ಹೊಟೇಲ್‍ಗಳ ಸ್ಥಳವನ್ನು ಪರಿಶೀಲಿಸಿ, ಈ ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಕಿರಿಯ ಆರೋಗ್ಯ ನಿರೀಕ್ಷಕರು ಸದರಿ ಹೊಟೇಲ್ ಹಾಗೂ ಖಾನವಾಳಿಗಳಿಗೆ ಹಲವಾರು ಭೇಟಿ ನೀಡಿ ಸ್ವಚ್ಚತೆ ಕಾಪಾಡಬೇಕೆಂದು ತಿಳಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಚ್ಛತೆ ಕಾಪಾಡುವಲ್ಲಿ ಈ ಹೊಟೇಲ್‍ಗಳು ವಿಫಲವಾಗಿದ್ದು, ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬಂದಿರುವುದಿಂದ, ಹೊಟೇಲ್ ಮತ್ತು ಸುತ್ತಮುತ್ತಲಿನ ಚರಂಡಿ ನೀರು ತುಂಬಿ ರೋಗ ರುಜೀನ ಹರಡುವ ಸಂಭವವಿರುವುದು ಕಂಡು ಬಂದಿರುತ್ತದೆ. ಕಾರಣ ಎಂಟು ಹೊಟೇಲ್/ಖಾನಾವಳಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಳಂದ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಟೇಲ್ ಮಾಲೀಕರ ಹಾಗೂ ಹೊಟೇಲ್‍ಗಳ ವಿವರ ಇಂತಿದೆ. ಸುರೇಶ ತಾರಾಚಂದ ಹದವೆ ಇವರ ಜೈ ಭವಾನಿ ಹೊಟೇಲ್, ಗುಂಡಪ್ಪಾ ನಾಗಪ್ಪಾ ಗೌಳಿ ಇವರ ಗೌಳಿ ಹೊಟೇಲ್, ಶಾಂತಪ್ಪ ಹಣಮಂತರಾವ ಪಂಚಾಳ ಇವರ ಶ್ರೀ ಮೌನೇಶ್ವರ ಹೊಟೇಲ, ಹೇಮಂತ ಮಂಜುನಾಥ ನಾಯಕ ಇವರ ನಾಗಶ್ರೀ ಟಿ ಸ್ಟಾಲ್, ಚಂದ್ರಶೇಖರ ಚನ್ನಬಸಪ್ಪಾ ಕುಂಬಾರ ಇವರ ಚಂದ್ರಭವನ ಖಾನಾವಳಿ, ಮಲ್ಲಿನಾಥ ಗುರುಪಾದಪ್ಪಾ ಕುರುವೆ ಇವರ ನ್ಯೂ ಚಂದ್ರಭವನ ಖಾನಾವಳಿ, ಸುರೇಶ ಶಿವಪುತ್ರಪ್ಪಾ ಹತ್ತಿ ಇವರ ವೆಕ್‍ಕಮ್ ಧಾಬಾ ಹಾಗೂ ನೂರ ಅಹ್ಮದ್ ಪಾಶಾಮಿಯಾ ಗಂಗಾ ಇವರ ಗಂಗಾ ಬಾಜೆ ಹೊಟೇಲ್.

ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
*******************************
ಕಲಬುರಗಿ,ಜ.20.(ಕ.ವಾ)-ಕರ್ನಾಟಕ ಜಾನಪದ ಅಕಾಡೆಮಿಯಿಂದ 2016-17 ಹಾಗೂ 2017-18ನೇ ಸಾಲಿಗೆ ಪರಿಶಿಷ್ಟ ಜಾತಿಯ ಹಾಗೂ 2017-18 ನೇ ಸಾಲಿನ ಪರಿಶಿಷ್ಟ ಪಂಗಡದ “ಜಾನಪದ ಕ್ಷೇತ್ರ” ದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ಮಾಡುವ ಸಲುವಾಗಿ 45ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಅಧ್ಯಯನದ ಅವಧಿ 6 ತಿಂಗಳದಾಗಿರುತ್ತದೆ. ಅಧ್ಯಯನ ವೇತನ ಮೊತ್ತ 1 ಲಕ್ಷ ರೂ.ಗಳಾಗಿದ್ದು, ಇದರಲ್ಲಿ ಅಧ್ಯಯನಕಲಾರರಿಗೆ 70,000ರೂ., ಮಾರ್ಗದರ್ಶಕರಿಗೆ 5,000 ರೂ. ಮತ್ತು ಪ್ರಕಟಣೆಗಾಗಿ 25,000 ರೂ.ಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಗೊಂಡವರು 150 ಪುಟಗಳ ಡಿಟಿಪಿ ಮಾಡಿದ ಹಸ್ತ ಪ್ರತಿಯನ್ನು ಹಾಗೂ ವಿಷಯಕ್ಕೆ ಸಂಬಂಧಿಸಿದ ವಿವರಗಳನ್ನು ಸಿಡಿಗೆ ಅಳವಡಿಸಿ ಅಕಾಡೆಮಿಗೆ ಒಪ್ಪಿಸಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಸಲಹಾ ಸಮಿತಿಯ ಸಂದರ್ಶನದ ತೀರ್ಮಾನದಂತೆ ಆಯ್ಕೆ ಮಾಡಲಾಗುವುದು.
2016-17ನೇ ಪರಿಶಿಷ್ಟ ಜಾತಿ ಅಧ್ಯಯನ ವಿಷಯಗಳ ವಿವರ ಇಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಜನಾಂಗದ ಸಾಂಸ್ಕøತಿಕ ಅಧ್ಯಯನ-ಪಾತ್ರ, ಚೌಡಿಕೆ ಪದ ಹಾಗೂ ಚೌಡಿಕೆ ಕಲಾವಿದರ ಸಾಮಾಜಿಕ ಅಧ್ಯಯನ, ತಮಟೆ ವಾದನ, ಕುಣಿತದ ವೈಶಿಷ್ಟ್ಯ ಹಾಗೂ ತಮಟೆ ಪದಗಳ ಸಾಂಸ್ಕøತಿಕ ಅಧ್ಯಯನ, ಜನಪದ ಪ್ರದರ್ಶನ ಕಲೆಗಳಲ್ಲಿ ಬದಲಾಗುತ್ತಿರುವ ಕುಣಿತಗಳ ಮಟ್ಟುಗಳ ಮತ್ತು ವೇಷ ಭೂಷಣಗಳು, ಡಿಜಿಟಲ್ ಮಾಧ್ಯಮ ಯುಗದಲ್ಲಿ ಜನಪದ ಪ್ರದರ್ಶಕ ಕಲೆಗಳ ಉಳಿವು-ಅಳಿವು, ಸಾಮಾಜಿಕ ಮತ್ತು ಸಾಂಸ್ಕøತಿಕ ಜಾಗೃತಿಗಾಗಿ ಜನಪದ ಪ್ರದರ್ಶಕ ಕಲೆಗಳ ಬಳಕೆ ಬಂದು ಅಧ್ಯಯನ, ಚಾಮರಾಜನಗರ ಜಿಲ್ಲೆ ಗೊರವರ ಕುಣಿತ ಕಲಾಪ್ರಕಾರದ ಸಾಮಾಜಿಕ ಮತ್ತು ಸಾಂಸ್ಕøತಿಕ ಅಧ್ಯಯನ, ನಗರ ಪ್ರದೇಶಗಳಲ್ಲಿ ಜಾನಪದ ಕಲಾ ಪ್ರದರ್ಶನಗಳು ಮತ್ತು ಜನಭಿಪ್ರಾಯಗಳು-ತೌಲಾನಿಕ ಅಧ್ಯಯನÀ, ಬೀದರ್ ಜಿಲ್ಲೆಯ ಜನಪದ ಕಲಾ ಪ್ರಕಾರಗಳು ಹಾಗೂ ಅವುಗಳ ಸಾಂಸ್ಕøತಿಕ ಅಧ್ಯಯನ, ಯಾದಗಿರಿ ಜಿಲ್ಲೆಯ ಜನಪದ ಕಲಾ ಪ್ರಕಾರಗಳು ಹಾಗೂ ಸಾಂಸ್ಕøತಿಕ ಅಧ್ಯಯನ.
2017-18ನೇ ಪರಿಶಿಷ್ಟ ಜಾತಿ ಅಧ್ಯಯನ ವಿಷಯಗಳ ವಿವರ ಇಂತಿದೆ. ಬೆಳಗಾವಿ ಜಿಲ್ಲೆಯ ಜನಪದ ಕಲೆಗಳು ಮತ್ತು ಅವುಗಳ ವೈಶಿಷ್ಟ್ಯತೆ, ಐತಿಹಾಸಿಕ, ಸಾಮಾಜಿಕ, ಸಾಂಸ್ಕøತಿಕ ನೆಲೆಯಲ್ಲಿ ಲಾವಣಿಗಳ ಪಾತ್ರ, “ಕೋಲೆ ಬಸವ ಸಂಪ್ರದಾಯ” ಚಾರಿತ್ರಿಕ ಹಾಗೂ ಸಾಂಸ್ಕøತಿಕ ಅಧ್ಯಯನ, ಜನಪದ ವೈದ್ಯ ಪದ್ದತಿಯಲ್ಲಿ ನಂಬಿಕೆ ಮತ್ತು ವೈಜ್ಞಾನಿಕ ಮನೋಧರ್ಮ ಒಂದು ತೌಲಾನಿಕ ಅಧ್ಯಯನ, ಜನಪದ ಕಲಾವಿದರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸುಧಾರಿಸಿಕೊಳ್ಳುವ ಮಾರ್ಗೋಪಾಯಗಳು.
2017-18ನೇ ಸಾಲಿನ ಪರಿಶಿಷ್ಟ ಪಂಗಡದ ಅಧ್ಯಯನ ವಿಷಯಗಳ ವಿವರ ಇಂತಿದೆ. ಕೊಡಗಿನ ಕುಡಿಯ ಜನಾಂಗದ ಸಾಂಸ್ಕøತಿಕ ಅಧ್ಯಯನ, ಉತ್ತರ ಕನ್ನಡ ಜಿಲ್ಲೆಯ ಗೊಂಡ ಜನಾಂಗದ “ಹರಿಸೇವೆ” ಒಂದು ಸಾಂಸ್ಕøತಿಕ ಅಧ್ಯಯನ, ಕುರುಮಾಮ-ಸಾಂಸ್ಕøತಿಕ ಸಾಮಾಜಿಕ ಅಧ್ಯಯನ, ಕೊರಗ ಜನಾಂಗದ ಸ್ಥಿತ್ಯಂತರ ಬದುಕು ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳು, ರಾಜಗೊಂಡ ಬುಡಕಟ್ಟು ಜನಾಂಗದ ಜೀವನ ಸಾಮಾಜಿಕ ಸಾಂಸ್ಕøತಿಕ ಅಧ್ಯಯನ, ಮಧ್ಯ ಕರ್ನಾಟಕದ ನಾಯಕ ಜನಾಂಗದ ಸಾಂಸ್ಕøತಿಕ ಅಧ್ಯಯನ, ಉತ್ತರ ಕರ್ನಾಟಕದಲ್ಲಿ ಮೇದ ಜನಾಂಗದ ಸ್ಥಿತ್ಯಂತರ ಬದುಕು, ಚಂಚು-ಚಂಚರ ಜನಾಂಗದ ಸಾಹಿತ್ಯ ಹಾಗೂ ಧಾರ್ಮಿಕ ಆಚರಣೆಗಳು ಹಾಗೂ ಕೊಡಗು ಮತ್ತು ಮೈಸೂರು ಜಿಲ್ಲೆಯ ಕಾಡು ಕುರುಬ ಜನಾಂಗದ ಬದಲಾದ ಬದುಕು-ಬವಣೆ.
ಅಧ್ಯಯನ ಮಾಡಬಯಸುವವರು ಅರ್ಜಿ ನಮೂನೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜನವರಿ 31ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ಹಾಗೂ ದೂರವಾಣಿ-22215509 ಅಥವಾ ಅಕಾಡೆಮಿಯ ಡಿegisಣಡಿಚಿಡಿ.ರಿಚಿಟಿಚಿಠಿಚಿಜಚಿ@gmಚಿiಟ.ಛಿom ಇ-ಮೇಲ್ ಮೂಲಕ ಸಂಪರ್ಕಿಸಲು ಕೋರಲಾಗಿದೆ.
ಮುಟ್ಟುಗೋಲು ಹಾಕಿಕೊಂಡ 38 ವಾಹನಗಳ ಹರಾಜು
************************************************
ಕಲಬುರಗಿ,ಜ.20.(ಕ.ವಾ.)-ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಹಾಗೂ ವಿವಿಧ ಅಪರಾಧಗಳಿಗಾಗಿ ಸಾರಿಗೆ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ಒಟ್ಟು 38 ವಾಹನಗಳ ಬಹಿರಂಗ ಹರಾಜು 2018ರ ಜನವರಿ 23, 24 ಹಾಗೂ 25ರಂದು ಆಯಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಜರುಗಲಿದೆ ಎಂದು ಕಲಬುರಗಿ ಜಿಲ್ಲೆಯ ಉಪ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
ಜನವರಿ 23ರಂದು: ಕಲಬುರಗಿ ವಲಯ ನಂ. 2ರ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ 3 ವಾಹನಗಳು, ಚಿತ್ತಾಪುರ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ 4 ವಾಹನಗಳು, ಕಲಬುರಗಿ ವಲಯ ನಂ. 1ರ ಅಬಕಾರಿ ಕಚೇರಿಯಲ್ಲಿ 01 ವಾಹನ. ಜನವರಿ 24ರಂದು: ಆಳಂದ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ 14 ವಾಹನಗಳು, ಸೇಡಂ ವಲಯದ ಅಬಕಾರಿ ನಿರೀಕ್ಷಕರ ಕಚೇರಿ: 13 ವಾಹನಗಳು ಹಾಗೂ ಜನವರಿ 25ರಂದು: ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ 3 ವಾಹನಗಳು ಹರಾಜಕ್ಕಿದೆ. ವಾಹನದ ಮಾದರಿ, ಷರತ್ತು ಮತ್ತು ನಿಬಂಧನೆಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಾಹನವಿರುವ ಆಯಾ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.

ಹೈಕೋರ್ಟ್ ಪೀಠದಲ್ಲಿ ಧ್ವಜಾರೋಹಣ ಕಾರ್ಯಕ್ರಮ
*********************************************
ಕಲಬುರಗಿ,ಜ.20.(ಕ.ವಾ.)-ಕಲಬುರಗಿ ಹೊರವಲಯದ ಹೈಕೋರ್ಟ ಪೀಠದಲ್ಲಿ ಭಾರತದ 68ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು 2018ರ ಜನವರಿ 26ರಂದು ಬೆಳಗಿನ 9.30 ಗಂಟೆಗೆ ಜರುಗಲಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ತಿಳಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠದ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಧ್ವಜಾರೋಹಣ ನೆರವೇರಿಸುವರು. ಈ ಪೀಠದ ಇತರ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಕಲಬುರಗಿ ವಕೀಲರ ಸಂಘದ ಸದಸ್ಯರು, ಸರ್ಕಾರಿ ನ್ಯಾಯವಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಂಡು ಶಿಶುವಿನ ಪೋಷಕರ ಪತ್ತೆಗೆ ಮನವಿ
**************************************
ಕಲಬುರಗಿ,ಜ.20.(ಕ.ವಾ.)-ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿಂದನೂರ ರಾಜನಕೊಳ್ಳೂರ ಸೀಮಾಂತರದ ರಾಜನಕೊಳ್ಳೂರ ಗುಳಬಾಳ ಏತನೀರಾವರಿ ಕಾಲುವೆ ಪಕ್ಕದಲ್ಲಿರುವ ಮುದಕಪ್ಪಗೌಡ ಹಳ್ಳಿಕೋಟೆ ಹೊಲದ ಹತ್ತಿರದ ರಸ್ತೆಯ ಮೇಲೆ 2017ರ ಡಿಸೆಂಬರ್ 28ರಂದು ಪತ್ತೆಯಾದ ಒಂದು ದಿವಸದ ಗಂಡು ಶಿಶುವನ್ನು ಯಾದಗಿರಿಯ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಿಬ್ಬಂದಿಯಿಂದ ವರ್ಗಾವಣೆ ಬಂದಿದ್ದು, ಈ ಗಂಡು ಶಿಶುವನ್ನು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ 2018ರ ಜನವರಿ 4ರಂದು ದಾಖಲಿಸಲಾಗಿದೆ. ಬಿಳುಪು ಬಣ್ಣ ಹೊಂದಿರುವ ಈ ಗಂಡು ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಕಲಬುರಗಿ ಅಮೂಲ್ಯ (ಜಿ) ಶಿಶು ಗೃಹದ ಅಧೀಕ್ಷಕ ಶ್ರೀಕಾಂತ ಮೇಂಗಜಿ ತಿಳಿಸಿದ್ದಾರೆ.
ಮೇಲ್ಕಂಡ ಗಂಡು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ.08472-265588, ಮೊಬೈಲ್ ಸಂಖ್ಯೆ 9449728576ನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.

ಜನವರಿ 21ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಜ.21.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದ 11ಕೆ.ವಿ. ಪೊಲೀಸ್ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ಹೆಚ್.ಟಿ. ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯಕೈಗೊಳ್ಳುವ ಪ್ರಯುಕ್ತ ಜನವರಿ 21ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ ಪೊಲೀಸ್ ಕಾಲೋನಿ: ಪೊಲೀಸ್ ಕಾಲೋನಿ, ಪೊಲೀಸ್ ಭವನ, ಏಶಿಯನ್ ಮಾಲ್, ಹಳೆಯ ಎಸ್.ಪಿ. ಕಚೇರಿ, ಕುವೆಂಪು ನಗರ, ಬ್ಯಾಂಕ್ ಕಾಲೋನಿ, ಜಗತ್ ಏರಿಯಾ, ಪ್ರಶಾಂತ ನಗರ ಬಿ, ಹಳೆಯ ಆರ್.ಟಿ.ಓ. ಕಚೇರಿ ಯಿಂದ ರಾಜಾಪೂರ ರಿಂಗ್ ರೋಡ್, ಶಕ್ತಿ ನಗರ ರಾಜಾಪುರ, ನಾಯ್ಡು ಲೇಔಟ್, ಪಿ.ಡಬ್ಲ್ಯೂ.ಡಿ.ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜನವರಿ 22ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
**************************************************
ಕಲಬುರಗಿ,ಜ.21.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹರಾ ಸೇವಾ ಸಂಸ್ಥೆ ಹಾಗೂ ರಹೆನುಮಾ ಕಾನೂನು ಕೇಂದ್ರ ಮತ್ತು ಸರ್ಕಾರಿ ಉರ್ದು ಸಂಯುಕ್ತ ಪ್ರೌಢಶಾಲೆ ಖಾಜಾ ಕಾಲೋನಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜನವರಿ 22ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಖಾಜಾ ಕಾಲೋನಿಯ ಉರ್ದು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸರ್ಕಾರಿ ಉರ್ದು ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ಪ್ರಕಾಶ ಅಧ್ಯಕ್ಷತೆ ವಹಿಸುವರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಮುಧೋಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಲಬುರಗಿ ಸಹರಾ ಸೇವಾ ಸಂಸ್ಥೆಯ ನಿರ್ದೇಶಕ ಮಸ್ತಾನ್ ಬಿರಾದಾರ ಅವರು ಮಕ್ಕಳ ಹಕ್ಕು ಬಗ್ಗೆ ಕುರಿತು ಹಾಗೂ ನ್ಯಾಯವಾದಿ ಎನ್.ಎನ್. ಜಹಾಗಿರದಾರ ಅವರು ಮಹಿಳೆಯರ ಹಕ್ಕುಗಳ ಕುರಿತು ಮಾತನಾಡುವರು.

No comments:

Post a Comment