GULBARGA VARTHE

GULBARGA VARTHE

Saturday, 20 January 2018

2ND ROUND 20-1-2018

ಕನ್ನಡ ಭಾಷೆಗೆ ವಚನ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳು
****************************************************
ಕಲಬುರಗಿ,ಜ.20.(ಕ.ವಾ.)-ಜಗತ್ತಿಗೆ ಬೆರುಗುಗೊಳಿಸುವ ಕನ್ನಡ ಭಾಷೆಯಲ್ಲಿರುವ ವಚನ ಸಾಹಿತ್ಯ ಹಾಗೂ ಈ ಭಾಗದ ದಾಸ ಸಾಹಿತ್ಯ ಜೀವನದಲ್ಲಿ ಬದಲಾವಣೆ ತರುವಲ್ಲಿ ಅಪಾರ ಕೊಡುಗೆ ನೀಡಿದೆ. ಹಾಗಾಗಿ ಕನ್ನಡ ಭಾಷೆಗೆ ವಚನ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಶನಿವಾರ ಚಿಂಚೋಳಿಯ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಕಲಬುರಗಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಯನ್ನು ಮಾಡಲು ಅನುಭವ ಮಂಟಪದಲ್ಲಿ ಕುಲಕೊಬ್ಬ ಶರಣರನ್ನು ಹೊರತಂದು ವಚನ ಸಾಹಿತ್ಯ ರೂಪಿಸಿದರು. ಇದು ಕನ್ನಡದಲ್ಲಿರುವುದು ವಿಶೇಷವಾಗಿದೆ. ಕನ್ನಡ ಭಾಷೆ ಶ್ರೀಮಂತಿಕೆಯಿಂದ ಕೂಡಿದೆ. ಮನುಷ್ಯನ ವಿಕಾಸಕ್ಕೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಜನರನ್ನು ಪ್ರಜ್ಞಾವಂತರನ್ನಾಗಿಸಲು ದೊಡ್ಡ ಕೊಡುಗೆ ನೀಡಿದೆ. ಕನ್ನಡ ಭಾಷೆಯ ಬೆಳವಣಿಗೆ ಹೈ.ಕ. ಭಾಗ ಅಪಾರ ಕೊಡುಗೆ ನೀಡಿದ್ದು, ಕನ್ನಡದ ಪ್ರಥಮ ಕೃತಿ ಕವಿರಾಜ ಮಾರ್ಗ ಮಳಖೇಡದಲ್ಲಿ ರಚಿತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಯುವ ಜನಾಂಗ ಅನ್ಯ ಭಾಷೆಗಳಿಗೆ ಆಕರ್ಷಿತರಾಗದೇ ಮಾತೃ ಭಾಷೆ ಕನ್ನಡವನ್ನು ಬಳಸಿ, ಉಳಿಸಿ, ಬೆಳೆಸಬೇಕು. ತಾಯಿ ಪ್ರೀತಿ ಹಾಗೂ ಮಾತೃ ಭಾಷೆಗಿಂತ ಮಿಗಿಲಾಗಿದ್ದು ಯಾವುದು ಇಲ್ಲ. ಕಾರಣ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಪ್ಪಟ ಕನ್ನಡ ಪ್ರೇಮಿಯಾಗಿದ್ದು, ರಾಜ್ಯದಲ್ಲಿ ಕನ್ನಡವನ್ನು ಬೆಳೆಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಚಿಂಚೋಳಿ ಹಾಗೂ ಸೇಡಂ ಗಡಿ ಭಾಗಗಳಲ್ಲಿ ಬೇರೆ ಭಾಷೆ ಪ್ರಭಾವ ಈ ಹಿಂದೆ ಹೆಚ್ಚಿಗಿತ್ತು. ಗಡಿಭಾಗದ ಎಲ್ಲ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ಮೂಲಕ ಮಕ್ಕಳಲ್ಲಿ ಕನ್ನಡ ಅಭಿಮಾನ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವಾಗತ ಸಮಿತಿ ಅಧ್ಯಕ್ಷರಾದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, ಕನ್ನಡದ ಜಲ, ನೆಲ ಬಳಸುವ ಎಲ್ಲರೂ ಕನ್ನಡಾಭಿಮಾನ ಹೊಂದಬೇಕು. ಕನ್ನಡ ಭಾಷೆ ಗ್ರಂತಸ್ಥವಾಗದೇ ಹೃದಯಭಾಷೆ ಆಗಬೇಕು. ಮಮ್ಮಿ ಡ್ಯಾಡಿ ಎಂಬ ಸಂಸ್ಕøತಿ ತೊಲಗಿ ಕನ್ನಡದ ಅಪ್ಪಾ ಅಮ್ಮ ಎಂದು ಮಕ್ಕಳು ಕರೆಯುವಂತಾಗಬೇಕು. ಕನ್ನಡ ಭಾಷೆಯು 2500 ವರ್ಷಗಳ ಪುರಾತನ ಚರಿತ್ರೆಯನ್ನು ಹೊಂದಿದೆ ಹಾಗೂ ಸ್ವತಂತ್ರ ಲಿಪಿ ಹೊಂದಿದೆ. ವಿನೋಬಾ ಭಾವೆ ಅವರು ಕನ್ನಡ ಲಿಪಿಯು ವಿಶ್ವ ಲಿಪಿಗಳ ರಾಣಿ ಎಂದು ಬಣ್ಣಿಸಿದ್ದಾರೆ. ಎಲ್ಲರೂ ಕನ್ನಡವನ್ನು ಉಸಿರನ್ನಾಗಿಸಿ ಬೆಳೆಸಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಡಾ. ವೀರಣ್ಣ ದಂಡೆ ಮಾತನಾಡಿ, 12ನೇ ಶತಮಾನದ ನಂತರ ಈ ಭಾಗದಲ್ಲಿ ಕನ್ನಡ ಭಾಷೆಗೆ ಕುತ್ತು ಬಂದುದರಿಂದ ಲಿಖಿತ ಮೂಲದ ಕನ್ನಡ ಕಾವ್ಯಗಳು ಹುಟ್ಟಲು ಒಂದಿಷ್ಟು ಅಡೆತಡೆಗಳು ಉಂಟಾದವೆಂದು ತೋರುತ್ತದೆ. ಕ್ರಿ.ಶ. 1200 ರಿಂದ 1450 ರವರೆಗೆ ಅಂದರೆ ಸುಮಾರು 250 ವರ್ಷಗಳ ಒಟ್ಟು ಹೈದ್ರಾಬಾದ್ ಕರ್ನಾಟಕದಲ್ಲಿ ಹುಟ್ಟಿರಬಹುದಾದ ಲಿಖಿತ ಮೂಲದ ಕಾವ್ಯಗಳು ನಮ್ಮ ಕೈಗೆ ಸಿಕ್ಕಿಲ್ಲ. ಆದರೆ ಕ್ರಿ.ಶ. 1450ರ ನಂತರ ಕಲಬುರಗಿ ಜಿಲ್ಲೆಯಲ್ಲಿ ಲಿಖಿತ ಮೂಲಕ ಕಾವ್ಯಗಳ ಸೃಷ್ಟಿಯ ಒಂದು ಧಾರೆ ನಿರಂತರವಾಗಿ ಹರಿದು ಬಂದಿರುವುದು ಈಗ ನಮ್ಮ ಕೈಗೆ ಸಿಗುವಂತಾಗಿದೆ ಎಂದರು.
15ನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯ ಮತ್ತೆ ಸಾವಕಾಶವಾಗಿ ಸೃಷ್ಟಿಯಾಗುತ್ತ ಹೋಗಿರುವ ಗುರುತುಗಳು ನಮಗೆ ಕೊಡೇಕಲ್ಲ ಸಂಪ್ರದಾಯದಿಂದ ದೊರೆಯಲು ಪ್ರಾರಂಭವಾಗುತ್ತದೆ. 12ನೇ ಶತಮಾನದ ಶರಣರು ವಚನಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಮಾಡಿಕೊಂಡಂತೆ, ಕೊಡೇಕಲ್ಲ ಸಂಪ್ರದಾಯದ ಶರಣರು ಸ್ವರ ವಚನಗಳನ್ನು ತಮ್ಮ ಅಧಿಕೃತ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡರು. ಕೊಡೇಕಲ್ಲ ಬಸವಣ್ಣನವರ ಮಗ ರಾಚಪ್ಪಯ್ಯನವರು ಸ್ವರ ವಚನಗಳ ಜೊತೆಗೆ ಕೆಲವು ಲಘು ಕಾವ್ಯಗಳನ್ನೂ ಬರೆದಿದ್ದು, ಅವು ನಮಗೆ ಇಂದು ಲಭ್ಯವಾಗುತ್ತಿವೆ ಎಂದರು.
ತಮಗೆ ಲಭ್ಯವಾಗುತ್ತಿರುವವು ಹೆಚ್ಚಿನವು ಪುರಾಣ ಕಾವ್ಯಗಳು, ವಿಶೇಷವಾಗಿ ಸ್ಥಳೀಯ ಶರಣರ ಬಗೆಗೆ, ಮಹಾತ್ಮರ ಬಗೆಗೆ ಬರೆದ ಕಾವ್ಯಗಳಾಗಿವೆ. ಹೆಚ್ಚಾಗಿ ಭಾಮಿನಿ ಮತ್ತು ವಾರ್ಧಕ ಷಟ್ಪದಿಗಳನ್ನು ಬಳಸಿದ್ದಾರೆ. ಜೊತೆಗೆ ತ್ರಿಪದಿ, ಸಾಂಗತ್ಯ, ಛಂದೋವತಂಸ, ಚೌಪದನ, ಹಾಡಲು ಬರುವ ಕೋಲುಪದಗಳು, ಜೋಗುಳ ಪದಗಳು, ಡಂಗುರ ಪದÀಗಳು ಮುಂತಾದ ದೇಸಿ ಛಂದೋಪ್ರಕಾರಗಳನ್ನು ಬಳಸಿ ಹಾಡುಗಳನ್ನು ಕಾವ್ಯಗಳನ್ನು ಬರೆದಿದ್ದಾರೆ.
ಇಂತಹ ಕಾವ್ಯಗಳು ನಮಗೆ 1450-1950ರ ವರೆಗೆ ಅಂದರೆ ಸುಮಾರು 500 ವರ್ಷಗಳ ಅವಧಿಯಲ್ಲಿ ಸೃಷ್ಟಿಗೊಂಡಿವೆ. ಇವುಗಳನ್ನು ಶೋಧಿಸಿ ಅಧ್ಯಯನ ಮಾಡಿದರೆ ಸ್ಥಳೀಯ ಚರಿತ್ರೆಯೊಂದು ನಮಗೆ ದೊರೆಯುವ ಸಾಧ್ಯತೆ ಇದೆ. ಕೊಡೇಕಲ್ಲ ರಾಚಪ್ಪಯ್ಯ, ಕೊಡೇಕಲ್ ವೀರಸಂಗಪ್ಪಯ್ಯ, ಅಂಬಲಗೆಯ ಚೆನ್ನಮಲ್ಲ ಕವಿ, ಗುಂಡ ಬಸವೇಶ್ವರ ಚರಿತ್ರೆ, ಅಷ್ಟಾವರಣ ತಿಲಕ, ಜೇರಟಗಿ ಸಿದ್ಧಲಿಂಗ ಕವಿ, ಐನೂಲಿ ಕರಿಬಸವಾರ್ಯರು, ಪಾಳಾ ರೇವಣಸಿದ್ದ ಕವಿ, ರಸ್ತಾಪುರ ಭೀಮ ಕವಿ, ಮಹಾಗಾಂವ ಗುರುಲಿಂಗಸಿದ್ದ ಕವಿ, ಶ್ರೀ ಕರಿ ಬಸವೇಶ್ವರ ಶಿವಾಚಾರ್ಯರ ಸಂಗ್ರಹ ದೊರೆಯುತ್ತಿವೆ ಎಂದರು.
ಒಂದು ಭಾಷೆ ಸಾಹಿತ್ಯವನ್ನು ಗಮನಿಸುವಾಗ ಆಯಾ ಸಾಹಿತ್ಯದ ಎರಡು ಧಾರೆಗಳನ್ನು ಗಮನಿಸಬೇಕು. ಒಂದು ಮೌಖಿಕ ಧಾರೆ, ಇನ್ನೊಂದು ಲಿಖಿತ ಧಾರೆ, ಶಿಕ್ಷಣದ ಅನುಕೂಲತೆಗಳು ದೊರೆಯುವಲ್ಲಿ ಲಿಖಿತ ಧಾರೆಯ ಸಾಹಿತ್ಯ ನಿರಂತರವಾಗಿ ಹುಟ್ಟುತ್ತದೆ. 12ನೇ ಶತಮಾನದ ನಂತರ ಹೊರಗಿನ ಆಡಳಿತಗಾರರಿಗೆ ಈ ನಾಡು ತುತ್ತಾಗಿ, ನಮ್ಮಲ್ಲಿ ಲಿಖಿತ ಮೂಲದ ಸಾಹಿತ್ಯ ಧಾರೆ ಒಂದಿಷ್ಟು ಕಡಿಮೆಯಾಯಿತೆಂದು ತೋರುತ್ತದೆ. ಆದರೆ ಮೌಖಿಕ ಮೂಲದ ಸಾಹಿತ್ಯ ಅಂದರೆ ಜನಪದ ಸಾಹಿತ್ಯದ ಹುಟ್ಟಿಗೆ ಅಡ್ಡಿಯೇನೂ ಆಗಲಿಲ್ಲ.
ಇತ್ತೀಚೆಗೆ ತತ್ವಪದಕಾರರನ್ನು, ಅವರ ರಚನೆಗಳನ್ನು ಮತ್ತು ಮೌಖಿಕ ಪರಂಪರೆಯಲ್ಲಿ ದೊರೆತಿರುವ ದೀರ್ಘ ಕಾವ್ಯಗಳನ್ನು ಮಹತ್ವದ ಕಾವ್ಯಗಳೆಂದು ಕನ್ನಡದ ವಿದ್ವಾಂಸರು ಪರಿಗಣಿಸಿದ್ದಾರೆ. ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ತತ್ವ ಪದಗಳಿಗೆ, ಜನಪದ ಮಹಾಕಾವ್ಯಗಳಿಗೆ ಮನ್ನಣೆ ದೊರೆತಂತಾಗಿದೆ. ಅವೆಲ್ಲ ಮೌಖಿಕ ಸಾಹಿತ್ಯ ಪ್ರಕಾರಗಳಾಗಿಯೇ ಸೃಷ್ಟಿಗೊಂಡವುಗಳು.
12ನೇ ಶತಮಾನದ ಶರಣರೇ ಸ್ವರವಚನಗಳನ್ನು ಬರೆದಿದ್ದಾರೆ. ಅಲ್ಲಿಂದ ಪ್ರಾರಂಭವಾಗುವ ತತ್ವ ಪದಗಳು/ ಸ್ವರ ವಚನಗಳ ಪರಂಪರೆ ಈ ನಾಡಿಯಲ್ಲಿ (ಅವಿಭಾಜಿತ ಕಲಬುರಗಿ ಜಿಲ್ಲೆಯಲ್ಲಿ) ಆಯಾ ಕಾಲಕ್ಕೆ ವಿಶೇಷವಾಗಿ ಬೆಳೆದುಕೊಂಡು ಬಂದುದನ್ನು ಕಾಣುತ್ತೇವೆ. ಕೊಡೇಕಲ್ಲ ಸಂಪ್ರದಾಯದ ಸ್ವರ ವಚನಕಾರರಿಂದ ಪ್ರಾರಂಭಿಸಿ ಜಂಬಗಿ ಶರಣವರೆಗೆ, ಅಂದರೆ ಪುರಾಣ ಕಾವ್ಯಗಳು ಸೃಷ್ಟಿಯಾದ 1450-1950ರವರೆಗೆ 500 ವರ್ಷಗಳ ಅವಧಿಯಲ್ಲಿ ನೂರಾರು ಜನ ತತ್ವಪದಕಾರರು, ಸಾವಿರಾದು ಸ್ವರವಚನಗಳು ಈ ಭಾಗದಲ್ಲಿ ನಿರಂತರವಾಗಿ ಸೃಷ್ಟಿಯಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಹೀಗೆ ಸೃಷ್ಟಿಗೊಂಡ ತತ್ವಪದಗಳ ಪರಂಪರೆಯಲ್ಲಿ ನಾವು ಗಣಿಸಲೇ ಬೇಕಾದಂತಹ ಕನಿಷ್ಠ 50 ಜನ ಶ್ರೇಷ್ಠ ತತ್ವಪದಕಾರರು ನಮಗೆ ದೊರೆಯುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು.
ಚಿಂಚೋಳಿ ಶಾಸಕರು ಹಾಗೂ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ್ ಜಾಧವ, ಬೀದರ ಸಂಸದ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಭದ್ರ ಸಿಂಪಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿದ್ರಾಮ ಪೊಲೀಸ್ ಪಾಟೀಲ, ಚಿಂಚೋಳಿ ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಉಪಾಧ್ಯಕ್ಷೆ ಫರ್ಜಾನಾ ಬೇಗಂ ಸೌಧಾಗರ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ, ವಿಲಾಸವತಿ ಖೂಬಾ, ಚಿಂಚೋಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪಲಾಮೂರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಬಿಸಿಲ ನಾಡಿನ ಹಸಿರು ಶೀರ್ಷಿಕೆಯ ಸ್ಮರಣ ಸಂಚಿಕೆ, ಉಮಾಚಲ ಕಾವ್ಯ ಕವನ ಸಂಕಲನ, ಗುಡ್ಡದ ಮೈಲಾರಲಿಂಗ ವಚನ ಸಂಕಲನ ಹಾಗೂ ಜಿಲ್ಲಾ ನೌಕರರ ಸಂಘವು ರಚಿಸಿರುವ ಹೊಸ ವರ್ಷದ ಕ್ಯಾಲಿಂಡರ್ ಅನಾವರಣಗೊಳಿಸಲಾಯಿತು. ಇದಕ್ಕೂ ಮುನ್ನ ವಿವಿಧ ಸಾಂಸ್ಕøತಿಕ ಕಲಾ ತಂಡಗಳ ಹಾಗೂ ಕನ್ನಡ ಅಭಿಮಾನಿಗಳನ್ನೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಬಸ್‍ನಿಲ್ದಾಣ, ಬಸವೇಶ್ವರ ಚೌಕ್ ಮಾರ್ಗವಾಗಿ ಚಂದಾಪುರದ ಸಮ್ಮೇಳನದ ವೇದಿಕೆಗೆ ಆಗಮಿಸಿತು.

ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಲು ಸಲಹೆ
**************************************************
ಕಲಬುರಗಿ,ಜ.20.(ಕ.ವಾ.)-ಚುನಾವಣೆ ಎಂದರೆ ಕೇವಲ ಮತದಾನದ ದಿನ ಅಥವಾ ಮತದಾನ ಮಾಡುವುದು ಎಂದು ಭಾವಿಸುವುದು ತಪ್ಪು. ಮತದಾನ ನಾಗರಿಕರ ಪ್ರಮುಖ ಹಕ್ಕಾಗಿದ್ದು, ತಮ್ಮ ಹಕ್ಕನ್ನು ಚುನಾವಣೆಗೆ ಅಭ್ಯರ್ಥಿಯಾಗುವುದರ ಮೂಲಕ ಅಥವಾ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಜಾಯಿಯಲ್ಲಿದ್ದು, 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಗಳು ತಮ್ಮ ಹೆಸರು ನೋಂದಾಯಿಸಬಹುದಾಗಿದೆ ಹಾಗೂ ಇದರಲ್ಲಿ ವಿಶೇಷವಾಗಿ ಯುವಕರ ಹಾಗೂ ಭಾವಿ ಮತದಾರರಾಗುವ ವಿಧ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ತಮ್ಮ ಕುಂಟುಂಬದ ಸದಸ್ಯರಿಗೆ ಹಾಗೂ ಅನಕ್ಷರಸ್ಥ ಮತದಾರರಿಗೆ ತಿಳುವಳಿಕೆ ನೀಡುವುದರ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸಬೇಕಾಗಿದೆ ಎಂದರು.
ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಪ್ರಜ್ಞಾವಂತ ಮತದಾರ ಇರಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಅನೇಕ ಆಶೆ-ಆಮಿಷಗಳು ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು ಜಾತಿ, ಧರ್ಮ, ಪ್ರಾದೇಶಿಕತೆ, ಜನಾಂಗ, ಭಾಷೆ, ಹಣ ಹಾಗೂ ಇತರೆ ಅಂಶಗಳು ಇಂದು ಪ್ರಭಾವ ಬೀರುತ್ತಿವೆ. ಇದರಿಂದ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಇಂದು ಮತದಾರರು ಸೋಲುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿ, ಮತದಾರರ ಆಶಯಗಳನ್ನು ಪ್ರತಿಬಿಂಬಿಸುವವರಿಗೆ ಮತ ಚಲಾಯಿಸುವುದು ಇಂದು ಜರೂರಾಗಿದೆ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿಯು ಮತದಾರರಿಗೆ ಚುನಾವಣಾ ಶಿಕ್ಷಣ ನೀಡುವುದರ ಉದ್ದೇಶದಿಂದ ಜಿಲ್ಲೆಯಾದ್ಯಾಂತ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಲ್ಲಿ ಜಿಲ್ಲೆಯಲ್ಲಿರುವ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಮಹಾ ವಿದ್ಯಾಲಯಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳ ಹಂತದಿಂದ ಜಿಲ್ಲಾ ಹಂತದವರೆಗೆ ನಡೆಸಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಗುರಿಹೊಂದಲಾಗಿದೆ. ಸದರಿ ಚುನಾವಣೆಯಲ್ಲಿ ಇ.ಗಿ.ಒ ಮತಯಂತ್ರ ಬಳಕೆಯಾಗುತ್ತಿದ್ದು, ಮತದಾರರು ತಮ್ಮ ಮತ ಚಲಾಯಿಸಿದ್ದಕ್ಕೆ ಖಾತ್ರಿಯಾಗಿಸುವ ಹಿನ್ನೆಲೆಯಲ್ಲಿ ಗಿ.ಗಿ.Pಂಖಿ ಎಂಬ ಯಂತ್ರ ಹೆಚ್ಚುವರಿಯಾಗಿ ಉಪಯೋಗಿಸಲಾಗುತ್ತಿದೆ ಎಂದು ಬಾನುಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮತದಾನದ ಕುರಿತು ಪತಿಜ್ಞಾ ವಿಧಿ ಬೋಧಿಸಿದರು. ಏಕ ಕಾಲಕ್ಕೆ ಜಿಲ್ಲೆಯ 50,000 ಐವತ್ತು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಮತು ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ಅದನ್ನು ಅನುಸರಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಪಾಟೀಲ ಹಾಗೂ ರೇಡಿಯೋ ಸ್ಟೇಷನನ ಎಲ್ಲಾ ಅಧಿಕಾರಿ, ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಜೂನಿಯರ್ ಇಂಜಿನಿಯರ್ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
*********************************************************************
ಕಲಬುರಗಿ,ಜ.20.(ಕ.ವಾ.)-ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ನಡೆಸಲಾಗುತ್ತಿರುವ ಜೂನಿಯರ್ ಇಂಜಿನೀಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರೀಕಲ್, ಕಾಂಟಿಟಿ ಸರ್ವೇಯಿಂಗ್ ಆಂಡ್ ಕಾಂಟ್ರ್ಯಾಕ್ಟ್) ಪರೀಕ್ಷೆಗಳು ಜನವರಿ 22ರಿಂದ 25ರ ವರೆಗೆ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿನ ಶ್ರೀ ಸಾಯಿ ಕಂಪ್ಯೂಟರ್ಸ್ ಕೇಂದ್ರದಲ್ಲಿ ಬೆಳಿಗ್ಗೆ 8.30 ರಿಂದ ಸಾಯಂಕಾಲ 5.15 ಗಂಟೆಯವರೆಗೆ ಜರುಗಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಕಲಬುರಗಿ ತಹಶೀಲ್ದಾರ್ ಅಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಚಿಕ್ಕ ಗಾತ್ರದ ಪುಸ್ತಕಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.

No comments:

Post a Comment