GULBARGA VARTHE

GULBARGA VARTHE

Wednesday, 6 December 2017

News and photo Date: 06--12--2017

ಡಿ. 7ರಂದು ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ
******************************************************************
ಉದ್ಘಾಟನೆ
************
ಕಲಬುರಗಿ,ಡಿ.06.(ಕ.ವಾ.)-ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಮೈಸೂರಿನ ಸುಪ್ರಸಿದ್ದ ಪಾರಂಪರಿಕ ಉತ್ಪನ್ನವಾದ ಕೆಎಸ್‍ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು 2017ರ ಡಿಸೆಂಬರ್ 7 ರಿಂದ 10ರವರೆಗೆ ಪ್ರತಿದಿನ ಬೆಳ್ಳಿಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಕಲಬುರಗಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಶೀ ಬಾಪೂಗೌಡ ದರ್ಶನಾಪುರ ರಂಗಮಂದಿರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಡಿಸೆಂಬರ್ 7 ರಂದು ಬೆಳ್ಳಿಗೆ 11 ಗಂಟೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸುವರು. ಈ ಪ್ರದರ್ಶನದಲ್ಲಿ ಸಾಂಪ್ರಾದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ ಕೆ.ಎಸ್.ಐ.ಸಿ ಯು ನಾಜೂಕಾದ ವಿನ್ಯಾಸ ಸಂಗ್ರಹಿತ “ ಕ್ರೇಪ್ ಡಿ ಚೈನ್” ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳು, ಟೈ, ಸ್ಕಾರ್ಪ್ ಇತ್ಯಾದಿ ಉತ್ಪನ್ನಗಳ ಈ ಪ್ರದರ್ಶದಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದಲ್ಲದೆ ನವನವೀನ “ ವಿವಾಹ” ಸಂಗ್ರಹ” ಸೀರೆಗಳನ್ನು ಪರಿಚಯಿಸಲಾಗುತ್ತಿದ್ದು, ಕೆ.ಎಸ್.ಐ.ಸಿ. ಯು ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಶೇಕಡಾ 20ರಷ್ಟು ವಿಶೇಷ ರಿಯಾಯತಿ ನೀಡುತ್ತಿದೆ. ಸಾರ್ವಜನಿಕರು ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನದ ಮತ್ತು ಮಾರಾಟ ಮೇಳದ ಸದುಪಯೋಗ ಪಡೆದುಕೊಳ್ಳಬೇ ಕೆಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ 8ರಂದು ನರೋಣಾ ಗ್ರಾಮದಲ್ಲಿ ಗಿರಿಜನ ಉತ್ಸವ
****************************************************
ಕಲಬುರಗಿ,ಡಿ.06.(ಕ.ವಾ.)- ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ “ಗಿರಿಜನ ಉತ್ಸವ”ವನ್ನು ಡಿಸೆಂಬರ್ 08ರಂದು ಶುಕ್ರವಾರ ಸಂಜೆ 6 ಗಂಟೆಗೆ ಆಳಂದ ತಾಲೂಕಿನ ನರೋಣಾ ಗ್ರಾಮದ ಹನುಮಾನ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಗಿರಿಜನ ಉತ್ಸವವನ್ನು ಉದ್ಘಾಟಿಸುವರು. ಗ್ರಾಮೀಣ ಮತ ಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ನರೋಣಾ ಗ್ರಾಮ ಪಂಚಾಯತ ಅಧ್ಯಕ್ಷೆ ಶೈಲಾ ಜಗದೇವಪ್ಪ ವಾಡೆದ್, ನರೋಣ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಜಯಲಕ್ಷ್ಮಿ ಮಾದೇವ ರಾಗಿ, ತಾಲೂಕು ಪಂಚಾಯಿತಿ ಸದಸ್ಯೆ ಮಾಣಿಕಮ್ಮ ಶಿವಯ್ಯ ಗುತ್ತೇದಾರ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಸುನೀಲ ಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಗಿರಿಜನ ಉತ್ಸವ ಅಂಗವಾಗಿ ವಚನ ಗಾಯನ, ತತ್ವಪದ,ಜಾನಪದ ಗಾಯನ, ಸಂಪ್ರದಾಯ ಹಾಡುಗಳು, ಮಹಿಳಾ ಡೊಳ್ಳು ಕುಣಿತ, ನಗಾರಿ ವಾದÀ್ಯ, ಕೀಲು ಕುದುರೆ, ಸುಗ್ಗಿ ಕುಣಿತ, ಲಂಬಾಣಿ ನೃತ್ಯ, ಗೋರವರ ಕುಣಿತ, ಖಾಸರ ಬೇಡರ ಪಡೆ, ಪೂಜಾ ಕುಣಿತ, ನಂದಿ ಧ್ವಜ, ತತ್ವಪದ ಗಾಯನ, ಸುಗಮ ಸಂಗೀತ, ಜಾನಪದ ಗಾಯನ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಕಲಾವಿದರ ಮೇಲಿದೆ
****************************************************************
ಕಲಬುರಗಿ,ಡಿ.06.(ಕ.ವಾ.)- ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ಕಲಾವಿದರ ಮೇಲಿದೆ ಎಂದು ಕಲಬುರಗಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಅಂಬಾರಾಯ ರುದ್ರವಾಡಿ ಹೇಳಿದರು.
ಬುಧವಾರ ಇಲ್ಲಿನ ಡಾ.ಎಸ್.ಎಂ,ಪಂಡಿತ ರಂಗಮಂದಿರದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ಮೂರು ದಿನಗಳ ಕಲಬುರಗಿ ವಿಭಾಗ ಮಟ್ಟದ ಜನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ರೋಗ ಬಂದ ನಂತರ ಔಷಧಿ, ಚಿಕಿತ್ಸೆ ನೀಡುತ್ತಾರೆ ಆದರೆ ರೋಗ ಬರದಂತೆ ಮುಂಜಾಗ್ರತಾ ಶಿಕ್ಷಣ ನೀಡುವರು ಕಲಾವಿದರು. ಹಲವು ರೋಗಗಳಿಗೆ ಔಷಧವಿಲ್ಲ. ರೋಗ ಬಾರದಂತೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲು ಸರ್ಕಾರದ ಕಲಾವಿದರ ಸೇವೆ ಪಡೆಯುತ್ತಿದೆ. ಹೀಗಾಗಿ ಕಲಾವಿದರು ಕೇವಲ ಮಾಹಿತಿ ನೀಡುವುದಲ್ಲದೆ ಉತ್ತಮ ನಡುವಳಿಕೆಯಿಂದ ಇತರರಿಗೆ ಮಾದರಿಯಾಗಬೇಕು, ಜನ ನಿಮ್ಮನ್ನ ಅನುಕರಣೆ ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ್, ಮಳಖೇಡ ಜಿಲ್ಲಾ ಪಂಚಾಯತ್ ಸದಸ್ಯ ಕರಿಯಪ್ಪ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಷಣ್ಮುಖ ಸ್ವಾಮಿ, ಕಲಬುರಗಿ ವಿಭಾಗದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ್ ದಿವಟಗಿ, ಸುಭಾಷ ಮುದಾಳ, ಬಿರಾದರ, ಲಕ್ಷ್ಮೀ ಸೇತು, ಶಿವಾನಂದ, ಈಶ್ವರಪ್ಪ ಸೇರಿದಂತೆ ವಿಭಾಗದ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು. ಶಶಿಧರ ಬಳಿ ಸ್ವಾಗತಿಸಿದರೆ ಶಶಿಕಾಂತ ಹೈಯಾಳಕರ ವಂದಿಸಿದರು. ಸೋಮು ರಾಠೋಡ ನಿರೂಪಿಸಿದರು.

ಶಿಕ್ಷಕರ ತರಬೇತಿ ಪಡೆಯದೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ
********************************************************
ಶಿಕ್ಷಕರಿಗೆ ತರಬೇತಿ
******************
ಕಲಬುರಗಿ,ಡಿ.06.(ಕ.ವಾ.)-ಶಿಕ್ಷಕರ ತರಬೇತಿ ಪಡೆಯದೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಆಯ್ದ ಶಿಕ್ಷಕರನ್ನು ಆನ್ ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಮರ್ತುಳೆ ಶಶಿಕಾಂತ ತಿಳಿಸಿದಾರೆ.
ಕಲಬರುಗಿ ಮತ್ತು ಬೀದರ ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಆನ್‍ಲೈನ್‍ನಲ್ಲಿ ಎನ್‍ಐಓಎಸ್ ಕಾರ್ಯಕ್ರಮದ ಮೂಲಕ ತರಬೇತಿ ನೀಡಲು ಕಲಬುರಗಿ ಡಯಟ್ ಪ್ರಾಂಶುಪಾಲರನ್ನು ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಕೋರ್ಸಿಗೆ ಸಂಬಂಧಿಸಿದಂತೆ ಕಮಲಾಪೂರ ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಗ್ರಂಥಾಲಯದಲ್ಲಿ ಅಧ್ಯಯನ ಸಾಮಾಗ್ರಿಗಳನ್ನು ಇಡಲಾಗಿದೆ.
ತರಬೇತಿಗೆ ಆಯ್ಕೆಯಾದ ಶಿಕ್ಷಕರು ಡಿಸೆಂಬರ್ 10 ರಂದು ಕಲಬುರಗಿ ದರ್ಗಾ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ (ಹೆಣ್ಣು) ಯಲ್ಲಿ ಬೆಳಿಗ್ಗೆ 10 ಗಂಟೆಗೆ ತರಬೇತಿಗೆ ಹಾಜರಾತಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 08478-221346 ಗೆ ಸಂಪರ್ಕಿಸಲು ಕೋರಲಾಗಿದೆ.

ಸೇಡಂ: ಅಂಗನವಾಡಿ ಕಾರ್ಯಕರ್ತೆಯರ-
***************************************
ಸಹಾಯಕಿಯರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಡಿ.06.(ಕ.ವಾ.)-ಸೇಡಂ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 04 ಅಂಗನವಾಡಿ ಕಾರ್ಯಕರ್ತೆಯರ ಮತ್ತು 20 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ತಿತಿತಿ.ಚಿಟಿgಚಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಖಾಲಿಯಿರುವ ಹುದ್ದೆಗಳ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ವೆಬ್‍ಸೈಟ್‍ನ್ನು ಅಥವಾ ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಮತ್ತು ದೂರವಾಣಿ ಸಂಖ್ಯೆಗೆ 08441-276136ನ್ನು ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ(ನಗರ): ಅಂಗನವಾಡಿ ಸಹಾಯಕಿಯರ ಹುದ್ದೆಗಳ
***************************************************
ನೇಮಕಾತಿ ಅರ್ಜಿ ಆಹ್ವಾನ
************************
ಕಲಬುರಗಿ,ಡಿ.06.(ಕ.ವಾ.)-ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 36 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ತಿತಿತಿ.ಚಿಟಿgಚಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಂಪರ್ಕಿಸಲು. ಖಾಲಿಯಿರುವ ಹುದ್ದೆಗಳ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ನವೆಂಬರ್ 7ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಡಿ.06.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ಡಿಸೆಂಬರ್ 7ರಂದು ಗುರುವಾರ 11ಕೆ.ವಿ. ಬ್ಯಾಂಕ್ ಕಾಲೋನಿ, 11ಕೆ.ವಿ. ದೂರದರ್ಶನ, 11ಕೆ.ವಿ. ರಾಮಮಂದಿರ, 11ಕೆ.ವಿ. ಉಮರ ಕಾಲೋನಿ ಹಾಗೂ 11ಕೆ.ವಿ. ಎಂ.ಎಸ್.ಕೆ. ಮಿಲ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
11 ಕೆ.ವಿ ಬ್ಯಾಂಕ್ ಕಾಲೋನಿ ಫೀಡರ್: ಗಂಜ್ ಮೊನಪ್ಪಾದಾಲ ಮಿಲ್, ಕಸಾಯಿ ಮಸೀದಿ. ನಬಿ ಹೋಟೆಲ್, ಕಿರಾಣ ಬಜಾರ, ಪುಟಾಣಿಗಲ್ಲಿ, ರಂಗಿನ ಮಸೀದಿ, ಸದರ ಮೊಹಲ್ಲಾ, ಸಿಟಿ ಮಾರ್ಕೆಟ್, ಗಂಜ ಮೇನ್‍ರೋಡ್ ಎಪಿಎಂಸಿ ಯಾರ್ಡ, ಸಂಜೀವ ನಗರ, ಫಿಲ್ಟರ್ ಬೆಡ್ ವಾಟರ್ ಸಪ್ಲೈ ನಗರೇಶ್ವರ ಮಂದಿರ, ಗಡಂಗ ವಿ.ಆರ್ ಎಲ್. ಟಿ.ಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ದೂರದರ್ಶನ ಫೀಡರ್: ಹುಮನಾಬಾದ ಕ್ರಾಸ್, ನೂರಾನಿ ಮೊಹಲಾ, ಹಾಗರಗಾ ಕ್ರಾಸ್, ರಫೀಕ್ ಚೌಕ್, ಶಿವಾಜಿ ನಗರ, ಹಾಲಿನ ಡೇರಿ, ಅರೇಬಿಕ ಸ್ಕೂಲ್, ಇಸ್ಲಾಮಾಬಾದ್, ಮಿಲ್ಲತನಗರ, ಬುಲಂದ್ ಪರ್ವೇಜ್ ಕಾಲೋನಿ, ಖಮರ ಕಾಲೋನಿ, ಭೀಮಳ್ಳಿ ದಾಲ್‍ಮಿಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ರಾಮಮಂದಿರ ಫೀಡರ್: ಸಿ.ಬಿ.ಐ.ಕಾಲೋನಿ, ಸದಾಶಿವ ನಗರ,ನವಜೀವನ ಸೊಸೈಟಿ ,ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರ ನಗರ, ನವಣಿ ಲೇಔಟ್, ಸಂಗಮೇಶ್ವರ ಲೇಔಟ್, ದೇವಾನಗರ, ಓಜಾó ಕಾಲೋನಿ, ವಿವೇಕಾನಂದ ಕಾಲೋನಿ, ಲಕ್ಷ್ಮೀನಾರಾಯಣ ಲೇಔಟ್, ಶಿವ ಶಕ್ತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು
11 ಕೆ.ವಿ ಉಮರ್ ಕಾಲೋನಿ ಫೀಡರ್: ಉಮರ ಕಾಲೋನಿ, ಅಬುಬಕ್ಕರ್ ಕಾಲೋನಿ, ಆಜಾದಪೂರ ರಸ್ತೆ, ಅಹ್ಮದ್ ನಗರ್, ಮಕ್ಕಾ ಕಾಲೋನಿ, ಮಹಾರಾಜಾ ಹೋಟೆಲ್, ವಾಟರ್ ಟ್ಯಾಂಕ್À, ಯಾದ್ದುಲ್ಲಾ ಕಾಲೋನಿ, ಕಮಾಲ ಎ ಮುಜರತ್, ಮಹಬೂಬ ನಗರ, ವೀರಭದ್ರೇಶ್ವರ ದೇವಾಲಯ, ಖಾನ್ ಕಂಪೌಂಡ್, ಟಿಪ್ಪುಸುಲ್ತಾನ ಚೌಕ, ಸನಾ ಹೋಟೆಲ್, ಅಕ್ಬರ್ ಭಾಗ್, ರಾಮಜೀ ನಗರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
11 ಕೆ.ವಿ ಎಂ.ಎಸ್.ಕೆ.ಮಿಲ್: ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮೀಸ್‍ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಣ ಮಿನರಲï್ಸ ,ನ್ಯೂ ರಾಘವೇಂದ್ರ ಕಾಲೋನಿ, ಖಾನ್ ಏರಿಯಾ, ಮಹ್ಮದಿ ಚೌಕ್ , ಕೆ.ಬಿ.ಎನ್. ಹುಸೇನ್ ಕೊಲ್ಡ್‍ಸ್ಟೊರೇಜ್ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.

ಡಿ. 14ರಂದು ಜಿಲ್ಲಾ ಮಟ್ಟದ ಶಿಕ್ಷಕರ ಸಹ ಪಠ್ಯ ಚಟುವಟಿಕೆ ಸ್ಪರ್ಧೆ
*********************************************************
ಕಲಬುರಗಿ,ಡಿ.06.(ಕ.ವಾ.)- ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಕಲಬುರಗಿ ನಗರದ ಐವಾನ್-ಇ-ಶಾಹಿಯ ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢಶಾಲೆಯಲ್ಲಿ ಡಿಸೆಂಬರ್ 14 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಆಯೋಜಿಸಲಾಗಿದೆ.


ತಾಲೂಕು ಮಟ್ಟದ ಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಈ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದಾರೆ.

No comments:

Post a Comment