GULBARGA VARTHE

GULBARGA VARTHE

Friday, 1 December 2017

NEWS AND PHOTO DATE: 01--12--2017

ಸಾಧನೆಯ ಶಿಖರಕ್ಕೆ ಉತ್ತಮ ಆರೋಗ್ಯವೇ ಮೆಟ್ಟಿಲು
ಕಲಬುರಗಿ,ಡಿ.01.(ಕ.ವಾ.)-ಸಾಧನೆಯಂತಹ ಉನ್ನತ ಶಿಖರವನ್ನು ಎರಿ ಗುರಿ ಮುಟ್ಟಬೇಕಾದರೆ ಪತ್ರಿಯೊಬ್ಬರ ಜೀವನದಲ್ಲಿ ಆರೋಗ್ಯವು ಬಹು ಮುಖ್ಯವಾದ ಪಾತ್ರವಹಿಸುತ್ತದೆ. ಅವರವರ ಕಾರ್ಯಕ್ಷಮತೆ ಹಾಗೂ ಆರೋಗ್ಯದ ಮೇಲೆ ಅವಲಂಬಿತ ವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದರು.
ಅವರು ಶುಕ್ರವಾರ ನಗರದ ಸೇಂಟ್ ಮೇರಿ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸ್ಪರ್ಶ ಕೇರ್ ಹೋಂ ಇನ್ಸ್‍ಟಿಟ್ಯೂಟ್, ಸೇಂಟ್ ಮೇರಿ ಶಾಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆ.ಹೆಚ್.ಪಿ.ಟಿ.,  ರೆಡ್ ರಿಬ್ಬನ್ ಕ್ಲಬ್, ಸ್ವಯಂ ಸೇವಾ ಸಂಸ್ಥೆಗಳು, ಎನ್.ಸಿ.ಸಿ.-32 ಬಟಾಲಿಯನ್ ಮತ್ತು ಎನ್.ಎಸ್.ಎಸ್.ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಏಡ್ಸ್ ದಿನಾಚರಣೆಯ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನು ಒತ್ತಡಕ್ಕೆ ಒಳಗಾದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಸ್ಯೆಯ ಸುಳಿವು ಮನುಷ್ಯನ ಆರೋಗ್ಯದ ಮೇಲೆ ಆಗಾದವಾದ ಪರಿಣಾವನ್ನು ಬಿರುತ್ತದೆ. ಆದರಿಂದ ಪ್ರತಿಯೊಬ್ಬರು ಸಮಸ್ಯೆಯ ಮುಕ್ತ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ ಮಾತನಾಡಿ ಕಳೆದ 25 ವರ್ಷಗಳಿಂದ ಸರ್ಕಾರ ನೀಡುತ್ತಿರುವ ಹಲವಾರು ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮದ ಪಲವಾಗಿ ರಾಜ್ಯದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಸಾರ್ವಜನಿಕರಿಗೆ ಏಡ್ಸ್ ರೋಗದ ಕುರಿತಾದ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತ್ರ ಏಡ್ಸ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಎ.ಆರ್.ಟಿ ಕೇಂದ್ರ ನೋಡಲ್ ಅಧಿಕಾರಿ ಡಾ.ದೇಂದ್ರಪ್ಪಾ ಮೈನಾಳ ಮಾತನಾಡಿ ವೈರಸ್‍ನಿಂದ ಹರಡುವ ಭಯಂಕರವಾದ ರೋಗವೇ ಏಡ್ಸ್. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ತಾಯಿಯಿಂದ ಮಗುವಿಗೆ ಏಡ್ಸ್ ರೋಗ ಹರಡುತ್ತದೆ. ಏಡ್ಸ್ ಪೀಡಿತ ರೋಗಿಯನ್ನು ಸ್ಪರ್ಶಿಸುವುದರಿಂದ, ಊಟ ಮಾಡುವುದರಿಂದ ಏಡ್ಸ್ ರೋಗ ಹರಡುವುದಿಲ್ಲ. ಏಡ್ಸ್ ರೋಗದ ಕುರಿತು ಸಾರ್ವಜನಿಕರಲ್ಲಿ ತುಂಬಾ ತಪ್ಪು ಕಲ್ಪನೆಗಳಿವೆ. ಜನತೆಯಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಏಡ್ಸ್ ರೋಗದ ಕುರಿತು ಅರಿವು ಮೂಡಿಸುತಿದೆ ಎಂದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಭಾಲ್ಕೆ, ಪಾದರ ಬಾಪುಜಿ, ಶರಣಬಸಪ್ಪಾ, ಆಹಾರ ಮತ್ತು ಸಂರಕ್ಷಾಧಿಕಾರಿ ದೀಪಕ ಕೋಸಗಿ ಉಪಸ್ಥಿತರಿದ್ದರು.ಇದಕ್ಕೂ ಮೊದಲು “ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷ್ಯವಾಕ್ಯದ ವಾಕಥಾನ್/ಜಾಥಾ ಕಲಬುರಗಿಯ ಕೋರ್ಟ್ ರಸ್ತೆಯಲ್ಲಿರುವ ಸೇಂಟ್ ಮೇರಿ ಶಾಲೆಯಿಂದ ಆರಂಭಗೊಂಡ ಈ ಜಾಥಾವು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ ಸರ್ಕಲ್, ಗೋವಾ ಹೊಟೇಲ್, ಆನಂದ ಹೊಟೇಲ್ ಮುಖಾಂತರ ಸೇಂಟ್ ಮೇರಿ ಶಾಲೆಗೆ ಬಂದು ಕೊನೆಗೊಂಡಿತು.
ಡಿಸೆಂಬರ್ 7ರಂದು ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಕಲಬುರಗಿ,ಡಿ.01.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ “ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ ರಾಷ್ಟ್ರೀಯ ಸಮ್ಮೇಳವನ್ನು ”ಡಿಸೆಂಬರ್ 7, 8 ಹಾಗೂ 9ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಏರ್ಪಡಿಸಲಾಗಿದೆ.
ಡಿಸೆಂಬರ್ 7ರಂದು ಬೆಳಿಗ್ಗೆ 10.30 ಗಂಟೆಗೆ ಖ್ಯಾತ ಸಾಹಿತಿಗಳು ಹಾಗೂ ಚಿಂತಕ ಡಾ. ಕುಂ. ವೀಭದ್ರಪ್ಪ ಅವರು ಈ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸುವರು. ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಶರಣ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸಾದರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್.ನಿರಂಜನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಸಂಗನಗೌಡ ಪೊಲೀಸ್ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ನಾಗೇಶ ಕೊಳ್ಳಿ, ಕುಲಸಚಿವ ಪ್ರೊ. ಅಸಗರ ದಯಾನಂದ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎಂ. ಮದರಿ, ವಿತ್ತಾಧಿಕಾರಿ ಪ್ರೊ. ಲಕ್ಷ್ಮಣ ರಾಜನಾಳಕರ್ ಗೌರವ ಉಪಸ್ಥಿತರಿರುವರು. ಕನ್ನಡ  ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಂಗದ ನಿರ್ದೇಶಕ ಎಚ್.ಟಿ. ಪೋತೆ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಹಾಗೂ ಶರಣ ಹಡಪದ ಅಪ್ಪಣ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್.ಎಂ. ಹಿರೇಮಠ ಆಶಯ ನುಡಿ ಹೇಳುವರು. ಈ ರಾಷ್ಟ್ರೀಯ ಸಮ್ಮೇಳನ ಅಂಗವಾಗಿ ಡಿಸೆಂಬರ್ 7ರಂದು ಒಂದನೇ ಗೋಷ್ಠಿಯು ಮಧ್ಯಾಹ್ನ 12 ರಿಂದ ಮಧ್ಯಾಹ್ನ 1.30 ಗಂಟೆವರೆಗೆ, ಎರಡನೇ ಗೋಷ್ಠಿಯು ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಹಾಗೂ ಮೂರನೇ ಗೋಷ್ಠಿಯು ಮಧ್ಯಾಹ್ನ 3.30 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ. ಇದೇ  ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಡಿಸೆಂಬರ್ 8ರಂದು ಬೆಳಿಗ್ಗೆ 10ರಿಂದ ಬೆಳಿಗ್ಗೆ 11.30 ಗಂಟೆಯವರೆಗೆ ನಾಲ್ಕನೇ ಗೋಷ್ಠಿ, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 10.30 ಗಂಟೆಯವರೆಗೆ ಐದನೇ ಗೋಷ್ಠಿ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಆರನೇ ಗೋಷ್ಠಿ, ಸಂಜೆ 4 ರಿಂದ 5.30 ಗಂಟೆಯವರೆಗೆ ಏಳನೇ ಗೋಷ್ಠಿ ಜರುಗಲಿದೆ. ನಂತರ ಸವಿತಾ ನುಗಡೋಣಿ ಅವರಿಂದ ವಚನ ಮತ್ತು ಗೀತ ಗಾಯನ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಡಿಸೆಂಬರ್ 9ರಂದು ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಎಂಟನೇ ಗೋಷ್ಠಿ ಹಾಗೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಒಂಭತ್ತನೇ ಗೋಷ್ಠಿ ಜರುಗಲಿದೆ. ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹತ್ತನೇಯ ಗೋಷ್ಠಿ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರೊ. ಎಸ್.ಆರ್. ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಖ್ಯಾತ ಸಾಹಿತಿ ಡಾ. ಅಮರೇಶ ನುಗಡೋಣಿ ಸಮಾರೋಪ ನುಡಿಗಳನ್ನಾಡುವರು.
 ಖ್ಯಾತ ಸಾಹಿತಿ ಪ್ರೊ. ಎಸ್.ಆರ್. ನಿರಂಜನ, ಖ್ಯಾತ ಸಾಹಿತಿ ಪ್ರೊ. ವಿ.ಜಿ. ಪೂಜಾರ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಈಶ್ವರ ಇಂಗನ್, ವಿದ್ಯಾವಿಷಯಕ ಪರಿಷತ್ ಸದಸ್ಯ ರಾಣಿ ಚೆನ್ನಮ್ಮ ಹಲ್ಸೆ, ಕುಲಸಚಿವ ಪ್ರೊ. ಅಗಸರ್ ದಯಾನಂದ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎಂ.ಮದರಿ, ವಿತ್ತಾಧಿಕಾರಿ ಪ್ರೊ. ಲಕ್ಷ್ಮಣ ರಾಜನಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ  ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಂಗದ ನಿರ್ದೇಶಕ ಎಚ್.ಟಿ. ಪೋತೆ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಹಾಗೂ ಶರಣ ಹಡಪದ ಅಪ್ಪಣ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್.ಎಂ. ಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಚಿತ್ತಾಪುರ: ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ
ಹುದ್ದೆ ಭರ್ತಿ: ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
ಕಲಬುರಗಿ,ಡಿ.01.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿನ ಅಂಗನವಾಡಿ ಕೇಂದ್ರಗಲ್ಲಿ ಖಾಲಿಯಿರುವ 09-ಅಂಗನವಾಡಿ ಕಾರ್ಯಕರ್ತೆ ಹಾಗೂ 27-ಸಹಾಯಕಿ ಹುದ್ದೆಗಳ ಆಯ್ಕೆಗಾಗಿ (ಗೌರವ ಸೇವೆ ಸಲ್ಲಿಸಲು) 18 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ. ಪಾಸಾಗಿರÀಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 4ನೇ ತರಗತಿ ಹಾಗೂ ಗರಿಷ್ಠ ವಿದ್ಯಾರ್ಹತೆ 9ನೇ ತರಗತಿ ಪಾಸಾಗಿರಬೇಕು. ಅರ್ಹ ಮಹಿಳಾ ಅಭ್ಯರ್ಥಿಗಳು  ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.  ಆಯ್ಕೆ ಮಾನದಂಡ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ವೆಬ್‍ಸೈಟ್‍ನ್ನು ಅಥವಾ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಅಥವಾ ಕಚೇರಿ ದೂರವಾಣಿ  ಸಂಖ್ಯೆ 08474-236393ನ್ನು ಸಂಪರ್ಕಿಸಬೇಕೆಂದು ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಡಿ.01.(ಕ.ವಾ.)-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ 2017-18ನೇ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ತಿಳಿಸಿದ್ದಾರೆ.
ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 18 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,000ರೂ.ಗಳ ಶಿಷ್ಯವೇತನವನ್ನು ನೀಡಲಾಗುವುದು. ಅರ್ಜಿಗಳನ್ನು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.
ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಪುಸ್ತಕವನ್ನು ಪಡೆಯಲಿಚ್ಛಿಸುವವರು 10 ರೂ. ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ಲಗತ್ತಿಸಿ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ. ರಸ್ತೆ ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 4ರಂದು ಸಕ್ರಿಯ ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನ ಉದ್ಘಾಟನೆ
ಕಲಬುರಗಿ,ಡಿ.01.(ಕ.ವಾ.)-ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಗಳಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ಡಿಸೆಂಬರ್ 4 ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 4ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿಯ ನ್ಯೂ ರಹೆಮತ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಅವರು  ಕಾರ್ಯಕ್ರಮವನ್ನು ಉದ್ಘಾಟಿಸುವರು.
      ಕ್ಷಯ ಪ್ರಕರಣ ಅನ್ವೇಷಣೆಗೆ ಹೆಚ್ಚು ಅಪಾಯ ಪ್ರದೇಶಗಳಲ್ಲಿ ಮನೆ ಭೇಟಿ ಮೂಲಕ ತಲುದಿರುವವರನ್ನು ತಲುಪುವುದು, ವ್ಯಕ್ತಿಗತ ರೋಗ ಲಕ್ಷಣಗಳ ತಪಾಸಣೆ ಮಾಡುವುದು, ಸಂಗ್ರಹಿಸಿದ ಕಫದ ಮಾದರಿಯನ್ನು ಡಿಸಿಗ್ನೆಟೆಡ್ ಮೈಕ್ರೋಸ್ಕೋಪಿ ಸೆಂಟರಿಗೆ ಕಳುಹಿಸುವುದು ಹಾಗೂ ರೋಗದ ಲಕ್ಷಣವುಳ್ಳ ಕಫವನ್ನು ಪರೀಕ್ಷೆಗೊಳಪಡಿಸುವುದು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮರು ಭೇಟಿ ಮಾಡಬಹುದಾಗಿದೆ. ಇದು ಆಂದೋಲನದ ಪ್ರಮುಖ ಅಂಶಗಳಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗದ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ದೊರೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 3ರಂದು ಮೋತಕಪಲ್ಲಿ ಬಲಭೀಮಸೇನ ದೇವಸ್ಥಾನದ ಜಾತ್ರಾ ಮಹೋತ್ಸವ
ಕಲಬುರಗಿ,ಡಿ.01.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ ಶ್ರೀ ಬಲಭೀಮಸೇನ ದೇವಸ್ಥಾನದ ಜಾತ್ರೆಯು ಅಂಗವಾಗಿ ಡಿಸೆಂಬರ್ 3ರಂದು ಬೆಳಿಗ್ಗೆ 5.30 ಗಂಟೆಗೆ ವ್ಯಾಸ ಪೂಜೆ, ಸಂಜೆ 4 ರಿಂದ ರಾತ್ರಿ 11.30 ಗಂಟೆಯವರೆಗೆ ರಥದಲ್ಲಿ ಆರತಿ ಹಾಗೂ ರಾತ್ರಿ 12.30ಕ್ಕೆ ರಥೋತ್ಸವ  ಜರುಗಲಿದೆ. ಅದೇ ರೀತಿ ಡಿಸೆಂಬರ್ 4ರಿಂದ 8ರವರೆಗೆ ವಿವಿಧ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಸೇಡಂ ತಹಶೀಲ್ದಾರರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 3 ಹಾಗೂ 4ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಡಿ.01.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ  ಡಿಸೆಂಬರ್ 3ರಂದು 11ಕೆ.ವಿ. ಸಿನಿಮಾ ಫೀಡರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಹಾಗೂ ಡಿಸೆಂಬರ್ 4ರಂದು ವಿಠ್ಠಲನಗರ ಫೀಡರ ವ್ಯಾಪ್ತಿಯಲ್ಲಿ ಭೂತ ಕೇಬಲ್ ಕಾರ್ಯ ಹಾಗೂ 11ಕೆ.ವಿ. ಗೋದುತಾಯಿ ನಗರ ಫೀಡರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
  11 ಕೆ.ವಿ. ಸಿನಿಮಾ ಫೀಡರ್: ಡಿಸೆಂಬರ್ 3ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಸುಪರ ಮಾರ್ಕೆಟ್, ಶಹಾ ಬಜಾರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬeóÁರ್, ಮಹಾಲಕ್ಷ್ಮೀ ಲೇಔಟ್, ಕಿರಾಣಾ ಬeóÁರ್, ಮಾರವಾಡಿ ಗಲ್ಲಿ, ಚೌಕ್À ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡಾ ಬeóÁರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ವಿಠ್ಠಲನಗರ ಫೀಡರ್: ಡಿಸೆಂಬರ್ 4ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಡಿ.ಡಿ.ಪಿ.ಐ. ಕಚೇರಿ, ವಿಜಯ-ವಿದ್ಯಾಲಯ ಕಂಪೌಂಡ್, ಐವಾನ್-ಎ-ಶಾಹಿ ಅಥಿತಿಗೃಹ, ಗುಲ್ಲಾಬೌಡಿ, ಲಾಹೋಟಿ ಪೆಟ್ರೋಲ್‍ಪಂಪ್, ಕೆ.ಬಿ.ಎನ್.ಆಸ್ಪತ್ರೆ, ಖೂಬಾ ಪ್ಲಾಟ್, ವಿಠ್ಠಲನಗರ, ಆನಂದನಗರ, ವಿವೇಕಾನಂದ ನಗರ, ರಾಮನಗರ, ಇಂದಿರಾನಗರ, ವಿದ್ಯಾನಗರ, ಬಲಘಟ ಕಂಪೌಂಡ್, ಮೇಹತಾ ಕಂಪೌಂಡ್, ಮಿನಿ ವಿಧಾನಸೌಧ, ಜಿಲ್ಲಾ ನ್ಯಾಯಾಲಯ, ಪಂಜಾಬ ಬೂಟ್ ಹೌಸ್, ಮಿಸ್ಟರಿ ಹಾರ್ಟ್ ಆಸ್ಪತ್ರೆ ಮತ್ತು ಜೆಸ್ಕಾಂ ಕಚೇರಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಗೋದುತಾಯಿ ನಗರ ಫೀಡರ್: ಡಿಸೆಂಬರ್ 4ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಸಿ.ಐ.ಬಿ. ಕಾಲೋನಿ, ಶಕ್ತಿ ನಗರ, ಗೋದುತಾಯಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಎ. ಲೇಔಟ್, ಘಾಟಗೆ ಲೇಔಟ್, ಧರಿಯಾಪುರ, ರಹೆಮತ್ ನಗರ, ಪಿ.ಡಬ್ಲೂ.ಡಿ. ಕ್ವಾರ್ಟರ್ಸ್, ಎನ್.ಜಿ.ಓ. ಕಾಲೋನಿ ( ರೈಲ್ವೆ ಟ್ರ್ಯಾಕ್), ದತ್ತ ನಗರ, ವರದಾ ನಗರ, ಗಣೇಶ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆ: ಸಂಚಾಲಕರ ಆಯ್ಕೆ
ಕಲಬುರಗಿ,ಡಿ.01.(ಕ.ವಾ.)-ಕಲಬುರಗಿ ರಂಗಾಯಣ ವತಿದಿಂದ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗಾಗಿ ಏರ್ಪಡಿಸಿರುವ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಗಾಗಿ ಆಯ್ಕೆ ಸಮಿತಿಯ ನಿರ್ಧಾರದ ಮೇರೆಗೆ ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ಶಾಂತಲಿಂಗಯ್ಯ ಎಸ್. ಹಿರೇಮಠ, ಕೊಪ್ಪಳ- ಶೀಲಾ ಹಾಲ್ಕುರಿಕೆ, ರಾಯಚೂರು – ರಂಜಾನ್ ಸಾಹೇಬ್ ಉಳಾಗಡ್ಡಿ, ಬೀದರ-ಯೇಶುದಾಸ ಅಲೆಪುರೆ, ಯಾದಗಿರಿ-ರವೀಂದ್ರ ಹಿರೇಮಠ ಹಾಗೂ ಬಳ್ಳಾರಿ ಜಿಲ್ಲೆಗೆ ಅಣ್ಣಾಜೀರಾವ್ ಕೃಷ್ಣರೆಡ್ಡಿ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

No comments:

Post a Comment