GULBARGA VARTHE

GULBARGA VARTHE

Wednesday, 29 November 2017

NEWS AND PHOTO DATE: 29--11--2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪರಿಷ್ಕøತ ಪ್ರವಾಸ
*******************************************************
ಕಲಬುರಗಿ,ssssನ.29.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ನವೆಂಬರ್ 30ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಮಹಿಳಾ ನಿವಾಸಿ ಯಾಸ್ಮಿನ್‍ಗೆ ಕಂಕಣ ಭಾಗ್ಯ
***************************************
ಕಲಬುರಗಿ,ssssನ.29.(ಕ.ವಾ.)-ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದ ನಿವಾಸಿ ಯಾಸ್ಮಿನ ಅವರ ವಿವಾಹವನ್ನು ರಾಮಚಂದ್ರ ಕುಲಕರ್ಣಿ ಅವರೊಂದಿಗೆ ಹಿಂದೂ ಸಂಪ್ರದಾಯದಂತೆ ವಿಧಿವತ್ತಾಗಿ ಮತ್ತು ಶಾಸ್ತ್ರೋಕ್ತವಾಗಿ ಬುಧವಾರ ಜರುಗುವುದರೊಂದಿಗೆ ಕಳೆದ 2004ರ ನವೆಂಬರ್‍ನಲ್ಲಿಯೆ ನಿಲಯಕ್ಕೆ ದಾಖಲಾದ ಯಾಸ್ಮಿನ್‍ಗೆ ಕಂಕಣ ಭಾಗ್ಯ ಲಭಿಸಿದ್ದು ಅವಳ ಮುಖದಲ್ಲಿನÀ ಸಂತೋಷಕ್ಕೆ ಸಾಕ್ಷಿವಾಯಿತು.
ಇನ್ನು ಈ ಅಪರೂಪದ ಮದುವೆಗೆ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮಹಿಳಾ ನಿಲಯ ಅಧೀಕ್ಷಕರ ಶಿಲ್ಪಾ ಎಸ್. ಹಿರೇಮಠ ಆಗಮಿಸಿ ನವ ವಧು-ವರನನ್ನು ಶುಭ ಕೋರಿದ್ದು ವಿಶೇಷವಾಗಿತ್ತು.
ಮಹಿಳಾ ನಿಲಯ ಕಚೇರಿ ಬುಧವಾರ ಅಕ್ಷರಷ: ಮದುವೆ ಮನೆಯಂತೆ ಸಿಂಗಾರಗೊಂಡಿತ್ತು. ಮದುವೆಗೆ ಅಧಿಕಾರಿ, ಜನಪ್ರತಿನಿಧಿಗಳ ಹಾಗೂ ಬಂಧು-ಬಳಗಕ್ಕೆ ಕಮ್ಮಿ ಇರಲಿಲ್ಲ. ದಿನನಿತ್ಯ ಕಚೇರಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಇಂದು ಮಹಿಳಾ ನಿವಾಸಿಗೆ ಮನೆಯವರಂತೆ ಮದುವೆ ಮಾಡಿ ಕೊಡುವ ಜವಾಬ್ದಾರಿಯ ಕೆಲಸ ಕೊಂಚ ಭಿನ್ನವಾಗಿ ಅನಿಸಿದ್ದರು ಎಲ್ಲರು ಸಂಭ್ರಮದಿಂದ ಪಾಲ್ಗೊಂಡು ಮದುವೆ ಕಾರ್ಯ ಪೂರ್ಣಗೊಳಿಸಿದರು.
ಯಾಸ್ಮಿನಳನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲು 31 ವರ್ಷದ ರಾಮಚಂದ್ರ ಕುಲಕರ್ಣಿ ಸ್ವ-ಇಚ್ಛೆಯಿಂದ ಮುಂದೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12.12 ಗಂಟೆಯ ಅಭಿಜಿತ ಲಗ್ನದ ಶುಭ ಮುಹೂರ್ತದಲ್ಲಿ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಸುಖ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕಲಬುರಗಿ ಬ್ರಹ್ಮಪುರ ಸಮತಾ ಕಾಲೋನಿಯ ಹಿಂದು (ಬ್ರಾಹ್ಮಣ) ಸಮುದಾಯದ ಕಿಶನ್‍ರಾವ ಸುಮಿತ್ರಾಬಾಯಿ ಕುಲಕರ್ಣಿ ಅವರ ಮಗ ರಾಮಚಂದ್ರ ಬಿ.ಎಸ್.ಸಿ. ವÀರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ವೈದ್ಯಪತ್ರಿನಿಧಿ (ಎಮ್.ಆರ್) ಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಪ್ರತಿ ಮಾಹೆ 17,000 ರೂ.ಗಳ ಸಂಬಳ ಪಡೆಯುತ್ತಿದ್ದಾರೆÉ.
ಮಹಿಳಾ ನಿವಾಸಿ ಯಾಸ್ಮಿನ ವಾಡಿ (ಜಂ) ಪೋಲಿಸ್ ಸ್ಟೇಷನ್ ನಿಂದ 2004ರÀಲ್ಲಿ ರಾಜ್ಯ ಮಹಿಳಾ ನಿಲಯಕ್ಕೆ ಸೇರ್ಪಡೆಯಾಗಿದ್ದಾಳೆ. ಯಾಸ್ಮಿನ ಸ್ವ-ಇಚ್ಛೆಯಿಂದ ರಾಮಚಂದ್ರ ಕುಲಕರ್ಣಿಯನ್ನು ವಿವಾಹಕ್ಕೆ ಒಪ್ಪಿಕೊಂಡಿದ್ದರಿಂದಲೇ ಅವಳ ಮುಂದಿನ ಭವಿಷ್ಯ ಹಾಗೂ ಪುನರ್ವಸತಿ ಹಿತದೃಷ್ಟಿಯಿಂದ ಈ ಮದುವೆ ಜರುಗಿಸಲಾಯಿತು.
ಇದು 17ನೇ ಮದುವೆ: ರಾಜ್ಯದ ಎಂಟು ರಾಜ್ಯ ಮಹಿಳಾ ನಿಲಯಗಳ ಪೈಕಿ ಕಲಬುರಗಿ ಒಂದಾಗಿದ್ದು, ಕಲಬುರಗಿ ರಾಜ್ಯ ಮಹಿಳಾ ನಿಲಯದಿಂದ 2005-06ರಿಂದ ಈವರೆಗೆ ಒಟ್ಟು 16 ಮದುವೆಗಳನ್ನು ಮಾಡಿದ್ದು, ಇದು 17ನೇ ಮದುವೆಯಾಗಿದೆ. ಮದುವೆಯಾದವರೆಲ್ಲ ಹೆಚ್ಚಾಗಿ ತಂದೆ ತಾಯಿಯಿಲ್ಲದವರೇ ಆಗಿದ್ದು, ಮದುವೆ ಬಂಧನಕ್ಕೊಳಗಾದ ಬಳಿಕ ನಿಲಯದ ಎಲ್ಲ ನಿವಾಸಿಗಳು ಸುಖ ಸಂತೋಷದಿಂದ ಬಾಳÀುತ್ತಿದ್ದಾರೆ. ನಿಲಯದ ನಿವಾಸಿಗಳ ಮದುವೆಯ ಬಳಿಕ ಏಳು ವರ್ಷದವರೆಗೆ ನಿರಂತರ ನಿಕಟ ಸಂಪರ್ಕ ಸುಖಕರ ದಾಂಪತ್ಯ ಜೀವನದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುವುದು. ಯಾಸ್ಮಿನ ಮದುವೆಗಾಗಿ ಇಲಾಖೆಯಿಂದ 5000 ರೂ. ಹಣವನ್ನು ದಂಪತಿಗಳ ಹೆಸರಿನಲ್ಲಿ ಬ್ಯಾಂಕನಲ್ಲಿ ಫಿಕ್ಸ್ ಡಿಪಾಜಿಟ್ ಮಾಡಲಾಗುವುದು ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಶಿಲ್ಪಾ ಎಸ್. ಹಿರೇಮಠ ತಿಳಿಸಿದರು.
ಕೋಟೆಯಲ್ಲಿನ ಅನಧೀಕೃತ ಕಟ್ಟಡ ನಿರ್ಮಾಣ ತೆರವುಗೊಳಿಸಲು ಸೂಚನೆ
***************************************************************
ಕಲಬುರಗಿ,ನ.29.(ಕ.ವಾ.)-ಪುರಾತತ್ವ ಇಲಾಖೆಯ ಅಧೀನಕೊಳಪಟ್ಟ ಕೋಟೆಯಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೂಡಲೇ ಅನಧೀಕೃತ ಕಟ್ಟಡಗಳ ನಿರ್ಮಾಣ ತೆರವುಗೊಳಿಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.
ಅವರು ಶನಿವಾರ ಕಲಬುರಗಿಯ ಐತಿಹಾಸಿಕ ಕೋಟೆ ಹಾಗೂ ಅಲ್ಲಿನ ಪುರಾತತ್ವ ಸ್ಮಾರಕಗಳನ್ನು ವೀಕ್ಷಸಿ, ಕೋಟೆಯಲ್ಲಿ ಅತಿಕ್ರಮಣವನ್ನು ತಡೆಯಲು ಭಾರತೀಯ ಪುರಾತತ್ವ ಸವೇಕ್ಷಣ ಅಧಿಕಾರಿಗಳು ಹಾಗೂ ಕೋಟೆಯಲ್ಲಿರುವ ಮನೆಗಳ ಅನಧಿಕೃತ ಕಟ್ಟಡಗಳ ಖಾತೆಗಳನ್ನು ರದ್ದುಗೊಳಿಸಲು ಮತ್ತು ಕಟ್ಟಡಗಳನ್ನು ಕಟ್ಟುವುದನ್ನು ತಡೆಯಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಅಧಿಕಾರಿಗಳು, ಕಲಬುರಗಿ ನಗರ ಯೋಜನಾ ಇಲಾಖೆಯ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಮತ್ತು ಕಲಬುರಗಿ ತಹಶೀಲ್ದಾರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಎನ್.ಎಸ್.ವಿ. ಸಪ್ತಾಹ ಶಿಬಿರ
***********************************
ಕಲಬುರಗಿ,ನ.29.(ಕ.ವಾ.)-ರಾಷ್ಟ್ರೀಯ ಆರೋಗ್ಯ ಅಭಿಯಾನದ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಎನ್.ಎಸ್.ವಿ. ಸಪ್ತಾಹದ ಅಂಗವಾಗಿ ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಎನ್.ಎಸ್.ವಿ. (ನೋ ಸ್ಕಾಲ್‍ಪೆಲ್ ವ್ಯಾಸೆಕ್ಟಮಿ/ಪುರುಷ ಸಂತಾನ ಶಕ್ತಿ ನಿರೋಧ ಶಸ್ತ್ರಚಿಕಿತ್ಸೆ) ಶಿಬಿರಗಳನ್ನು ಕೆಳಕಂಡ ದಿನಾಂಕಗಳಂದು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರ ನಡೆಯುವ ದಿನಾಂಕ, ಶಿಬಿರದ ಸ್ಥಳ ಹಾಗೂ ಶಸ್ತ್ರ ಚಿಕಿತ್ಸಕರ ವಿವರ ಇಂತಿದೆ. ನವೆಂಬರ್ 30ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅನೀಲ ಬಣಗಾರ. ಡಿಸೆಂಬರ್ 4ರಂದು ಆಳಂದ ತಾಲೂಕು ಆಸ್ಪತ್ರೆ-ಆಳಂದ ತಾಲೂಕು ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅನ್ಸಾರಿ. ಡಿಸೆಂಬರ್ 5ರಂದು ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಮರಪ್ಪ. ಡಿಸೆಂಬರ್ 2ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಅನೀಲ ಬಣಗಾರ. ನವೆಂಬರ್ 30 ಮತ್ತು ಡಿಸೆಂಬರ್ 5ರಂದು ತಾಜ್‍ನಗರ ಆರೋಗ್ಯ ಕೇಂದ್ರದಲ್ಲಿ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಮರಪ್ಪ. ಡಿಸೆಂಬರ್ 1ರಂದು ಜೇವರ್ಗಿ ತಾಲೂಕು ಆಸ್ಪತ್ರೆ- ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಮರಪ್ಪ. ಡಿಸೆಂಬರ್ 1ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಮರಪ್ಪ.
ಪುರುಷ ಸಂತಾನ ಶಕ್ತಿ ನಿರೋಧ ಶಸû್ರಚಿಕಿತ್ಸೆಯನ್ನು ಮೇಲ್ಕಂಡ ದಿನಾಂಕಗಳಂದು ಜಿಲ್ಲಾ ಆಸ್ಪತ್ರೆಯ ನುರಿತ ಶಸ್ತ್ರಚಿಕಿತ್ಸಕ ತಜ್ಞ ವೈದ್ಯರು ಶಿಬಿರ ನಡೆಸಲಿದ್ದಾರೆ. ಇಲಾಖೆಯಿಂದ ಶಸ್ತ್ರಚಿಕಿತ್ಸೆಗೊಳಗಾದÀ ಪ್ರತಿ ಫಲಾನುಭವಿಗೆ 1100 ರೂ.ಗಳ ಮತ್ತು ಪ್ರೋತ್ಸಾಹಕರಿಗೆ 200 ರೂ.ಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449843394/99900906451 ಸಂಪರ್ಕಿಸಲು ಕೋರಲಾಗಿದೆ.
ಎತ್ತರ ಜಿಗಿತ ಸ್ಪರ್ಧೆ: ಪರಶುರಾಮ ತೃತೀಯ ಸ್ಥಾನ
*********************************************
ಕಲಬುರಗಿ,ನ.29.(ಕ.ವಾ.)-ಅಥ್ಲೇಟಿಕ್ಸ್ ಫೇಡರೇಶನ್ ಆಫ್ ಇಂಡಿಯಾದಿಂದ ನ್ಯಾಷನಲ್ “ಇಂಟರ್ ಡಿಸ್ಟ್ರಿಕ್ಟ್ ಜೂನಿಯರ್ ಅಥ್ಲೇಟಿಕ್ ಮಿಟ್ 2017-18” ವಿಶಾಖಪಟ್ಟಣದಲ್ಲಿ ನವೆಂಬರ್ 23ರಿಂದ 25ರವರೆಗೆ ಜರುಗಿದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟು ಪರಶುರಾಮ ನಾರಾಯಣ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಈ ಕ್ರೀಡಾಪಟುವಿನ ಸಾಧನೆಗಾಗಿ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೇರ ಹಾಗೂ ಅಥ್ಲೇಟಿಕ್ಸ್ ತರಬೇತಿದಾರ ನಾಗರಾಜ ಜಿ. ಮಾಳಗೆ ಅವರು ಕ್ರೀಡಾಪಟುವಿಗೆ ಅಭಿನಂದಿದ್ದಾರೆ.
ವಾಡಿ ಪುರಸಭೆ ಕೌನ್ಸಿಲರ್ ಸ್ಥಾನಕ್ಕೆ ಚುನಾವಣೆ: ವೇಳಾಪಟ್ಟಿ ಪ್ರಕಟ
***********************************************************
ಕಲಬುರಗಿ,ನ.28.(ಕ.ವಾ.)-1964ರ ಕರ್ನಾಟಕ ಪುರಸಭೆಗಳ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆಯ ವಾರ್ಡ ನಂ. 1ರ ಪುರಸಭೆ ಕೌನ್ಸಿಲರ್ ಸ್ಥಾನಕ್ಕೆ ಚುನಾವಣೆ ಜರುಗಿಸಲು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ವಾಡಿ ಪುರಸಭೆಯ ವಾರ್ಡ ನಂ. 1ರ ಪುರಸಭೆ ಕೌನ್ಸಿಲರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 6 ಬುಧವಾರ ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 7 ಗುರುವಾರದಂದು ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 9 ಶನಿವಾರ ಕೊನೆಯ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿಸೆಂಬರ್ 17ರ ಭಾನುವಾರದಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ಡಿಸೆಂಬರ್ 19ರ ಮಂಗಳವಾರದಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮತಗಳ ಏಣಿಕೆಯು ಡಿಸೆಂಬರ್ 20 ಬುಧವಾರದಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ. ಡಿಸೆಂಬರ್ 20ರ ಬುಧವಾರದೊಳಗೆ ಚುನಾವಣೆಯನ್ನು ಮುಕ್ತಾಯಗೊಳ್ಳಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿಮಾನ ಹಾಗೂ ಮೈಸೂರು ದಿಗಂತ ಪ್ರಶಸ್ತಿ: ಲೇಖನ-ವರದಿಗಳ ಆಹ್ವಾನ
******************************************************************
ಕಲಬುರಗಿ,ನ.29.(ಕ.ವಾ.)-ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆ ಬಿಂಬಿಸುವ ಉತ್ತಮ ವರದಿ/ಲೇಖನಕ್ಕೆ “ಅಭಿಮಾನಿ ಪ್ರಶಸ್ತಿ”ಯನ್ನು ಹಾಗೂ ಮೈಸೂರಿನ ದಿಗಂತ ಪತ್ರಿಕಾ ಸಂಸ್ಥೆಯ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಉತ್ತಮ ಲೇಖನ-ವರದಿಗೆ ಬರೆದ ಪತ್ರಕರ್ತರಿಗೆ “ಮೈಸೂರು ದಿಗಂತ ಪ್ರಶಸ್ತಿ”ಗಳನ್ನು ನೀಡುತ್ತಿದೆ. ಇದಕ್ಕಾಗಿ ಅರ್ಹ ಪತ್ರಕರ್ತರಿಂದ ವರದಿ/ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಾದ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ. ಸಿದ್ದರಾಜು ಅವರು ತಿಳಿಸಿದ್ದಾರೆ.
2017 ರ ಜನವರಿಯಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆ ಬಿಂಬಿಸುವ ಉತ್ತಮ ಲೇಖನ/ವರದಿಗೆ-ಅಭಿಮಾನಿ ಪ್ರಶಸ್ತಿ-2017 ಹಾಗೂ ಮಾನವೀಯ ಸಮಸ್ಯೆಗಳನ್ನು ಬಿಂಬಿಸುವ ಉತ್ತಮ ಲೇಖನ-ವರದಿಗೆ- ಮೈಸೂರು ದಿಗಂತ ಪ್ರಶಸ್ತಿ-2017 ಎಂದು ನಮೂದಿಸಿ ಪ್ರತ್ಯೇಕವಾಗಿ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ/ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ ಇರುತ್ತದೆ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ, ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಕಳುಹಿಸಬೇಕು.
ಅಭಿಮಾನಿ ಪ್ರಶಸ್ತಿ-2017 ಹಾಗೂ ಮೈಸೂರು ದಿಗಂತ ಪ್ರಶಸ್ತಿ-2017ಗಾಗಿ ಲೇಖನ/ವರದಿಗಳನ್ನು ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-01 ವಿಳಾಸಕ್ಕೆ ಡಿಸೆಂಬರ್ 26ರೊಳಗಾಗಿ ಸಲ್ಲಿಸಬೇಕು. ಬೆಂಗಳೂರಿನ ಅಭಿಮಾನ ಪ್ರಕಾಶನ ಸಂಸ್ಥೆ ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಗಳು ಪ್ರತಿ ವರ್ಷ ತಲಾ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡುವ ಸಲುವಾಗಿ ತಲಾ ಒಂದು ಲಕ್ಷ ರೂ.ಗಳ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ 03 ಬೆರಳಚ್ಚುಗಾರರ ಹುದ್ದೆಗೆ ಅರ್ಜಿ ಆಹ್ವಾನ
*************************************************************
ಕಲಬುರಗಿ,ನ.29.(ಕ.ವಾ.)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ 03 ಬೆರಳಚ್ಚುಗಾರರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ.ಪಾಟೀಲ್ ತಿಳಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗಾಗಿ ಸ್ಥಳೀಯ ವೃಂದದ 03 ಹುದ್ದೆಗಳನ್ನು ಮೀಸಲಿಡಲಾಗಿದೆ ಅಭ್ಯರ್ಥಿಗಳು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ ಎರಡು ಭಾಷೆಗಳಲ್ಲಿ ಹಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಯು ಕನಿಷ್ಟ 18 ವರ್ಷ ವಯೋಮಿತಿ ಹೊಂದಿರಬೇಕು. ಎಸ್.ಸಿ./ಎಸ್.ಟಿ. ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ. ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ಇರುತ್ತದೆ.
ಅರ್ಜಿ ಶುಲ್ಕ 200ರೂ. ಇದ್ದು, ಜಿಲ್ಲಾ ನ್ಯಾಯಾಲಯದ hಣಣಠಿ://eಛಿouಡಿಣs.gov.iಟಿ/ಞಚಿಟಚಿbuಡಿಚಿgi/oಟಿಟiಟಿe-ಡಿeಛಿಡಿuiಣmeಟಿಣ ವೆಬ್‍ಸೈಟ್‍ನಲ್ಲಿ ನೀಡಲಾದ ಲಿಂಕ್ hಣಣಠಿs://ತಿತಿತಿ.oಟಿಟiಟಿesbi.ಛಿom/ಠಿಡಿeಟogiಟಿ/iಛಿoಟಟeಛಿಣhome.hಣm?ಛಿoಡಿಠಿIಆ=383244 ಮುಖಾಂತರ ಭಾರತೀಯ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಆನ್‍ಲೈನ್ ಪೇಮೆಂಟ್ ಥ್ರೊ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಚಲನ್ ಮೂಲಕ ಪಾವತಿಸಬಹುದಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಡಿಮಾಂಡ್ ಡ್ರಾಫ್ಟ್/ ಪೋಸ್ಟಲ್ ಆರ್ಡರ್/ಮನಿ ಆರ್ಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ.
ಶುಲ್ಕವನ್ನು ಚಲನ ಮುಖಾಂತರ ಪಾವತಿಸಲು 2018ರ ಜನವರಿ 5 ಕೊನೆಯ ದಿನವಾಗಿದೆ. ಎಸ್.ಸಿ./ಎಸ್.ಟಿ. ಮತ್ತು ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಈ ಶುಲ್ಕದಿಂದ ವಿನಾಯಿತಿ ಇರುತ್ತದೆ. ಜಿಲ್ಲಾ ನ್ಯಾಯಾಲಯದ hಣಣಠಿ://eಛಿouಡಿಣs.gov.iಟಿ/ಞಚಿಟಚಿbuಡಿಚಿgi/oಟಿಟiಟಿe-ಡಿeಛಿಡಿuiಣmeಟಿಣ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು 2017ರ ಡಿಸೆಂಬರ್ 4 ರಿಂದ 2018ರ ಜನವರಿ 3ರ ರಾತ್ರಿ 11:59 ಗಂಟೆಯವರೆÀಗೆ ಸಲ್ಲಿಸಬೇಕು. ಹುದ್ದೆಗಳ ಮೀಸಲಾತಿ, ನೇಮಕಾತಿ ವಿಧಾನ ಹಾಗೂ ಇನ್ನಿತರ ಹೆಚ್ಚಿನ ವಿವರಗಳಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯನ್ನು ಹಾಗೂ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಿದೆ.
ಒತ್ತಡಕ್ಕೊಳಗಾಗಿ ಮಕ್ಕಳಲ್ಲಿ ಹೆಚ್ಚು ಅಪರಾಧ
ಕಲಬುರಗಿ,ssssನ.29.(ಕ.ವಾ.)-ಇಂದಿನ ಆಧುನಿಕ ಸಮಾಜದಲ್ಲಿ ಮಕ್ಕಳು ವಿವಿಧ ಆಶೋತ್ತರ ಹಾಗೂ ಒತ್ತಡಕ್ಕೊಳಗಾಗಿ ಹೆಚ್ಚು ಅಪರಾಧ ಮಾಡುತ್ತಿದಾರೆ. ಇಂತಹ ಅಪರಾಧಿಗಳಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ಬಾಲ ನ್ಯಾಯಿಕ ಮಂಡಳಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಮಾಡುತ್ತಿದೆ ಎಂದು ಕಲಬುರಗಿ ಬಾಲ ನ್ಯಾಯಿಕ ಮಂಡಳಿ ಅಧ್ಯಕ್ಷರು ಹಾಗೂ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶೆ ಸರಸ್ವತಿದೇವಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘÀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ನ್ಯಾಯಿಕ ಮಂಡಳಿ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಸರ್ಕಾರಿ ವೀಕ್ಷಣಾಲಯದಲ್ಲಿ “ ಬಾಲ ನ್ಯಾಯಿಕ ಕಾಯ್ದೆ” ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂಘರ್ಷಕ್ಕೊಳಗಾದ ವ್ಯಕ್ತಿಗಳಿಗೆ ವಕೀಲರನ್ನು ನೇಮಿಸಿಕೊಳ್ಳುವ ಶಕ್ತಿ ಇಲ್ಲದಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕರಣ ನಡೆಸಲು ಉಚಿತವಾಗಿ ವಕೀಲರ ವ್ಯವಸ್ಥೆ ಮಾಡಲಾಗುವುದು. ಅಂಥಹ ಯಾವುದೇ ವ್ಯಕ್ತಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ. ಮಕ್ಕಳು ಅಪರಾಧಗಳಲ್ಲಿ ಭಾಗವಹಿಸದಂತೆ ತಪ್ಪಿಸಲು ತಂದೆ-ತಾಯಿಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಬೇಕು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಉತ್ತಮ ನಡುವಳಿಕೆ ಮತ್ತು ಉತ್ತಮ ವಿದ್ಯಾರ್ಜನೆ ಕೊಡಿಸುವಲ್ಲಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಬಾಲ ನ್ಯಾಯಿಕ ಮಂಡಳಿ ಸದಸ್ಯ ಗೀತಾ ಸಜ್ಜನಶೆಟ್ಟಿ ಅವರು ಬಾಲ ನ್ಯಾಯಿಕ ಕಾಯ್ದೆ ಕುರಿತು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ ರಾಮನ್ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು. ಬಾಲ ನ್ಯಾಯಿ ಮಂಡಳಿ ಸದಸ್ಯ ಲಿಯಾಖತ್ ಫರೀದ್ ಭಾಗವಹಿಸಿದ್ದರು.
ನವೆಂಬರ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ನ.29.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ನವೆಂಬರ್ 30ರಂದು 11 ಸಿದ್ದೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ ಕಾರ್ಯಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
11ಕೆ.ವಿ. ಸಿದ್ದೇಶ್ವರ ಫೀಡರ್: ಓಂ ನಗರ, ಸ್ವಸ್ತಿಕ ನಗರ, ವೀರೆಂದ್ರ ಪಾಟೀಲ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಸಂವಿಧಾನವನ್ನು ಆಸಕ್ತಿಯಿಂದ ಓದಿ ತಿಳಿಯಲು ಸಲಹೆ
************************************************
ಕಲಬುರಗಿ,ssssನ.29.(ಕ.ವಾ.)-ದೇಶದ ನಾಗರಿಕರು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿರುವ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ಪುರಾಣ-ಭಗವದ್ಗೀತೆಯಂತೆ ಭಕ್ತಿ ಮತ್ತು ಆಸಕ್ತಿಯಿಂದ ಓದಿ ತಿಳಿಯಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸಲಹೆ ನೀಡಿದರು.
ಅವರು ಬುಧವಾರ ಕಲಬುರಗಿ ತಾಲೂಕಿನ ಇಟಗಾ(ಕೆÉ) ಗ್ರಾಮದಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಸಮಾಜದಲ್ಲಿ ಅನ್ಯಾಯವಾದಾಗ ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಹೋಗುವ ಮಾರ್ಗ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ ಅವರು ಸಂವಿಧಾನದಲ್ಲಿ 371ಕಲಂಗೆ ತಿದ್ದುಪಡಿ ತಂದು ಹಿಂದುಳಿದ ಭಾಗಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂಬ ಅಂಶವನ್ನಾಧರಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು 371(ಜೆ) ಕಲಂ ರೂಪಿಸಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಶಿಕ್ಷಣ, ಉದ್ಯೋಗ ಅಭಿವೃದ್ಧಿಯಲ್ಲಿ ಮೀಸಲಾತಿ ದೊರೆಯುತ್ತಿದೆ. ಇದು ಸಂವಿಧಾನ ರಚಿಸಿದ ಅಂಬೇಡ್ಕರ ಅವರ ಕೊಡುಗೆಯಾಗಿದೆ ಎಂದರು.
ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಹಸಿವು, ಬಡತನ ಕಡಿಮೆಯಾಗಿ ಹಸಿರು ಕ್ರಾಂತಿ ರೂಪಿಸುವ ಮೂಲಕ ಜನರಿಗೆ ಉಚಿತವಾಗಿ ಅಕ್ಕಿ, ಜೋಳ, ರಾಗಿ ಸಿಗುವಂತಾಗಿದೆ ಎಂದು ತಿಳಿಸಿದ ಅವರು ಇಟಗಾ(ಬಿ) ಗ್ರಾಮದ ಎಲ್ಲ ಧರ್ಮದ ಜನರು ಒಗ್ಗೂಡಿ ಡಾ. ಬಾಬಾಸಾಹೇಬ ಅಂಬೇಡ್ಕರವರ ಪುತ್ಥಳಿ ಸ್ಥಾಪಿಸಿದ್ದು ಶ್ಲಾಘನೀಯವಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರವರು ಸಾಮಾಜಿಕ ನ್ಯಾಯಕ್ಕೆ, ಮಾನವ ಕುಲದ ಉದ್ಧಾರಕ್ಕೆ ಹೋರಾಟ ಮಾಡಿದರು. ಅವರ ಮಾರ್ಗದಲ್ಲಿ ಎಲ್ಲರೂ ನಡೆದು ಒಗ್ಗಟ್ಟಾಗಿರಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮಾತನಾಡಿ, ಯುವ ಪೀಳಿಗೆ ಇತಿಹಾಸ ತಿಳಿದು ಮುಂದಾಲೋಚನೆಯಿಂದ ಒಳ್ಳೆಯ ಸಮಾಜ ಕಟ್ಟಲು ಜವಾಬ್ದಾರಿ ವಹಿಸಿಕೊಳ್ಳಬೇಕು. ಸಮಾಜ ಪರಿವರ್ತನೆಗಾಗಿ ಸರ್ಕಾರದ ಯೋಜನೆಗಳ ಜೊತೆಗೆ ಸ್ವಯಂ ಪ್ರಯತ್ನ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ಸಮಾಜಮುಖಿ ಕೆಲಸ ಮಾಡಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಈ ಭಾಗಕ್ಕೆ 371(ಜೆ) ಕಲಂ ಜಾರಿಯಾಗಿದೆ. ಇದರಿಂದ ಕಡು ಬಡವರ ಮಕ್ಕಳು ಸಹ ವೈದ್ಯಕೀಯ, ಇಂಜಿನಿಯರಿಂಗ್ ಓದಲು ಸಾಧ್ಯವಾಗುತ್ತಿದೆ. ಈ ಭಾಗದ ನಿರುದ್ಯೋಗಿಗಳಿಗೆ ಈಗಾಗಲೇ 22,000 ನೌಕರಿಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 10,000 ನೌಕರಿ ನೀಡುವ ಪ್ರಕ್ರಿಯೆ ಜಾರಿಗೊಳಿಸಲಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಿ ಹಿಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 1000 ಕೋಟಿ ರೂ.ಗಳಂತೆ 3000 ಕೋಟಿ ರೂ. ಹಾಗೂ ಈ ವರ್ಷ ವಿಶೇಷವಾಗಿ 1500 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಿಂದಾಗಿ ಹೈ.ಕ. ಭಾಗದಲ್ಲಿ ವೇಗದ ಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಸಬೇಕಾದರೆ ಸಂವಿಧಾನದ ರಕ್ಷಣೆಯಾಗಬೇಕು. ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮುಂದಾಲೋಚನೆಯಂತೆ ರಾಜಕೀಯ ಸಮಾನತೆಯಿಂದ ಗಣನೀಯ ಬದಲಾವಣೆಯಾಗಿದೆ. ದೇಶ ಇಂದು ಇಷ್ಟು ಪ್ರಗತಿ ಸಾಧಿಸಿದ್ದಕ್ಕೆ ಸಂವಿಧಾನವೇ ಕಾರಣವಾಗಿದೆ. ಅಂಬೇಡ್ಕರರು ಸಂವಿಧಾನದ ಮೂಲಕ ದಲಿತರು, ಮಹಿಳೆ, ಹಿಂದುಳಿದ ವರ್ಗ ಹಾಗೂ ಎಲ್ಲ ವರ್ಗದ ಜನರಿಗೂ ರಕ್ಷಣೆ ನೀಡಿದ್ದರಿಂದ ದೇಶ ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಾಗಿದೆ ಎಂದರು.
ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವಿ. ಗುತ್ತೇದಾರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷ ಇಲಿಯಾಸ್ ಬಾಗವಾನ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಶ್ರೀಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾಂವಿ, ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ ಆರ್. ಪಾಟೀಲ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಾರಾಜ ಕೆ. ಸಜ್ಜನ್, ಮುಖಂಡರಾದ ಜಗದೀವ ಗುತ್ತೇದಾರ, ನಿತೀಶ ಗುತ್ತೇದಾರ, ಸಂಗಣ್ಣ ಸಿ. ಮಾಲಿಪಾಟೀಲ, ದೇವೇಂದ್ರಪ್ಪ ಮರತೂರ, ಮಹೇಶ ಹೊಸೂರಕರ, ಪವನಕುಮಾರ ವಳಕೇರಿ, ಭೀಮಾಶಂಕರ ಹೆಚ್. ವತನದಾರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿಂಬಾಳ: ಸುಕನ್ಯಾ ಸಮೃದ್ಧಿ ಗ್ರಾಮ ಘೋಷಣೆ
*****************************************
ಕಲಬುರಗಿ,ssssನ.29.(ಕ.ವಾ.)- ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ಸುಮಾರು 235 ಹೆಣ್ಣು ಮಕ್ಕಳು ನಿಂಬಾಳ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆದಿರುವುದರಿಂದ ಮಂಗಳವಾರ ಕಲಬುರಗಿ ವಿಭಾಗದ ಅಂಚೆ ಇಲಾಖೆಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಿಂಬಾಳ ಗ್ರಾಮವನ್ನು ಸುಕನ್ಯಾ ಸಮೃದ್ಧಿ ಗ್ರಾಮವೆಂದು ಘೋಷಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಬುರಗಿ ವಿಭಾಗದ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಶಿವಾನಂದ ಎಸ್.ಪಾಟೀಲ್ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮವಾಗಿದ್ದು, ಗ್ರಾಮಸ್ಥರು ಈ ಯೋಜನೆಯ ಲಾಭ ಪಡೆದು ಮಕ್ಕಳ ಆರ್ಥಿಕ ಹಾಗೂ ಶೈಕ್ಷಣಿಕ ಭದ್ರತೆಯನ್ನು ಕಲ್ಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಂಬಾಳನ ಶ್ರೀ ಶಾಂತಲಿಂಗೇಶ್ವರ ವಿರಕ್ತ ಮಠದ ಪೂಜ್ಯ ಮ.ನಿ.ಪ್ರ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಖಾತೆ ತೆಗೆದ ಎಲ್ಲಾ ಹೆಣ್ಣು ಮಕ್ಕಳಿಗೆ ಪಾಸ್‍ಬುಕ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಎಸ್.ಬಿ, ಆರ್.ಡಿ, ಟಿ.ಡಿ, ಪಿ.ಪಿ ಎಫ್ ಮುಂತಾದ ಉಳಿತಾಯ ಖಾತೆಗಳು, ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ, ಪ್ರಧಾನ ಮಂತ್ರಿಯವರ ಸುರಕ್ಷಾ ಭೀಮಾ ಯೋಜನೆ, ಜೀವನ ಜ್ಯೋತಿ ಯೋಜನೆ ಹಾಗೂ ಅಟಲ್ ಪೆನ್‍ಷನ್ ಯೋಜನೆ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂಚೆ ಅಧಿಕಾರಿಗಳಾದ ಶಿವಾನಂದ ಆರ್. ಹೀರಾಪೂರ, ವಿ.ಎಲ್ ಚಿತ್ತಕೋಟೆ, ಆರ್.ಕೆ ಉಮ್ರಾಣಿ, ರಾಮಕೃಷ್ಣ ವಂಶಿ, ಸುಶೀಲ ಕುಮಾರ ತಿವಾರಿ ಉಪಸ್ಥಿತರಿದ್ದರು. ಶಿಕ್ಷಕ ಸಿದ್ದಣ್ಣ ಬೋಲಾ ನಿರೂಪಿಸಿದರು.




No comments:

Post a Comment