GULBARGA VARTHE

GULBARGA VARTHE

Monday, 20 November 2017

News and photo date: 20--11--2017

ಲಾನ್ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ
**********************************
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ರಾಜ್ಯದ 12 ಕ್ರೀಡಾಪಟುಗಳು ಭಾಗಿ
ಕಲಬುರಗಿ,ನ,20(ಕ.ವಾ.)-ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 14 ಮತ್ತು 17 ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕಳೆದ ವರ್ಷ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ರಾಜ್ಯದ 12 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಸುವರ್ಣಪದಕ ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಬೆಂಗಳೂರು ಉತ್ತರ ಜಿಲ್ಲೆಯ ಪಾರ್ವಿ ಪಾಟೀಲ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಸುವರ್ಣಪದಕ ಪಡೆದ ಕಾಶಿಕಾ ಅವರು 17 ವಯೋಮಿತಿಯೊಳಗಿನ ಮಹಿಳಾ ವಿಭಾಗದಿಂದ ಪಾಲ್ಗೊಂಡಿದ್ದಾರೆ.
ರಾಜ್ಯಮಟ್ಟದಲ್ಲಿ 17 ವಯೋಮಿತಿಯೊಳಗಿನ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಕಲಬುರಗಿಯ ಸೈಮನ್ ಆಡೆ ಹಾಗೂ ವಿಶಾಲ, ಬೆಂಗಳೂರು ದಕ್ಷಿಣ ಜಿಲ್ಲೆಯ ದೀಪಕ, ನೀನಾದ ರವಿ, ವಿಕ್ರಮ ಪಿ. ಅರ್ಬಟ್ಟಿ, 14 ವಯೋಮಿತಿಯೊಳಗಿನ ಬೆಂಗಳೂರು ದಕ್ಷಿಣ ಜಿಲ್ಲೆಯ ಗೋಕುಲ ನಂದನ, ಸುಷ್ಮಾ, ಕಾವ್ಯಾ, ಬೆಂಗಳೂರು ಉತ್ತರ ಜಿಲ್ಲೆಯ ಅನುಪಮಾ ಹಾಗೂ ಅರ್ಪಿತಾ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ.
ರಾಜ್ಯದ ಕಲಬುರಗಿ, ಬೆಳಗಾವಿ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಸುಮಾರು 100 ಕ್ರೀಡಾಪಟುಗಳು ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ ಬಾಲಕರ ವಿಭಾಗದಲ್ಲಿ 60 ಹಾಗೂ ಬಾಲಕಿಯರ ವಿಭಾಗದಲ್ಲಿ 40 ಕ್ರೀಡಾಪಟುಗಳಿದ್ದಾರೆ.
ಕಲಬುರಗಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾರ್ಯಾಲಯದಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ 14 ಮತ್ತು 17 ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಲಾನ್ ಟೆನ್ನಿಸ್ ಪಂದ್ಯಾವಳಿಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಹಾಗೂ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶರಣಕುಮಾರ ಮೋದಿ ಮಾತನಾಡಿ, ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಲಾನ್ ಟೆನ್ನಿಸ್‍ನ 3 ಕೋರ್ಟ್‍ಗಳಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಗಳು ಜರುಗಬೇಕು. ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಹ ಇಲ್ಲಿ ಏರ್ಪಡಿಸಬೇಕು. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ, ಗೆಲ್ಲುವ ಪ್ರಯತ್ನ ಮುಂದುವರೆಸಬೇಕು. ಪ್ರಯತ್ನಕ್ಕೆ ಯಶಸ್ಸು ಖಂಡಿತ ದೊರೆಯುವುದು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಇಂದು ಕ್ರೀಡೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಭಾಗವಾಗಿ ಮಾರ್ಪಟ್ಟಿದೆ. ಶಾಲಾ ಶಿಕ್ಷಣದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ರಾಜ್ಯ ಮಟ್ಟದ ಅನೇಕ ಕ್ರೀಡೆಗಳಲ್ಲಿ ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಿದ್ದು, 12 ಜಿಲ್ಲೆಯ ಕ್ರೀಡಾಪಟುಗಳು ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಭರವಸೆಗಳನ್ನು ನೀಡಿದ್ದರು. ಆದರೆ ಸಧ್ಯ 6 ಜಿಲ್ಲೆಯ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಕ್ರೀಡಾಪಟುಗಳು ಹಾಗೂ ಅವರ ಪಾಲಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವಸತಿ ಮತ್ತು ವಾಹನದ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು 40 ದೈಹಿಕ ಶಿಕ್ಷಕರ ತಂಡದಿಂದ ಮೇಲ್ವಿಚಾರಣೆ ಹಾಗೂ ವ್ಯವಸ್ಥೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಿ. ರವಿಂದ್ರಕುಮಾರ, ಗ್ರೇಡ್ ಒನ್ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ||ಶಿವಲಿಂಗಪ್ಪ ಗೌಳಿ, ಕಾರ್ಯದರ್ಶಿ ಶಿವಪುತ್ರಪ್ಪ ಹೂಗಾರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಜಿ.ಬಿರಾದಾರ, ವೀರಭದ್ರ ದೊಡಮನಿ, ನೀಲಕಂಠಪ್ಪ, ಎ.ಎಸ್.ವಗ್ಗಿ, ಎಸ್.ಎಂ.ಚೌಧರಿ, ದೈಹಿಕ ಶಿಕ್ಷಕರುಗಳಾದ ಶಿವಶರಣಪ್ಪ ಮಂಠಾಳೆ, ಬಸವರಾಜ ರಟಕಲ್, ಲಾನ್ ಟೆನ್ನಿಸ್ ತರಬೇತುದಾರ ವಿಶ್ವನಾಥ ಮತ್ತಿತರರು ಪಾಲ್ಗೊಂಡಿದ್ದರು.
ಆಯುಷ್ ವೈದ್ಯಾಧಿಕಾರಿ ನೇಮಕಾತಿ ಕುರಿತು ಸ್ಪಷ್ಟೀಕರಣ
***************************************************
ಕಲಬುರಗಿ,ನ.20.(ಕ.ವಾ.)-ಆಯುಷ್ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಮೇಲೆ ಭರ್ತಿಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ನೇಮಕಾತಿ ಪ್ರಾಧಿಕಾರಿಯಾಗಿರುತ್ತಾರೆ. ಅವರ ಅಧ್ಯಕ್ಷತೆಯಲ್ಲಿ ನೇಮಕಾತಿ ಸಮಿತಿಯು ಸಭೆ ಸೇರಿ ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಮೀಸಲಾತಿ ವರ್ಗೀಕರಣವು ಸರ್ಕಾರದಿಂದ ಮತ್ತು ಇಲಾಖಾ ಮುಖ್ಯಸ್ಥರಿಂದ ನಿಗದಿಯಾಗಿರುವಂತೆ ಗುತ್ತಿಗೆ ಆಧಾರದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಚಿಮ್ಮಲಗಿ ತಿಳಿಸಿದ್ದಾರೆ.
ಆಯುಷ್ ಇಲಾಖೆಯಲ್ಲಿ ಆಯುಷ್ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಮೇಲೆ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಂದ ಆರೋಪಗಳಿಗೆ ಕಲಬುರಗಿ ಜಿಲ್ಲಾ ಆಯುಷ್ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ಕೆಲವೊಂದು ಸಂಘ ಸಂಸ್ಥೆಗಳು ನೇಮಕಾತಿಯಲ್ಲಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯಕೊಡಬೇಕೆಂದು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನೇಮಕಾತಿಯಲ್ಲಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಬೇಕೆಂದು ಇಲಾಖಾ ಮುಖ್ಯಸ್ಥರಿಗೆ ಈಗಾಗಲೇ ಪ್ರಸ್ತಾವನೆ ಕಳಿಸಿದ್ದು ಅವರಿಂದ ಮಾಹಿತಿ ಬಂದ ನಂತರ ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುವುದು. ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಅವರು ಸ್ಪಷ್ಪಪಡಿಸಿದ್ದಾರೆ.
ಸುರಕ್ಷಿತ ಸಂಚಾರಕ್ಕಾಗಿ ನ. 24ರಿಂದ ಈಶಾನ್ಯ ವಲಯದಾದ್ಯಂತ ವಿಶೇಷ ಕ್ರಮ ಜಾರಿ
ಕಲಬುರಗಿ,ನ.20.(ಕ.ವಾ.)-ಈಶಾನ್ಯ ವಲಯದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ 2017ರ ನವೆಂಬರ್ 24 ರಿಂದ ಕಟ್ಟುನಿಟ್ಟಾದ ಕ್ರಮಗಳು ಕೈಗೊಳ್ಳಲಾಗುತ್ತಿದ್ದು, ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಿ ಮತ್ತು ನಾಲ್ಕು ಚಕ್ರದ ವಾಹನ ಚಾಲಕರು ಬೆಲ್ಟ್ ಧರಿಸಿಕೊಂಡು ವಾಹನ ಚಾಲನೆ ಮಾಡಬೇಕು. ಆಟೋ ಡ್ರೈವರ್‍ಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿಕೊಂಡು ಆಟೋರಿಕ್ಷಾ ನಿಗದಿತ ಮಿತಿಯಲ್ಲಿ ಚಾಲನೆ ಮಾಡಬೇಕೆಂದು ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಆಲೋಕುಮಾರ ತಿಳಿಸಿದ್ದಾರೆ.
ವಾಹನ ಸವಾರರು ವಾಹನ ಚಾಲನೆ ಪರವಾನಿಗೆ, ಆರ್.ಸಿ. ಪುಸ್ತಕ, ವಿಮೆ ಇತ್ಯಾದಿಗಳ ನಕಲು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಹತ್ತಿರ ಇಟ್ಟುಕೊಳ್ಳಬೇಕು. ಸ್ಥಳೀಯ ಪೊಲೀಸರು ವಿಚಾರಣೆಗೊಳಪಡಿಸಿದಾಗ ಹಾಜರು ಪಡಿಸಬೇಕು. ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಜಾರಿಗೊಳಿಸಿರುವ ಈ ಕ್ರಮಕ್ಕೆ ಪೊಲೀಸ್ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಿದ್ದಾರೆ.
ಕಲಬುರಗಿ ನಗರ, ಜೇವರ್ಗಿ, ಶಹಾಪೂರ, ಸುರಪುರ, ಯಾದಗಿರಿ ಮತ್ತು ಬೀದರ್ ನಗರ ಹೀಗೆ ತಾಲ್ಲೂಕಾ ಮತ್ತು ಜಿಲ್ಲಾ ಕೇಂದ್ರಸ್ಥಾನಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಚಾರಕ್ಕೆ ಅಡೆತಡೆ ಉಂಟಾಗುವ ಅತಿಕ್ರಮಣ ಮತ್ತು ಒತ್ತುವರಿ ಪ್ರದೇಶ, ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಶಹಾಬಾದ್ ಪಟ್ಟಣಗಳಲ್ಲಿಯೂ ಕೂಡ ಸಂಚಾರಕ್ಕೆ ಅಡ್ಡಿಪಡಿಸುವಂತಹ ಒತ್ತುವರಿ ಪ್ರದೇಶ ತೆರವುಗೊಳಿಸಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈಶಾನ್ಯ ವಲಯದ ವ್ಯಾಪ್ತಿಯಲ್ಲಿ 2015 ರಲ್ಲಿ 337, 2016 ರಲ್ಲಿ 339 ಮತ್ತು 2017 ರಲ್ಲಿ 286 ಭಾರೀ ರಸ್ತೆ ಅಪಘಾತಗಳಲ್ಲಿ ವಾಹನ ಸವಾರರು ತಮ್ಮ ಪ್ರಾಣ ಕಳೆದುಕೊಂಡಿರುತ್ತಾರೆ. 2015 ರಲ್ಲಿ 1185, 2016 ರಲ್ಲಿ 1051 ಮತ್ತು 2017 ರಲ್ಲಿ 909 ರಸ್ತೆ ಅಪಘಾತ ಪ್ರಕರಣಗಳಲ್ಲಿ ವಾಹನ ಸವಾರರು ಭಾರೀ ಗಾಯಗೊಂಡಿರುತ್ತಾರೆ. ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳಲ್ಲಿ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರಿಂದ ಭಾರೀ ಗಾಯಗೊಂಡು ತಮ್ಮ ಪ್ರಾಣ ಕಳೆದುಕೊಂಡಿರುತ್ತಾರೆ.
ಈಗಾಗಲೇ ಹೆಲ್ಮೆಟ್ ರಹಿತ ವಾಹನ ಚಾಲನೆ, ಕುಡಿದ ಅಮಲಿನಲ್ಲಿ ವಾಹನ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಟ್ರಿಪಲ್ ರೈಡಿಂಗ್, ಅತೀ ವೇಗದಿಂದ ವಾಹನ ಚಾಲನೆ, ನಿಷ್ಕಾಳಜಿತನದಿಂದ ವಾಹನ ಚಾಲನೆ ಇತ್ಯಾದಿಗಳ ವಿರುದ್ಧ ಕ್ರಮ ಕೈಗೊಂಡು 1,12,482 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಆದರೂ ಕೂಡ ಹೆಲ್ಮೆಟ್ ಕಡ್ಡಾಯ ನಿಯಮ ಇನ್ನೂ ಸಾರ್ವಜನಿಕರು ಪಾಲಿಸುತ್ತಿಲ್ಲ. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ:
**********************************************************
ತಾಲೂಕುವಾರು ಅಧಿಸೂಚಿತ ಮುಖ್ಯ ಬೆಳೆಗಳ ವಿವರ
*********************************************
ಕಲಬುರಗಿ,ನ.20.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರದ ಆದೇಶ ದಿನಾಂಕ 22-09-2017ರ ಅನ್ವಯ 2017-18ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿತ ತಾಲೂಕುವಾರು ಮುಖ್ಯ ಬೆಳೆಗಳ ವಿವರ ಪಟ್ಟಿ ಇಂತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೋಕಾಶಿ ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನ ತಾಲೂಕುವಾರು ಮುಖ್ಯ ಬೆಳೆ ಮತ್ತು ಇತರೆ ಬೆಳಗಳ ವಿವರ ಇಂತಿದೆ. ಅಫಜಲಪುರ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಮಳೆಯಾಶ್ರಿತ ಸೂರ್ಯಕಾಂತಿ ಮತ್ತು ಕುಸುಮೆ. ಆಳಂದ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಮೆ.ಕಲಬುರಗಿ: ಮಳೆಯಾಶ್ರಿತ ಕಡಲೆ, ಜೋಳ, ಸೂರ್ಯಕಾಂತಿ, ನೀರಾವರಿ ಗೋಧಿ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಮೆ. ಚಿಂಚೋಳಿ: ಮಳೆಯಾಶ್ರಿತ ಕಡಲೆ, ಗೋಧಿ, ಜೋಳ ಮತ್ತು ಇತರೆ ಬೆಳೆಯಾದ ಮಳೆಯಾಶ್ರಿತ ಕುಸುಮೆ. ಚಿತ್ತಾಪುರ: ಮಳೆಯಾಶ್ರಿತ ಕಡಲೆ, ಜೋಳ ಮತ್ತು ಇತರೆ ಬೆಳೆಗಳಾದ ಮಳೆಯಶ್ರಿತ ಕುಸುಮೆ ಮತ್ತು ನೀರಾವರಿ ಭತ್ತ. ಜೇವರ್ಗಿ: ನೀರಾವರಿ ಮತ್ತು ಮಳೆಯಾಶ್ರಿತ ಕಡಲೆ, ಗೋಧಿ, ಜೋಳ, ಮಳೆಯಾಶ್ರಿತ ಸೂರ್ಯಕಾಂತಿ ಮತ್ತು ಇತರೆ ಬೆಳೆಗಳಾದ ಮಳೆಯಾಶ್ರಿತ ಕುಸುಮೆ ಮತ್ತು ನೀರಾವರಿ ಮುಸುಕಿನ ಜೋಳ, ಭತ್ತ. ಸೇಡಂ: ಮಳೆಯಾಶ್ರಿತ ಕಡಲೆ, ಜೋಳ ಮತ್ತು ಇತರೆ ಬೆಳೆಗಳಾದ ಮಳೆಯಾಶ್ರಿತ ಕುಸುಮೆ ಹಾಗೂ ನೀರಾವರಿ ಭತ್ತ.
ಬೇಸಿಗೆ ಹಂಗಾಮಿನ ತಾಲೂಕುವಾರು ಮುಖ್ಯ ಬೆಳೆ ಮತ್ತು ಇತರೆ ಬೆಳಗಳ ವಿವರ ಇಂತಿದೆ. ಅಫಜಲಪುರ: ನೆಲಗಡಲೆ (ಶೇಂಗಾ)-(ನೀರಾವರಿ), ಕಲಬುರಗಿ: ನೆಲಗಡಲೆ (ಶೇಂಗಾ)-(ನೀರಾವರಿ), ಜೇವರ್ಗಿ: ನೀರಾವರಿ ನೆಲಗಡಲೆ (ಶೇಂಗಾ) ಮತ್ತು ಭತ್ತ ಹಾಗೂ ಇತರೆ ಬೆಳೆಯಾದ ನೀರಾವರಿ ಸೂರ್ಯಕಾಂತಿ.
ನೀರಾವರಿ ಮತ್ತು ಮಳೆಯಾಶ್ರಿತ ಜೋಳ, ಸೂರ್ಯಕಾಂತಿ, ಮಳೆಯಾಶ್ರಿತ ಕಡಲೆ, ಮಳೆಯಾಶ್ರಿತ ಕುಸುಮೆ ಬೆಳಿಗಳಿಗೆ ನೋಂದಣಿ ಮಾಡಲು 2017ರ ನವೆಂಬರ್ 30 ಕೊನೆಯ ದಿನವಾಗಿದೆ. ನೀರಾವರಿ ಭತ್ತ, ನೀರಾವರಿ ಮತ್ತು ಮಳೆಯಾಶ್ರಿತ ಗೋಧಿ ಬೆಳೆಗಳಿಗೆ ನೋಂದಣಿ ಮಾಡಲು 2017ರ ಡಿಸೆಂಬರ್ 30 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿನಲ್ಲಿ ನೀರಾವರಿ ನೆಲಗಡಲೆ (ಶೇಂಗಾ) ಮತ್ತು ಸೂರ್ಯಕಾಂತಿ ಬೆಳೆಗಳಿಗೆ ನೋಂದಣಿ ಮಾಡಲು 2018ರ ಫೆಬ್ರವರಿ 28 ಕೊನೆಯ ದಿನವಾಗಿದೆ. ಮುಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ಟಾಟಾ ಎಐಜಿ ಜನರಲ್ ಇನ್ಸುರೆನ್ಸ್ ಕಂಪನಿ ಪ್ರೈವೆಟ್ ಲಿಮಿಟೆಡ್ (ಖಿಂಖಿಂ ಂIಉ ಉeಟಿeಡಿಚಿಟ Iಟಿsuಡಿಚಿಟಿಛಿe ಅomಠಿಚಿಟಿಥಿ ಐimiಣeಜ) ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ.
ಸ್ಧಳ, ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ (ಐoಛಿಚಿಟiseಜ ಅಚಿಟಚಿmiಣಥಿ) ಆಲಿಕಲ್ಲು ಮಳೆ (ಊಚಿiಟsಣoಡಿm), ಭೂ ಕುಸಿತ (ಐಚಿಟಿಜ sಟiಜe) ಮತ್ತು ಬೆಳೆ ಮುಳುಗಡೆ (Iಟಿuಟಿಜಚಿಣioಟಿ) ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಅಧಿಸೂಚಿಸಿದೆ. ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.
ಇಂತಹ ಸ್ಥಳಿಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿದ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗೆ ತಕ್ಷಣ ಸೂಚನೇ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು 48 ಗಂಟೆಗಳೊಳಗಾಗಿ ತಿಳಿಸಬೇಕು. ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ಖಾತೆ/ ಪಾಸ್‍ಪುಸ್ತಕ/ ಕಂದಾಯ ರಸೀದಿಯನ್ನು ನೀಡಬೇಕು.
ಈ ಯೋಜನೆಯಡಿ 2017-18 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Posಣ ಊಚಿಡಿvesಣ ಐosses) ಕಟಾವು ಮಾಡಿದ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡ ಮಾರುತ ಸಹಿತಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳನ್ನಿ ಒಳಪಡಿಸಲಾಗಿದೆ. ರೈತರು ಈ ಬಗ್ಗೆ ಸಂಬಂದಪಟ್ಟ ಆರ್ಥಿಕ ಸಂಸ್ಥೆ ಅಥವಾ ಅನುಷ್ಟಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ನೇರವಾಗಿ ಅಥವಾ ಕೃಷಿ/ತೋಟಗಾರಿಕೆ ಇಲಾಖೆ ಮೂಲಕ ತಕ್ಷಣವೇ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ವಿವರಗಳನ್ನು ಹಾನಿಯ ವ್ಯಾಪ್ತಿ, ಹಾನಿಯ ಕಾರಣಗಳನ್ನು 48 ಗಂಟೆಯೊಳಗೆ ತಿಳಿಸಬೇಕು.
ರೈತರು ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಗಳಿಗೆ ನಿಗದಿಪಡಿಸಲಾಗಿರುವ ಇಂಡೆಮ್ನಿಟಿ ಮಟ್ಟ, ವಿಮಾ ಮೊತ,್ತ ವಿಮಾ ಕಂತಿನ ವಿವರ ಕುರಿತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಕೃಷಿ ಇಲಾಖೆಯ ಕಾರ್ಯಾಲಯವನ್ನು ಹಾಗೂ ಸಮೀಪದ ಬ್ಯಾಂಕುಗಳಿಗೆ ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಡು ಶಿಶುವಿನ ಪೋಷಕರ ಪತ್ತೆಗೆ ಮನವಿ
**************************************
ಕಲಬುರಗಿ,ನ.20.(ಕ.ವಾ.)-ರಾಯಚೂರಿನ ಮಂತ್ರಾಲಯ ರಸ್ತೆ ಪುಲ್ ಹತ್ತಿರದ ಮಲಿಯಾಬಾದ್ ಕ್ರಾಸ್ ಹತ್ತಿರ 2017ರ ನವೆಂಬರ್ 4ರಂದು ಪತ್ತೆಯಾದ ಒಂದು ದಿವಸದ ಗಂಡು ಮಗುವನ್ನು ರಾಯಚೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವರ್ಗಾವಣೆಯಾಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ಅದೇ ದಿನದಂದು ದಾಖಲಿಸಲಾಗಿದೆ. ಬಿಳುಪು ಬಣ್ಣ ಹೊಂದಿರುವ ಈ ಗಂಡು ಶಿಶು ಕಡಿಮೆ ತೂಕ ಹೊಂದಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮೇಲ್ಕಂಡ ಗಂಡು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ 08472-265588/ ಮೊಬೈಲ್ ಸಂಖ್ಯೆ 9449728576ಗಳನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
*********************************
ಕಲಬುರಗಿ,ನ.20.(ಕ.ವಾ.)-ಜೇವರ್ಗಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 26/1ರಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿದ 7082 ಚ.ಅ. ವಿಸ್ತೀರ್ಣದ ಸಿ.ಎ. ನಿವೇಶನವನ್ನು ಬಂಜಾರ ಭವನ ನಿರ್ಮಾಣಕ್ಕಾಗಿ ಹಂಚಿಕೆ ಮಾಡಲಾಗಿದೆ ಎಂದು ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸಮುದಾಯದ ಭವನ ನಿರ್ಮಾಣಕ್ಕಾಗಿ ಅಗತ್ಯ ಸ್ಥಳ ಗುರುತಿಸಿ ನಿಯಮಾನುಸಾರ ಅಗತ್ಯ ದಾಖಲೆ ಜೊತೆಗೆ ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲು 2017ರ ಅಕ್ಟೋಬರ್ 4ರಂದು ಜರುಗಿದ ಜೇವರ್ಗಿ ಪುರಸಭೆ ಕಾರ್ಯಾಲಯದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ.
ಇದಕ್ಕಾಗಿ ಸಾರ್ವಜನಿಕರು ಈ ಕುರಿತು ಆಕ್ಷೇಪಣೆ, ತಕರಾರುಗಳೇನಾದರೂ ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ 2017ರ ನವೆಂಬರ್ 24ರೊಳಗಾಗಿ ಜೇವರ್ಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ನಿಗದಿತ ಅವಧಿ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 4ರಂದು ಮರಗಳ ಕಟಾವಿಗೆ ಬಹಿರಂಗ ಹರಾಜು
ಕಲಬುರಗಿ,ನ.20.(ಕ.ವಾ.)-ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿಯ ರಾಮಮಂದಿರ ವೃತ್ತದಿಂದ ಖರ್ಗೆ ಪೆಟ್ರೋಲ್ ಬಂಕ್ ಸರ್ಕಲ್‍ವರೆಗಿನ ಎಡ ಮತ್ತು ಬಲಬದಿಯ ರಸ್ತೆಯಲ್ಲಿರುವ ಒಟ್ಟು 245 ಮರಗಳನ್ನು ಕಟಾವುಮಾಡಲು ಬಹಿರಂಗ ಹರಾಜು 2017ರ ಡಿಸೆಂಬರ್ 4 ರಂದು ಬೆಳಿಗ್ಗೆ 11.30 ಗಂಟೆಗೆÀ ಕಲಬುರಗಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಡಿಸೆಂಬರ್ 4ರಂದು ಬಹಿರಂಗ ಹರಾಜು ನಡೆಯದಿದ್ದಲ್ಲಿ ಡಿಸೆಂಬರ್ 5ರಂದು ಬಹಿರಂಗ ಹರಾಜು ಮಾಡಲಾಗುವುದು ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ವಿಜಾಪುರ-ಕಲಬುರಗಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಸಂಬಂಧಿಸಿದ ರಾಮಮಂದಿರ ವೃತ್ತದಿಂದ ಹುಮನಾಬಾದ ಚೌರಸ್ತಾವರೆಗೆ ಬರುವ ಮರಗಳು ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ಮರಗಳ ಕಟಾವಣೆಗೆ ಬಹಿರಂಗ ಹರಾಜು ಮಾಡಲು ಉದ್ದೇಶಿಸಲಾಗಿದೆ. ಇ.ಎಂ.ಡಿ. ಮೊತ್ತ, ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ನವೆಂಬರ್ 21ರಂದು ಕಲಬುರಗಿಯಲ್ಲಿ ಜಿಲ್ಲಾ ಮಕ್ಕಳ ಹಬ್ಬ ಉದ್ಘಾಟನೆ
*************************************************************
ಕಲಬುರಗಿ,ನ.20.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಕಾರದೊಂದಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಸಗರನಾಡು ಸೇವಾ ಪ್ರತಿಷ್ಠಾನ ಸಹಯೋಗದಲ್ಲಿ ನವೆಂಬರ್ 21ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲಾ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಕಲಬುರಗಿಯ ಡಾ|| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳಾದ ಹೆಪ್ಸಿಬಾರಾಣಿ ಕೊರ್ಲಪಾಟಿ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್, ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷೆ ಸಿ.ರೀನಾ. ರಶ್ಮಿ ಡಿಸೋಜಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎ.ಡಿ. ನಾಡಿಗೇರಿ ಭಾಗವಹಿಸುವರು. ಸಾಹಿತಿ ಕಾವ್ಯಶ್ರೀ ಮಹಾಗಾವಂಕರ್ ಉಪನ್ಯಾಸ ನೀಡುವರು.
ಅಂದು ಮಧ್ಯಾಹ್ನ 1.30 ರಿಂದ ಸಂಜೆ 4.30 ಗಂಟೆಯವರೆಗೆ ಆಯೋಜಿಸಿರುವ ಮಕ್ಕಳ ಪ್ರತಿಭಾ ಅನಾವರಣ ಕಾರ್ಯಕ್ರಮದಲ್ಲಿ ಮಕ್ಕಳ ಸಂಗೀತೊತ್ಸವ, ಮಕ್ಕಳ ನೃತ್ಯೋತ್ಸವ, ಮಕ್ಕಳ ನಾಟಕೋತ್ಸವ, ಮಕ್ಕಳ ಕವಿಗೋಷ್ಠಿ, ಮಕ್ಕಳಿಂದ ಏಕಾಭಿನಯ ಪಾತ್ರ (ಮಿಮಿಕ್ರಿ), ಚಿತ್ರಕಲೆ ಮತ್ತು ಕರಕುಶಲತೆ ಪ್ರದರ್ಶನ ಏರ್ಪಡಿಸಲಾಗಿದೆ.
ಮಕ್ಕಳ ಹಬ್ಬ ಸಂಭ್ರಮ ಕಾರ್ಯಕ್ರಮ ಸಂಚಾಲಕ ಪ್ರಕಾಶ ಎಸ್. ಅಂಗಡಿ ಕನ್ನೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುದೋಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವರು, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರÀ ಸಮಾರೊಪ ಭಾಷಣ ಮಾಡುವರು. ಬಾಲವಿಕಾಸ ಅಕಾಡೆಮಿ ಸದಸ್ಯರಾದ ಸವಿತಾ ಸಜ್ಜನ್, ಹುಸೇನ್‍ಸಾಬ ಬಿ ಚೌದ್ರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರುಗಳಾದ ಡಾ|| ಯಲ್ಲಾಲಿಂಗ ಕಾಳನೂರು, ಚಂದ್ರಕಾಂತ ಬಿರಾದರ್, ಸೂರ್ಯಕಾಂತ ಕುದುಮೂಡ, ಸುಧಾ ಪಾಳ, ಮಕ್ಕಳ ಹಬ್ಬ ಸಂಭ್ರಮದ ಸಹ ಸಂಚಾಲಕ ಸುರೇಶ ಬಡಿಗೇರ ಅತಿಥಿಗಳಾಗಿ ಪಾಲ್ಗೊಳ್ಳುವರು.
ನವೆಂಬರ್ 21ರಿಂದ ಗುಲಬರ್ಗಾ ವಿ.ವಿ.ಯಲ್ಲಿ ಅಂತರರಾಷ್ಟ್ರೀಯ ಕಾರ್ಯಾಗಾರ
*********************************************************************
ಕಲಬುರಗಿ,ನ.20.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ಮಂಡಳಿ ಕಲಬುರಗಿ ಇವುಗಳ ಸಹಯೋಗದಲ್ಲಿ “ರೋಗ ನಿರ್ವಹಣೆಯಲ್ಲಿ ಕಂಡಿರುವ ಆಧುನಿಕ ಬದಲಾವಣೆಗಳು-ಮನುಕುಲದ ಕಲ್ಯಾಣ” ಎಂಬ ವಿಷಯ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ನವೆಂಬರ್ 21 ರಿಂದ 23ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರಗಿಯ ಡಾ. ಬಿ.ಆರ್. ಅಂಬೇಡ್ಕರ ಅಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ನವೆಂಬರ್ 21ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ವಿಶೇಷ ಮಹಿಳಾ ವಿಜ್ಞಾನ ಪೀಠದ ಮುಖಸ್ಥರು ಹಾಗೂ ಪದ್ಮಭೂಷಣ ಡಾ. ಮಂಜು ಶರ್ಮಾ ಅವರು ಕಾರ್ಯಾಗಾರವನ್ನು ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ, ವೈದ್ಯಕಿಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಶ್ವವಿದ್ಯಾಲಯದ ಕಲಪತಿ ಎಸ್.ಆರ್. ನಿರಂಜನ್ ಅಧ್ಯಕ್ಷತೆ ವಹಿಸುವರು.
ಡೆನ್ಮಾರ್ಕ್‍ನ ಕೋಪಿಂಗ್‍ಹ್ಯಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಲೆಸೊಗಾರ್ಡ ಲುಂಡ್, ಶ್ರೀಲಂಕಾದ ಕೊಲಂಬೋ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕ್ಷನಿಕ ಹಿರುಮಬುರೆಗಮ್, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಂ. ಸಾಲಿಮಠ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಎಲ್. ಮಹೇಶ್ವರ, ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಡಿ.ಎಂ.ಮದರಿ, ವಿತ್ತಾಧಿಕಾರಿ ಡಾ ರಾಜನಾಳ್ಕರ್ ಲಕ್ಷಣ, ಸಿಂಡಿಕೇಟ್ ಸದಸ್ಯ ಈಶ್ವರ ಇಂಗನ್, ವಿದ್ಯಾ ವಿಷಯಕ ಪರಿಷತ್ ಸದಸ್ಯ ಅಬ್ದುಲ್ ರಜಾಕ್, ಅತಿಥಿಗಳಾಗಿ ಭಾಗವಹಿಸುವರು. ಹೈದ್ರಾಬಾದಿನ ಉನ್ಮಾನಿಯಾ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಪ್ಲಾಂಟ್ ಮಾಲಿಕ್ಯುಲರ್ ಬಯೋಲಜಿ ನಿರ್ದೇಶಕ ಡಾ. ಕೆ.ವಿ. ರಾವ ಪ್ರಧಾನ ಭಾಷಣ ಮಾಡಲಿದ್ದಾರೆ.
ನವೆಂಬರ್ 23ರಂದು ಮಧ್ಯಾಹ್ನ 3.30 ಗಂಟೆಗೆ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ ಅಡಿಟೋರಿಯಂನಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್. ನಿರಂಜನ್ ಅಧ್ಯಕ್ಷತೆ ವಹಿಸುವರು. ಹರಿಯಾಣಾ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಮಾಜಿ ಸಂಶೋಧನಾ ನಿರ್ದೇಶಕ ಡಾ. ಭೂಣಷ ಜಲಾಲಿ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯ ಸಮ ಕುಲಪತಿ ಪ್ರೊ. ಜಿ.ಆರ್.ನಾಯಕ, ಡೆನ್ಮಾರ್ಕ್‍ನ ಕೋಪಿಂಗ್ ಹ್ಯಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಓಲೆಸೋಗಾರ್ಡ್ ಲುಂಡ್, ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ. ಮನೋಹರಾಚಾರ್ಯ, ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಡಿ.ಎಂ. ಮದರಿ, ವಿತ್ತಾಧಿಕಾರಿ ಡಾ. ರಾಜಕುಮಾರ ಲಕ್ಷ್ಮಣ, ಸಿಂಡಿಕೇಟ್ ಸದಸ್ಯ ಸಂಗಣ್ಣಗೌಡ ಪಾಟೀಲ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಎಸ್. ಸತೀಶ ಅಲ್ಲೊಳ್ಳಿ ಅತಿಥಿಗಳಾಗಿ ಆಗಮಿಸುವರು.


No comments:

Post a Comment