GULBARGA VARTHE

GULBARGA VARTHE

Saturday, 7 October 2017

News and photo Date: 07--10--2017

ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ
*******************************************
ಕಲಬುರಗಿ,ಅ.07.(ಕ.ವಾ)-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಅಕ್ಟೋಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗೆ ಲಸಿಕೆ ಹಾಕಿಸಿ ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಿ
*******************************************************
ಕಲಬುರಗಿ,ಅ.07.(ಕ.ವಾ)-ಒಂದು ವರ್ಷದೊಳಗಿನ ಮಗುವಿಗೆ ಕಡ್ಡಾಯವಾಗಿ 8 ಬಗೆಯ ಲಸಿಕೆಗಳನ್ನು ಹಾಕಿಸಲೇಬೇಕಾಗಿದೆ. ಮಕ್ಕಳಿಗೆ ಅವಶ್ಯಕ ಲಸಿಕೆಗಳನ್ನು ಹಾಕಿಸುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಬಹುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶನಿವಾರ ಎಂ.ಆರ್.ಎಂ.ಸಿ. ವೈದ್ಯಕೀಯ ಕಾಲೇಜಿನ ಎದುರಿನ ಸುಂಧರನಗರ ಪ್ರದೇಶದ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ ತೀವ್ರಗೊಂಡ ಮಿಷನ್ ಇಂದ್ರಧನುಷ ಯೋಜನೆಯ ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ವ್ಯಸ್ಥರಾಗಿ ಕೇವಲ ಪೋಲಿಯೋ ಲಸಿಕೆ ಮಾತ್ರ ಹಾಕಿಸುತ್ತಿದ್ದಾರೆ. ಲಸಿಕೆ ವಂಚಿತ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ದೇಶದಾದ್ಯಂತ ಮಿಷನ್ ಇಂದ್ರಧನುಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿಯೂ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕೆಂದರು.
ಎರಡು ವರ್ಷದ ಮಗುವಿಗೆ ಮೂರು ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು. ಎಲ್ಲ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಮಿಷನ್ ಇಂದ್ರಧನುಷ ಲಸಿಕಾ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಮಾಡಲಾಗುತ್ತಿದ್ದು, ಒಟ್ಟಿನಲ್ಲಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ ಮಾತನಾಡಿ, ಕೊಳಚೆ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಾಗಿ ಲಸಿಕೆಯಿಂದ ವಂಚಿತರಾಗುತ್ತಾರೆ. ಮಿಷನ್ ಇಂದ್ರಧನುಷ ಕಾರ್ಯಕ್ರಮದಲ್ಲಿ ಇಂತಹ ಮಕ್ಕಳಿಗೆ ಕಡ್ಡಾಯವಾಗಿ ತಪ್ಪದೇ ಲಸಿಕೆ ನೀಡಬೇಕು. ತಾಯಂದಿರು ಸಹ ಮಕ್ಕಳನ್ನು ಆಸ್ಪತ್ರೆಗಳಿಗೆ ಕರೆದೊಯ್ದು ಅವಶ್ಯಕವಿರುವ ಲಸಿಕೆ ದೊರಕಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಅಂಬಾರಾಯ ರುದ್ರವಾಡಿ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ಹಾಗೂ ಶಸ್ತ್ರಜ್ಞ ಡಾ|| ಬಾಲಚಂದ್ರ ಜೋಷಿ, ರಾಜ್ಯ ನೋಡಲ್ ಅಧಿಕಾರಿ ಡಾ|| ಎಂ.ಕೆ. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಮಲ್ಲಾರಾವ ಮಲ್ಲೆ, ಪೋಪಟಲಾಲ್ ಆರ್. ಉಪಾಧ್ಯೆ, ರಾಮಾನಂದ ಉಪಾಧ್ಯೆ, ಅನೀಲಕುಮಾರ ಸಿ. ಕಾಂಬಳೆ, ಸುಧಾಮ ಎಸ್. ಉಪಾಧ್ಯೆ ಮತ್ತಿತರರು ಹಾಜರಿದ್ದರು.
ಮಿಷನ್ ಇಂದ್ರಧನುಷ ಯೋಜನೆಯಡಿ ಮೊದಲನೇ ಸುತ್ತಿನಲ್ಲಿ 538 ಗರ್ಭಿಣಿಯರಿಗೆ, 0-1 ವರ್ಷದೊಳಗಿನ 1489 ಹಾಗೂ 1-2 ವರ್ಷದೊಳಗಿನ 769 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 7 ರಿಂದ 17ರ ವರೆಗೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಇಂದ್ರಧನುಷ ವಿಶೇಷ ಲಸಿಕಾ ಅಭಿಯಾನದಡಿ ನಾಲ್ಕು ಸುತ್ತು ಮುಗಿದಿದ್ದು, ವಿವಿಧ ಲಸಿಕಾ ಕಾರ್ಯಕ್ರಮದಡಿ ಕಡಿಮೆ ಸಾಧನೆಗೈದ ದೇಶದ 118 ಜಿಲ್ಲೆ, 17 ನಗರ ಪ್ರದೇಶ ಹಾಗೂ ಈಶಾನ್ಯ ಭಾಗದ 52 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ಕರ್ನಾಟಕ ರಾಜ್ಯದ ಕಲಬುರಗಿ, ಯಾದಗಿರಿ, ಬೆಳಗಾವಿ ನಗರ, ಬಾಗಲಕೋಟೆ ಮತ್ತು ಬೆಂಗಳೂರು ಬಿ.ಬಿ.ಎಂ.ಪಿ. ಜಿಲ್ಲೆಗಳು ಸೇರಿವೆ. ಅಕ್ಟೋಬರ್-2017 ರಿಂದ ಜನವರಿ-2018ರ ವರೆಗೆ ನಾಲ್ಕು ಹಂತದಲ್ಲಿ ಪ್ರತಿ ಮಾಹೆ 7ನೇ ತಾರೀಖಿನಿಂದ ಈ ಲಸಿಕೆ ಕಾರ್ಯಕ್ರಮ ಜರುಗಲಿದೆ. ಒಂದು ವರ್ಷದೊಳಗಿನ ಮಕ್ಕಳಿಗೆ 8 ನಮೂನೆಯ ಲಸಿಕೆಗಳು ಹಾಗೂ ಎರಡು ವರ್ಷದೊಳಗಿನ ಮಕ್ಕಳಿಗೆ 3 ನಮೂನೆಯ ಲಸಿಕೆಗಳನ್ನು ಕಡ್ಡಾಯವಾಗಿ ನೀಡಲಾಗುವುದು.

ತಾಜ್ ಸುಲ್ತಾನಪುರ ಮಾರುಕಟ್ಟೆ ಪ್ರಾಂಗಣಕ್ಕೆ ರಸ್ತೆ-ಭದ್ರತೆ ವ್ಯವಸ್ಥೆಗೆ ಸಚಿವರ ಅಭಯ
*************************************************************************
ಕಲಬುರಗಿ,ಅ.07.(ಕ.ವಾ)-ತಾಜ್ ಸುಲ್ತಾನಪುರ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮಾರುಕಟ್ಟೆ ಪ್ರಾಂಗಣಕ್ಕೆ ರಸ್ತೆ, ವಿದ್ಯುತ್, ಸ್ವಚ್ಛತೆ ಹಾಗೂ ಭದ್ರತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಶನಿವಾರ ತಾಜ್‍ಸುಲ್ತಾನಪುರ ಮಾರುಕಟ್ಟೆ ಪ್ರಾಂಗಣ ವೀಕ್ಷಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ರಿಂಗ್ ರಸ್ತೆಯಿಂದ, ಸೈಯದ ಚಿಂಚೋಳಿ ರಸ್ತೆಯಿಂದ ಹಾಗೂ ಸುಲ್ತಾನಪುರ ರಸ್ತೆಯಿಂದ ಮಾರುಕಟ್ಟೆ ಪ್ರಾಂಗಣಕ್ಕೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳ ಮುಂದಿನ ಚರಂಡಿ ಮುಚ್ಚದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಕೊರತೆ ಕಾಣುತ್ತಿದೆ. ರಾತ್ರಿ ವ್ಯಾಪಾರಕ್ಕೆ ಆಗಮಿಸುವ ರೈತರನ್ನು ದಾರಿಯಲ್ಲಿ ತಡೆದು ಲೋಟಿ ಮಾಡುವ ಪ್ರಸಂಗಗಳು ಜರುಗಿರುವ ಹಿನ್ನೆಲೆಯಲ್ಲಿ ರಸ್ತೆಗುಂಟ ಮತ್ತು ಪ್ರಾಂಗಣದಲ್ಲಿ ವಿದ್ಯುತ್ ದೀಪಗಳ ಹಾಗೂ ರಾತ್ರಿ ಕಾವಲುಗಾರರ ವ್ಯವಸ್ಥೆ ಮಾಡಿಸಲಾಗುವುದು. ಸಧ್ಯ ಪ್ರಾಂಗಣದಲ್ಲಿ ಬೋರವೇಲ್ ಮುಖಾಂತರ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ನಗರ ನೀರು ಸರಬರಾಜು ಮಂಡಳಿಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಇಲಿಯಾಸ್ ಬಾಗವಾನ್ ಮಾತನಾಡಿ, ತಾಜ್ ಸುಲ್ತಾನಪುರ ಮಾರುಕಟ್ಟೆ ಪ್ರಾಂಗಣದ ಮಧ್ಯದ ದ್ವಾರ ತುಂಬಾ ಚಿಕ್ಕದಿದ್ದು ಅದನ್ನು ಅಭಿವೃದ್ಧಿಪಡಿಸಬೇಕು. ಕಲಬುರಗಿ ನಗರದ ಸುತ್ತಮುತ್ತಲಿನ ಪ್ರದೇಶದಿಂದ ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ತರುವ ರೈತರು 2-3 ಪ್ರದೇಶಗಳಲ್ಲಿ ರಾತ್ರಿ ವ್ಯಾಪಾರ ಮಾಡುತ್ತಿದ್ದಾರೆ. ಎಂ.ಎಸ್.ಕೆ. ಮಿಲ್ ಹತ್ತಿರದ ಕಣ್ಣಿ ಮಾರುಕಟ್ಟೆಯಲ್ಲಿ ರಾತ್ರಿ ಹೊತ್ತು ಸಗಟು ವ್ಯಾಪಾರ ನಡೆಯದೇ ಕೇವಲ ಹಗಲಿನಲ್ಲಿ ವ್ಯಾಪಾರ ನಡೆಯುವಂತಾಗಬೇಕು. ಆಗ ತಾಜ್‍ಸುಲ್ತಾನಪುರ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವ್ಯಾಪಾರಕ್ಕೆ ಆಗಮಿಸುವರು. ಮಾರುಕಟ್ಟೆ ಪ್ರಾಂಗಣಕ್ಕೆ ಆಗಮಿಸುವ ಪುರುಷ ಮತ್ತು ಮಹಿಳಾ ವ್ಯಾಪಾರಸ್ಥರಿಗೆ ಅನುಕೂಲವಾಗುವ ಹಾಗೆ ಶೌಚಾಲಯ ನಿರ್ಮಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಾಂತಕುಮಾರ ಬಿರಾದಾರ, ಉಪಾಧ್ಯಕ್ಷ ಶರಣಬಸಪ್ಪ ಕಮಗೊಂಡ, ಕಾರ್ಯದರ್ಶಿ ರಾಜಶ್ರೀ, ಸದಸ್ಯರಾದ ಚನ್ನಮ್ಮ ಸಾಹು, ಶರಣು ಗೋಧಿ, ಬಾಬು ಮರಮಂಚಿ, ಸಹಾಯಕ ಕಾರ್ಯದರ್ಶಿ ಪ್ರಕಾಶ ಅಯ್ಯಾಳಕರ್ ಮತ್ತಿತರರು ಉಪಸ್ಥಿತರಿದ್ದರು.

ಹರಾಜು ಕಟ್ಟೆಗೆ 20 ಕೋಟಿ ರೂ. ವೆಚ್ಚದಲ್ಲಿ ಟಿನ್‍ಶೆಡ್ ನಿರ್ಮಾಣ
********************************************************
ಕಲಬುರಗಿ,ಅ.07.(ಕ.ವಾ)-ಕಲಬುರಗಿಯ ಮುಖ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹರಾಜು ಕಟ್ಟೆಗೆ 20 ಕೋಟಿ ರೂ.ಗಳ ವೆಚ್ಚದಲ್ಲಿ ಟಿನ್‍ಶೆಡ್ ನಿರ್ಮಿಸಲು ಆದಷ್ಟು ಬೇಗ ಟೆಂಡರ್ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಕೃಷಿ ಮಾರುಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶನಿವಾರ ಗಂಜ್ ಪ್ರದೇಶದ ಮುಖ್ಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ಮಾತನಾಡಿ, ಟಿನ್‍ಶೆಡ್ ನಿರ್ಮಾಣಕ್ಕೆ ನಬಾರ್ಡ್ ವತಿಯಿಂದ 5 ಕೋಟಿ ರೂ. ಧನಸಹಾಯ ದೊರೆಯಲಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಧಿಯಿಂದ 15ಕೋಟಿ ರೂ. ಭರಿಸಬೇಕಾಗುವುದು ಎಂದರು.
ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಹಾಗೂ ದವಸಧಾನ್ಯಗಳ ವ್ಯಾಪಾರಸ್ಥರಿಂದ ಹೆಚ್ಚಿನ ಕಮಿಶನ್ ಪಡೆಯಲಾಗುತ್ತಿದೆ ಎಂಬ ದೂರುಗಳಿದ್ದು, ಈಗಾಗಲೇ ಮೂರು ಏಜೆಂಟರ್ ಲೈಸೆನ್ಸ್ ರದ್ದುಗೊಳಿಸಲಾಗಿದೆ. ರೈತರಿಂದ ಹೆಚ್ಚಿನ ಕಮಿಶನ್ ಪಡೆದು ಮೋಸ ಮಾಡಬಾರದು. ಅಂಥವರನ್ನು ಕ್ಷಮಿಸಲಾಗದು ಎಂದು ಎಚ್ಚರಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅವಶ್ಯಕವಿರುವ ಮುಖ್ಯ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತಿದೆ. ಇನ್ನೂಳಿದ ನೀರಿನ ಸಂಪರ್ಕ, ಚರಂಡಿ, ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಈ ಹಿಂದೆ 4.7 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿದ್ಯುತ್ತಿನ ಯು.ಜಿ. ಕೇಬಲ್ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಯನ್ನು ಜೆಸ್ಕಾಂನ ಸುಪ್ರಿಂಟೆಂಡೆಂಟ್ ಇಂಜಿನಿಯರ್ ಕಚೇರಿಯಿಂದ ಪರಿಶೀಲಿಸಬೇಕು. ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಬೇಕೆಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೇವಲ ಒಳ ಮತ್ತು ಹೊರ ದ್ವಾರಗಳನ್ನು ಕಾರ್ಯಗತಗೊಳಿಸುವುದು ಸೂಕ್ತವಾಗಿದೆ. ಈ ದ್ವಾರಗಳಲ್ಲಿ ದೊಡ್ಡ ಪ್ರಮಾಣದ ತೂಕದ ಯಂತ್ರ ನಿರ್ಮಿಸಿದ್ದಲ್ಲಿ ಮಾರುಕಟ್ಟೆಗೆ ಬರುವ ದವಸಧಾನ್ಯಗಳ ನಿಖರ ಪ್ರಮಾಣ ತಿಳಿಯುತ್ತದೆ. ಎರಡೇ ದ್ವಾರಗಳಿದ್ದಲ್ಲಿ ಮಾರುಕಟ್ಟೆಗೆ ಬರುವ ಹಾಗೂ ಹೊರ ಹೋಗುವ ದಾಸ್ತಾನಿನ ಮೇಲೆ ನಿಗಾ ಇಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಾಂತಕುಮಾರ ಬಿರಾದಾರ, ಉಪಾಧ್ಯಕ್ಷ ಶರಣಬಸಪ್ಪ ಕಮಗೊಂಡ, ಕಾರ್ಯದರ್ಶಿ ರಾಜಶ್ರೀ, ಸದಸ್ಯರಾದ ಚನ್ನಮ್ಮ ಸಾಹು, ಶರಣು ಗೋಧಿ, ಬಾಬು ಮರಮಂಚಿ, ಸಹಾಯಕ ಕಾರ್ಯದರ್ಶಿ ಪ್ರಕಾಶ ಅಯ್ಯಾಳಕರ್ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸಲು
**********************************************************************
ಸೂಚನೆ
*******
ಕಲಬುರಗಿ,ಅ.07.(ಕ.ವಾ)-ಸರ್ಕಾರವು ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಇಲಾಖಾ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ದೊರಕಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾ ಪಂಚಾಯಿತಿಯ ಹಳೇ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರಗಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಹಿರಿಯ ನಾಗರಿಕರಿಗೆ 20 ಕಾರ್ಯಕ್ರಮಗಳನ್ನು, ವಿಕಲಚೇತನರಿಗೆ 23 ಸೌಲಭ್ಯಗಳನ್ನು ದೊರಕಿಸಿದೆ. ಕಳೆದ ವರ್ಷ ವಿಕಲಚೇತನ ಮತ್ತು ಹಿರಿಯ ನಾಗರಿಕರಿಗೆ ಸೂಕ್ತ ಸೌಲಭ್ಯ ಮತ್ತು ಸವಲತ್ತುಗಳನ್ನು ದೊರಕಿಸಿ ದೇಶದಲ್ಲಿ ರಾಜ್ಯ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಹಿರಿಯ ನಾಗರಿಕರು ಬಹಳ ಚಟುವಟಿಕೆಯಿಂದ ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಹಿರಿಯ ನಾಗರಿಕರ ಆರೋಗ್ಯ ನೋಡಿಕೊಳ್ಳಲು ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿದ್ದು, ಇದರ ಪ್ರಯೋಜನ ಪಡೆಯಬೇಕೆಂದರು.
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಶೇ. 75ರಷ್ಟು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಕ್ಷೇತ್ರವಾರು ಪೆಟ್ರೋಲ್ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ಕಳೆದ ವರ್ಷ 72 ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲು ಮಂಜೂರಾತಿ ದೊರೆತಿದೆ. ಪ್ರಸಕ್ತ ವರ್ಷ 250 ತ್ರಿಚಕ್ರ ವಾಹನಗಳನ್ನು ದೊರಕಿಸಲು ಅರ್ಜಿ ಆಹ್ವಾನಿಸಲಾಗಿದ್ದು, 500ಕ್ಕಿಂತ ಹೆಚ್ಚಿನ ಅರ್ಜಿಗಳು ಬಂದಿವೆ. ಹಿರಿಯ ನಾಗರಿಕರಿಗೆ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಗುರುತಿನ ಚೀಟಿ ನೀಡಲಾಗುತ್ತಿದೆ. ಹಿರಿಯ ನಾಗರಿಕರು ರಕ್ತದ ಗುಂಪು, ವಯಸ್ಸಿನ ದಾಖಲೆ, 20ರೂ. ಶುಲ್ಕ ನೀಡಿದ್ದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡಲಾಗುವುದು. ಹಾಗೂ ವಿಕಲಚೇತನರು ಕಡ್ಡಾಯವಾಗಿ ವೈದ್ಯರಿಂದಲೇ ಪ್ರಮಾಣಪತ್ರ ಪಡೆಯಬೇಕಾಗಿರುವುದರಿಂದ ಕಾಲಕಾಲಕ್ಕೆ ಶಿಬಿರಗಳನ್ನು ಏರ್ಪಡಿಸಿ ಪ್ರಮಾಣಪತ್ರ ದೊರಕಿಸಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬನ್ಸಿ ಪವಾರ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ, ಹಿರಿಯ ನಾಗರಿಕರಾದ ಮುರಳೀಧರ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಟೆನ್ನಿಸ್ ಬಾಲ್ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಕಲಬುರಗಿಯ ಹಿರಿಯ ನಾಗರಿಕರಾದ ಸಂಗಮ್ಮ ಮತ್ತು ಏಕಪಾತ್ರಾಭಿನಯದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಮುರಳೀಧರ ಕುಲಕರ್ಣಿ ಅವರನ್ನು ಸಚಿವರು ಸನ್ಮಾನಿಸಿದರು. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅಂತರರಾಷ್ಟ್ರೀಯ ಇಂಜಿನಿಯರಿಂಗ್ ಫೇರ್: ಜಿಲ್ಲೆಯಿಂದ ನಾಲ್ಕು ಮಹಿಳಾ ಉದ್ಯಮಿಗಳು
***************************************************************************
ಭಾಗಿ
*****
ಕಲಬುರಗಿ,ಅ.07.(ಕ.ವಾ)-ಮಧ್ಯ ಯೂರೋಪಿನ ಜೆಕೋಸ್ಲೋವಿಯಾದಲ್ಲಿ ನಡೆಯುವ “ಬ್ರೂನೋ-2017 ಅಂತರರಾಷ್ಟ್ರೀಯ ಇಂಜಿನಿಯರಿಂಗ್ ಫೇರ್”ದಲ್ಲಿ ಕಲಬುರಗಿ ಜಿಲ್ಲೆಯ ಕೆ-ಲ್ಯಾಂಪ್ (ಏಚಿಟಚಿbuಡಿಚಿgi-ಐಚಿಜies ಂssoಛಿiಚಿಣioಟಿ ಒಚಿಟಿuಜಿಚಿಛಿಣuಡಿeಡಿs Pಚಿಡಿಞ) ಸಂಸ್ಥೆಯ ನಾಲ್ಕು ಮಹಿಳಾ ಉದ್ಯಮಿಗಳು/ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಭಾಗವಹಿಸಲಿರುವ ನಾಲ್ಕು ಮಹಿಳಾ ಉದ್ಯಮಿಗಳ ವಿವರ ಇಂತಿದೆ. ಡಾ. ಸರ್ವಮಂಗಳ ಆರ್. ಪಾಟೀಲ, ಸುಜಾತಾ ಎಸ್. ಪಾಟೀಲ, ವಿಜಯಾ ಎಸ್.ಆರ್., ಭಾರತಿ ಪಾಟೀಲ. ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವಿ.ಟಿ.ಪಿ.ಸಿ. ಮುಖಾಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ರಾಜ್ಯದ 10 ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದು, ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ ಒಂದು ಮಳಿಗೆ ಸಹ ಕಾಯ್ದಿರಿಸಲಾಗಿದೆ. ಈ ತಂಡವು ಇದೇ ಆಗಸ್ಟ್ 8ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ಮುಖಾಂತರ ಪ್ರಯಾಣ ಬೆಳಸಲಿದೆ.
ಕೆ-ಲ್ಯಾಂಪ್ ಸಂಸ್ಥೆಯು ಈ ವಸ್ತು ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಉತ್ಪಾದಕರೊಂದಿಗೆ ತಾಂತ್ರಿಕ ಮಾಹಿತಿ ವಿನಿಮಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳುತ್ತಿದೆ. ಇದರಿಂದ ಕಲಬುರಗಿ ಜಿಲ್ಲೆಯ ಕೆ-ಲ್ಯಾಂಪ್‍ನ ಮಹಿಳಾ ಉದ್ಯಮಿಗಳಿಗೆ ಹೊಸದಾಗಿ ಉದ್ಯಮ ಪ್ರಾರಂಭಿಸಲು ಹಾಗೂ ಹೊರ ದೇಶಗಳಿಗೆ ರಫ್ತು ಮಾಡಲು ಅವಕಾಶಗಳು ಲಭಿಸಲಿವೆ. ಪ್ರಪ್ರÀಥಮ ಬಾರಿಗೆ ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯಿಂದ ನಾಲ್ಕು ಮಹಿಳಾ ಉದ್ಯಮಿಗಳು ಭಾಗವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಬ್ರೂನೋ-2017 ಅಂತರರಾಷ್ಟ್ರೀಯ ಇಂಜಿನೀಯರಿಂಗ್ ಫೇರ್ (ಎಂ.ಎಸ್.ವಿ.) ಇದೊಂದು ಮಧ್ಯ ಯೋರೋಪಿನ ಅತ್ಯಂತ ಪ್ರಸಿದ್ಧವಾದ ಕೈಗಾರಿಕಾ ವ್ಯಾಪಾರ ಉತ್ಸವವಾಗಿದೆ. ಈ ಉತ್ಸವದಲ್ಲಿ ಜಗತ್ತಿನ 59 ದೇಶಗಳಿಂದ 1500 ಮಳಿಗೆಗಳು ಸ್ಥಾಪನೆಯಾಗಿರುತ್ತವೆ. ಈ ಉತ್ಸವದಲ್ಲಿ ವಿವಿಧ ಕ್ಷೇತ್ರದ ಸುಮಾರು 75000 ಪರಿಣಿತರು ಭಾಗವಹಿಸುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 9ರಂದು ಬೀದಿ ನಾಟಕ ಉದ್ಘಾಟನೆ
******************************************
ಕಲಬುರಗಿ,ಅ.07.(ಕ.ವಾ)-“ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಕಾಯ್ದೆ”ಯ ಕಾನೂನಿನ ಅರಿವು ನೆರವು ಕಾರ್ಯಕ್ರಮ (ವಿಶೇಷ ಘಟಕ ಯೋಜನೆ (ಎಸ್.ಸಿ.ಪಿ.) ಮತ್ತು ಗಿರಿಜನ ಉಪಯೋಜನೆ (ಟಿ.ಎಸ್.ಪಿ.)ಯಡಿ ಬೀದಿ ನಾಟಕದ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 9ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಜಿಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಉದ್ಘಾಟಿಸುವರು. ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಎಂ.ಎಸ್. ಚಿದಾನಂದ, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಎ. ಶಿಂಧಿಹಟ್ಟಿ ಹಾಗೂ ಕಲಬುರಗಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
******************************************************
ಕಲಬುರಗಿ,ಅ.07.(ಕ.ವಾ)-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 10ರಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಜಾಥಾ ಏರ್ಪಡಿಲಾಗಿದೆ.
ಅದೇ ರೀತಿ ಅಂದು ಬೆಳಿಗ್ಗೆ 10.30 ಗಂಟೆಗೆ ಹೆಚ್.ಐ.ಟಿ. ಹಾಲ್‍ನಲ್ಲಿ ಅರಿವು ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
****************************
ಕಲಬುರಗಿ,ಅ.07.(ಕ.ವಾ)-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವ್ಯಾಪ್ತಿಯಲ್ಲಿ ಬರುವ ಸಂಗೀತ ನೃತ್ಯಾದಿ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನಕ್ಕಾಗಿ 2017-18ನೇ ಸಾಲಿನ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಪರಿಣಿತ ಕಲಾವಿದರು/ತಜ್ಞರಿಂದ ಫೆÀಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ತಿಳಿಸಿದ್ದಾರೆ.
ಸಂಶೋಧನಾರ್ಥಿಗಳು ಯಾವುದಾದರೂ ಪದವೀಧರರಾಗಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು. ಆಸಕ್ತರು ಸಂಶೋಧನೆ/ಅಧ್ಯಯನ ನಡೆಸುವ ವಿಷಯದ ಕುರಿತು ಸುಮಾರು 5-6 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅಧ್ಯಯನ ಅವಧಿ ಆರು ತಿಂಗಳು ಇದ್ದು, ಅರ್ಹರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಲ್ಲದೇ ಒಂದು ಲಕ್ಷ ರೂ.ಗಳ ಸಂಶೋಧನಾ ನೆರವು ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸಲ್ಲಿಸಬೇಕು. ಅಂಚೆ ಮೂಲಕ ಅರ್ಜಿ ಪಡೆಯಲು ಇಚ್ಛಿಸುವವರು 10ರೂ.ಗಳ ಸ್ಟಾಂಪ್ ಅಂಟಿಸಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560 002 ಈ ವಿಳಾಸಕ್ಕೆ ಕಳುಹಿಸಬೇಕು. ಅಲ್ಲದೇ ಅಕಾಡೆಮಿಯ ಇ-ಮೇಲ್ ಞಚಿಡಿಟಿಚಿಣಚಿಞಚಿsಚಿಟಿgeeಣಚಿ@gmಚಿiಟ.ಛಿom ಮೂಲಕವೂ ಕಳುಹಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನವಾಗಿದೆ. ಅವಧಿ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 8ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಅ.07.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ರಿಂದ ಕಲಬುರಗಿ ಶಹಾಬಾದ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಅಕ್ಟೋಬರ್ 8ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ. 110/11 ಕೆ.ವಿ. ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದ: ಎಫ್-10 ನಂದೂರ, ಎಫ್-12 ಕೆಸರಟಗಿ, ಕೆಐಡಿಬಿ ನಂದೂರ ಫೀಡರಿನ ನಂದೂರ, ಕೆಸರಟಗಿ, ಇಂಡಸ್ಟ್ರೀಯಲ್ ಏರಿಯಾ, ನಂದೂರ, ನಂದೂರ(ಕೆ), ಧರ್ಮಪೂರ ಗ್ರಾಮಗಳು.

ಗುಣಮಟ್ಟದಿಂದ ಕೂಡಿದರೆ ಮಾತ್ರ ಹಣಕಾಸಿನ ನೆರವು
***********************************************
ಕಲಬುರಗಿ,ಅ.07.(ಕ.ವಾ):-ಉತ್ಪನ್ನವಾಗುವ ಬಿಡಿ ಭಾಗಗಳು ರಫ್ತಿಗೆ ಬೇಕಾಗುವ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಉದ್ಯಮಗಳಲ್ಲಿ ಉತ್ಪಾದನೆಯಾಗುವ ವಸ್ತುಗಳು ದೋಷರಹಿತವಾಗಿದ್ದು, ಉತ್ತಮ ಗುಣಮಟ್ಟದ ಪ್ರಮಾಣಪತ್ರ ಪಡೆದರೆ ಮಾತ್ರ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣಕಾಸು ನೆರವು ಲಭಿಸುತ್ತದೆ ಎಂದು ಹುಬ್ಬಳ್ಳಿಯ ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎನ್. ರಂಗಪ್ರಸಾದ ಅಭಿಪ್ರಾಯ ಪಟ್ಟರು.
ಭಾರತ ಸರ್ಕಾರದ ಮೈಕ್ರೋ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯ, ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆ ಕಲಬುರಗಿ ಶಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಣ್ಣ ಕೈಗಾರಿಕಾ ಮಾಲೀಕರ ಸಂಘ ಮತ್ತು ಗುಲಬರ್ಗಾ ಕೈಗಾರಿಕಾ ವಸಾಹತು ತಯಾರಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕಲಬುರಗಿ ನಗರದ ಕೈಗಾರಿಕಾ ವಸಾಹತು ತಯಾರಕ ಸಂಘದ ಅಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿರೋ ಡಿಫೆಕ್ಟ್ ಹಾಗೂ ಜಿರೋ ಎಫೆಕ್ಟ್ (Zಇಆ) ಸರ್ಟಿಫಿಕೇಶನ್ ಯೋಜನೆಯ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ದಿಮೆದಾರರಿಗೆ ವರದಾನವಾಗಿರುವ ಈ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ ರಾಜ್ಯದ ಲೂದಿಯಾನದಲ್ಲಿ ಚಾಲನೆ ನೀಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರÀತಿಶತÀ ನೂರರಷ್ಟು ಪರಿಪೂರ್ಣ ಹಾಗೂ ವಸ್ತುಗಳನ್ನು ಝಡ್ ಪ್ರಮಾಣೀಕರಿಸಿದ ಯೋಜನೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಪ್ರಧಾನಮಂತ್ರಿಯವರ ಕನಸಾಗಿದೆ ಎಂದು ಅಭಿಪ್ರಾಯಪಟ್ಟರು.
ಉದ್ದಿಮೆದಾರರು ಎಂ.ಎಸ್.ಎಂ.ಇ ಸಚಿವಾಲಯದಿಂದ ಅಂತರ್ಜಾಲ ತಿತಿತಿ.zeಜ.oಡಿg.iಟಿ ಅಥವಾ ಮೋಬೈಲ್ ಮೂಲಕ ಝೆಡ್ ಆ್ಯಪ್ ಡೌನಲೋಡ್ ಮಾಡಿಕೊಂಡು ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾದವರಿಗೆ ಅಂತರರಾಷ್ಟ್ರೀಯ ಕೈಗಾರಿಕೋದ್ಯಮಗಳಿಂದ ತರಬೇತಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಉತ್ಪಾದನೆಯ ವಸ್ತು ಶೂನ್ಯ ದೋಷವು ಹೊಂದಿರಬಾರದು ಹಾಗೂ ಪರಿಸರಕ್ಕು ಯಾವುದೇ ಹಾನಿಕಾರಕವಾಗಬಾರದು. ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಸಹಕಾರಿಯಾಗಿದ್ದು, ಝೆಡ್ ಉತ್ಪಾದನೆ ಮತ್ತು ಪ್ರಮಾಣೀಕರಣ ಕ್ಷೇತ್ರದಲ್ಲಿ ಯುವ, ಸಣ್ಣ ಉದ್ದಿಮೆದಾರ ವೃತ್ತಪರರನ್ನು ಅಭಿವೃದ್ಧಿಪಡಿಸುವುದು ಹಾಗೂ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಯಾವುದೇ ರಾಜಿ ಹೊಂದಬಾರದು ಇದೇ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಉದ್ದಿಮೆದಾರರನ್ನು ಸ್ಟ್ರಗ್ಲರ್, ಬಿಗೇನರ್, ಆರ್ಗನೈಜ್ಡ್, ಅಚೀವರ್, ವಲ್ರ್ಡ್ ಕ್ಲಾಸ್ ಎಂಬ 5 ಹಂತದಲ್ಲಿ ರೇಟಿಂಗ್ ನೀಡಿ ವಿಂಗಡಿಸಲಾಗುತ್ತದೆ. ನಂತರದಲ್ಲಿ ಅವರ ಸಾಮಥ್ರ್ಯದ ಮೇಲೆ ಬ್ರೌಂಜ್, ಸಿಲ್ವರ್, ಡೈಮಂಡ್ ಹಾಗೂ ಪ್ಲಾಟಿನಂ ಎಂದು ಗುರುತಿಸಲಾಗುತ್ತದೆ. ಪ್ಲಾಟಿನಂಗೆ ಭಾಜನರಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಗಿಟ್ಟಿಸಿಕೊಳ್ಳುತ್ತಾರೆ ಎಂದು ಯೋಜನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ದೊಡ್ಡಪ್ಪ ಬಸವರಾಜು ಮಾತನಾಡಿ, ಉತ್ಪನ್ನಗಳಿಗೆ ಸರ್ಟಿಫಿಕೇಶನ್ ಪಡೆದರೆ ವಸ್ತುವಿನ ಮೌಲ್ಯ ಹೆಚ್ಚಾಗಿ ಜನರ ನಂಬಿಕೆಗೆ ಅರ್ಹವಾಗುತ್ತದೆ. ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆ ಜಾರಿಗೆ ಬಂದ ಮೇಲೆ ಪ್ರಮಾಣೀಕರಿಸಿದ ಗುಣಮಟ್ಟದ ಉತ್ಪಾದನೆಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ಕುಡಿಯುವ ನೀರು, ಆಹಾರಪದಾರ್ಥಗಳು, ಚಿನ್ನ, ಹ್ಯಾಂಡ್ಲೂಮ್‍ಸೀರೆ
ಮತ್ತಿತರ ವಸ್ತುಗಳು ಮಾರಾಟ ಮಾಡಲು ಗುಣಮಟ್ಟದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ನ.24, 25ರಂದು ಬೆಂಗಳೂರಿನಲ್ಲಿ ಜರುಗಲಿರುವ ಕೈಗಾರಿಕಾ ಮಾರಾಟಗಾರರ ಮೇಳದಲ್ಲಿ ಭಾಗವಹಿಸಲು ಪ್ರಮಾಣಪತ್ರ ಇರುವುದು ಅನಿವಾರ್ಯ ಎಂದು ಹೇಳಿದರು.
ಕೆಎಎಸ್‍ಎಸ್‍ಐಎ ಚೇರಮನ್ ಭೀಮಾಶಂಕರ್, ಕೈಗಾರಿಕಾ ವಸಾಹತು ತಯಾರಕರ ಸಂಘದ ಕಾರ್ಯದರ್ಶಿ ಸುರೇಶ್.ಬಿ.ನಂದ್ಯಾಳ ಮತ್ತು ಗುಲಬರ್ಗಾ ಕೈಗಾರಿಕಾ ವಸಾಹತು ಮಾಲೀಕರ ಸಂಘದ ಅಧ್ಯಕ್ಷ ಮಹ್ಮದ್ ಮಹಿಮುದ್ ಖಾನ್, ಸಣ್ಣ ಕೈಗಾರಿಕಾ ಉದ್ದಿಮೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಅರುಣ್ ಕುಮಾರ ಪಾಟೀಲ್ ಉಪಸ್ಥಿತರಿದ್ದರು.No comments:

Post a Comment