GULBARGA VARTHE

GULBARGA VARTHE

Saturday, 4 February 2017

NI 05-02-2017 & PHOTOS

ಮಕ್ಕಳ ಸಾಂಸ್ಕತಿಕ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ
********************************************
ಕಲಬುರಗಿ,ಫೆ.05.(ಕ.ವಾ.)-ಮಕ್ಕಳ ಬುದ್ಧಿ ಶಕ್ತಿ ಹೆಚ್ಚಳಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಮಕ್ಕಳಲ್ಲಿ ಸುಪ್ತವಾಗಿರುವ ಸಾಂಸ್ಕøತಿಕ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಹೇಳಿದರು.
ಅವರು ಶನಿವಾರ ಕಲಬುರಗಿ ತಾಲೂಕಿನ ಕುಸನೂರು ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ 2016-17ನೇ ಸಾಲಿನ “ಚಿಗುರು” ಮಕ್ಕಳ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳ್ಳಿಗಾಡಿನ ಮಹಿಳೆಯರ ಹಾಡುವ ಹಾಡುಗಳು ಗ್ರಾಮೀಣ ದೈನಂದಿನ ಬದುಕಿನ ಸೊಗಡಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವುದು ಅತ್ಯಗತ್ಯವಾಗಿದೆ. ಇದಕ್ಕೆ ಇಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಪೂರಕವಾಗಿವೆÉ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎಸ್.ಎಂ. ಹಿರೇಮಠ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಗ್ರಾಮೀಣ ಜನರಿಗೆ ಸಾಂಸ್ಕøತಿಕ ದೀಕ್ಷೆ ಮತ್ತು ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ದೇಶದ ಅಚ್ಚುಮೆಚ್ಚಿನ ಸಂಪತ್ತಾಗಿರುವ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಮಹತ್ತರ ಪಾತ್ರ ವಹಿಸುತ್ತಿವೆಯಲ್ಲದೆ ಮಕ್ಕಳು ಸಾಂಸ್ಕøತಿಕ ಜೀವಿಗಳಾಗಲು ನೆರವಾಗುತ್ತವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಮ್ಮ ಚನ್ನಮಲ್ಲಯ್ಯ ಹಿರೇಮಠ, ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ, ತಾಲೂಕು ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಎಸ್. ಬಬಲಾದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಿವಪುತ್ರಪ್ಪ, ಪಾರ್ವತಿ ಅಮೃತ ಶಿವಕೇರಿ, ಗುಂಡಮ್ಮ ದÀುಂಡಾನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಚಂದ್ರಕಾಂತ ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಹಂಸಧ್ವನಿ ಕಲಾನಿಕೇತನದ ರವೀಚಿದ್ರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಪ್ರಕೃತಿ ಮತ್ತು ವೃಂದದವರ ಶಾಸ್ತ್ರೀಯ ಸಂಗೀತ ಗಾಯನ, ಭಾಗ್ಯಶ್ರೀ ಶಿವರಾಜ ರಾಜಾಪುರರ ಶಾಸ್ತ್ರೀಯ ತಬಲಾ ವಾದನ, ನಿಂಗಪ್ಪ ಯಮನಪ್ಪರ ವಚನಗಾಯನ, ಚೇತನ ಬಿ. ಕೋಬಾಳರ ಜಾನಪದ ಗಾಯನ, ಸುಚೇತಾ ಬಿ. ಭಟ್ ಸಮೂಹ ನೃತ್ಯ ಪ್ರದರ್ಶನ ಗ್ರಾಮಸ್ಥರ ಮನ ಸೂರೆಗೊಂಡವು. ಬಾಲಕಿಯರ ಸರ್ಕಾರಿ ಬಾಲಮಂದಿರ ಮಕ್ಕಳಿಂದ ಡೊಳ್ಳು ಕುಣಿತ ಅತ್ಯದ್ಭುತವಾಗಿದ್ದಲ್ಲದೆ ಹಾಗೂ ಖಣದಾಳದ ಶ್ರೀ ಗುರುವಿದ್ಯಾಪೀಠ ಮಕ್ಕಳಿಂದ ಭೂಮಿಯ ಕಥೆ ನಾಟಕ ಪ್ರದರ್ಶನ ಪರಿಸರ ಸಂರಕ್ಷಣೆಯ ಸಚಿದೇಶ ಸಾರುವಲ್ಲಿ ಯಶಸ್ವಿಯಾಯಿತು.

ನಾಗರಿಕ ಹಕ್ಕು ಸಂರಕ್ಷಣಾ ಕಾರ್ಯಕ್ರಮಕ್ಕಾಗಿ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ
***********************************************************************************
ಕಲಬುರಗಿ,ಫೆ.05.(ಕ.ವಾ.)-ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ/ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989ರಡಿ 2016-17ನೇ ಸಾಲಿನ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜೇವರ್ಗಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ತಿಳಿಸಿದ್ದಾರೆ.
ಪ್ರತಿ ಕಾರ್ಯಕ್ರಮಕ್ಕೆ ಗರಿಷ್ಠ ಮೊತ್ತ 25,000 ರೂ. ಇರುತ್ತದೆ. ಕಾರ್ಯಕ್ರಮಗಳನ್ನು ನಡೆಯುವ ಸ್ಥಳ ಮತ್ತು ತಂಡಗಳನ್ನು ತಾಲೂಕು ಮಟ್ಟದ ಸಮಿತಿಯು ನಿರ್ಧರಿಸುತ್ತದೆ. ಸರ್ಕಾರೇತರ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಟ್ಟಿರಬೇಕು ಹಾಗೂ ನವೀಕರಣಗೊಂಡಿರಬೇಕಲ್ಲದೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗುರುತಿಸಲ್ಪಟ್ಟಿರಬೇಕು. ಕಳೆದ 3 ವರ್ಷದಲ್ಲಿ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು.
ಕಾರ್ಯಕ್ರಮ ನೀಡಿದ ನುರಿತ ಕಲಾವಿದರು, ವಿಮರ್ಶಕರು ಮತ್ತು ಬುದ್ಧಿ ಜೀವಿಗಳು, ಚಿಂತಕರು, ವಿಷಯ ಪಾರಂಗತರನ್ನೊಳಗೊಂಡ ಸರ್ಕಾರೇತರ ಸಂಸ್ಥೆಗಳನ್ನು ಹೊಂದಿರಬೇಕು ಮತ್ತು ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ. ಇಚ್ಛೆಯುಳ್ಳ ಸರ್ಕಾರೇತರ ಸಂಘ ಸಂಸ್ಥೆಗಳು ಅರ್ಜಿಗಳನ್ನು ಫೆಬ್ರವರಿ 8ರೊಳಗಾಗಿ ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ಕೋರಲಾಗಿದೆ.
ವಿದ್ಯಾರ್ಥಿಗಳ ದೈನಂದಿನ ಜೀವನಕ್ಕೆ ಕಾನೂನು ಅರಿವು ಅವಶ್ಯಕ
*******************************************************

ಕಲಬುರಗಿ,ಫೆ.05.(ಕ.ವಾ.)-ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಜೊತೆಗೆ ದೈನಂದಿನ ಜೀವನಕ್ಕೆ ಬೇಕಾಗುವ ಜನನ-ಮರಣ ನೋಂದಣಿ ಕಾಯ್ದೆ, ಮೋಟಾರು ವಾಹನ ಕಾಯ್ದೆ, ವಾರಸಾ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದ್ದಾರೆ.
ಅವರು ಶನಿವಾರ ಕಲಬುರಗಿ ಸಿ.ಐ.ಬಿ. ಕಾಲೋನಿಯ ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆಯಿರುವ ಸಾಯಿ ಪ್ರಸಾದ ಸಮಾಜ ಕಾರ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸುಜಯ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಇಂದಿರಾ ಡ್ವಾಕ್ರಾ ಗ್ರೂಪ್ ಮತ್ತು ಅನನ್ಯ ಮಹಿಳಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ನ್ಯಾಯಿಕ ಸಂಘರ್ಷದ ಕಾಯ್ದೆ ಕುರಿತು ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಕಾನೂನಿನ ಜ್ಞಾನ ಹೊಂದುವುದರೊಂದಿಗೆ ಕಾನೂನಿನ ಪರಿಪಾಲನೆ ಮಾಡುವುದೂ ಸಹ ಆದ್ಯ ಕರ್ತವ್ಯವಾಗಿದೆ. ಕಾನೂನು ಪ್ರಾಧಿಕಾರದಿಂದ ದೊರೆಯುವ ನೆರವುಗಳ ಬಗ್ಗೆ ಹಾಗೂ ಪೊಲೀಸ ದೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ಹಾಗೂ ಅನನ್ಯ ಮಹಿಳಾ ಕೇಂದ್ರದ ಅಧ್ಯಕ್ಷೆ ಸರಸಿಜಾ ರಾಜನ್ ಅವರು ಬಾಲ ನ್ಯಾಯಿಕ ಮಂಡಳಿ ಕಾಯ್ದೆ ಕುರಿತು ಮಾತನಾಡಿ, ಮಕ್ಕಳ ಮನಸ್ಸು ಒಂದು ಹೂವಿನಚಿತಿರುತ್ತದೆ. ಅವರಿಗೆ ಅನ್ಯಾಯ ಮತ್ತು ವಂಚನೆ ಇವುಗಳ ಅರಿವು ಇರುವುದಿಲ್ಲ. ಅಂತಹ ಮಕ್ಕಳನ್ನು ಬಳಸಿಕೊಂಡು ಅಪರಾಧ ಮಾಡಲು ಪ್ರೇರೇಪಿಸುತ್ತಾರೆ. ಮಕ್ಕಳು ಯಾವುದೇ ದೌರ್ಜನ್ಯಕ್ಕೆ ಒಳಗಾದಲ್ಲಿ ಮಕ್ಕಳ ಸಂರಕ್ಷಣಾ ಸಮಿತಿಯ ದೂರವಾಣಿ ಸಂಖ್ಯೆ 1098ಗೆ ಕರೆ ಮಾಡಿ ವಿಷಯ ತಿಳಿಸಿದಲ್ಲಿ ಅಂತಹ ಮಗುವಿನ ಸೂಕ್ತ ರಕ್ಷಣೆ ಒದಗಿಸುವುದಲ್ಲದೇ ಅವರನ್ನು ಸಂರಕ್ಷಿಸುವ ಏರ್ಪಾಡು ಮಾಡಲಾಗುತ್ತದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ-ಮಾಹಿತಿ ಹಕ್ಕು ಕಾಯ್ದೆ ಕುರಿತು ಮಾತನಾಡಿ, ಸಾರ್ವಜನಿಕ ಕ್ಷೇತ್ರಗಳಲ್ಲಿ ಬ್ರಷ್ಠಾಚಾರವನ್ನು ಕಡಿಮೆ ಮಾಡುವ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಲು ಅವಕಾಶವಿದ್ದು, ಒಂದು ವೇಳೆ ನಿಗದಿತ ಅವಧಿಯಲ್ಲಿ 30 ದಿನದೊಳಗಾಗಿ ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಕೊಡದೆ ಇದ್ದಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಸಹ ಅವಕಾಶವಿದೆ ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಲಬುರಗಿ ಸುಜಯ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಜಯಶ್ರೀ ಎಸ್. ಒಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಡ್ವಾಕ್ರಾ ಗ್ರೂಪ್ ಅಧ್ಯಕ್ಷೆ ರಾಜಶ್ರೀ ದೇಶಮುಖ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಘೂ ಬೋಧಕ ವರ್ಗದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಡ್ಡಾಯ ಕನ್ನಡ ಪರೀಕ್ಷೆಗೆ 241 ಅಭ್ಯರ್ಥಿಗಳು
***************************************
ಕಲಬುರಗಿ,ಫೆ.05.(ಕ.ವಾ.)-ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಹಿರಿಯ ಸಹಾಯಕರ ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗಾಗಿ ಫೆಬ್ರವರಿ 11ರಂದು ನಡೆಸಲಾಗುವ ಕಡ್ಡಾಯ ಕನ್ನಡ ಪರೀಕ್ಷೆಯು ಒಂದು ಪರೀಕ್ಷಾ ಕೇಂದ್ರದಲ್ಲಿ ಬೆಳಗಿನ 10.30 ರಿಂದ 11.30 ಗಂಟೆಯವರೆಗೆ ನಡೆಯಲಿದ್ದು, 241 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ 61 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2 ರಿಂದ ಸಂಜೆ 3.30 ಗಂಟೆಯವರೆಗೆ ನಡೆಯಲಿದ್ದು, ಒಟ್ಟು 24373 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಸ್ಪಷ್ಟ ಪಡಿಸಲಾಗಿದೆ.
***********

No comments:

Post a Comment