GULBARGA VARTHE

GULBARGA VARTHE

Tuesday, 14 February 2017

News Date: 14---02---2017

ಮಕ್ಕಳ ಪಾಲನಾ ಸರ್ಕಾರೇತರ ಸಂಸ್ಥೆಗಳ ನೋಂದಣಿಗೆ ಸೂಚನೆ
***************************************************************
ಕಲಬುರಗಿ,ಫೆ.14.(ಕ.ವಾ.)-ಬಾಲನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆಯಡಿ 2015ರ ಅಡಿಯಲ್ಲಿ ಈವರೆಗೆ ನೋಂದಣಿ ಮಾಡಿಸಿಕೊಳ್ಳದಿರುವ ಕಲಬುರಗಿ ಜಿಲ್ಲೆಯ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ ನೋಂದಣಿ ಮಾಡಬೇಕು. ಅದೇ ರೀತಿ ಈಗಾಗಲೇ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾಗಿದ್ದ ಸಂಸ್ಥೆಗಳು ನೋಂದಣಿ ಅವಧಿ ಮುಗಿಯುವ ಮೂರು ತಿಂಗಳ ಮುಂಚಿತವಾಗಿ ನವೀಕರಣಕ್ಕೆ ಪ್ರಸ್ತಾವನೆಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಸೆಕ್ಷನ್ 42(1) ರನ್ವಯ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ದಂಡ ಅಥವಾ ಎರಡು ಶಿಕ್ಷೆ ವಿಧಿಸಲಾಗುವುದೆಂದು ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ತಿಳಿಸಿದ್ದಾರೆ.
ನೋಂದಾಯಿಸಲು ತಡ ಮಾಡಿದಲ್ಲಿ ಪ್ರತಿ 30 ದಿನಕ್ಕೆ ಪ್ರತ್ಯೇಕ ಅಪರಾಧ ಎಂದು ಪರಿಗಣಿಸಲಾಗುವುದು ಹಾಗೂ ಸಂಸ್ಥೆಯು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಇದಲ್ಲದೇ ಒಂದು ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರಾಗಿರುತ್ತಾರೆ.
ಸವೋಚ್ಚ ನ್ಯಾಯಾಲಯವು “ಬಚಪನ್ ಬಚಾವೋ” ಆಂದೋಲನದ ಅಂಗವಾಗಿ ದಿನಾಂಕ:10-05-2013 ರಂದು ನೀಡಿರುವ ನಿರ್ದೇಶನದಂತೆ ಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳು ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಾತ್ರ ಮಕ್ಕಳನ್ನು ದಾಖಲು ಮಾಡಬೇಕಿದ್ದು, ನೇರವಾಗಿ ಪಡೆಯಲು ಅವಕಾಶ ಇಲ್ಲವೆಂದು ಸ್ಪಷ್ಟಪಡಿಸಿದೆ.
ಇದರೊಂದಿಗೆ ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಯಧಾಮಗಳು (Sheಟಣeಡಿ homes), ಬಯಲು ತಂಗುದಾಣಗಳು, ನಿರ್ಗತಿಕ ಮಕ್ಕಳ ಕುಟಿರ, ಬಾಲಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳನ್ನು ಬಾಲನ್ಯಾಯ ಕಾಯ್ದೆ 2000 ರಡಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿ ಕಾರ್ಯನಿರ್ವಹಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದೆ.
ಸಾರ್ವಜನಿಕರಿಗೆ ತಮ್ಮ ಆಸು ಪಾಸಿನಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿದ್ದಲ್ಲಿ ಸದರಿ ಮಾಹಿತಿಯನ್ನು ವಿಳಾಸದೊಂದಿಗೆ ಕೂಡಲೇ ಹತ್ತಿರದ ಪೊಲಿಸ್ ಠಾಣೆ/ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ/ಉಪನಿರ್ದೇಶಕರು, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ/ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು/ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರಿಡಾಂಗಣ ಎದುರುಗಡೆ ಇರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂಖ್ಯೆ 08472-243219ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಪೀಠೋಪಕರಣ ಸರಬರಾಜಿಗಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಫೆ.14.(ಕ.ವಾ.)-ಕಲಬುರಗಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಿಗೆ ಸಾಗುವಾನಿ ಡೈಸ್ ಟೇಬಲ್, ಸೈಡ್ ರ್ಯಾಕ್, ಆಫೀಸ್ ಟೇಬಲ್, ಸಣ್ಣ ಟೇಬಲ್, ಕೋರ್ಟ್ ಹ್ಯಾಂಗರ್, ಸ್ಟೂಲ್ಸ್, ಬೆಂಚ್, ಬುಕ್ ಸ್ಟ್ಯಾಂಡ್, ನೋಟೀಸ್ ಬೋರ್ಡ್, ಸ್ಟೀಲ್ ಅಲಮಾರಿ, ಎಕ್ಸಿಕ್ಯೂಟಿವ್ ಚೇರ್ ಸೇರಿದಂತೆ ಒಟ್ಟು 100 ಫೀಠೋಪಕರಣಗಳನ್ನು ಸರಬರಾಜು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆ 1999 ನಿಯಮ 2000ರನ್ವಯ ಅರ್ಹ ತಯಾರಕರು, ಡೀಲರ್ ಮತ್ತು ಸರಬರಾಜುದಾರರಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವಿ.ಪಾಟೀಲ್ ತಿಳಿಸಿದ್ದಾರೆ.
 ಅರ್ಜಿಗಳನ್ನು ಈ ಕಚೇರಿಯಿಂದ ಬೆಳಿಗ್ಗೆ 10.30 ರಿಂದ ಸಾಯಂಕಾಲ 5 ಗಂಟೆಯವರೆಗೆ ಪಡೆದು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ 20,000 ರೂ. ಡಿ.ಡಿ./ಎಫ್‍ಡಿಆರ್ ಯನ್ನು ಲಗತ್ತಿಸಿದ ಭದ್ರಪಡಿಸಿದ ಅರ್ಜಿಯ ಎರಡು ಲಕೋಟೆಗಳನ್ನು 2017ರ ಮಾರ್ಚ್ 4ರ ಸಾಯಂಕಾಲ 4ಗಂಟೆಯೊಳಗಾಗಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಸಲ್ಲಿಸಬೇಕು. ಲಕೋಟೆ ಒಂದರಲ್ಲಿ ಡಿ.ಡಿ./ಎಫ್‍ಡಿಆರ್ ಮತ್ತು ಲಕೋಟೆ ಎರಡರಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ವ್ಯಾಟ್ ನೋಂದಣಿ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳು ಇರಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು 2017ರ ಮಾರ್ಚ್ 6ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಪೀಠೋಪಕರಣಗಳ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************
ಕಲಬುರಗಿ,ಫೆ.14.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದÀಡಿ ಬರುವ 33 ಕೆ.ವಿ ಅeóÁದಪುರ ವಿದ್ಯುತ್ ಮಾರ್ಗದ ಮೇಲೆ ಫೆಬ್ರವರಿ 15ರಂದು ಬುಧವಾರ ಬೆಳಗಿನ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸುಧಾರಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಈ ವಿತರಣಾ ಕೇಂದ್ರ ಮೇಲೆ ಬರುವ ಫೀಡರುಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಉಮರ್ ಕಾಲೋನಿ ಫೀಡರ್: ಉಮರ ಕಾಲೋನಿ, ಅಬುಬಕರ್ ಕಾಲೋನಿ, ಆಜಾದಪುರ ರಸ್ತೆ, ಅಹ್ಮದ್‍ನಗರ್, ಮಕ್ಕಾ ಕಾಲೋನಿ, ಮಹಾರಾಜಾ ಹೋಟೆಲ್, ವಾಟರ್ ಟ್ಯಾಂಕ್À, ಯದ್ದುಲ್ಲಾ ಕಾಲೋನಿ, ಕಮಾಲ-ಎ-ಮುಜರತ್, ಮಹಬೂಬ ನಗರ, ವೀರಭದ್ರೇಶ್ವರ ದೇವಾಲಯ, ಖಾನ್ ಕಂಪೌಂಡ್, ಟಿಪ್ಪುಸುಲ್ತಾನ ಚೌಕ್, ಸನಾ ಹೋಟೆಲ್, ಅಕ್ಬರ್ ಬಾಗ್, ರಾಮಜೀ ನಗರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
ಸಪ್ನಾ ಬೇಕರಿ ಫೀಡರ್: ಜಂಜಂ ಕಾಲೋನಿ, ಸಿಟಿ ಸ್ಕೂಲ್ ಏರಿಯಾ, ತಬೇಲಾ, ಮಡ್ ಏರಿಯಾ, ಸೋನಿಯಾ ಗಾಂಧಿ ಕಾಲೋನಿ, ಅಮಾನ್ ನಗರ, ಇತಿಹಾದ್ ಕಾಲೋನಿ, ರೆಹಮತ್ ನಗರ , ಗುಲ್ಶನ್ ಅರಾಫತ್ ಕಾಲೋನಿ, ಅಬುಬಕರ ಕಾಲೋನಿ, ಸಹಾರಾ ಸ್ಕೂಲ್ ಕಾಲೋನಿ, ಗರಿಬ್ ನವಾಜ್ ಕಾಲೋನಿ, ನವಾಬ ಮೊಹಲ್ಲಾ ಎಂ.ಕೆ. ನಗರ , ಆರಿಫಖಾನ್ ಲೇಔಟ್, ಸುಗಂಧಿ ಲೇಔಟ್, ಹಾಗರಗಾ ಕ್ರಾಸ್ ಏರಿಯಾ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು ಮತ್ತು ಆಜಾದಪುರ ಎನ್.ಜಿ.ವೈ. ಫೀಡರ್, ಹಾಗರಗಾ ಫೀಡರ್ ಮತ್ತು ಸರಡಗಿ ಫೀಡರಗಳು.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಡಿ ಬರುವ 110/11 ಕೆ.ವಿ. ಬ್ಯಾಂಕ್ ಕಾಲೋನಿಯ ಫೀಡರಿನ ಮೇಲೆ ಫೆಬ್ರವರಿ 15ರಂದು ಬುಧವಾರ ಬೆಳಗಿನ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಜಿ.ಓ.ಎಸ್. ದುರಸ್ತಿ/ಬದಲಾವಣೆ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಈ ವಿತರಣಾ ಕೇಂದ್ರಗಳ ಮೇಲೆ ಬರುವ ಫೀಡರುಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ Àಕೇಂದ್ರದ ಮೇಲೆ ಬರುವ ಫೀಡರುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಬ್ಯಾಂಕ್ ಕಾಲೋನಿ ಫೀಡರ್: ಗಂಜ್ ಮೊನಪ್ಪಾದಾಲ ಮಿಲ್, ಕಸಾಯಿ ಮಜೀದ. ನಬಿ ಹೋಟೆಲ್, ಕಿರಾಣ ಬಜಾರ, ಪುಟಾಣಿಗಲ್ಲಿ, ರಂಗಿನ ಮಜಿದ, ಸದರ ಮೊಹಲ್ಲಾ, ಸಿಟಿ ಮಾರ್ಕೆಟ್, ಗಂಜ್ ಮೇನ್ ರೋಡ್. ಎಪಿಎಂಸಿ ಯಾರ್ಡ್, ಸಂಜೀವ ನಗರ, ಫಿಲ್ಟರ್ ಬೆಡ್ ವಾಟರ್ ಸಪ್ಲೈ, ನಗರೇಶ್ವರ ಮಂದಿರ, ಗಡಂಗ ವಿ.ಆರ್.ಎಲ್. ಟಿ.ಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಕರ್ನಾಟಕ ಮೂಲಭೂತ ಸೌಕರ್ಯಾಭಿವೃದ್ಧಿ ಅಧ್ಯಕ್ಷರ ಪ್ರವಾಸ
************************************************************
ಕಲಬುರಗಿ,ಫೆ.14.(ಕ.ವಾ.)-ಕರ್ನಾಟಕ ಮೂಲಭೂತ ಸೌಕರ್ಯಾಭಿವೃದ್ಧಿ ಅಧ್ಯಕ್ಷ ರಾಜಶೇಖರ ಪಾಟೀಲ ಅವರು ಹುಮನಾಬಾದಿನಿಂದ ರಸ್ತೆ ಮೂಲಕ ಫೆಬ್ರವರಿ 19ರಂದು ಬೆಳಗಿನ 9.45 ಗಂಟೆಗೆ ಕಲಬುರಗಿಗೆ ಆಗಮಿಸಿ, ಬೆಳಿಗ್ಗೆ 10 ಗಂಟೆಗೆ ವಿಜಯಪುರಕ್ಕೆ ಪ್ರಯಾಣಿಸುವರು. ಅಧ್ಯಕ್ಷರು ಅದೇ ದಿನ ರಾತ್ರಿ 11.10 ಗಂಟೆಗೆ ವಿಜಯಪುರದಿಂದ ಕಲಬುರಗಿಗೆ ಪುನ: ಆಗಮಿಸಿ, ರಾತ್ರಿ 11.15 ಗಂಟೆಗೆ ಹುಮನಾಬಾದಿಗೆ ಪ್ರಯಾಣ ಮಾಡುವರು.
ವಿವಿಧ ಇಲಾಖೆಯ ಯೋಜನೆಗಳ ತಿಳುವಳಿಕೆ ಕಾರ್ಯಕ್ರಮ
******************************************************
ಕಲಬುರಗಿ,ಫೆ.14.(ಕ.ವಾ.)-ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಡತನ ನಿವಾರಣಾ ಯೋಜನೆ-2015ರ ಅಂಗವಾಗಿ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಡಜನರಿಗೆ ತಿಳಿ ಹೇಳುವ ಕಾರ್ಯಕ್ರಮವನ್ನು 2017ರ ಫೆಬ್ರವರಿ 20ರಂದು ಬೆಳಗಿನ 10.30 ಗಂಟೆಗೆ ಶರಣಸಿರಸಗಿ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
*******************************************
ಕಲಬುರಗಿ,ಫೆ.14.(ಕ.ವಾ.)-ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ 03 ಭದ್ರತಾ ಸಿಬ್ಬಂದಿ ಹಾಗೂ ಓರ್ವ ವಾಹನ ಚಾಲಕರ ನೇಮಕಾತಿಗಾಗಿ ಅಧಿಕೃತ ಏಜೆನ್ಸಿದಾರರಿಂದ ಟೆಂಡರ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಮಾಧುರಿ ಅವರು ತಿಳಿಸಿದ್ದಾರೆ.
ಅರ್ಜಿ ನಮೂನೆಯನ್ನು ಫೆಬ್ರವರಿ 20 ರಿಂದ 22 ರವರೆಗೆ ಪ್ರತಿದಿನ ಸಾಯಂಕಾಲ 4 ಗಂಟೆಯವರೆಗೆ ವಿತರಿಸಲಾಗುತ್ತಿದ್ದು, ಫೆಬ್ರವರಿ 25 ರ ಸಾಯಂಕಾಲ 4 ಗಂಟೆಯೊಳಗಾಗಿ ಸಿಲ್ ಮಾಡಿದ ಲಕೋಟೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 27ರಂದು ಸಾಯಂಕಾಲ 5 ಗಂಟೆಗೆ ಭದ್ರಪಡಿಸಿದ ಅರ್ಜಿ ಲಕೋಟೆಯನ್ನು ತೆರೆಯಲಾಗುವುದು.
ಅರ್ಜಿ ನಮೂನೆ, ಇಎಂಡಿ ಮೊತ್ತ ಹಾಗೂ ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜೇವರ್ಗಿ ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
371(ಜೆ) ಪ್ರಮಾಣ ಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ
ಕಲಬುರಗಿ,ಫೆ.14.(ಕ.ವಾ.)-ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೊಸದಾಗಿ ಹೆಸರು ನೋಂದಾಯಿಸುವ ಮತ್ತು ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ನಿರುದ್ಯೋಗಿ ಅಭ್ಯರ್ಥಿಗಳು ಹೈದ್ರಾಬಾದ್ ಕರ್ನಾಟಕ ಪ್ರದೇಶ 371(ಜೆ) ಪ್ರಮಾಣಪತ್ರವನ್ನು ಸದರಿ ಕಚೇರಿಯ ನೋಂದಣಿ ಪತ್ರದೊಂದಿಗೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಲ್ಲಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಯಂತ್ರೋಪಕರಣ ಖರೀದಿಗೆ ಸಹಾಯಧನ
*****************************************
ಕಲಬುರಗಿ,ಫೆ.14.(ಕ.ವಾ.)-ರಾಷ್ಟ್ರೀಯ ಕೃಷಿ ವಿಕಾಸ ತೋಟಗಾರಿಕೆ ಯಾಂತ್ರೀಕರಣ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ತೋಟಗಾರಿಕೆಗಾಗಿ ನಿಗದಿತ ಕಂಪನಿಗಳಿಂದ ಸ್ಪ್ರೆಯರ್, ಬ್ರಶ್ ಕಟರ್, ಫಿಟ್ ಹೋಲ್ ಡಿಗ್ಗರ್ ಮುಂತಾದ ಯಂತ್ರೋಪಕರಣಗಳನ್ನು ಖರೀದಿಸಿದ ರೈತರು ಶೇ. 40ರಷ್ಟು ಹಾಗೂ ಸಣ್ಣ, ಅತೀ ಸಣ್ಣ ಮಹಿಳಾ ರೈತರು ಶೇ. 50ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಶೇ. 90ರಷ್ಟು ಸಹಾಯಧನ ಪಡೆಯಬಹುದಾಗಿದೆ. ಎಸ್.ಎಂ.ಎ.ಎಂ. ಮಾರ್ಗಸೂಚಿ ಪ್ರಕಾರ ಮೇಲೆ ತಿಳಿಸಿದ ಎಲ್ಲ ವರ್ಗದ ರೈತರಿಗೆ ಸಹಾಯಧನ ವಿತರಿಸಲಾಗುವುದು. ರೈತರು ಅರ್ಜಿಗಳನ್ನು ಆಯಾ ತಾಲೂಕುಗಳ ತೋಟಗಾರಿಕೆ ಇಲಾಖೆಯ ಕಚೇರಿಗಳಲ್ಲಿ ಒಂದು ವಾರದೊಳಗೆ ಸಲ್ಲಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕ ಮೊಹಮ್ಮದ ಅಲಿ ಅವರು ಕೋರಿದ್ದಾರೆ.

No comments:

Post a Comment