GULBARGA VARTHE

GULBARGA VARTHE

Wednesday, 1 February 2017

News 01-02-2017

ಫೆಬ್ರವರಿ 2 ರಿಂದ ಜಿಲ್ಲಾ ಮಟ್ಟದ ಕಾಲೇಜು ನಾಟಕ-ಜಾನಪದ ನೃತ್ಯ ಸ್ಪರ್ಧೆ
*************************************************************************
ಕಲಬುರಗಿ,ಫೆ.01.(ಕ.ವಾ.)-ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯನ್ನು 2017ರ ಫೆಬ್ರವರಿ 2 ಮತ್ತು 3ರಂದು ಕಲಬುರಗಿಯ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 2ರಂದು ಬೆಳಿಗ್ಗೆ 9 ಗಂಟೆಗೆ ರಂಗ ಸಮಾಜ ಸದಸ್ಯ ಡಾ. ಸುಜಾತ ಜಂಗಮಶೆಟ್ಟಿ ಈ ಸಮಾರಂಭವನ್ನು ಉದ್ಘಾಟಿಸುವರು. ಕಲಬುರಗಿಯ ರಂಗ ಕಲಾವಿದೆ ಡಾ. ಶಾಂತಾ ಭೀಮಸೇನರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ರಂಗ ನಿರ್ದೇಶಕ ಅಶೋಕ ತೊಟ್ನಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕಾಲೇಜು, ನಾಟಕ ಹೆಸರು ಮತ್ತು ಜಾನಪದ ನೃತ್ಯದ ವಿವರ ಇಂತಿದೆ.
ಕಲಬುರಗಿಯ ಎಂ.ಎಂ.ಕೆ. ವಿಜುವಲ್ ಆಟ್ರ್ಸ್ ಕಾಲೇಜಿನಿಂದ ಹೆತ್ತವ್ವ ಹರಕೆ ಬೇಡ್ಯಾಳೇ ನಾಟಕ ಮತ್ತು ವೀರಗಾಸೆ ಜಾನಪದ ನೃತ್ಯ. ಶ್ರೀಮತಿ ಪಿಲ್ಲೂ ಹೋಮಿ ಇರಾನಿ ಮಹಿಳಾ ವಿದ್ಯಾಲಯದಿಂದ-ಬಿಚ್ಚುಗತ್ತಿ ನಾಟಕ ಮತ್ತು ಕೋಲಾಟ. ಆರಾಧನಾ ಪದವಿ ಪೂರ್ವ ಕಾಲೇಜಿನಿಂದ-ಕಕೆಷೀಯನ್ ಚಾಕ್ ಸರ್ಕಲ್ ನಾಟಕ ಮತ್ತು ಜಾನಪದ ಕುಣಿತ. ಮಾನ್ಯವರ ದಾದಾಸಾಹೇಬ ಕಾನ್ಷಿರಾಮ್ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಿಂದ ಅಂತಿಗೊನೆ ನಾಟಕ ಮತ್ತು ಕೋಲಾಟ. ಗುರುಕುಲ ವಾಣಿಜ್ಯ ಮಹಾವಿದ್ಯಾಲಯದಿಂದ ಚೋರ ಚರಣದಾಸ ನಾಟಕ ಮತ್ತು ಡೊಳ್ಳು ಕುಣಿತ. ಡಾ. ಅಂಬೇಡ್ಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಮೃಚ್ಛಕಟಿಕ ನಾಟಕ ಮತ್ತು ಜಾನಪದ ಜಾತ್ರೆ. ರೇಷ್ಮಿ ಶಿಕ್ಷಣ ಸಂಸ್ಥೆಯಿಂದ-ಇಷ್ಟವಿಲ್ಲದ ಜನರು ನಾಟಕ ಮತ್ತು ರಾಜಸ್ಥಾನಿ ನೃತ್ಯ. ಶ್ರೀ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಿಂದ ದೇವರ ಹೆಣ ನಾಟಕ ಮತ್ತು ಸುಗ್ಗಿ ಹಾಡು. ಸರ್ಕಾರಿ ನಸಿಂಗ್ ಕಾಲೇಜಿನಿಂದ-ಸತ್ರು ಅಂದ್ರೆ ಸಾಯ್ತಾರಾ!!! ನಾಟಕ ಮತ್ತು ಕಂಸಾಳೆ ಹಾಗೂ ಶ್ರೀ ಸಾಯಿ ಪ್ರಸಾದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಸಿಂಧೂರ ಲಕ್ಷ್ಮಣ ನಾಟಕ ಮತ್ತು ಸುಗ್ಗಿ ಕುಣಿತ.
ಫೆಬ್ರವರಿ 3ರಂದು ಸಾಯಂಕಾಲ 6 ಗಂಟೆಗೆ ಕಲಬುರಗಿ ಅವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ವಿ.ಜಿ. ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ರಂಗ ಕಲಾವಿದ ಪ್ರಭಾಕರ ಜೋಷಿ ಮುಖ್ಯ ಅತಿಥಿಯಾಗಿ ಹಾಗೂ ರಂಗ ಆಯೋಜಕ ಪ್ರೊ. ಕೆ. ಲಿಂಗಪ್ಪ ಅತಿಥಿಯಾಗಿ ಪಾಲ್ಗೊಳ್ಳುವರು.
ಫೆಬ್ರವರಿ 7ರಂದು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ
*****************************************************
ಕಲಬುರಗಿ,ಫೆ.01.(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಪ್ರದೇಶದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕ/ಬಾಲಕಿಯರಿಗಾಗಿ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು 2017ರ ಫೆಬ್ರವರಿ 7ರಂದು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಥ್ರೋಬಾಲ್, ಖೋ-ಖೋ, ಕಬ್ಬಡ್ಡಿ ಮತ್ತು ಈಜು ಸ್ಪರ್ಧೆಗಳು ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳಿಗೆ 300ರೂ. ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ 200 ರೂ.ಗಳ ನಗದು ಪುರಸ್ಕಾರ ನೀಡಲಾಗುವುದು.
ಆಸಕ್ತಿಯುಳ್ಳ ಗ್ರಾಮೀಣ ಭಾಗದ ಕ್ರೀಡಾಪಟುಗಳು ಇಲಾಖೆಯ ಅಧೀನದಲ್ಲಿ ಬರುವ ಆಯಾ ತಾಲೂಕಿನ ತಾಲೂಕು ಕ್ರೀಡಾಂಗಣದಲ್ಲಿನ ಕ್ರೀಡಾಧಿಕಾರಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಕ್ರೀಡಾಕೂಟದ ಮುಖಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಲಾಖೆಯ ಅಧೀನದಲ್ಲಿರುವ ಕ್ರೀಡಾಪಟುಗಳ ಕ್ರೀಡಾ ಶಾಲೆಗೆ ಆಯ್ಕೆ ಮಾಡಲಾಗುವುದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಪ್ರಯಾಣ ಭತ್ಯೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಆಯಾ ತಾಲೂಕಿನ ಕ್ರೀಡಾಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಆಳಂದ: ಸಂತೋಷ-9008765003, ಅಫಜಲಪುರ: ರಾಜಕುಮಾರ ಗೌರ-9449693494, ಚಿತ್ತಾಪುರ: ಮರೆಪ್ಪ ಬೊಮ್ಮನಳ್ಳಿಕರ್-9945230160, ಕಲಬುರಗಿ: ಅಶೋಕ ಎಂ.-9900636909. ಚಿಂಚೋಳಿ: ಮಲ್ಲಿಕಾರ್ಜುನ-9945750794, ಜೇವರ್ಗಿ: ಬಸಣ್ಣ- 9972647089 ಮತ್ತು ಸೇಡಂ: ಮಣಿಸಿಂಗ್-8050372861.
ಕೋಟ್ಪಾ ಕಾಯ್ದೆ ಕಾರ್ಯಾಚರಣೆ: 2300 ರೂ.ದಂಡ
 *************************************************
ಕಲಬುರಗಿ,ಫೆ.01.(ಕ.ವಾ.)-ಜಿಲ್ಲೆಯಲ್ಲಿ ಜಿಗಿಯುವ ತಂಬಾಕು ಪೊಟ್ಟಣಗಳನ್ನು ನಿಷೇಧಿಸಿರುವ ಪ್ರಯುಕ್ತ ಹಾಗೂ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಷೇಧ ಕೋಶದಡಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ|| ಶಿವಶರಣಪ್ಪ ನೇತೃತ್ವದಲ್ಲಿ ಸಮೀಕ್ಷಾಧಿಕಾರಿಗಳ ತಂಡವು ಬುಧವಾರ ಕಲಬುರಗಿ ನಗರದ ಪ್ರಮುಖ ಪಾನಶಾಪ್, ಹೊಟೇಲ್ ಹಾಗೂ ಸಾರ್ವಜನಿಕ ಪ್ರದೇಶಗಳಗೆ ಭೇಟಿ ನೀಡಿ ಧೂಮಪಾನ ಮಾಡುತ್ತಿರುವ ಹಾಗೂ ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ನಿಯಮ ಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಅಂಗಡಿಗಳಿಗೆ ಕೋಟ್ಪಾ ಕಾಯ್ದೆ-2003 ರ ಸೆಕ್ಷನ್-04 ಮತ್ತು 05 ಕ್ಕೆ ಸಂಬಂಧಿಸಿದಂತೆ ಒಟ್ಟು 14 ಪ್ರಕರಣಗಳು ದಾಖಲಿಸಿ, 2300 ರೂ.ಗಳ ದಂಡ ವಿಧಿಸಲಾಯಿತು.
ಸದರಿ ತಂಡವು ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಕಾಯ್ದೆಯ ನಿಯಮ ಪಾಲನೆ ಮಾಡುವಂತೆ ಮತ್ತು ಕೋಟ್ಪಾ ಕಾಯ್ದೆ-2003ರ ಸೆಕ್ಷನ್-04ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಇದಲ್ಲದೆ 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದರು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಎಲ್ಲ ಪಾನ್‍ಶಾಪ್, ಹೋಟೇಲ್, ಬಾರ್ ಮತ್ತು ರೇಸ್ಟೋರೆಂಟ್‍ಗಳ ಮಾಲೀಕರು/ ಮಾರಾಟಗಾರರು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸೂಚಿಸಲಾಯಿತು. ಈ ತನಿಖಾ ತಂಡದಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶದ ಎಸ್.ಜೆ ಪಾಟೀಲ್, ರವಿ, ಶಕೀಲ್, ಮಲ್ಲಿಕಾರ್ಜುನ, ಗಣೇಶ ಚಿನ್ನಾಕರ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವಿಶ್ವಕರ್ಮ ಸಮುದಾಯದವರಿಂದ ವಿವಿಧ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
***************************************************************************
ಕಲಬುರಗಿ,ಫೆ.01.(ಕ.ವಾ.)-ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ವಿಶ್ವಕರ್ಮ ಸಮುದಾಯದವರ ಆರ್ಥಿಕ ಅಭಿವೃದ್ಧಿಗೆ ಅವಧಿ ಸಾಲ ಯೋಜನೆಗಳಡಿ ಕೃಷಿ ವಲಯ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯ ಮತ್ತು ಶೈಕ್ಷಣಿಕ ಸಾಲ ಯೋಜನೆಗಳಡಿ ಭಾರತದಲ್ಲಿ ಅಥವಾ ವಿದೇಶದಲ್ಲಿ ವ್ಯಾಸಂಗಕ್ಕಾಗಿ, ನ್ಯೂ ಸ್ವರ್ಣಿಮಾ (ಮಹಿಳಾ ಯೋಜನೆ), ಶಿಲ್ಪಸಂಪದ, ಸ್ವಯಂ ಸಕ್ಷಮ, ಮೈಕ್ರೋ ಫೈನಾನ್ಸ್, ಕೃಷಿ ಸಂಪದ ಹಾಗೂ ಮಹಿಳಾ ಸಮೃದ್ಧಿ ಯೋಜನೆ (ಮಹಿಳಾ ಸ್ವ.ಸಹಾಯ ಗುಂಪುಗಳಿಗೆ ಮತ್ತು ವೈಯಕ್ತಿಕ ಸಾಲ)ಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ವಿಶ್ವಕರ್ಮ ಸಮುದಾಯದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, 3ನೇ ಮಹಡಿ, ಕೋಣೆ ಸಂಖ್ಯೆ-22 ವಿಕಾಸ ಭವನ ಕಲಬುರಗಿ-585102 ಇವರ ಕಾರ್ಯಾಲಯದಿಂದ ಫೆಬ್ರವರಿ 10ರೊಳಗಾಗಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನವಾಗಿದೆ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲಿಚ್ಛಿಸುವ ಅರ್ಜಿದಾರರು ಸರ್ಕಾರದ ಆದೇಶ ದಿ.30-03-2002ರನ್ವಯ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂ.ಗಳು ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ರೂ.ಗಳ ಒಳಗಿರಬೇಕು. ಅರ್ಜಿದಾರರ ವಯೋಮಿತಿ 18ರಿಂದ 55 ವರ್ಷದೊಳಗಿರಬೇಕು. ಶೈಕ್ಷಣಿಕ ಸಾಲಕ್ಕೆ 18 ರಿಂದ 32 ವರ್ಷದೊಳಗಿರಬೇಕು. ಅರ್ಜಿದಾರರು ಒಂದು ಸಲ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‍ಸೈಟ್‍ದಿಂದ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞvಛಿಜಛಿಟ ಅಥವಾ ಮೇಲ್ಕಂಡ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ದೂರವಾಣಿ ಸಂಖ್ಯೆ 08472-278635ನ್ನು ಸಂಪರ್ಕಿಸಲು ಕೋ

No comments:

Post a Comment