GULBARGA VARTHE

GULBARGA VARTHE

Sunday, 21 October 2018

News and photo Date: 21-10-2018

ವೀರಮರಣ ಹೊಂದಿದ ಪೊಲೀಸರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲು ಕ್ರಮ
********************************************************************
ಕಲಬುರಗಿ,ಅ.21(ಕ.ವಾ.)-ಕರ್ತವ್ಯದಲ್ಲಿ ವೀರಮರಣ ಹೊಂದಿದ ರಾಜ್ಯ ಮತ್ತು ಕೇಂದ್ರ ಪೊಲೀಸ್ ದಳದ ಸಿಬ್ಬಂದಿ ಮತ್ತು ಅಧಿಕಾರಿಗಳ ಕುಟುಂಬಕ್ಕೆ ಹೆಚ್ಚಿನ ಸಹಾಯ ಮತ್ತು ಆತ್ಮಸ್ಥೈರ್ಯ ತುಂಬುವಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಜರುಗಿಸುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ರವಿವಾರ ಕರ್ತವ್ಯ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಕಲಬುರಗಿಯ ಡಿ.ಎ.ಆರ್.ಪೊಲೀಸ್ ಮೈದಾನದಲ್ಲಿರುವ ಪೊಲೀಸ್ ಹುತಾತ್ಮ ಸ್ಮಾರಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕರ್ತವ್ಯದ ಸಮಯದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದು ಗೌರವ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದರು.
ದೇಶದ ರಕ್ಷಣೆಯಲ್ಲಿ ಪೊಲೀಸ್, ಸೇನಾ ಪಡೆ ಹಾಗೂ ಅರೆಸೇನಾ ಪಡೆಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವುದಿಲ್ಲ. ಪೊಲೀಸರು ತಮ್ಮ ಸಂಸಾರದ ಆಗು ಹೋಗುಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಾರೆ. ಸರ್ಕಾರವು ಪೊಲೀಸ್ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚು ಒತ್ತು ನೀಡಿದ್ದು, ಎಲ್ಲ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ಮೂಲಕ ಉತ್ತಮ ಜೀವನ ಸಾಗಿಸುವಲ್ಲಿ ಸಹಾಯ ಮಾಡುತ್ತಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ತೊಂದರೆಗಳು ಕಂಡುಬರುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ 414 ಪೊಲೀಸರು ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಈ ಪೈಕಿ ಕರ್ನಾಟಕದ 15 ಜನರು ಸೇರಿದ್ದಾರೆ ಎಂದರು.
ಭಯೋತ್ಪಾದಕರು, ಉಗ್ರಗಾಮಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಪೊಲೀಸರು ದರೋಡೆ ನಿರ್ಮೂಲನಾ ಕಾರ್ಯಾಚರಣೆಯಲ್ಲಿ, ದೊಂಬಿ ಚದುರಿಸುವ, ಅಪರಾಧ ತನಿಖೆಯಲ್ಲಿ ಅಪರಾಧಿಗಳನ್ನು ಬಂಧಿಸಲು ಪ್ರಯತ್ನಿಸಿದಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಹೆಚ್ಚುತ್ತಿರುವ ಪೊಲೀಸರ ಅಕಾಲಿಕ ಮರಣವು ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿಯನ್ನು ಬಿಂಬಿಸುತ್ತದೆ. ಪೊಲೀಸರ ಕಾರ್ಯನಿಷ್ಠೆ ಮತ್ತು ಅರ್ಪಣಾ ಭಾವ ಅವರ ಕರ್ತವ್ಯ ಪ್ರಜ್ಞೆಗೆ ಅಳತೆಗೋಲಾಗುತ್ತದೆ. ಪೊಲೀಸರು ಕರ್ತವ್ಯದಲ್ಲಿ ಮರಣ ಹೊಂದಿದ್ದರೆ ಅವರ ಕುಟುಂಬಗಳಿಗೆ ವಿಶ್ರಾಂತಿ ವೇತನ, ದಯಾತ್ಮಕ ಸಹಾಯಧನ, ಇಲಾಖಾ ನಿಧಿಯಿಂದ ಆರ್ಥಿಕ ಸಹಾಯ ಮತ್ತು ಭಾವನಾತ್ಮಕ ಬೆಂಬಲ ನೀಡಲಾಗುತ್ತದೆ. ಸಮಾಜವು ಪೊಲೀಸರ ಪಾತ್ರ ಹಾಗೂ ಅವರ ಕಷ್ಟಗಳ ಸಂದರ್ಭದಲ್ಲಿ ನಿರ್ವಹಿಸುವ ಕರ್ತವ್ಯವನ್ನು ಸೂಕ್ಷ್ಮವಾಗಿ ತಿಳಿದು ಪೊಲೀಸರ ತ್ಯಾಗವನ್ನು ಶ್ಲಾಘಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಸಾರ್ವಜನಿಕರು ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಕವಾಯತು ತಂಡದಿಂದ ಮೂರು ಸುತ್ತು ಗುಂಡು ಹಾರಿಸಲಾಯಿತು. ಎರಡು ನಿಮಿಷಗಳ ಮೌನಾಚರಣೆ ಕೈಗೊಂಡು ಪೊಲೀಸ್ ಬ್ಯಾಂಡಿನಿಂದ ಶೋಕಗೀತೆ ನುಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್, ಕೆಎಸ್ಆರ್ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ, ನಿವೃತ್ತ ಪೊಲೀಸ್ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.

ಹೊಸ ಪೀಳಿಗೆಗೆ ಗಾಂಧೀಜಿಯವರ ತತ್ವ ತಿಳಿಸುವುದು ಅವಶ್ಯಕ
********************************************************
ಕಲಬುರಗಿ,ಅ.21.(ಕ.ವಾ)-ಪ್ರಪಂಚದಲ್ಲಿರುವ ಹೊಸ ಪೀಳಿಗೆ ಗಾಂಧೀಜಿಯವರ ಅಹಿಂಸಾ ತತ್ವದ ಮೇಲೆ ನಡೆದರೆ ಪ್ರಪಂಚಕ್ಕೆ ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಪ್ರಪಂಚಕ್ಕೆ ಗಾಂಧೀಜಿಯವರ ತತ್ವದ ಅವಶ್ಯಕತೆಯಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ರವಿವಾರ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿ ಅವರ ವಿಚಾರಧಾರೆಗಳನ್ನು ಪಸರಿಸಲಿರುವ ಸ್ತಬ್ಧ ಚಿತ್ರ ವಾಹನದಲ್ಲಿನ ಗಾಂಧಿ ಪ್ರತಿಮೆಗೆ ಮಾರ್ಲಾಪಣೆ ಮಾಡುವುದರ ಮೂಲಕ ಸ್ವಾಗತಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿಯವರ ಸಂದೇಶಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನದಿಂದಾಗಿ ರಾಜ್ಯದಾದ್ಯಂತ ಸ್ತಬ್ದ ಚಿತ್ರ ಸಂಚರಿಸುತ್ತಿದೆ. ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನ, ಅವರ ತತ್ವಗಳನ್ನು ಅರಿತು ಅಹಿಂಸಾ ಮಾರ್ಗದ ಮೇಲೆ ಎಲ್ಲರೂ ನಡೆಯಬೇಕು. ಇತ್ತೀಚೆಗೆ ದೇಶದಲ್ಲಿ ಗಾಂಧೀಜಿಯವರ ತತ್ವಗಳನ್ನು ಹಾಗೂ ವಿಚಾರಧಾರೆಗಳನ್ನು ಒಡೆಯುವ ಹಾಗೂ ಅಶಾಂತಿಯನ್ನುಂಟು ಮಾಡುವ ಕಾರ್ಯಗಳು ನಡೆಯುತ್ತಿವೆ. ಇದನ್ನು ತಡೆಯಲು ಎಲ್ಲರೂ ಸರ್ವ ಧರ್ಮ ಸಮಾನ ಹಾಗೂ ಕೂಡಿ ಬಾಳಬೇಕು ಎಂಬ ಸಂದೇಶ ಸಾರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಮಾಜಿ ಮಹಾಪೌರ ಶರಣುಕುಮಾರ ಮೋದಿ, ಗಣ್ಯರಾದ ಜಗದೇವ ಗುತ್ತೇದಾರ, ಶ್ಯಾಮ ನಾಟೀಕಾರ ಮತ್ತಿತರರು ಪಾಲ್ಗೊಂಡಿದ್ದರು.
ಸ್ತಬ್ದ ಚಿತ್ರವು ಕಲಬುರಗಿ ನಗರದಾದ್ಯಂತ ಸಂಚರಿಸಿ ಗಾಂಧೀಜಿಯವರ ಜೀವನ ಸಂದೇಶಗಳನ್ನು ಸಾರಿತು. ಈ ಸ್ತಬ್ದ ಚಿತ್ರ ವಾಹನವು ಅಕ್ಟೋಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಚಿತ್ತಾಪುರಕ್ಕೆ ಹಾಗೂ ಅಕ್ಟೋಬರ್ 23ರಂದು ಬೆಳಿಗ್ಗೆ 9 ಗಂಟೆಗೆ ಸೇಡಂಗೆ, ಅಂದು ಮಧ್ಯಾಹ್ನ 1 ಗಂಟೆಗೆ ಚಿಂಚೋಳಿಗೆ ಆಗಮಿಸಲಿದೆ. ಈ ಸ್ತಬ್ದ ಚಿತ್ರದಲ್ಲಿ ಗಾಂಧೀಜಿಯವರ ಪ್ರತಿಮೆ, ಚರಕ ಹಾಗೂ 18 ಜನ ಹೋರಾಟಗಾರರೊಂದಿಗೆ ಗಾಂಧೀಜಿಯವರ ಮುಂದಾಳತ್ವ, ಬಾಲಕ ಗಾಂಧಿ, ದೇಶಿ ಉಡುಪಿನ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಪಥಕದಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂಧಿ, ಬರವಣಿಗೆ ನಿರತ ಗಾಂಧಿ, ಅನಂತ ನಡಿಗೆ ಗಾಂಧಿ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ.

ಸಮುದಾಯ ಭವನಗಳ ನಿರ್ವಹಣೆ ಅವಶ್ಯ
************************************
ಕಲಬುರಗಿ,ಅ.21.(ಕ.ವಾ)-ಕಲಬುರಗಿ ನಗರದಲ್ಲಿರುವ ವಿವಿಧ ಬಡಾವಣೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಸೂಕ್ತ ನಿರ್ವಹಣೆ ಮಾಡುವ ಮೂಲಕ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ರವಿವಾರ ಕಲಬುರಗಿ ನಗರದ ಗುಲ್ಲಾಬಾವಡಿಯ ಸಮುದಾಯ ಭವನ ಉದ್ಘಾಟಿಸಿದ ನಂತರ ಮಾತನಾಡಿ, ಗುಲ್ಲಾಬಾವಡಿ ಸಮುದಾಯ ಭವನವನ್ನು ಸಂಸದರ, ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಒಟ್ಟು 42 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಸುತ್ತಲೂ ಆವರಣ ಗೋಡೆ ನಿರ್ಮಿಸಲು 5 ಲಕ್ಷ ರೂ.ಗಳನ್ನು ಸಂಸದರ ನಿಧಿಯಿಂದ ನೀಡಲಾಗುವುದು ಎಂದು ಘೋಷಿಸಿದರು.
ಸಮುದಾಯ ಭವನಗಳ ನಿರ್ವಹಣೆಗಾಗಿ ಸಮುದಾಯ ಭವನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅತ್ಯಲ್ಪ ಪ್ರಮಾಣದ ಶುಲ್ಕ ವಿಧಿಸಬೇಕು. ಮಹಾನಗರ ಪಾಲಿಕೆಯ ಶೇ. 18ರ ಅನುದಾನದಲ್ಲಿ ಸಮುದಾಯ ಭವನಗಳ ನಿರ್ವಹಣೆಗೆ ಕ್ರಮ ಜರುಗಿಸಲು ತಿಳಿಸಲಾಗುವುದು. ಗುಲ್ಲಾಬಾವಡಿ ಪ್ರದೇಶದಲ್ಲಿ ವಾಸವಾಗಿರುವವರಿಗೆ ಹಕ್ಕು ಪತ್ರ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಬಡವರು, ದಲಿತರು ಎಷ್ಟೇ ತೊಂದರೆಯಾದರೂ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ನೌಕರಿಗೊಸ್ಕರ ಶಿಕ್ಷಣ ಪಡೆಯದೇ ಸ್ವಾಭಿಮಾನದಿಂದ ಬದಕಲು ಹಾಗೂ ಪ್ರಪಂಚದ ಜ್ಞಾನ ಪಡೆಯಲು ಶಿಕ್ಷಣದ ಅವಶ್ಯಕತೆಯಿದೆ. ಬಡವರು ಹಾಗೂ ದೀನ ದಲಿತರು ನಾವೇನೂ ಕಡಿಮೆಯಿಲ್ಲ ಎಂಬ ಭಾವನೆ ಹೊಂದಿ ಛಲದಿಂದ ಮುನ್ನಡೆಯಬೇಕು. ಬಡವರು, ಮಹಿಳೆಯರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ದೇಶದ ಎಲ್ಲ ಜನರು ಜಾಗೃತರಾಗಿ ವಿದ್ಯಾವಂತರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ. ರಾಮಕೃಷ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಮುಖಂಡರಾದ ಜಗದೇವ ಗುತ್ತೇದಾರ, ಶ್ಯಾಮ ನಾಟೀಕರ, ಚಂದ್ರೀಕಾ ಪರಮೇಶ್ವರ, ವಸಂತರಾವ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.


Saturday, 20 October 2018

News and photo Date: 20--10--2018

ಗಾಂಧೀಜಿಯವರÀ 150ನೇ ಜನ್ಮ ವರ್ಷಾಚರಣೆ: ಜೇವರ್ಗಿಯಲ್ಲಿ ಸ್ತಬ್ತ ಚಿತ್ರಕ್ಕೆ
********************************************************************
ಸ್ವಾಗತ
********
ಕಲಬುರಗಿ,ಅ.20.(ಕ.ವಾ)-ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡ ಸ್ತಬ್ದ ಚಿತ್ರವು ಶನಿವಾರ ಜೇವರ್ಗಿ ನಗರಕ್ಕೆ ಬಂದಿದ್ದು, ಗಣ್ಯರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು.
ಜೇವರ್ಗಿಯಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ಕೋಲ್ಕೂರ, ಮಾಜಿ ಶಾಸಕÀ ಡೊಡ್ಡಪ್ಪ ಗೌಡ ಪಾಟೀಲ ನರಿಬೋಳ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಗಾಂಧೀಜಿ ಅವರ ಜೀವನದ ವಿವಿಧ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದ ಪ್ರತಿಕೃತಿಗಳಿಂದ ಸ್ತಬ್ದ ಚಿತ್ರವು ಗಮನ ಸೆಳೆಯಿತು. ಗಾಂಧೀಜಿಗೆ ಇಷ್ಟವಾಗಿದ್ದ ಗೀತೆಗಳ ಹಿನ್ನೆಲೆ ಗಾಯನ, ಸತ್ಯ, ಅಂಹಿಸೆಯ, ಭ್ರಾತೃತ್ವ, ಸಾಮರಸ್ಯದ ಸಂದೇಶಗಳು ಹಾಗೂ ಗಾಂಧೀಜಿ ಭಾಷಣದ ಧ್ವನಿಸುರುಳಿಗಳು ಇಂಪು ನೀಡಿದವು.
ಅಕ್ಟೋಬರ್ 21ರಂದು ಕಲಬುರಗಿ ನಗರಕ್ಕೆ “ಗಾಂಧಿ 150” ಸ್ತಬ್ದ ಚಿತ್ರ ಆಗಮನ
********************************************************************
ಕಲಬುರಗಿ,ಅ.20.(ಕ.ವಾ)-ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿ ಅವರ ವಿಚಾರಧಾರೆಗಳನ್ನು ಪಸರಿಸಲಿರುವ ಸ್ತಬ್ಧ ಚಿತ್ರ ವಾಹನವು ಅಫಜಲಪುರದಿಂದ ರವಿವಾರ ಅಕ್ಟೋಬರ್ 21 ರಂದು ಸಂಜೆ 4 ಗಂಟೆಗೆ ಕಲಬುರಗಿ ಸರದಾರ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ತಬ್ದ ಚಿತ್ರವನ್ನು ಬರಮಾಡಿಕೊಂಡು ವೀಕ್ಷಿಸಬೇಕೆಂದು ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ಮನವಿ ಮಾಡಿದ್ದಾರೆ.
ಈ ಸ್ತಬ್ದ ಚಿತ್ರ ವಾಹನವು ಅಕ್ಟೋಬರ್ 22ರಂದು ಸಂಜೆ 4 ಗಂಟೆಗೆ ಚಿತ್ತಾಪುರಕ್ಕೆ ಹಾಗೂ ಅಕ್ಟೋಬರ್ 23ರಂದು ಬೆಳಿಗ್ಗೆ 9 ಗಂಟೆಗೆ ಸೇಡಂಗೆ, ಅಂದು ಮಧ್ಯಾಹ್ನ 1 ಗಂಟೆಗೆ ಚಿಂಚೋಳಿಗೆ ಆಗಮಿಸಲಿದೆ. ಈ ಸ್ತಬ್ದ ಚಿತ್ರದಲ್ಲಿ ಗಾಂಧೀಜಿಯವರ ಪ್ರತಿಮೆ, ಚರಕ ಹಾಗೂ 18 ಜನ ಹೋರಾಟಗಾರರೊಂದಿಗೆ ಗಾಂಧೀಜಿಯವರ ಮುಂದಾಳತ್ವ, ಬಾಲಕ ಗಾಂಧಿ, ದೇಶಿ ಉಡುಪಿನ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಪಥಕದಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂಧಿ, ಬರವಣಿಗೆ ನಿರತ ಗಾಂಧಿ, ಅನಂತ ನಡಿಗೆ ಗಾಂಧಿ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ.
ಅಕ್ಟೋಬರ್ 24 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ
*******************************************************
ಕಲಬುರಗಿ,ಅ.20.(ಕ.ವಾ)-ಕಲಬುರಗಿ ಜಿಲ್ಲಾಡಳಿತದಿಂದ ಇದೇ ಅಕ್ಟೋಬರ್ 24 ರಂದು ಮಧ್ಯಾಹ್ನ 12.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸುವರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ.ಶ್ರೀ.ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಂ.ವೈ. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಕನೀಜ್ ಫಾತೀಮಾ, ಸುಭಾಷ ಗುತ್ತೇದಾರ್, ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಎಸ್. ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಭೋದ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ ಕರ್ಬೀಕರ್, ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಗೌರವಾಧ್ಯಕ್ಷ ಅಮರೇಶ ಜಾಗೀರದಾರ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕಲಬುರಗಿ ರಾಷ್ಟೋತ್ಥಾನ ಶಾಲೆಯ ಆಡಳಿತಾಧಿಕಾರಿ ಕೃಷ್ಣಾ ಜೋಶಿ ಅವರು ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಬೆಳಗಿನ 10.30 ಗಂಟೆಯಿಂದ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಜರುಗುವುದು.
ಅಕ್ಟೋಬರ್ 22 ರಂದು
*********************
ಕುಷ್ಠರೋಗ ಪ್ರಕರಣ ಪತ್ತೆ: ಮನೆ ಮನೆ ಭೇಟಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ
****************************************************************
ಕಲಬುರಗಿ,ಅ.20.(ಕ.ವಾ)-ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ಇಲಾಖೆ ಹಾಗೂ ವಿಶ್ವ ಸೇವಾ ಮಿಷನ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚಲು ಮನೆ ಮನೆ ಭೇಟಿ ಸಮೀಕ್ಷಾ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 22 ರಿಂದ ನವೆಂಬರ್ 11 ರವರೆಗೆ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಅಕ್ಟೋಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ತಾಜ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಅವರು ಕುಷ್ಠರೋಗ ಪ್ರಕರಣ ಪತ್ತೆ ಹಚ್ಚಲು ಮನೆ ಮನೆ ಭೇಟಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡುವರು. ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾಧವರಾವ ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲಬುರಗಿ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಅತಿಥಿಗಳಾಗಿ ಹಾಗೂ ಕಲಬುರಗಿ ತಾಜನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೇಣುಗೋಪಾಲ ದೇಶಪಾಡೆ ಹಾಗೂ ಶಿವಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಎಂ. ಸಂಧ್ಯಾರಾಣಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹೆಚ್1ಎನ್1 ರೋಗದಿಂದ ಸಾವಿಲ್ಲ: ಡಿಎಚ್‍ಓ ಸ್ಪಷ್ಟನೆ
***********************************************
ಕಲಬುರಗಿ,ಅ.20.(ಕ.ವಾ.)-ಹೆಚ್1ಎನ್1 ರೋಗದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾದ ಕಲಬುರಗಿ ನಗರದ ಸುಧಾಭಾಯಿ ಸುಧಾಕರ ರಾವ್ ಹಾಗೂ ಜಿಲ್ಲೆಯ ಅಫಜಲಪುರ ನಿವಾಸಿ ಲಕ್ಷ್ಮೀಪುತ್ರ ಮಣ್ಣೂರೆ ಅವರ ಸಾವಿನ ಕುರಿತು ಹೆಚ್1ಎನ್1 ಡೆತ್ ಅಡಿಟ್ ಸಮಿತಿಯ ವರದಿ ಬಂದಿದ್ದು, ಇವೆರಡು ಮರಣಗಳು ಹೆಚ್1ಎನ್1 ಕಾಯಿಲೆಯಿಂದ ಸಾವು ಹೊಂದಿಲ್ಲ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ ಕೆ. ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
48 ವರ್ಷದ ಸುಧಾಭಾಯಿ ಸುಧಾಕರ ರಾವ್ ಅವರು ತೀವ್ರ ಹೃದಯಾಘಾತದಿಂದ ಹಾಗೂ 42 ವರ್ಷದ ಲಕ್ಷ್ಮೀಪುತ್ರ ಮಣ್ಣೂರೆ ಅವರು ಪಲ್ಮನರಿ ಥ್ರೊಂಬೊ-ಎಂಬೋಲಿಸಮ್, ಸೆಪ್ಟಿಸಿಮೆಮಿಯಾ, ಅನಿಯಂತ್ರಿತ ಮಧುಮೇಹ, ಹೆಚ್1ಎನ್1 ಮತ್ತು ನ್ಯೂಮೋನಿಯಾ ಕಾಯಿಲೆಯಿಂದ ಮರಣ ಹೊಂದಿದ್ದಾರೆ.
ಯಾವುದೇ ರೀತಿಯಿ ಫ್ಲೂ ತರಹದ ನೆಗಡಿ, ಕೆಮ್ಮು ಜ್ವರ ಮತ್ತು ಗಂಟು ನೋವು ಕಾಣಿಸಿಕೊಂಡಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಡಿ.ಎಚ್.ಓ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅಕ್ಟೋಬರ್ 21 ರಿಂದ 27ರವರೆಗೆ
******************************
ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಆಚರಣೆ
***************************************************************
ಕಲಬುರಗಿ,ಅ.20.(ಕ.ವಾ)-ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಇದೇ ಅಕ್ಟೋಬರ್ 21 ರಿಂದ 27ರವರೆಗೆ ವಿಶ್ವ ಅಯೋಡಿಕ್ ಕೊರತೆ ನಿಯಂತ್ರಣಾ ದಿನ ಹಾಗೂ ಸಪ್ತಾಹವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಎಂ.ಡಿ. ಭೂಸನೂರ ಅವರು ತಿಳಿಸಿದ್ದಾರೆ.
ಈ ಸಪ್ತಾಹದಲ್ಲಿ ದಿನ ನಿತ್ಯ ಆಹಾರದಲ್ಲಿ ಅಯೋಡಿನ ಯುಕ್ತ ಉಪ್ಪಿನ ಬಳಕೆಯ ಬಗ್ಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದು ಮತ್ತು ಅಯೋಡಿನ ಕೊರತೆಯಿಂದ ಉಂಟಾಗುವ ನ್ಯೂನ್ಯತೆಗಳನ್ನು ತಡೆಗಟ್ಟಲು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾನವ ಜೀವನದಲ್ಲಿ ಉಪ್ಪು ಒಂದು ಅಮೂಲ್ಯವಾದ ನೈಸರ್ಗಿಕ ಪೋಷಕಾಂಶವಾಗಿದೆ. ಇದರಲ್ಲಿ ಅಯೋಡಿನ್ ಸೇರಿಸಿದರೆ, ಸಂಪೂರ್ಣ ಪೋಷಕಾಂಶ ದೇಹಕ್ಕೆ ಸೇರುತ್ತದೆ. ಅಯೋಡಿನ ಉಪ್ಪು ಸೇವಿಸುವುದರಿಂದ ಇದು ಥೈರಾಯ್ಡ ಹಾರ್ಮೋನ್ ಕಾರ್ಯನಿರ್ವಹಿಸಲು ಪ್ರಮುಖ ಅಂಶವಾಗಿದೆ.
ಅಯೋಡಿನ ಕೊರತೆಯಿಂದಾಗುವ ನ್ಯೂನತೆಗಳು: ಗರ್ಭಿಣಿಯರಲ್ಲಿ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತದೆ. ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯ ವೈಫಲ್ಯ ಹಾಗೂ ಗಳಗಂಡ ರೋಗ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಬುದ್ದಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡು ಮತ್ತು ಮೂಕತನ, ಮೆಳ್ಳುಗಣ್ಣು ಹಾಗೂ ನಡಿಗೆಯಲ್ಲಿ ಲೋಪದೋಷಗಳು.
ಕಲಬುರಗಿ ಜಿಲ್ಲೆಯ ಎಲ್ಲ ಸಾರ್ವಜನಿಕರು ದಿನನಿತ್ಯದ ಆಹಾರದಲ್ಲಿ ಅಯೋಡಿನಯುಕ್ತ ಉಪ್ಪನ್ನು ಬಳಸಬೇಕು. ಕಿರಾಣಿ ಅಂಗಡಿದಾರರು ಅಯೋಡಿನಯುಕ್ತ ಉಪ್ಪನ್ನು ಮಾರಾಟ ಮಾಡಬೇಕು. ಸಾರ್ವಜನಿಕರು ಉಪ್ಪನ್ನು ಖರೀದಿಸುವಾಗ ಪಾಕೇಟಿನ ಮೇಲೆ ಅಯೋಡಿನಯುಕ್ತ ಉಪ್ಪು ಎಂದು ಬರೆದಿದ್ದನ್ನು ನೋಡಿ ಖರೀದಿ ಮಾಡಬೇಕು. ಅಯೋಡಿನ ಅಂಶವುಳ್ಳ ಆಹಾರ ಪದಾರ್ಥಗಳು, ಮೀನು ಸೀಗಡಿಮೀನು, ಮೊಟ್ಟೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಬೇಯಿಸಿದ ಆಲೂಗಡ್ಡೆ ಹಸಿರು ತರಕಾರಿ ಹಣ್ಣು, ಹಂಪಲಗಳಲ್ಲಿ ಸಿಗುತ್ತದೆ. ಸಾರ್ವಜನಿಕರು ಆಯೋಡಿನ್‍ಯುಕ್ತ ಉಪ್ಪನ್ನ ಬಳಸಿ “ನಿಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಣೆ ಮಾಡಿರಿ” ಎಂದು ಅವರು ತಿಳಿಸಿದ್ದಾರೆ.
ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
*********************************
ಕಲಬುರಗಿ,ಅ.20.(ಕ.ವಾ)-ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಕೆಳಕಂಡ ವಿಶೇಷ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉಚಿತ ನಿವೇಶನ ಹಾಗೂ ಮನೆ, ಜಮೀನು ಇದ್ದವರಿಗೆ ಗಂಗಾ ಕಲ್ಯಾಣ ವೈಯಕ್ತಿಕ ಕೊಳವೆಬಾವಿ ಯೋಜನೆ, ಭೂ ರಹಿತರಿಗೆ ಭೂ ಒಡೆತನ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ.), ಅಲೆಮಾರಿ ಕಲಾವಿದರಿಗೆ (ಸಾಂಸ್ಕøತಿಕ ಪರಿಕರಗಳು) ಹಾಗೂ ಅಲೆಮಾರಿ ವಿಕಲಚೇತನ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ 2018ರ ನವೆಂಬರ್ 11ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಮೃತ ಯುವಕನ ವಾರಸುದಾರರ ಪತ್ತೆಗೆ ಮನವಿ
***************************************************
ಕಲಬುರಗಿ,ಅ.20.(ಕ.ವಾ)-ಕಲಬುರಗಿ-ಬೀದರ ರೈಲ್ವೆ ಟ್ರ್ಯಾಕ್‍ನ ಎಸ್.ಎಂ. ಕೃಷ್ಣಾ ಆಶ್ರಯ ಕಾಲೋನಿ ಹತ್ತಿರದ (ರೈಲ್ವೆ ಕೆ.ಎಂ. ಸಂಖ್ಯೆ 103/7-8ರ) ರೈಲ್ವೆ ಹಳಿಯ ಪಕ್ಕದಲ್ಲಿ ಅಂದಾಜು ಸುಮಾರು 20 ರಿಂದ 25 ವರ್ಷದೊಳಗಿನ ಅಪರಿಚಿತ ಯುವಕನನ್ನು 2018ರ ಅಕ್ಟೋಬರ್ 19ರ ಸಂಜೆ 4.30 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶಕ್ಕಾಗಿ ದೊಡ್ಡ ಸೈಜಿನ ಕಾಡಗಲ್ಲನ್ನು ಮುಖದ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ.
ಕೊಲೆಗಿಡಾದ ಯುವಕನು 5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋದಿ ಮೈಬಣ್ಣ, ದುಂಡನೆ ಮುಖ, ತಲೆಯಲ್ಲಿ ಕಪ್ಪು ಕೂದಲು, ಎಡಕಾಲಿನ ಪಾದದ ಮೇಲೆ 3 ಇಂಚಿನ ಹಳೆಯ ಗಾಯ ಇರುತ್ತದೆ. ಕೊಲೆಗಿಡಾದ ವ್ಯಕ್ತಿಯ ಮೈಮೇಲಿನ ಬಟ್ಟೆಯ ವಿವರ. ಕಪ್ಪು ಬಣ್ಣದ ಫುಲ್ ಶರ್ಟ್ ಅದರ ಕಾಲರ್ ಮೇಲೆ ಕಪೀಲ್ ಮೇನ್ಸ್ ವೇರ್ ಎಂದು ಇದ್ದು, ಕಪ್ಪು ಮತ್ತು ಕೆಂಪು ಬಣ್ಣದ ಶ್ಯಾಂಡೋ ಬನಿಯನ್, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಹಸಿರು ಬಣ್ಣದ ಇಸಾ ಕಂಪನಿಯ ಅಂಡರ್‍ವೇರ್ ಇರುತ್ತದೆ. ಈ ಯುವಕನ ವಾರಸುದಾರರು ಯಾರಾದರೂ ಇದ್ದಲ್ಲಿ ಕಲಬುರಗಿ ವಾಡಿ ರೈಲ್ವೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರನ್ನು ಸಂಪರ್ಕಿಸಲು ಕೋರಿದೆ.
ಅಕ್ಟೋಬರ್ 22ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಅ.20.(ಕ.ವಾ)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಗಣೇಶ ನಗರ ಫೀಡರ ವ್ಯಾಪ್ತಿಯಲ್ಲಿ ಸೋಮವಾರ ಅಕ್ಟೋಬರ್ 22ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಿ.ಐ. ಸ್ಟೇಶನ್ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸದರಿ ಫೀಡರ್‍ಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಗಣೇಶ ನಗರ ಫೀಡರ್: ಎಂ.ಬಿ.ನಗರ, ಬಾಖರ್ ಪಂಕ್ಷನ್ ಹಾಲ್, ಆದರ್ಶ ನಗರ ಕೆ.ಹೆಚ್.ಬಿ. ಲೇಔಟ್, ಗಣೇಶನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೋನಿ, ಬಸವೇಶ್ವರ ಕಾಲೋನಿ, ಎಮ್.ಜಿ.ರೋಡ್, ಪ್ರಗತಿ ಕಾಲೋನಿ, ನ್ಯೂ ಜಿ.ಡಿ.ಎ. ವೀರೆಂದ್ರ ಪಾಟೀಲ್ ಬಡವಾಣೆ, ಬಾರೆ ಹಿಲ್ಸ್ , ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದೇಶ್ವರ ಕಾಲೋನಿ, ಎಮ್.ಜಿ ರೋಡ್, ಗುಬ್ಬಿ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅಕ್ಟೋಬರ್ 22 ಹಾಗೂ 23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************************
ಕಲಬುರಗಿ,ಅ.20.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಬರುವ ಎಫ್-1 ಕೆಸರಟಗಿ ಫೀಡರ್ ವ್ಯಾಪ್ತಿಯ ಕುಸನೂರ ಗ್ರಾಮದಲ್ಲಿ 11ಕೆ.ವಿ. ಮಾರ್ಗದ ಸ್ಥಳಾಂತರಿಸುವ ಕಾರ್ಯ ಹಾಗೂ ರಸ್ತೆ ಅಗಲೀಕರಣ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ಅಕ್ಟೋಬರ್ 22 ಹಾಗೂ 23ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸದರಿ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
110/11 ಕೆ.ವಿ. ಯುನಿವರ್ಸಿಟಿ ವಿದ್ಯುತ ವಿತರಣಾ ಕೇಂದ್ರ: ಎಫ್-12 ಫೀಡರ್ ಮೇಲೆ ಬರುವ ಕುಸನೂರ ಗ್ರಾಮ, ಎನ್.ಜಿ.ಓ. ಕಾಲನಿ, ಕೃಷ್ಣ ನಗರ, ಸರಸ್ವತಿಪುರಂ, ಶೆಟ್ಟಿಕಾಲೇಜು, ಬಸವನಗರ, ಲಾಹೋಟಿ ಕಂಕರ ಮಶೀನ್, ಗೋಪಾಲ ಹೋಟೆಲ್ ಹಿಂದುಗಡೆ.
ಅಕ್ಟೋಬರ್ 22ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಅ.20.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ. ಹಡಗಿಲ್ ಹಾರೂತಿ ಕೇಂದ್ರದಿಂದ ಹೈಕೋರ್ಟ 33/11 ಕೆ.ವಿ. ಜಿಆಯ್ ಸಬ್‍ಸ್ಟೇಶನ್ ಲೈನ್ ಕಾರ್ಯಕೈಗೊಂಡಿರುವ ಪ್ರಯುಕ್ತ ಅಕ್ಟೋಬರ್ 22 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಹಡಗಿಲ್ ಹಾರೂತಿ ವಿತರಣಾ ಕೇಂದ್ರ: ಎಫ್-5 ಶರಣ ಶಿರಸಗಿ ಎನ್‍ಜೆವಾಯ್ ಹಾಗೂ ಎಫ್-6 ಬಬಲಾದ ಐಪಿ.

Wednesday, 17 October 2018

news and photo Date: 17--10--2018

ನಾಗಪುರ ದಿಕ್ಷಾ ಭೂಮಿ ಯಾತ್ರೆ ಅನುಯಾಯಿಗಳಿಗೆ ಶುಭ ಹಾರೈಕೆ
**********************************************************
ಕಲಬುರಗಿ,ಅ.17.(ಕ.ವಾ)-ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್. ಅಂಬೇಡ್ಕರ ಅನುಯಾಯಿಗಳಿಗಾಗಿ ಏರ್ಪಡಿಸಲಾದ ನಾಗಪುರ ದಿಕ್ಷಾ ಭೂಮಿ ಯಾತ್ರೆಗೆ ಕಲಬುರಗಿಯಿಂದ ಪ್ರಯಾಣಿಸುತ್ತಿರುವ ಅನುಯಾಯಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಶುಭ ಹಾರೈಸಿದರು.
ಅವರು ಬುಧವಾರ ಬುದ್ಧ ವಿಹಾರದ ಆವರಣದಲ್ಲಿ ನಾಗಪುರ ದಿಕ್ಷಾ ಭೂಮಿ ಯಾತ್ರೆಗೆ ಪ್ರಯಾಣಿಸುತ್ತಿರುವ ಹವಾನಿಯಂತ್ರಿತ ಹಾಗೂ ಸುಖಾಸೀನ ಕೆ.ಎಸ್.ಆರ್.ಟಿ.ಸಿ.ಯ ಐರಾವತ ಮಲ್ಟಿ ಎಕ್ಸೆಲ್ ಮೂರು ಬಸ್ಸುಗಳಿಗೆ ಚಾಲನೆ ನೀಡಿ, ಕಲಬುರಗಿಯಿಂದ ಪ್ರಯಾಣಿಸುತ್ತಿರುವ ಎಲ್ಲ 144 ಅನುಯಾಯಿಗಳಿಗೆ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವಸತಿ, ಊಟದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು ಎಂದರು.
ಈ ವರ್ಷದಿಂದ ನಾಗಪುರ ದಿಕ್ಷಾ ಭೂಮಿಗೆ ಅನುಯಾಯಿಗಳ ಯಾತ್ರೆ ವಿಶೇಷ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ ಅವರು ಇಂದು 23 ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ. ಈ ಎಲ್ಲ ಬಸ್ಸುಗಳಲ್ಲಿ ನಾಗಪುರಕ್ಕೆ ಪ್ರಯಾಣಿಸುವ ಅನುಯಾಯಿಗಳು ಅಕ್ಟೋಬರ್ 18, 19 ಹಾಗೂ 20ರಂದು ನಾಗಪುರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಕ್ಟೋಬರ್ 20ರ ಸಾಯಂಕಾಲ ಸ್ವಜಿಲ್ಲೆಗಳಿಗೆ ತೆರಳುವರು.
ಈ ಸಂದರ್ಭದಲ್ಲಿ ಗಣ್ಯರಾದ ವಿಠ್ಠಲ ದೊಡಮನಿ, ರಾಜೀವ ಜಾನೆ, ಮಲ್ಲಪ್ಪ ಹೊಸಮನಿ, ಅಶೋಕ ವೀರನಾಯಕ, ಸುದರ್ಶನ ಮದನಕರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸತೀಶ ಮತ್ತಿತರರು ಉಪಸ್ಥಿತರಿದ್ದರು.

ಅಕ್ಟೋಬರ್ 20 ರಿಂದ 23ರವರೆಗೆ
******************************
ಜಿಲ್ಲೆಯಲ್ಲಿ “ಗಾಂಧಿ 150” ಸ್ತಬ್ದ ಚಿತ್ರ ಸಂಚಾರ
***************************************
ಕಲಬುರಗಿ,ಅ.17.(ಕ.ವಾ)-ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿ ಅವರ ವಿಚಾರಧಾರೆಗಳನ್ನು ಪಸರಿಸಲು ರಾಜ್ಯದಾದ್ಯಂತ ಎರಡು ಮಾರ್ಗಗಳಲ್ಲಿ ಪ್ರತ್ಯೇಕ ಸ್ತಬ್ಧ ಚಿತ್ರಗಳ ಸಂಚಾರಿ ವಾಹನಗಳು ಸಂಚರಿಸುತ್ತಿವೆ. ಈ ಸ್ತಬ್ಧ ಚಿತ್ರ ವಾಹನವು ಯಾದಗಿರಿ ಜಿಲ್ಲೆಯ ಶಹಾಪುರ ಮಾರ್ಗವಾಗಿ ಶನಿವಾರ ಅಕ್ಟೋಬರ್ 20 ರಂದು ಸಂಜೆ 4 ಗಂಟೆಗೆ ಕಲಬುರಗಿ ಜಿಲ್ಲೆಯ ಜೇವರ್ಗಿಗೆ ಪ್ರವೇಶ ಮಾಡಲಿದೆ.
ಮುಖ್ಯಮಂತ್ರಿಗಳಿಂದ ಕಳೆದ ಅಕ್ಟೋಬರ್ 2ರಂದು ಚಾಲನೆಗೊಂಡಿರುವ ಈ ಸ್ತಬ್ಧ ಚಿತ್ರವು ಅಕ್ಟೋಬರ್ 20 ರಿಂದ 23ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ. ಅಕ್ಟೋಬರ್ 20 ರಂದು ಸಂಜೆ 4 ಗಂಟೆಗೆ ಜೇವರ್ಗಿಗೆ ಆಗಮಿಸಲಿದೆ. ಅಕ್ಟೋಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಅಫಜಲಪುರಕ್ಕೆ ಹಾಗೂ ಅಂದು ಸಂಜೆ 4 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಅಕ್ಟೋಬರ್ 22ರಂದು ಬೆಳಿಗ್ಗೆ ಸಂಜೆ 4 ಗಂಟೆಗೆ ಚಿತ್ತಾಪುರಕ್ಕೆ, ಅಕ್ಟೋಬರ್ 23ರಂದು ಬೆಳಿಗ್ಗೆ 9 ಗಂಟೆಗೆ ಸೇಡಂಗೆ, ಅಂದು ಮಧ್ಯಾಹ್ನ 1 ಗಂಟೆಗೆ ಚಿಂಚೋಳಿಗೆ ಆಗಮಿಸಲಿದೆ.
ಈ ಸ್ತಬ್ದ ಚಿತ್ರದಲ್ಲಿ ಗಾಂಧೀಜಿಯವರ ಪ್ರತಿಮೆ, ಚರಕ ಹಾಗೂ 18 ಜನ ಹೋರಾಟಗಾರರೊಂದಿಗೆ ಗಾಂಧೀಜಿಯವರ ಮುಂದಾಳತ್ವ, ಬಾಲಕ ಗಾಂಧಿ, ದೇಶಿ ಉಡುಪಿನ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಪಥಕದಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂಧಿ, ಬರವಣಿಗೆ ನಿರತ ಗಾಂಧಿ, ಅನಂತ ನಡಿಗೆ ಗಾಂಧಿ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ತಬ್ದ ಚಿತ್ರವನ್ನು ಬರಮಾಡಿಕೊಂಡು ವೀಕ್ಷಿಸಬೇಕೆಂದು ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ಮನವಿ ಮಾಡಿದ್ದಾರೆ.

ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರು ನೋಂದಣಿ ಮಾಡಿಕೊಳ್ಳಲು ಸೂಚನೆ
**************************************************************
ಕಲಬುರಗಿ,ಅ.17.(ಕ.ವಾ)-ಕಲಬುರಗಿ ಜಿಲ್ಲೆಯಲ್ಲಿನ ಎಲ್ಲ ಖಾಸಗಿ ಕ್ಲಿನಿಕ್, ಡೇ-ಕೇರ್ ಸೆಂಟರ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆ, ಲ್ಯಾಬ, ಯೋಗ, ಆಯುರ್ವೇದ, ಮತ್ತು ಯುನಾನಿ, ಸಿದ್ದ, ಮಸಾಜ್ ಪಾರ್ಲರ್, ಡೆಂಟಲ್ ಆಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿರುವ ವೈದ್ಯರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007 ರ ಪ್ರಕಾರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ನೊಂದಣಿಯಾದ 5 ವರ್ಷದ ನಂತರ ಕಡ್ಡಾಯವಾಗಿ ನವೀಕರಣವನ್ನು 2018ರ ಅಕ್ಟೋಬರ್ 25 ರೊಳಗಾಗಿ ಮಾಡಿಕೊಳ್ಳಬೇಕು.
ಮೇಲ್ಕಂಡ ದಿನಾಂಕದೊಳಗಾಗಿ ನೋಂದಣಿಯಾಗದೆ ಇರುವ ಹಾಗೂ ನವೀಕರಣ ಮಾಡಿಕೊಳ್ಳದೇ ಇರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007 ರ ಪ್ರಕಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಕೆ. ಪಾಟೀಲ ಅವರು ತಿಳಿಸಿದ್ದಾರೆ.

ಅಕ್ಟೋಬರ್ 20ರಂದು ಇಜೇರಿ ಗ್ರಾಮದಲ್ಲಿ ಅರಿವು ಕಾರ್ಯಕ್ರಮ
*******************************************************
ಕಲಬುರಗಿ,ಅ.17.(ಕ.ವಾ)-ಜೇವರ್ಗಿ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲು ಅರಿವು ಮೂಡಿಸುವ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೇವರ್ಗಿ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯದವರು ಈ ಅರಿವು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂದು ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜೇವರ್ಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜೇವರ್ಗಿ ಉಪವಿಭಾಗದ ತಾಲೂಕು ವಿಸ್ತರಣಾಧಿಕಾರಿಗಳನ್ನು ಮೊಬೈಲ್ ಸಂಖ್ಯೆ 9535775141 ಹಾಗೂ ತಾಲೂಕು ಮಾಹಿತಿಕೇಂದ್ರ, ಮಿನಿ ವಿಧಾನಸೌಧ, ರೂಮ್ ನಂ. 210, ಎರಡನೇ ಮಹಡಿ, ಜೇವರ್ಗಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9901890910ಗೆ ಸಂಪರ್ಕಿಸಲು ಕೋರಲಾಗಿದೆ.

ಅಕ್ಟೋಬರ್ 20ರಂದು ಗ್ರಾಹಕರ ಕುಂದುಕೊರತೆ ಸಭೆ
************************************************
ಕಲಬುರಗಿ,ಅ.17.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗ್ರಾಮೀಣ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ಉಪವಿಭಾಗಗಳ ಕಚೇರಿಯಲ್ಲಿ ಇದೇ ಅಕ್ಟೋಬರ್ 20ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಗ್ರಾಹಕರ ಕುಂದುಕೊರತೆ ಸಭೆಯು ಜರುಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ಉಪವಿಭಾಗ ಶಾಖೆಗಳಲ್ಲಿ ಬರುವ ಗ್ರಾಹಕರು/ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿನ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಜನಸ್ಪಂದನ ಸಭೆಯ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ
ಕಲಬುರಗಿ,ಅ.17.(ಕ.ವಾ.)-ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ರವಿವಾರ ಅಕ್ಟೋಬರ್ 21ರಂದು ಬೆಳಗಿನ 8 ಗಂಟೆಗೆ ಕಲಬುರಗಿ ಪೊಲೀಸ್ ಹುತಾತ್ಮರ ಸ್ಮಾರಕ ಡಿ.ಎ.ಆರ್. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ ಖರ್ಬಿಕರ್ ಮುಖ್ಯ ಅತಿಥಿಯಾಗಿ ಮತ್ತು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಕಲಬುರಗಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಶಶಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆ: ಅರ್ಜಿ ಆಹ್ವಾನ
****************************************************************
ಕಲಬುರಗಿ,ಅ.17.(ಕ.ವಾ.)-ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ 2018-19ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಗ್ರಾಮೀಣ ಪ್ರದೇಶದಲ್ಲಿ ಅತೀ ಸಣ್ಣ ಕೈಗಾರಿಕೆ ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕುಗಳಿಂದ ಗರಿಷ್ಠ 10 ಲಕ್ಷ ರೂ. ಮೊತ್ತದವರೆಗೆ ಸಾಲ ಪಡೆದು ಅತಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಯೋಜನಾ ವೆಚ್ಚ 5 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಯೋಜನೆಗಳನ್ನು ಸ್ಥಾಪಿಸಲು ಅಭ್ಯರ್ಥಿಗಳು ಕÀನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದವರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಠ 35 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿಸೈನಿಕರು ಮತ್ತು ಅಂಗವಿಕಲರು ಕನಿಷ್ಠ 18 ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. ಈ ಯೋಜನೆಯಡಿ ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯಾವುದೇ ಆದಾಯ ಮಿತಿ ಇರುವುದಿಲ್ಲ. ಸಾಲ ಪಡೆಯಲಿಚ್ಛಿಸುವ ಗ್ರಾಮೀಣ ಅಭ್ಯರ್ಥಿಗಳು ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್ಸೈಟ್ದಲ್ಲಿ 2018ರ ನವೆಂಬರ್ 13ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ಯೋಜನೆಯಲ್ಲಿ ಹೊಸದಾಗಿ ಸಾಲ ಮಂಜೂರಾತಿ ಪಡೆದು ಪ್ರಾರಂಭಿಸುವ ಹೊಸ ಘಟಕಗಳಿಗೆ ಮಾತ್ರ ಸಹಾಯಧನ ಲಭ್ಯವಿರುತ್ತದೆ. ವಿಸ್ತರಣೆ, ಆಧುನೀಕರಣ, ವೈವಿದ್ಧೀಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಪಿ.ಎಂ.ಇ.ಜಿ.ಪಿ., ಕೆ.ಎಸ್.ಇ.ಎಸ್. ಯೋಜನೆಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದಿದ್ದಲ್ಲಿ ಅರ್ಹತೆ ಇರುವುದಿಲ.್ಲ ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎಂ.ಎಸ್.ಕೆ. ಮಿಲ್ ರಸ್ತೆ, ಕೈಗಾರಿಕಾ ವಸಾಹತು, ನಿವೇಶನ ಸಂಖ್ಯೆ ಎಲ್-10, ಸಾಗರ ಮಾರ್ಬಲ್ಸ್ ಎದುರಿಗೆ ಕಲಬುರಗಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಮಾವಿನ ಬೆಳೆಯಲ್ಲಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳು
***************************************************
ಕಲಬುರಗಿ,ಅ.17.(ಕ.ವಾ.)-ಕಲಬುರಗಿ ಜಿಲ್ಲೆಯ ರೈತರು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮಾವಿನ ಬೆಳೆಯಲ್ಲಿ ಕೆಳಕಂಡ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಸಪಂಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾವಿನ ಜೇಡ ಹುಳ ಕಂಡು ಬಂದಲ್ಲಿ ಹುಳದ ಜಾಡನ್ನು ಕಿತ್ತು ನಾಶ ಮಾಡಬೇಕು. ಈ ಸಮಸ್ಯೆ ತೀವ್ರವಾಗಿದ್ದರೆ ಕ್ವೀನಾಲ್ಪಾಸ್ 2 ಮಿ.ಲೀ/ಲೀಟರ್ ಅಥವಾ ಕ್ಲೋರೋಪೈರಿಪಾಸ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ರೆಂಬೆಯ ಕುಡಿ ಕೊರಕ ಹುಳುವಿನ ಬಾಧೆ ಕಂಡು ಬಂದಲ್ಲಿ ಕ್ವೀನಾಲ್ಪಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಕಾಂಡ ಕೊರಕ ನಿಯಂತ್ರಣಕ್ಕಾಗಿ ಆ ಜಾಗವನ್ನು ಸ್ವಚ್ಛಗೊಳಿಸಿ ಡೈಕ್ಲೋರೋಪಾಸ್ 76 ಇಸಿ (ನುವಾನ್) ಹಲವು ಹನಿಗಳನ್ನು ಸಿರೀಂಜ್ ಮೂಲಕ ರಂಧ್ರದ ಒಳಗೆ ಹಾಕಿ ರಂಧ್ರವನ್ನು ತಾಮ್ರದ ಆಕ್ಸಿಕ್ಲೋರೈಡ್ ಮಿಶ್ರಿತ ಐಐಎಚ್ಆರ್ ಹೀಲರ್ ಸೀಲರ್ ಪೌಡರ್ನಿಂದ ಮುಚ್ಚುವುದು. ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಬೆರೆಸಿ ಕಾಂಡದ ಸುತ್ತಲು ಲೇಪಿಸಬೇಕು. ಮಾವು ಸ್ಪೆಷಲ್-ಲಘು ಪೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞ ಮಂಜುನಾಥ ಪಾಟೀಲ ಅವರನ್ನು ಮೊಬೈಲ್ ಸಂಖ್ಯೆ 7259984026ಗೆ ಸಂಪರ್ಕಿಸಲು ಕೋರಲಾಗಿದೆ.

ಅಕ್ಟೋಬರ್ 22 ರಿಂದ ಕುಷ್ಠರೋಗ ಪತ್ತೆ ಆಂದೋಲನ
**********************************************
ಕಲಬುರಗಿ,ಅ.17.(ಕ.ವಾ)-ಜಿಲ್ಲಾ ಆರೋಗ್ಯ ಇಲಾಖೆಯ ಕುಷ್ಠರೋಗ ವಿಭಾಗದಿಂದ ಕಲಬುರಗಿ ಜಿಲ್ಲೆಯಲ್ಲಿ ಇದೇ ಅಕ್ಟೋಬರ್ 22 ರಿಂದ ನವೆಂಬರ್ 4 ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಈ ಆಂದೋಲನದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ವಯಂ ಸೇವಾ ಸೇವಕರು ಮನೆ ಮನೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಷ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಸಮೀಕ್ಷೆ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು. ಸಮೀಕ್ಷೆಗೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 104ಗೆ ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
***************************************
ಕಲಬುರಗಿ,ಅ.17.(ಕ.ವಾ)-ಕಲಬುರಗಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ 2018-19ನೇ ಸಾಲಿಗಾಗಿ ಅನಕ್ಷರಸ್ಥರಿಗೆ ಮೂಲ ಸಾಕ್ಷರತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಮತ್ತು ಸಾಕ್ಷರತೆಯಲ್ಲಿ ಅನುಭವವುಳ್ಳ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಂಸ್ಥೆಯ ಸಂಪೂರ್ಣ ಮಾಹಿತಿಯೊಂದಿಗೆ ಅಕ್ಟೋಬರ್ 26 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 29, ವಿಕಾಸ ಭವನ, ಕಲಬುರಗಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9686165191, 9986114237ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಅಕ್ಟೋಬರ್ 24ರಂದು “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮ
**********************************************************
ಕಲಬುರಗಿ,ಅ.17.(ಕ.ವಾ)-ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕಲಬುರಗಿ ಬ್ರಹ್ಮಪುರದ ಮಹಾಲಕ್ಷ್ಮೀನಗರದಲ್ಲಿರುವ ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಮನೆಯಂಗಳದಲ್ಲಿ ಇದೇ ಅಕ್ಟೋಬರ್ 24 ರಂದು ಸಂಜೆ 5 ಗಂಟೆಗೆ “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಖ್ಯಾತ ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಸ್ವಾಮಿರಾವ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಖ್ಯಾತ ಚಿಂತಕರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಎಸ್.ಟಿ. ಪೋತೆ, ನಿವೃತ್ತ ಪ್ರಾಂಶುಪಾಲ ಹಾಗೂ ಖ್ಯಾತ ಅನುವಾದಕರಾದ ಬಾಲಚಂದ್ರ ಜಯಶಟ್ಟಿ ಉಪಸ್ಥಿತರಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರವು ಯುವಜನರಲ್ಲಿ ಸಾಹಿತ್ಯಾಭಿರುಚಿಯನ್ನು ಹುಟ್ಟಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ಈ ದಿಸೆಯಲ್ಲಿ ಪ್ರಾಧಿಕಾರವು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮ ಯೋಜಿಸಿದೆ. ಈ ಯೋಜನೆಯಡಿ ರಾಜ್ಯದ ವಿವಿಧ ನಗರದ ವಿವಿಧ ಬಡಾವಣೆಗಳಲ್ಲಿ ಜನನಿಬಿಡ ಪ್ರಾಂತ್ಯಗಳು ಹಾಗೂ ಸ್ಲಂಗಳಲ್ಲಿ ಆಯ್ದ ಮನೆಗಳ ಮನೆಯಂಗಳದಲ್ಲಿ ಕಾರ್ಯಕ್ರಮ ಆಯೋಜಿಸಿ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಪುಸ್ತಕಗಳ ಓದಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 20ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಅ.17.(ಕ.ವಾ)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಗಣೇಶ ನಗರ ಫೀಡರ ವ್ಯಾಪ್ತಿಯಲ್ಲಿ ಇದೇ ಅಕ್ಟೋಬರ್ 20ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಿ.ಐ. ಸ್ಟೇಶನ್ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸದರಿ ಫೀಡರ್ಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.11 ಕೆ.ವಿ. ಗಣೇಶ ನಗರ ಫೀಡರ್: ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶನಗರ ಕೆ.ಹೆಚ್.ಬಿ. ಲೇಔಟ್, ಗಣೇಶನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೋನಿ, ಬಸವೇಶ್ವರ ಕಾಲೋನಿ, ಎಮ್.ಜಿ.ರೋಡ್, ಪ್ರಗತಿ ಕಾಲೋನಿ, ನ್ಯೂ ಜಿ.ಡಿ.ಎ. ವೀರೆಂದ್ರ ಪಾಟೀಲ್ ಬಡವಾಣೆ, ಬಾರೆ ಹಿಲ್ಸ್ , ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೋನಿ, ಎಮ್.ಜಿ ರೋಡ್, ಗುಬ್ಬಿ ಕಾಲೋನಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

Tuesday, 16 October 2018

NEWS AND PHOTO DATE DATE: 16--10--2018

ಘನತ್ಯಾಜ್ಯ ವಿಲೇವಾರಿ ಸಪ್ತಾಹ ಸಮರ್ಪಕವಾಗಿ ಆಚರಿಸಲು ಸೂಚನೆ
*************************************************************
ಕಲಬುರಗಿ,ಅ.16(ಕ.ವಾ)-ಕಲಬುರಗಿ ಜಿಲ್ಲೆಯಾದ್ಯಂತ ಅಕ್ಟೋಬರ್ 20ರಿಂದ 30ರವರೆಗೆ 11 ದಿನಗಳ ಕಾಲ ಸಮರ್ಪಕವಾಗಿ ಘನತ್ಯಾಜ್ಯ ವಿಲೇವಾರಿ ಕೈಗೊಂಡು ನಗರದ ನೈರ್ಮಲ್ಯದಲ್ಲಿ ಗಮನಾರ್ಹ ಬದಲಾವಣೆ ತರಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪೌರಕಾರ್ಮಿಕರು ಮನೆ ಮನೆಯಿಂದ ತ್ಯಾಜ್ಯವನ್ನು ಸಂಗ್ರಹಿಸಿದಾಗ ಸ್ಥಳದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿದಲ್ಲಿ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಟೊ ಟಿಪ್ಪರುಗಳನ್ನು ಮಾರ್ಪಡಿಸಬೇಕೆಂದು ತಿಳಿಸಿದರು.
ನಗರದಲ್ಲಿರುವ ಅಂಗಡಿ ಮಾಲೀಕರು ಹಾಗೂ ವ್ಯಾಪಾರಸ್ಥರು ತ್ಯಾಜ್ಯವನ್ನು ಚರಂಡಿಗೆ, ರಸ್ತೆಗೆ ಹಾಕುವುದನ್ನು ಗಮನಿಸಲಾಗಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿಗಾಗಿ ಎಲ್ಲ ಅಂಗಡಿಗಳಿಗೆ ನೋಟೀಸು ನೀಡಬೇಕು. ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡದ ವ್ಯಾಪಾರಸ್ಥರ ಲೈಸೆನ್ಸ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಮನೆಯ ತ್ಯಾಜ್ಯವನ್ನು ರಸ್ತೆಗೆ ಬೀಸಾಡದೇ ಮನೆಯ ಗೇಟಿನಲ್ಲಿ ಸಂಗ್ರಹಿಸಿಡಬೇಕು. ಪ್ರತಿದಿನ ಪೌರಕಾರ್ಮಿಕರು ಮನೆ ಮನೆಯಿಂದ ಕಸವನ್ನು ಸಂಗ್ರಹ ಮಾಡುತ್ತಾರೆ. ಅವರಿಗೆ ಕಸವನ್ನು ನೀಡಿ ಸಹಕರಿಸಬೇಕು ಎಂದರು.
ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವು ಅತಿ ಅಪಾಯಕಾರಿಯಾಗಿದ್ದು, ಅವುಗಳ ವಿಲೇವಾರಿ ಕಡ್ಡಾಯವಾಗಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ನರ್ಸಿಂಗ್ ಹೋಮಗಳಿಗೆ ನೋಟಿಸ್ ಜಾರಿ ಮಾಡಬೇಕು. ನಗರದಲ್ಲಿ ಕಟ್ಟಡ, ರಸ್ತೆ, ಚರಂಡಿ ನಿರ್ಮಾಣದ ನಂತರ ಕಾಮಗಾರಿಗೆ ಬಳಿಸಿದ ವಸ್ತುಗಳನ್ನು ರಸ್ತೆಯಲ್ಲಿ ಹಾಗೆ ಬಿಡುತ್ತಿದ್ದಾರೆ. ಈ ರೀತಿ ಡೆಬರಿಗಳನ್ನು ರಸ್ತೆಯ ಮೇಲೆ ಬಿಡುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ಸರ್ಕಾರಿ ಸಂಸ್ಥೆಗಳು ಈ ರೀತಿಯ ಅಸಡ್ಡೆ ತೋರಿದಲ್ಲಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಡೆಬರಿಗಳನ್ನು ತೆಗೆಯಲು ತಗಲುವ ಖರ್ಚನ್ನು ಸಂಬಂಧಿಸಿದ ಇಂಜಿನೀಯರ ವೇತನದಿಂದ ಪಾವತಿಸಬೇಕು ಎಂದರು.
ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಲು ಕ್ರಮ: ನಗರದಿಂದ ಹಾಗೂ ಕಣ್ಣಿ ಮಾರುಕಟ್ಟೆ, ಸೂಪರ್ ಮಾರುಕಟ್ಟೆಯಿಂದ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಸಣ್ಣ ಸಣ್ಣ ಪ್ರಮಾಣದ ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಬೇಕು. ಒಂದು ಟನ್ ಹಸಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಅನಿಲ, ಬಯೋಗ್ಯಾಸ್ ಘಟಕ ಸ್ಥಾಪಿಸಲು ಸ್ಥಳ ಹಾಗೂ ಅನಿಲದ ಬಳಕೆಯ ಬಗ್ಗೆ ವಿವರ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು. ನಗರದಿಂದ ಪ್ರತಿದಿನ ಉತ್ಪತ್ತಿಯಾಗುವ ಒಣ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ನಿಟ್ಟಿನಲ್ಲಿ ಯಾವುದಾದರೂ ಕಂಪನಿಯವರು ಮುಂದೆ ಬಂದರೆ ಅವರೊಂದಿಗೆ ಸಮಾಲೋಚಿಸಿ ಪೈಲಟ್ ಯೋಜನೆಯಾಗಿ ಘಟಕ ಪ್ರಾರಂಭಕ್ಕೆ ಕ್ರಮ ಜರುಗಿಸಬೇಕು ಎಂದರು.
ಮ್ಯಾನಹೋಲಗಳ ದುರಸ್ತಿಗೆ ಕ್ರಮ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಸಮರ್ಪಕವಾಗಿ ಮ್ಯಾನಹೋಲಗಳ ಸಮೀಕ್ಷೆ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಮೂರು ದಿನದೊಳಗಾಗಿ ದುರಸ್ತಿಯಲ್ಲಿರುವ ಮತ್ತು ಅವೈಜ್ಞಾನಿಕವಾಗಿ ರೂಪಿಸಿರುವ ಮ್ಯಾನಹೋಲ್‍ಗಳ ಸಮೀಕ್ಷೆ ಕೈಗೊಂಡು ವರದಿ ನೀಡಬೇಕು. ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಮ್ಯಾನಹೋಲ್‍ಗಳನ್ಮು ರಸ್ತೆ ಮಟ್ಟಕ್ಕೆ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಂದಿ ಹಿಡಿಯಲು ಕ್ರಮ: ನಗರದಲ್ಲಿರುವ ಹಂದಿಗಳನ್ನು ಹಂದಿ ಮಾಲೀಕರು ನಗರದಿಂದ ಹೊರಗೆ ಸಾಗಿಸುವಂತೆ ನೋಟಿಸು ನೀಡಬೇಕು. ಮಹಾನಗರ ಪಾಲಿಕೆಯಿಂದ ಹಂದಿ ಹಿಡಿಯಲು ಪ್ರಾರಂಭಿಸಿದಾಗ ಯಾರಾದರೂ ಅಡ್ಡಿಪಡಿಸಿದಲ್ಲಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಪೌರ ಕಾರ್ಮಿಕರಿಂದ ನಗರದಲ್ಲಿ ಎಷ್ಟು ಹಂದಿಗಳಿವೆ ಎಂಬ ಮಾಹಿತಿ ಪಡೆಯಬೇಕು. ನವೆಂಬರ್ ಒಂದು ರೊಳಗಾಗಿ ಎಲ್ಲ ಹಂದಿಗಳನ್ನು ನಗರದಿಂದ ಹೊರಗಡೆ ಸಾಗಿಸಬೇಕು ಎಂದು ಮಹಾನಗರ ಪಾಲಿಕೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಡಾಡಿ ದನ ಹಾಗೂ ನಾಯಿ ಹಿಡಿಯಲು ಕ್ರಮ: ನಗರದಲ್ಲಿ ಬೀದಿ ದನಗಳು ಮತ್ತು ನಾಯಿಗಳಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ನಾಯಿಗಳ ಸಂತಾನೋತ್ಪತ್ತಿ ತಡೆಯುವ ನಿಟ್ಟಿನಲ್ಲಿ ನಗರದಲ್ಲಿರುವ ನಾಯಿಗಳ ಅಂದಾಜು ಸಂಖ್ಯೆಯನ್ನು ಗುರುತಿಸಿ ಸಮರ್ಪಕ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು. ನವೆಂಬರ್ ಒಂದರ ನಂತರ ನಗರದಿಂದ ಬಿದಾಡಿ ದನಗಳನ್ನು ಹಾಗೂ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ನಗರದಾದ್ಯಂತ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ದಾಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದೇ ಮಾದರಿಯಲ್ಲಿ ನವೆಂಬರ್ ಒಂದರಿಂದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ಪ್ಲಾಸ್ಟಿಕ್ ಮಾರಾಟ ಮಾಡುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಆರ್.ಎಸ್. ಪೆದ್ದಪ್ಪಯ್ಯ. ನಂದಗಿರಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೃಷಿಯೊಂದಿಗೆ ಅರಣ್ಯ ಬೆಳೆಸಿ: ಹಸಿರು ಕರ್ನಾಟಕಕ್ಕೆ ಸಹಕರಿಸಿ
******************************************************
ಕಲಬುರಗಿ,ಅ.16.(ಕ.ವಾ.)-ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸುವ ಮೂಲಕ ಹಸಿರು ಕರ್ನಾಟಕ ಮಾಡಲು ರಾಜ್ಯ ಸರ್ಕಾರ ಪಣ ತೊಟ್ಟಿದ್ದು, ರೈತ ಬಾಂಧವರು ಕೃಷಿ, ತೋಟಗಾರಿಕೆ ಬೆಳೆಯೊಂದಿಗೆ ಗಿಡ-ಮರಗಳನ್ನು ಬೆಳೆಸುವ ಮೂಲಕ ಸಹಕರಿಸಬೇಕು ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್. ಶಂಕರ ರೈತ ಸಮುದಾಯಕ್ಕೆ ಕರೆ ನೀಡಿದರು.
ಅವರು ಅರಣ್ಯ ಇಲಾಖೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡಕರ್ ಸಭಾಂಗಣದಲ್ಲಿ ಆಯೋಜಿಸಲಾದ “ವೃತ್ತ ಮಟ್ಟದ ಕೃಷಿ ಅರಣ್ಯ ಕಾರ್ಯಾಗಾರ ”ವನ್ನು ಉದ್ಘಾಟಿಸಿ ಮಾತನಾಡಿದರು.
ಗಿಡ-ಮರಗಳನ್ನು ಬೆಳೆಸಲು ರೈತರಿಗೆ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಜಾರಿಗೊಳಿಸಿದ್ದು, ಇದರ ಪ್ರಯೋಜನವನ್ನು ಅನ್ನದಾತ ಪಡೆಯಬೇಕು. ಕೃಷಿ ಅರಣ್ಯ ಯೋಜನೆಗಳ ಕುರಿತು ಮಾಹಿತಿ ನೀಡಲು ಧಾರವಾಡ, ಮಂಡ್ಯದಲ್ಲಿಯೂ ಸಹ ಇದೇ ರೀತಿಯ ವೃತ್ತ ಮಟ್ಟದ ಕೃಷಿ ಅರಣ್ಯ ಕಾರ್ಯಾಗಾರ ಮಾಡಿ ಪ್ರಗತಿಪರ ರೈತರಿಂದ ರೈತ ಸಮುದಾಯಕ್ಕೆ ತಿಳುವಳಿಕೆ ನೀಡಲಾಗಿದೆ. ಇಂದು ಕಲಬುರಗಿಯಲ್ಲಿ ನಡೆಯುತ್ತಿದ್ದು, ಮುಂದಿನ ಕಾರ್ಯಾಗಾರವನ್ನು ವನ್ಯಧಾಮ ಚಿಂಚೋಳಿಯಲ್ಲಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ರೈತರ ಆರ್ಥಿಕವಾಗಿ ಸದೃಢಗೊಳ್ಳಲು ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂತಹ ಆದಾಯೋತ್ಪನ್ನ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ರೈತ ಸಮುದಾಯದ ಒಳಿತಿಗಾಗಿ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳು ರೂಪಿಸಿದ್ದು, ರಾಜ್ಯ ಸರ್ಕಾರ ಅನ್ನದಾತನೊಂದಿಗೆ ಇದೆ. ಯಾವುದೇ ಕಾರಣಕ್ಕೂ ದೃತಿಗೆಡದೆ ಬದುಕು ಸಾಗಿಸಿ ಎಂದರು.
ಗಿಡ-ಮರಗಳಿಗೆ ವಿಮೆ ಸೌಲಭ್ಯ ಒದಗಿಸಬೇಕು ಮತ್ತು ಸಾಲ ನೀಡುವಂತಹ ಯೋಜನೆಗಳು ಜಾರಿಗೊಳಿಸಬೇಕೆಂಬ ಬೇಡಿಕೆ ರೈತರಿಂದ ಕೇಳಿಬಂದಿದ್ದು, ಬರುವಂತಹ ದಿನಗಳಲ್ಲಿ ಈ ಯೋಜನೆಗಳನ್ನು ಸಹ ಜಾರಿಗೆ ತರಲಾಗುವುದೆಂದು ಭರವಸೆ ನೀಡಿದ ಸಚಿವರು ಪ್ರೌಢಶಾಲೆ ಹಂತದಲ್ಲಿಯೆ ವಿದ್ಯಾರ್ಥಿಗಳಲ್ಲಿ ಅರಣ್ಯ ಬೆಳೆಸಲು ಪ್ರರೇಪಣೆ ನೀಡಲು ವಾರ್ಷಿಕವಾಗಿ ಪ್ರತಿ ವಿದ್ಯಾರ್ಥಿಗೆ 10 ಸಸಿಗಳನ್ನು ನೆಟ್ಟು ಪೋಷಿಸಲು 10 ಅಂಕಗಳನ್ನು ಕೃಪಾಂಕ ರೀತಿಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿಯೂ ಚೆರ್ಚೆ ನಡೆದಿದೆ ಎಂದು ಸಚಿವ ಆರ್.ಶಂಕರ ಹೇಳಿದರು.
ಪೊನ್ನಂಪಪೇಟ್ ಮಾದರಿ ಅರಣ್ಯ ಕಾಲೇಜು ಸ್ಥಾಪಿಸಿ: ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಮಾತನಾಡಿ ಜಿಲ್ಲೆಯ ಚಿಂಚೋಳಿ ತಾಲೂಕು ದಟ್ಟವಾದ ಅರಣ್ಯ ಪ್ರದೇಶ ಹೊಂದಿದ್ದು, ಇತ್ತೀಚಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಯಶಸ್ವಿಯಾಗಿ ಅರಣ್ಯ ಚಾರಣ ಮಾಡಲಾಗಿದೆ. ಗೊಟ್ಟಂಗೊಟ್ಟ ಕಾಯ್ದಿಟ್ಟ ಅರಣ್ಯ ಪ್ರದೇಶ, ಕಿರು ಜಲಪಾತ, ಕೆರೆಗಳು, ಚಂದ್ರಂಪಳ್ಳಿ ಡ್ಯಾಂ ಹೀಗೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಹಾಗೂ ಚಿಂಚೋಳಿಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟ್ ಮಾದರಿಯ ಅರಣ್ಯ ಕಾಲೇಜು ಸ್ಥಾಪಿಸಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಅನಿತಾ ಅರೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ ರೈತರಿಗೆ ಅತಿ ಕಡಿಮೆ ರೂ.3ರ ಬೆಲೆಯಲ್ಲಿ ಇಲಾಖೆಯಿಂದ ಗಿಡಗಳನ್ನು ನೀಡಲಾಗುತ್ತಿದೆ. ಬಿ.ಪಿ.ಎಲ್.ಕುಟುಂಬಕ್ಕೆ, ವಾಟರ್ ಶೆಡ್ ಹೊಂದಿದವರಿಗೆ ಉಚಿತ ಗಿಡಗಳನ್ನು ನೀಡುವ ಸೌಲಭ್ಯವು ಇದೆ. ಕರ್ನಾಟಕ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಗಿಡ ಬೆಳೆಯುವ ರೈತರಿಗೆ ಮೊದಲಿನ ಎರಡು ವರ್ಷಗಳಿಗೆ ತಲಾ 30 ರಂತೆ ಹಾಗೂ ಮೂರನೆ ವರ್ಷಕ್ಕೆ 40 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.
ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ನೀಡುವಂತೆ ಕೃಷಿ ಅರಣ್ಯಕ್ಕೂ ಸಬ್ಸಿಡಿ ನೀಡಬೇಕು, ಗಿಡ-ಮರಗಳಿಗೆ ವಿಮೆ ಮತ್ತು ಎಂ.ಎಸ್.ಪಿ. ನೀಡಬೇಕೆಂಬುದು ಇಲಾಖೆಯ ಬೇಡಿಕೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಭಾನುದಾಸ ಪಾಟೀಲ, ರಮೇಶ ಬಳಬಟ್ಟಿ, ಎಂ.ಬಿ.ಅಂಬಲಗಿ, ಐ.ಸಿ.ಎ.ಆರ್. ಸದಸ್ಯ ಸೂರಂಜ್ ಸಿಂಗ್ ಅವರು ಕೃಷಿ ಅರಣ್ಯ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕುಸನೂರ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪಿ. ಸಾಪಣ್ಣ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ) ಅಜಯ ಮಿಶ್ರಾ, ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಹೆಚ್.ಚವ್ಹಾಣ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ 8 ಜಿಲ್ಲೆಯ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ನಾಣಯ್ಯ ಅವರು ಕಾನೂನು ಮತ್ತು ನಿಯಮಾವಳಿಗಳ ತಿದ್ದುಪಡಿಗಳು ಹಾಗೂ ಅನುಕೂಲಗಳು ಮತ್ತು ವಿವಿಧ ಕೃಷಿ ಅರಣ್ಯ ಮಾದರಿಗಳು, ಬೆಂಗಲೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜ ಅವರು ಹೆಬ್ಬೇವು ಕೃಷಿ ತಾಂತ್ರಿಕತೆಗಳು ಮತ್ತು ಆರ್ಥಿಕತೆ, ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಸದಾಶಿವಯ್ಯ ಅವರು ಕೃಷಿ ಅರಣ್ಯದ ಪ್ರಾಮುಖ್ಯತೆ ಕುರಿತು ವಿಷಯ ಮಂಡನೆ ಮಾಡಿದರು.
ಇದೇ ಸಂದರ್ಭದಲ್ಲಿ ಕೃಷಿ ಅರಣ್ಯ ಹಾಗೂ ಚಿಂಚೋಳಿ ವನ್ಯಧಾಮ ಕುರಿತ ಕಿರುಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಇದಕ್ಕು ಮುನ್ನ ಅರಣ್ಯ ಸಚಿವ ಆರ್.ಶಂಕರ ಸೇರಿದಂತೆ ಅತಿಥಿ ಗಣ್ಯರು ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿ ನೆಟ್ಟರು, ವಸ್ತು ಪ್ರದರ್ಶನ ಉದ್ಗಾಟಿಸಿದರು. ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಿವಶಂಕರ ಸ್ವಾಗತಿಸಿದರು.
ಧಮ್ಮಚಕ್ರ ಪ್ರವರ್ತನ ದಿನಾಚರಣೆ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮ
****************************************************************
ಕಲಬುರಗಿ,ಅ.16.(ಕ.ವಾ.)-62ನೇ ಧಮ್ಮಚಕ್ರ ಪರಿರ್ತನ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ಅಕ್ಟೋಬರ್ 19 ರಂದು ಸಂಜೆ 6 ಗಂಟೆಗೆ ಬುದ್ಧ ವಿಹಾರದ ಬಯಲು ರಂಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಏರ್ಪಡಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ. ಈಶ್ವರ ಎಂ. ಇಂಗನ್ ಅವರು ರಚಿಸಿದ ಹಾಗೂ ವಿಶ್ವರಾಜ ಪಾಟೀಲ ಅವರ ನಿರ್ದೇಶನದ “ಉಪಗುಪ್ತ” ನಾಟಕ ಪ್ರದರ್ಶನಗೊಳ್ಳಲಿದೆ. ಗಿರಿಜಾದೇವಿ ಸಂಗೀತ ಮತ್ತು ನೃತ್ಯ ಕಲಾಮಂದಿರದ ಶ್ರೀಮತಿ ವಿನ್ಯಾಸ ಹಾಗೂ ವಿದ್ಯಾರ್ಥಿನಿಯರಿಂದ ಧಮ್ಮಪದ ಮತ್ತು ಜಾನಪದ ಗೀತೆಗಳ ಮೇಲಿನ ಸಮೂಹ ನೃತ್ಯಗಳು ನಡೆಯಲಿದೆ. ಅದೇ ರೀತಿ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಹಾಗೂ ಸಂಗಡಗರಿಂದ ಬುದ್ಧ-ಬಸವ-ಅಂಬೇಡ್ಕರ್ ಅವರ ಗೀತ ಗಾಯನ ಹಾಗೂ ಪ್ರೊ. ಈಶ್ವರ ಎಂ. ಇಂಗನ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಸಹ ಜರುಗಲಿದೆ.
ಇದಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಗೆ ಬುದ್ಧವಿಹಾರದಲ್ಲಿ ಪೂಜ್ಯ ಭಂತೇಜಿಯವರಿಂದ ಬುದ್ಧ ವಂದನೆ ಕಾರ್ಯಕ್ರಮ ನಡೆಯಲಿದ್ದು, ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಆರ್. ಶೇಷಶಾಸ್ತ್ರೀ, ಮುಂಬಯಿ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಖ್ಯಾತ ನ್ಯಾಯವಾದಿಗಳಾದ ಎಸ್.ಎಸ್. ವಾನಖೇಡ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು ಹಾಗೂ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಕ್ಟೋಬರ್ 20ರವರೆಗೆ ಸೇಡಂದಲ್ಲಿ ಆಧಾರ ಅದಾಲತ್
***********************************************
ಕಲಬುರಗಿ,ಅ.16.(ಕ.ವಾ.)-ಸೇಡಂ ತಾಲೂಕಿಗೆ ಸಂಬಂಧಿಸಿದಂತೆ 2018ರ ಅಕ್ಟೋಬರ್ 20ರವರೆಗೆ ಸೇಡಂ ಮಿನಿ ವಿಧಾನ ಸೌಧದಲ್ಲಿನ ತಹಶೀಲ್ದಾರ ಕಚೇರಿಯ ಸಭಾಂಗಣ (ಕೋರ್ಟ್ ಹಾಲ್)ದಲ್ಲಿ ಆಧಾರ್ ಅದಾಲತ್ ಏರ್ಪಡಿಸಲಾಗಿದೆ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.
ಈ ಆಧಾರ್ ಅದಾಲತ್‍ನಲ್ಲಿ ಆಧಾರ ನೋಂದಣಿ, ಆಧಾರ ತಿದ್ದುಪಡಿ, ಮೊಬೈಲ್ ಸಂಖ್ಯೆ ಬದಲಾವಣೆ ಹಾಗೂ ಇದುವರೆಗೂ ಆಧಾರ ಕಾರ್ಡ್ ಪಡೆಯದೇ ಸಮಸ್ಯೆ ಎದುರಿಸುತ್ತಿರುವ ಜನಸಾಮಾನ್ಯರು ಈ ಆಧಾರ್ ಅದಾಲತ್‍ನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬಹುದಾಗಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
*******************************************
ಕಲಬುರಗಿ,ಅ.16.(ಕ.ವಾ.)-ಕೊಡಗು ಸೈನಿಕ ಶಾಲೆಯಲ್ಲಿ 2019-20ನೇ ಸಾಲಿನಲ್ಲಿ 6ನೇ ಮತ್ತು 9ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೊಡಗು ಸೈನಿಕ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು 2007ರ ಏಪ್ರಿಲ್ 1 ರಿಂದ 2009 ಮಾರ್ಚ್ 31 ರೊಳಗಾಗಿ ಜನಿಸಿರಬೇಕು. 9ನೇ ತರಗತಿಗಾಗಿ 2004 ರ ಏಪ್ರಿಲ್ 1 ರಿಂದ 2006ರ ಮಾರ್ಚ್ 31ರೊಳಗಾಗಿ ಜನಿಸಿರಬೇಕು. ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ 400 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 250 ರೂ. ನೋಂದಣಿ ಶುಲ್ಕ ಇರುತ್ತದೆ. ಮುದ್ರಿತ ಮಾಹಿತಿ ಪುಸ್ತಕ ಹಾಗೂ ಅರ್ಜಿಯು ಕೊಡಗು ಸೈನಿಕ ಶಾಲೆಯಲ್ಲಿ ಲಭ್ಯವಿರುವುದಿಲ್ಲ. ಸೈನಿಕ ಕಲ್ಯಾಣ ಇಲಾಖೆಯ ತಿತಿತಿ.sಚಿiಟಿiಞsಛಿhooಟಞoಜಚಿgu.eಜu.iಟಿ ವೆಬ್‍ಸೈಟ್‍ದಿಂದ ಪಡೆಯಬೇಕು. ವಿದ್ಯಾರ್ಥಿಗಳು ಸೈನಿಕ ಕಲ್ಯಾಣ ಇಲಾಖೆಯ sಚಿiಟಿiಞsಛಿhooಟಚಿಜmissioಟಿ.iಟಿ ವೆಬ್‍ಸೈಟ್‍ನಲ್ಲಿ 2018ರ ನವೆಂಬರ್ 26 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಲಿಖಿತ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಗಳಿಸಿದ ಗರಿಷ್ಠ ಅಂಕಗಳ ಮತ್ತು ವೈದ್ಯಕೀಯ ತಪಾಸಣೆ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಶಾಲೆಯ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತರಬೇತಿಯನ್ನು ನೀಡುವುದಿಲ್ಲ/ ಮಧ್ಯವರ್ತಿಗಳನ್ನು ಹೊಂದಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8510055577, 8510044411, 08276-278963 (ಕೆಲಸದ ದಿನಗಳಂದು) ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ದಂಡಶುಲ್ಕದೊಂದಿಗೆ ಪ್ರವೇಶ ಪಡೆಯಲು ಅಕ್ಟೋಬರ್ 20 ಕೊನೆಯ ದಿನ
***************************************************************
ಕಲಬುರಗಿ,ಅ.16.(ಕ.ವಾ.)-ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2018-19ನೇ ಶೈಕ್ಷಣಿಕ ವರ್ಷಕ್ಕೆ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸುಗಳಲ್ಲಿ 200 ರೂ.ಗಳ ದಂಡಶುಲ್ಕದೊಂದಿಗೆ 2018ರ ಅಕ್ಟೋಬರ್ 20 ರವರೆಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ನಾತಕ ಪದವಿಗಳಾದ ಪ್ರಥಮ ಬಿ.ಎ., ಬಿ.ಕಾಂ., ಬಿ.ಲಿಬ್. ಐ.ಎಸ್ಸಿ ಹಾಗೂ ಸ್ನಾತಕೋತ್ತರ ಪದವಿಗಳಾದ ಪ್ರಥಮ ಎಂ.ಎ.: ಕನ್ನಡ, ಇಂಗ್ಲೀಷ, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಆಂಡ್ ಪತ್ರಿಕೋದ್ಯಮ, ಎಂ.ಕಾಂ., ಎಂ.ಎಸ್‍ಸಿ. (ಪರಿಸರ ವಿಜ್ಞಾನ) ಕೋರ್ಸ್‍ನ ವಿಷಯಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೇಂದ್ರ, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಆವರಣ ಕಲಬುರಗಿ ಹಾಗೂ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಸಂಗಮೇಶ ಹಿರೇಮಠ ಮೊಬೈಲ್ ಸಂಖ್ಯೆ 9916783555, ಕಚೇರಿ ದೂರವಾಣಿ 08472-265868 ಹಾಗೂ hಣಣಠಿ://ಞsoumಥಿsoಡಿe.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಿದೆ.
ಜೇವರ್ಗಿ: ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
**********************************************************
ಕಲಬುರಗಿ.ಅ.16(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ನೀಡಲಾಗುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಊಟ ಮತ್ತು ವಸತಿ ಸಹಾಯ ಯೋಜನೆಯ ವಿದ್ಯಾಸಿರಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜೇವರ್ಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಞಚಿಡಿeಠಿಚಿss.ಛಿgg.gov.iಟಿ ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ಗಳಿಗೆ ಭೇಟಿ ನೀಡಿ ಆನ್‍ಲೈನ್ ಮೂಲಕ 2018ರ ಅಕ್ಟೋಬರ್ 31ರೊಳಗಾಗಿ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮದ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆ, ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಕುರಿತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಹಾಗೂ ಸಹಾಯವಾಣಿ ಮೊಬೈಲ್ ಸಂಖ್ಯೆ 8050770005, 805077004ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ
****************************************
ಕಲಬುರಗಿ,ಅ.16.(ಕ.ವಾ.)-ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ರೈತರಿಗೆ ಶೇ 50ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ 90 ರ ಸಹಾಯಧನದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು ಲಭ್ಯವಿದ್ದು, ರೈತರ ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕಗಳು ಹಾಗೂ ಹನಿ ನೀರಾವರಿ ಘಟಕಗಳು ಶೇ 90 ರ ಸಹಾಯಧನದಲ್ಲಿ ಉಪಕರಣಗಳು ಲಭ್ಯವಿರುತ್ತವೆ. ಸರ್ಕಾರದ ಸಹಾಯ ಧನ 5000 ರೂ. ಕ್ಕಿಂತ ಮೇಲ್ಪಟ್ಟು ಇದ್ದಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಸರ್ಕಾರದ ಸಹಾಯ ಧನವನ್ನು ಜೇಷ್ಟತೆಯ ಆಧಾರದ ಮೇಲೆ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ನೀಡಲಾಗುತ್ತಿದೆ.
ಸಹಾಯಧನದಲ್ಲಿ ನೀಡಲಾಗುವ ಕೃಷಿ ಯಂತ್ರೋಪಕರಣಗಳ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಎಂದು ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕುರಿ-ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ: ಅರ್ಜಿ ಆಹ್ವಾನ
**************************************************
ಕಲಬುರಗಿ,ಅ.16.(ಕ.ವಾ.)-ಪ್ರಸಕ್ತ 2018-19ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಗಿರಿಜನ ಉಪಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ 2017-18ನೇ ಸಾಲಿನ ಪರಿಷ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕುರಿ, ಮೇಕೆ ಸಾಕಾಣಿಕೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಣಿಯಾದ ಕಲಬುರಗಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಉಪನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕಲಬುರಗಿ ಕಚೇರಿಯಿಂದ ಪಡೆದು ಭರ್ತಿಮಾಡಿ ನವೆಂಬರ್ 13 ರೊಳಗಾಗಿ (ರಜಾದಿನಗಳನ್ನು ಹೊರತುಪಡಿಸಿ) ಇದೇ ನಿಗಮದ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-237772ಗೆ ಸಂಪರ್ಕಿಸಲು ಕೋರಲಾಗಿದೆ.
ಅಕ್ಟೋಬರ್ 22ರಂದು ಮೂಲ ದಾಖಲಾತಿಗಳ ಪರಿಶೀಲನೆ
**************************************************
ಕಲಬುರಗಿ.ಅ.16(ಕ.ವಾ.)-ಪ್ರಸಕ್ತ 2018-19ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು 6 ತಿಂಗಳ ವಸತಿ ರಹಿತ ವಿಶೇಷ ತರಬೇತಿ ಕಾರ್ಯತಂತ್ರದಡಿ ಯು.ಡಿ.ಸಿ. ಕೇಂದ್ರಗಳನ್ನು ನಡೆಸಲು 9 ಸರ್ಕಾರೇತರ ಸಂಘ ಸಂಸ್ಥೆಗಳ (ಎನ್.ಜಿ.ಓ.) ಪಟ್ಟಿಯನ್ನು ಕಲಬುರಗಿ ಸಮಗ್ರ ಶಿಕ್ಷಣ ಅಭಿಯಾನದ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸರ್ಕಾರೇತರ ಸಂಘ ಸಂಸ್ಥೆಗಳು ಇದೇ ಅಕ್ಟೋಬರ್ 22ರಂದು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಕಚೇರಿಗೆ ಹಾಜರಾಗಬೇಕೆಂದು ಕಲಬುರಗಿ ಸಮಗ್ರ ಶಿಕ್ಷಣ ಅಭಿಯಾನದ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಈಗಾಗಲೇ ಈ ಕಾರ್ಯಾಲಯಕ್ಕೆ ಒಟ್ಟು 43 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಸರ್ಕಾರದ ಸುತ್ತೋಲೆಯಂತೆ ಈ ಹಿಂದೆ ಈ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ 9 ಎನ್.ಜಿ.ಓ.ಗಳ ಪ್ರಸ್ತಾವನೆಗಳನ್ನು ಮಾತ್ರ ಪರಿಗಣಿಸಲಾಗಿದೆ. ಆಯ್ಕೆ ಕುರಿತು ಉಳಿದ ಎನ್.ಜಿ.ಓ.ಗಳಿಂದ ಏನಾದರೂ ಅಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 22 ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಚೇರಿ ಸ್ಥಳಾಂತರ
*******************
ಕಲಬುರಗಿ,ಅ.16.(ಕ.ವಾ.)-ಕಲಬುರಗಿಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಕಲಬುರಗಿ ನಗರದ ಖರ್ಗೆ ಪೇಟ್ರೋಲ್ ಪಂಪ್ ಹತ್ತಿರದ ಬಡೇಪುರ 3ನೇ ಕ್ರಾಸ್‍ನಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಎದುರಿಗೆ ಇರುವ ಸಿಟಿ ಸ್ಕ್ವೆರ್ ಬಿಲ್ಡಿಂಗ್‍ನ ಮೂರನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಕಚೇರಿ ದೂರವಾಣಿ ಸಂಖ್ಯೆ 08472-278635 ಇದ್ದು, ಸಾರ್ವಜನಿಕರು ಇದನ್ನು ಗಮನಿಸಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 25ರಂದು
********************
ಶ್ರೀ ಬಲಭೀಮೇಶ್ವರ ದೇವಸ್ಥಾನದ ಎದುರಿಗೆ ಹೂ ಮಾರಾಟ-ಪೆಂಡಾಲ್ ಹಾಕುವ
*********************************************************************
ಹರಾಜು
********
ಕಲಬುರಗಿ,ಅ.16.(ಕ.ವಾ.)-ಶಹಾಪುರ ತಾಲೂಕಿನ ಭೀಮರಾಯನಗುಡಿ (ಅಮಲಾಪುರ) ಗ್ರಾಮದ ಶ್ರೀ ಬಲಭೀಮೇಶ್ವರ ದೇವಸ್ಥಾನದ ಎದುರಿಗೆ ಪುಷ್ಪ (ಹೂವು) ಮಾರಾಟ ಹರಾಜು ಹಾಗೂ ಈ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗುವ ಮದುವೆ ಇತರೆ ಸಮಾರಂಭಗಳಿಗೆ ಸ್ಟೇಜ್ ಅಲಂಕಾರ ಮತ್ತು ಪೆಂಡಾಲ್ ಹಾಕುವ ಹರಾಜು ಪ್ರಕ್ರಿಯೆಯು ಇದೇ ಅಕ್ಟೋಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ಶಹಾಪುರ ತಹಶೀಲ್ದಾರರ ಕಾರ್ಯಾಲಯದಲ್ಲಿ ಜರುಗಲಿದೆ.
ಈ ಹರಾಜಿನಲ್ಲಿ ಭಾಗವಹಿಸುವವರು 25,000 ರೂ.ಗಳ ಠೇವಣಿ ಇಡಬೇಕು. ಹರಾಜು ಆದ ನಂತರ 3 ದಿನದೊಳಗಾಗಿ ಹರಾಜಿನ ಪೂರ್ಣ ಹಣವನ್ನು ತುಂಬಬೇಕು. ತುಂಬಲು ತಪ್ಪಿದ್ದಲ್ಲಿ ಠೇವಣಿಯನ್ನು ಮಟ್ಟುಗೋಲು ಹಾಕಿಕೊಂಡು ಪುನ: ಹರಾಜನ್ನು ನಡೆಸಲಾಗುವುದು ಎಂದು ಭೀಮರಾಯನಗುಡಿ ದೇವಸ್ಥಾನದ ಕಾರ್ಯದರ್ಶಿಗಳು ಹಾಗೂ ಶಹಾಪುರ ತಹಶೀಲ್ದಾರರು ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಅ.16.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಬರುವ ಎಫ್-1 ಕೆಸರಟಗಿ ಫೀಡರ್ ವ್ಯಾಪ್ತಿಯ ಕುಸನೂರ ಗ್ರಾಮದಲ್ಲಿ 11ಕೆ.ವಿ. ಮಾರ್ಗದ ಸ್ಥಳಾಂತರಿಸುವ ಕಾರ್ಯ ಹಾಗೂ ರಸ್ತೆ ಅಗಲೀಕರಣ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ಅಕ್ಟೋಬರ್ 17ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸದರಿ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
110/11 ಕೆ.ವಿ. ಯುನಿವರ್ಸಿಟಿ ವಿದ್ಯುತ ವಿತರಣಾ ಕೇಂದ್ರ: ಎಫ್-1 ಫೀಡರ್ ಮೇಲೆ ಬರುವ ಕುಸನೂರ ಗ್ರಾಮ, ಎನ್.ಜಿ.ಓ. ಕಾಲನಿ, ಕೃಷ್ಣ ನಗರ, ಸರಸ್ವತಿಪುರಂ, ಶೆಟ್ಟಿಕಾಲೇಜು, ಬಸವನಗರ, ಲಾಹೋಟಿ ಕಂಕರ ಮಶೀನ್, ಗೋಪಾಲ ಹೋಟೆಲ್ ಹಿಂದುಗಡೆ.
ಕಲಬುರಗಿ ಗ್ರಾಮೀಣ: ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ
***********************************************************
ಕಲಬುರಗಿ,ಅ.16.(ಕ.ವಾ.)-ಪ್ರಸಕ್ತ 2018-19 ನೇ ಸಾಲಿನಲ್ಲಿ ಉದ್ಯೋಗಿನಿ, ಕಿರುಸಾಲ ಹಾಗೂ ಸಮೃದ್ಧಿ ಯೋಜನೆಗಳಡಿ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಚ್ಛೆಯುಳ್ಳ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಅರ್ಹ ಅಭ್ಯರ್ಥಿಗಳು ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ 2018ರ ನವೆಂಬರ್ 2 ರೊಳಗಾಗಿ ಇದೇ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾದಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
¸
ಜಿಲ್ಲಾ ಮಟ್ಟದ ಅತ್ತುತ್ಯಮ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
**********************************************************
ಕಲಬುರಗಿ,ಅ.16.(ಕ.ವಾ.)-ಭಾರತ ಸರ್ಕಾರದ ಕಲಬುರಗಿ ನೆಹರು ಯುವ ಕೇಂದ್ರದಿಂದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಒಂದು ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಆಯ್ಕ್ಕೆಗಾಗಿ ಕಲಬುರಗಿ ಜಿಲ್ಲೆಯ ಅರ್ಹ ಯುವಕ: ಯುವತಿ ಸಂಘಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಯುವಕ/ಯುವತಿ ಸಂಘಗಳು 2017-18ನೇ ಸಾಲಿನ ವಿವಿಧ ಕ್ಷೇತ್ರಗಳಾದ ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ಧತೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನೈರ್ಮಲ್ಯ, ಮಹಿಳಾ ಸಶಕ್ತೀಕರಣ, ಸ್ವಾವಲಂಬನೆ, ಸಾಕ್ಷರತೆ ಸ್ವಯಂ ಉದ್ಯೋಗ, ಸಾಂಸ್ಕøತಿಕ, ಕ್ರೀಡೆ, ಸಮುದಾಯ ಆಸ್ತಿ ನಿರ್ಮಾಣ, ವಿವಿಧ ಪ್ರಮುಖ ದಿನಾಚರಣೆಗಳ ಆಚರಣೆ, ಸಮಾಜ ಕಲ್ಯಾಣ ಕಾರ್ಯಚಟುವಟಿಕೆಗಳು, ಸಾಮಾಜಿಕ ಪಿಡುಗುಗಳ ನಿವಾರಣೆ, ಗ್ರಾಮೀಣಾಭಿವೃದ್ಧಿಯಂತಹ ಕ್ಷೇತ್ರಗಳ ಚಟುವಟಿಕೆಗಳು ಆಯ್ಕೆಗಾಗಿ ಪರಿಗಣಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಒಂದು ಅತ್ತುತ್ಯಮ ಯುವ ಸಂಘಕ್ಕೆ 25,000 ರೂ.ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಘವು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ನೆಹರು ಯುವ ಕೇಂದ್ರದ ಕಚೆÉೀರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆದು ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 2018ರ ಅಕ್ಟೋಬರ್ 26 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲÁ್ಲ ಯುವ ಸಮನ್ವಯಾಧಿಕಾರಿಗಳು,ನೆಹರು ಯುವ ಕೇಂದ್ರ, ನಂಬರ್ 01/886/8213 ವಾಸವಿ ಬಿಲ್ಡಿಂಗ್ ಭಗವತಿ ನಗರ, ಸಂಗಮೇಶ್ವರ ಆಸ್ಪತ್ರೆ ಹಿಂದುಗಡೆ, ಎಮ್.ಎಸ್.ಕೆ.ಮೀಲ್ ರೋಡ, ಕಲಬುರಗಿ. ದೂರವಾಣಿ ಸಂಖ್ಯೆ 08472-248528ನ್ನು ಸಂಪರ್ಕಿಸಲು ಕೋರಲಾಗಿದೆ.